ಬಾರ್ಬಡೋಸ್: ಹಾಲಿ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಳೆ(ಗುರುವಾರ) ನಡೆಯುವ ಸೂಪರ್-8(Super 8 Group 1) ಪಂದ್ಯದಲ್ಲಿ ಭಾರತ ಮತ್ತು ಅಫಘಾನಿಸ್ತಾನ(IND vs AFG) ಮುಖಾಮುಖಿಯಾಗಲಿದೆ. ಈ ಪಂದ್ಯ ಬಾರ್ಬಡೋಸ್ನಲ್ಲಿ ನಡೆಯಲಿದೆ. ಅಮೆರಿಕದಲ್ಲಿ ನಡೆದ ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಭಾರತ ಗೆದ್ದರೂ ಕೂಡ ಸೂಪರ್-8 ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭಿಮಾನಿಗಳಿಗೆ ಆತಂಕವೊಂದು ಕಾಡಿದೆ. ಅದೇನೆಂದರೆ ಭಾರತದ ಪಾಲಿಗೆ ವಿಂಡೀಸ್ ಅನ್ ಲಕ್ಕಿ ಎನ್ನುವುದು.
ಹೌದು, ವೆಸ್ಟ್ ಇಂಡೀಸ್ನಲ್ಲಿ ನಡೆದ ಇದುವರೆಗಿನ ಐಸಿಸಿ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದೆ ಹೆಚ್ಚು. 2007 ಏಕದಿನ ವಿಶ್ವಕಪ್, 2010 ಟಿ20 ವಿಶ್ವಕಪ್ನಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. 2007ರಲ್ಲಿ ದ್ರಾವಿಡ್ ಸಾರಥ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡ ಬಾಂಗ್ಲಾದೇಶ ವಿರುದ್ಧವೂ ಸೋಲು ಕಂಡು ಗುಂಪು ಹಂತದಿಂದಲೇ ಹೊರಬಿದ್ದಿತ್ತು. 2010ರ ಟಿ20 ವಿಶ್ವಕಪ್ನಲ್ಲಿಯೂ ಧೋನಿ ಸಾರಥ್ಯದ ಟೀಮ್ ಇಂಡಿಯಾ ಗುಂಪು ಹಂತದಿಂದಲೇ ನಿರ್ಗಮನ ಕಂಡಿತ್ತು. ಕೆರಿಬಿಯನ್ ದ್ವೀಪ ಭಾರತದ ಪಾಲಿಗೆ ಅಷ್ಟು ಅದೃಷ್ಟವಲ್ಲ.
2007ರ ಟಿ20 ವಿಶ್ವ ಕಪ್ (T20 World Cup 2024) ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿತು. ಇದರ ಬಳಿಕ ಭಾರತ ಮತ್ತೆ ಟಿ20 ಚಾಂಪಿಯನ್ ಆಗಲೇ ಇಲ್ಲ. ಇದೀಗ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗುವ ಇರಾದೆಯೊಂದಿಗೆ ಟೀಮ್ ಇಂಡಿಯಾ ಸೂಪರ್-8 ಪಂದ್ಯವನ್ನಾಡಲು ಸಜ್ಜಾಗಿದೆ ಈ ಬಾರಿ ವಿಂಡೀಸ್ ನೆಲ ಭಾರತಕ್ಕೆ ಲಕ್ಕಿ ಯಾಗಲೀ ಎನ್ನುವುದು ಭಾರತೀಯರ ಆಶಯ.
ಈ ಕೂಟದಲ್ಲಿ ಭಾರತ ನೀಡುವ ಪ್ರದರ್ಶನದ ಮೇಲೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಟಿ20 ಭವಿಷ್ಯ ಅಡಗಿದೆ. ಈ ಕೂಟ ಮುಗಿದ ಮೇಲೆ ಯಾರ್ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳೂ ಇವೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿ ಪಾಲಿಗೆ ಇದೊಂದು ಮಹತ್ವದ ಕೂಟ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ IND vs AFG: ನಾಳೆ ಆಫ್ಘಾನ್ ವಿರುದ್ಧ ಸೂಪರ್-8 ಫೈಟ್; ವಿಂಡೀಸ್ ನೆಲದಲ್ಲಿ ಭಾರತದ ಟಿ20 ದಾಖಲೆ ಹೇಗಿದೆ?
ಭಾರತ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಇದುವರೆಗೆ ಕೇವಲ 2 ಟಿ20 ಪಂದ್ಯವನ್ನು ಮಾತ್ರ ಆಡಿದೆ. ಈ ಎರಡೂ ಪಂದ್ಯಗಳಲಿಲ್ಲಯೂ ಟೀಮ್ ಇಂಡಿಯಾ ಸೋಲು ಕಂಡಿತ್ತು. 2010ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ಇದಾಗಿತ್ತು. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಅಂದು ಭಾರತ ಸೋಲು ಕಂಡಿತ್ತು.
ಟಿ20 ವಿಶ್ವ ಕಪ್ನಲ್ಲಿ ಭಾರತ ಸಾಧನೆ
2007 | ಚಾಂಪಿಯನ್ |
2009 | 2ನೇ ಸುತ್ತು |
2010 | 2ನೇ ಸುತ್ತು |
2012 | 2ನೇ ಸುತ್ತು |
2014 | ರನ್ನರ್ ಅಪ್ |
2016 | ಸೆಮಿಫೈನಲ್ |
2021 | 2ನೇ ಸುತ್ತು |
2022 | ಸೆಮಿಫೈನಲ್ |