Site icon Vistara News

T20 World Cup | ಎರಡನೇ ಪಂದ್ಯದಲ್ಲಿ ಭಾರತಕ್ಕೆ ನೆದರ್ಲೆಂಡ್ಸ್ ಎದುರಾಳಿ

bcci

ಮೆಲ್ಬೋರ್ನ್​: ಟಿ20 ವಿಶ್ವ ಕಪ್​ (T20 World Cup) ನ ಅರ್ಹತಾ ಸುತ್ತಿನ ಪಂದ್ಯಗಳು ಬಹುತೇಕ ಮುಕ್ತಾಯದ ಹಂತಕ್ಕೆ ಬಂದು ನಿಂತಿವೆ. ‘ಎ’ ಗ್ರೂಪ್​ನಿಂದ ಈಗಾಗಲೇ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್ ತಂಡಗಳು ಕ್ವಾಲಿಫೈ ಆಗಿದೆ. ಆದರೆ ‘ಬಿ’ ಗ್ರೂಪ್​ನಿಂದ ಇನ್ನೂ ಎರಡು ತಂಡ ಆಯ್ಕೆಯಾಗಬೇಕಿದೆ. ಈ ಮಧ್ಯೆ ಭಾರತ ತಂಡದ ದ್ವಿತೀಯ ಎದುರಾಳಿ ಯಾರೆಂದು ಫಿಕ್ಸ್​ ಆಗಿದೆ.

ಗ್ರೂಪ್​ ‘ಎ’ ಪಾಯಿಂಟ್ ಟೇಬಲ್​ನಲ್ಲಿ ಶ್ರೀಲಂಕಾ ತಂಡವು ಮೂರು ಪಂದ್ಯಗಳಲ್ಲಿ 2 ಜಯ ಸಾಧಿಸಿ ಅಗ್ರ ತಂಡವಾಗಿ ಹೊರಹೊಮ್ಮಿದೆ. ಇದರೊಂದಿಗೆ ಲಂಕಾ ಸೂಪರ್-12 ನಲ್ಲಿ ಗ್ರೂಪ್- 1 ರಲ್ಲಿ ಸ್ಥಾನ ಪಡೆದಿದೆ. ಇನ್ನು 2ನೇ ಸ್ಥಾನಗಳಿಸಿರುವ ನೆದರ್ಲೆಂಡ್ಸ್ ಗ್ರೂಪ್​-2 ನಲ್ಲಿ ಅವಕಾಶ ಪಡೆದಿದೆ. ಈ ಗ್ರೂಪ್​ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳಿದ್ದು, ಈ ಪಟ್ಟಿಗೆ ಐದನೇ ತಂಡವಾಗಿ ನೆದರ್ಲೆಂಡ್ಸ್ ಎಂಟ್ರಿ ಕೊಟ್ಟಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಟಿ20 ವಿಶ್ವ ಕಪ್​ ಅಭಿಯಾನ ಆರಂಭಿಸಲಿದೆ. ಇದೀಗ ಅಕ್ಟೋಬರ್ 27 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಸೆಣಸಲಿದೆ. ಸದ್ಯ ಗ್ರೂಪ್-ಬಿ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು, ಇದರಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವನ್ನು ಭಾರತ ನವೆಂಬರ್ 6 ರಂದು ಎದುರಿಸಲಿದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್, ಐರ್ಲೆಂಡ್, ಸ್ಕಾಟ್ಲೆಂಡ್, ಜಿಂಬಾಬ್ವೆ ತಂಡಗಳಿವೆ. ಇದರಲ್ಲಿ ಒಂದು ತಂಡ ಟೀಮ್ ಇಂಡಿಯಾದ ಎದುರಾಳಿ ಆಗಲಿದೆ.

ಭಾರತದ ವೇಳಾಪಟ್ಟಿ
ಅಕ್ಟೋಬರ್ 23 – ಭಾರತ vs ಪಾಕಿಸ್ತಾನ
ಅಕ್ಟೋಬರ್ 27- ಭಾರತ vs ನೆದರ್ಲೆಂಡ್ಸ್
ಅಕ್ಟೋಬರ್ 30- ಭಾರತ vs ದಕ್ಷಿಣ ಆಫ್ರಿಕಾ
ನವೆಂಬರ್ 02- ಭಾರತ vs ಬಾಂಗ್ಲಾದೇಶ
ನವೆಂಬರ್ 06- ಭಾರತ vs ಬಿ ಗುಂಪಿನ ವಿಜೇತ ತಂಡ

ಇದನ್ನೂ ಓದಿ | T20 World Cup | ಭಾರತ-ಪಾಕ್​ ಪಂದ್ಯಕ್ಕೆ ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

Exit mobile version