ನವದೆಹಲಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಭೋಜನ ವಿರಾಮಕ್ಕೆ 4 ವಿಕೆಟ್ನಷ್ಟಕ್ಕೆ 88 ರನ್ ಗಳಿಸಿದೆ. ಆಸ್ಟ್ರೇಲಿಯಾದ 263 ರನ್ಗಳ ಗುರಿಯನ್ನು ಮೀರಲು ಭಾರತ ಇನ್ನೂ 175 ರನ್ ಬಾರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಸೀಸ್ ಪಂದ್ಯದಲ್ಲಿ ಹಿಡಿತ ಸಾಧಿಸುವ ಸೂಚನೆ ನೀಡಿದೆ.
ಶುಕ್ರವಾರ ಅಜೇಯ 21 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಭಾರತ ಶನಿವಾರ ಬ್ಯಾಟಿಂಗ್ ಮುಂದುವರಿಸಿತು. ಆದರೆ ಮೊದಲ ಅವಧಿಯಲ್ಲಿಯೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ವಿರಾಟ್ ಕೊಹ್ಲಿ(*14) ಮತ್ತು ರವೀಂದ್ರ ಜಡೇಜಾ(15*) ಬ್ಯಾಟಿಂಗ್ ನಡೆಸುತ್ತಿದ್ದಾರೆ. ಈ ಜೋಡಿ ತಂಡಕ್ಕೆ ಆಸರೆಯಾಗದೇ ಹೋದರೆ ಭಾರತ ಇನಿಂಗ್ಸ್ ಹಿನ್ನಡೆ ಅನುಭವಿಸುವುದು ಖಚಿತ ಎನ್ನುವಂತಿದೆ ಸದ್ಯದ ಸ್ಥಿತಿ.
ವೃತ್ತಿಜೀವನದ ನೂರನೇ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ ಈ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ನಥಾನ್ ಲಿಯೋನ್ ಅವರ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಉಉನಾಯಕ ಕೆ.ಎಲ್ ರಾಹುಲ್ ಈ ಪಂದ್ಯದಲ್ಲಿಯೂ ತಮ್ಮ ಕಳಪೆ ಬ್ಯಾಟಿಂಗ್ ಸರಣಿಯನ್ನು ಮುಂದುವರಿಸಿದ್ದಾರೆ. 41 ಎಸೆತ ಎದುರಿಸಿ 17 ರನ್ಗೆ ವಿಕೆಟ್ ಒಪ್ಪಿಸಿದರು. ಒಂದೊಮ್ಮೆ ಅವರು ದ್ವಿತೀಯ ಇನಿಂಗ್ಸ್ನಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರದೇ ಹೋದರೆ ಅವರನ್ನು ತಂಡದಿಂದ ಕೈ ಬಿಡುವುದು ಖಚಿತ.
ಬೆನ್ನು ನೋವಿನಿಂದ ಚೇತರಿಕೆ ಕಂಡು ಸೂರ್ಯಕುಮಾರ್ ಯಾದವ್ ಬದಲಿಗೆ ಆಡಲಿಳಿದ ಶ್ರೇಯಸ್ ಅಯ್ಯರ್ ಕೂಡ ನಿರೀಕ್ಷಿತ ಪ್ರದರ್ಶ ತೋರುವಲ್ಲಿ ವಿಫಲರಾದರು ಕೇವಲ 4 ರನ್ಗೆ ಆಟ ಮುಗಿಸಿದರು. ನಾಯಕ ರೋಹಿತ್ ಶರ್ಮಾ 32 ರನ್ ಗಳಿಸಿದರು. ಆಸೀಸ್ ಪರ ನಥಾನ್ ಲಿಯೋನ್ ಸ್ಪಿನ್ ಮೋಡಿ ಮಾಡುವ ಮೂಲಕ ನಾಲ್ಕು ವಿಕೆಟ್ ಕಿತ್ತು ಭಾರತೀತ ಬ್ಯಾಟರ್ಗಳಿಗೆ ಕಂಡಕವಾಗುವ ಸೂಚನೆ ನೀಡಿದ್ದಾರೆ.