ನವ ದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ (INDvsAUS) ವೇಗದ ರನ್ ಗಳಿಕೆಗೆ ಮೊರೆ ಹೋಗಿದೆ. ಆತಿಥೇಯ ಭಾರತ ತಂಡವನ್ನು 262 ರನ್ಗಳಿಗೆ ನಿಯಂತ್ರಿಸಿದ ಪ್ಯಾಟ್ ಕಮಿನ್ಸ್ (pat cummins) ಬಳಗ ಎರಡನೇ ದಿನದಾಟದ ಅಂತ್ಯಕ್ಕೆ 12 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿದ್ದು, 62 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಟ್ರಾವಿಡ್ ಹೆಡ್ (39) ಹಾಗೂ ಮರ್ನಸ್ ಲಾಬುಶೇನ್ (16) ಔಟಾಗದೇ ಉಳಿದಿದ್ದಾರೆ. ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ 6 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿನಡೆಯುತ್ತಿರುವ ಹಣಾಹಣಿಯಲ್ಲಿ ಆತಿಥೇಯ ಭಾರತ ತಂಡವನ್ನು 262 ರನ್ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯಾ ತಂಡ 1 ರನ್ ಮುನ್ನಡೆ ಪಡೆದುಕೊಂಡಿತ್ತು. ಭಾರತ ತಂಡ ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯದ ಹೊರತಾಗಿಯೂ ಅಕ್ಷರ್ ಪಟೇಲ್ (74) ಅವರ ಅರ್ಧ ಶತಕದ ನೆರವಿನಿಂದ ಎದುರಾಳಿ ನೀಡಿದ ಗುರಿಯ ಸಮೀಪಕ್ಕೆ ಬಂದು ನಿಂತಿತು. ಆದರೆ, ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಬಳಗ ಬಿರುಸಿನ ಬ್ಯಾಟಂಗ್ ನಡೆಸಿತು. ಆರಂಭಿಕರಾಗಿ ಬಡ್ತಿ ಪಡೆದ ಟ್ರಾವಿಡ್ ಹೆಡ್ (6) ರವೀಂದ್ರ ಜಡೇಜಾ ಅವರ ಎಸೆತಕ್ಕೆ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದು ಮರ್ನಸ್ ಕೂಡ ವೇಗದರಲ್ಲೇ ರನ್ ಗಳಿಸಲು ಆರಂಭಿಸಿದರು.
ಅಗ್ರ ಕ್ರಮಾಂಕದ ಬ್ಯಾಟರ್ಗಳು ಫೇಲ್
ಅದಕ್ಕಿಂತ ಮೊದಲು ಮೊದಲ ಇನಿಂಗ್ಸ್ ಬ್ಯಾಟ್ ಅರಂಭಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್ಗಳು ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಮೊದಲ ದಿನ ಔಟಾಗದೇ 21 ರನ್ ಬಾರಿಸಿದ್ದ ಭಾರತ ತಂಡ ಎರಡನೇ ದಿನ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕೆ. ಎಲ್ ರಾಹುಲ್ 17 ರನ್ಗೆ ವಿಕೆಟ್ ಒಪ್ಪಿಸಿದರು. 46 ರನ್ಗೆ ಮೊದಲ ವಿಕೆಟ್ ಕಳೆದುಕೊಂಡ ಭಾರತ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಆಘಾತಕ್ಕೆ ಒಳಗಾಯಿತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಚೇತೇಶ್ವರ್ ಪೂಜಾರ ಶೂನ್ಯಕ್ಕೆ ಔಟಾದರು. 100ನೇ ಟೆಸ್ಟ್ ಅಡುತ್ತಿರುವ ಅವರು ನಿರಾಸೆಗ ಮೂಡಿಸಿದರು. ಸ್ವಲ್ಪ ಹೊತ್ತಿನಲ್ಲಿ ನಾಯಕ ರೋಹಿತ್ ಶರ್ಮ (32) ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ 66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ಬಳಿಕ ಜತೆಯಾದ ವಿರಾಟ್ ಕೊಹ್ಲಿ (44) ಹಾಗೂ ರವೀಂದ್ರ ಜಡೇಜಾ (26) ಸ್ವಲ್ಪ ಹೊತ್ತು ಕ್ರೀಸ್ನಲ್ಲಿ ತಳವೂರಿ ನಿಂತರು. ಆದರೆ, ಜಡೇಜಾ ಎಲ್ಬಿಡಬ್ಲ್ಯು ಆಡುವ ಮೂಲಕ ನಿರಾಸೆಯಿಂದ ನಡೆದರು. ನಂತರ ಬಂದ ವಿಕೆಟ್ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಕೂಡ 6 ರನ್ಗೆ ವಿಕೆಟ್ ಒಪ್ಪಿಸಿದರು. ಸ್ವಲ್ಪ ಹೊತ್ತಿನಲ್ಲೇ ವಿರಾಟ್ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಔಟಾದರು.
ಇದನ್ನೂ ಓದಿ : INDvsAUS : ಭಾರತ ತಂಡ 262 ರನ್ಗಳಿಗೆ ಆಲ್ಔಟ್, ಅರ್ಧ ಶತಕ ಬಾರಿಸಿ ಮಾನ ಕಾಪಾಡಿದ ಅಕ್ಷರ್ ಪಟೇಲ್
ನಂತರ ಆಸ್ಟ್ರೇಲಿಯಾದ ಬೌಲರ್ಗಳನ್ನು ಕಾಡಿದ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಶತಕದ ಜತೆಯಾಡಿದರು. ಅಶ್ವಿನ್ ವಿಕೆಟ್ ಪಡೆಯುವ ಮೂಲಕ ಜತೆಯಾಟ ಮುರಿದ ಆಸೀಸ್ ಬೌಲರ್ಗಳು ಸ್ವಲ್ಪ ಹೊತ್ತಿನಲ್ಲಿ ಅಕ್ಷರ್ ಪಟೇಲ್ ಅವರನ್ನೂ ಔಟ್ ಮಾಡಿದರು.