Site icon Vistara News

INDvsSL | ಮೊದಲ ಟಿ20 ಪಂದ್ಯದಲ್ಲಿ ಟಾಸ್​ ಸೋತ ಭಾರತ ತಂಡಕ್ಕೆ ಬ್ಯಾಟಿಂಗ್​ಗೆ ಆಹ್ವಾನ

INDvsSL

ಮುಂಬಯಿ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ (INDvsSL) ಅತಿಥೇಯ ಭಾರತ ತಂಡ ಟಾಸ್ ಸೋತಿದ್ದು, ಎದುರಾಳಿ ತಂಡ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿ ಇದಾಗಿದ್ದು, ಗೆಲುವಿನ ಮೂಲಕ ಶುಭಾರಂಭ ಮಾಡುವುದು ಹಾರ್ದಿಕ್​ ಪಾಂಡ್ಯ ನೇತೃತ್ವದ ಇರಾದೆಯಾಗಿದೆ. ಮೊದಲು ಬ್ಯಾಟ್​ ಮಾಡಿ ದೊಡ್ಡ ಮೊತ್ತ ಪೇರಿಸಿದರೆ ಮಾತ್ರ ಭಾರತಕ್ಕೆ ಜಯ ಖಚಿತ. ಇಲ್ಲಿ ಇಬ್ಬನಿ ಪರಿಣಾಮ ಇರುವ ಚೇಸಿಂಗ್ ಮಾಡುವ ತಂಡಕ್ಕೆ ಜಯ ಸಿಗುತ್ತದೆ. ಹೀಗಾಗಿ ಲಂಕಾ ನಾಯಕ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

ಏಷ್ಯಾ ಕಪ್​ ಚಾಂಪಿಯನ್​ ಬಳಗ ಶ್ರೀಲಂಕಾ ಆತ್ಮವಿಶ್ವಾಸದೊಂದಿಗೆ ಭಾರತಕ್ಕೆ ಬಂದು ಇಳಿದಿದ್ದು, ಬಲಿಷ್ಠ ತಂಡಕ್ಕೆ ಪ್ರತಿರೋಧ ಒಡ್ಡುವ ಮುನ್ಸೂಚನೆ ನೀಡಿದೆ. ಶ್ರೀಲಂಕಾ ಕ್ರಿಕೆಟ್ ಲೀಗ್​ ಮುಗಿಸಿಕೊಂಡು ಭಾರತಕ್ಕೆ ಅಡಿಯಿಟ್ಟಿರುವ ದಸುನ್​ ಶನಕ ಬಳಗಕ್ಕೆ ಗೆಲುವಿನ ಹಂಬಲವಿದೆ.

ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಹಾಗೂ ಕೆ ಎಲ್​ ರಾಹುಲ್​ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಕಣಕ್ಕೆ ಇಳಿಯುತ್ತಿದೆ. ಬ್ಯಾಟಿಂಗ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರು ತಂಡದ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಈ ಸರಣಿಯ ಗೆಲುವ ಯುವ ಆಟಗಾರರಿಗೆ ಹಾಗೂ ನಾಯಕ ಪಾಂಡ್ಯ ಅವರ ಕ್ರಿಕೆಟ್​ ಯಾನದಲ್ಲಿ ಪೂರಕ ಫಲಿತಾಂಶ ನೀಡಬಹುದು.

ಭಾರತ ತಂಡದ ಪರ ವೇಗದ ಬೌಲರ್​ ಶಿವಂ ಮಾವಿ ಹಾಗೂ ಆರಂಭಿಕ ಬ್ಯಾಟರ್​ ಶುಬ್ಮನ್​ ಗಿಲ್​ ಪದಾರ್ಪಣೆ ಮಾಡಿದ್ದಾರೆ.

ತಂಡಗಳು:

ಭಾರತ: 1 ಇಶಾನ್ ಕಿಶನ್, 2 ಶುಬ್ಮನ್​ ಗಿಲ್​, 3 ಸೂರ್ಯಕುಮಾರ್ ಯಾದವ್, 4 ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), 5 ಹಾರ್ದಿಕ್ ಪಾಂಡ್ಯ (ನಾಯಕ), 6 ದೀಪಕ್ ಹೂಡಾ, 7 ಅಕ್ಷರ್​​ ಪಟೇಲ್, 8 ಹರ್ಷಲ್ ಪಟೇಲ್, 9 ಶಿವಂ ಮಾವಿ, 10 ಉಮ್ರಾನ್ ಮಲಿಕ್, 11 ಯಜ್ವೇಂದ್ರ ಚಾಹಲ್

ಶ್ರೀಲಂಕಾ: 1 ಪಾತುಮ್ ನಿಸ್ಸಾಂಕ, 2 ಕುಸಾಲ್ ಮೆಂಡಿಸ್ (ವಿಕೆಟ್​ ಕೀಪರ್​), 3 ಧನಂಜಯ ಡಿ ಸಿಲ್ವಾ, 4 ಚರಿತ್ ಅಸಲಂಕಾ, 5 ಭಾನುಕಾ ರಾಜಪಕ್ಷ, 6 ದಸುನ್ ಶನಕ (ನಾಯಕ), 7 ವನಿಂದು ಹಸರಂಗ, 8 ಚಾಮಿಕಾ ಕರುಣಾರತ್ನೆ, 9 ಮಹೇಶ್ ತೀಕ್ಷಣ, 10. ದಿಲ್ಶನ್​ ಮದುಶನಕ, 10 11 ಕಸುನ್ ರಜಿತಾ

ಇದನ್ನೂ ಓದಿ | Rishabh Pant | ನೀವೊಬ್ಬ ಫೈಟರ್​; ರಿಷಭ್​ ಪಂತ್ ಚೇತರಿಕೆಗೆ ಟೀಮ್​ ಇಂಡಿಯಾ ಆಟಗಾರರ ಹಾರೈಕೆ

Exit mobile version