Site icon Vistara News

IND VS AUS: ಅಂತಿಮ ಟೆಸ್ಟ್​ ಪಂದ್ಯಕ್ಕೂ ಮುನ್ನ ಹೋಳಿ ಆಡಿ ಸಂಭ್ರಮಿಸಿದ ಆಸ್ಟ್ರೇಲಿಯಾ ತಂಡ

IND VS AUS: Australia team celebrated Holi before the final test match

IND VS AUS: Australia team celebrated Holi before the final test match

ಅಹಮದಾಬಾದ್‌: ಭಾರತ(IND VS AUS) ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯ ಗುರುವಾರ ಆರಂಭವಾಗಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಹೋಳಿ ಆಚರಿಸಿ ಸಂಭ್ರಮಿಸಿದೆ. ಆಸೀಸ್​ ಆಟಗಾರರು ಹೋಳಿ ಆಡಿದ ಫೋಟೊಗಳನ್ನು ಕೆಲ ಆಟಗಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

​ಬುಧವಾರ(ಮಾರ್ಚ್​ 8) ಅಹಮದಾಬಾದ್​ನಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರಾದ ಸ್ವೀವನ್​ ಸ್ಮಿತ್​, ಮಾರ್ನಸ್​ ಲಬುಶೇನ್​, ಅಲೆಕ್ಸ್​ ಕ್ಯಾರಿ ಸೇರಿದಂತೆ ಹಲವು ಆಟಗಾರರು ರಂಗು ರಂಗಿನ ಬಣ್ಣ ಎರಚಿ ಬಣ್ಣದೋಕುಳಿಯಲ್ಲಿ ಮಿಂದೆದಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟೀಮ್​ ಇಂಡಿಯಾದ ಆಟಗಾರರು ಮಂಗಳವಾರ(ಮಾರ್ಚ್​ 7)ದಂದು ಹೋಳಿ ಆಡಿ ಸಂಭ್ರಮಿಸಿದ್ದರು.

ಇದೇ ಮೊದಲ ಬಾರಿ ಹೋಳಿ ಆಚರಣೆ ಮಾಡಿದ ಆಸ್ಟ್ರೇಲಿಯಾದ ಟೆಸ್ಟ್​ ಸ್ಪೆಷಲಿಸ್ಟ್​ ಮಾರ್ನಸ್​ ಲಬುಶೇನ್​ ಇದೊಂದು ಅದ್ಭುತ ಅನುಭವ ಎಂದು ಬರೆದುಕೊಂಡಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆಯುವ ಅಂತಿಮ ಟೆಸ್ಟ್​ ಪಂದ್ಯಕ್ಕೆ ಪ್ರಧಾನಿ ಮೋದಿ(Narendra Modi) ಮತ್ತು ಆಸೀಸ್​ ಪ್ರಧಾನಿ ಆಂಟೋನಿ ಅಲ್ಬನೀಸ್‌(Anthony Albanese) ಸಾಕ್ಷಿಯಾಗಲಿದ್ದಾರೆ.

Exit mobile version