Site icon Vistara News

Ind vs Aus : ಟಾಸ್ ಗೆದ್ದ ಆಸ್ಟ್ರೇಲಿಯಾ, ಭಾರತದಿಂದ ಮೊದಲು ಬ್ಯಾಟಿಂಗ್​

Suryakumar Yadav

ಗುವಾಹಟಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ (Ind vs Aus) ತಂಡ ಟಾಸ್ ಸೋತಿದೆ. ಹೀಗಾಗಿ ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದುಕೊಂಡಿದೆ. ಹೀಗಾಗಿ ಭಾರತ ತಂಡ ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತವನ್ನು ಪೇರಿಸಿ ಆಸ್ಟ್ರೇಲಿಯಾ ತಂಡವನ್ನು ಕಟ್ಟಿ ಹಾಕುವ ಸವಾಲನ್ನು ಪಡೆದುಕೊಂಡಿದೆ. ಭಾರತ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದುಕೊಂಡಿರುವ ಕಾರಣ ಈ ಪಂದ್ಯದಲ್ಲಿ ಗೆದ್ದರೆ ಸರಣಿ ಕೈವಶವಾಗಲಿದೆ. ಏತನ್ಮಧ್ಯೆ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯನ್ನು ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.

ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವು ಅಜೇಯ ಮುನ್ನಡೆ ಸಾಧಿಸಲು ಕೇವಲ ಒಂದು ಗೆಲುವಿನ ದೂರದಲ್ಲಿದೆ. ಇತ್ತೀಚಿನ 2023 ರ ವಿಶ್ವಕಪ್​​ನ ಭಾಗವಾಗಿದ್ದ ಮತ್ತು 2024ರ ಮಧ್ಯದಲ್ಲಿ ಮುಂಬರುವ ಟಿ 20 ವಿಶ್ವ ಕಪ್​ಗೆ ಸಿದ್ದತೆಗಳನ್ನು ಮಾಡುತ್ತಿರುವ ಇತ್ತಂಡಗಳು ತಮ್ಮ ಪ್ರಮುಖ ಆಟಗಾರರಿಗೆ ಉಭಯ ತಂಡಗಳು ವಿಶ್ರಾಂತಿ ನೀಡಿವೆ. ಮೊದಲ ಎರಡು ಪಂದ್ಯಗಳನ್ನು ಸೋತ ನಂತರ, ಆಸ್ಟ್ರೇಲಿಯಾ ತನ್ನ ತಂಡದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿದೆ, ಸ್ಟೀವನ್ ಸ್ಮಿತ್ ಮತ್ತು ಆಡಮ್ ಜಂಪಾ ಈಗಾಗಲೇ ಆಸ್ಟ್ತೇಲಿಯಾ ವಿಮಾನವನ್ನು ಹತ್ತಿದ್ದಾರೆ. ಅವರೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಸೀನ್ ಅಬಾಟ್ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ : Ind vs Aus : ತಿಲಕ್ ವರ್ಮಾಗೆ ಇದು ಕೊನೇ ಚಾನ್ಸ್​?

ಟಾಸ್​ ಸೋತ ಸೂರ್ಯಕುಮಾರ್ ಯಾದವ್ ಮಾತನಾಡಿ ಮೊದಲು ಬ್ಯಾಟಿಂಗ್ ಮಾಡಲು ಸಂತೋಷವಾಗುತ್ತಿದೆ. ಇಬ್ಬನಿ ಬೇಗನೆ ಬಂದರೂ ಆಶ್ಚರ್ಯವಿಲ್ಲ. ನಾವು ಉತ್ತಮ ಆಟದ ಯೋಜನೆಗಳನ್ನು ಹೊಂದಿದ್ದೇವೆ. ನಮ್ಮ ತಂಡದಲ್ಲಿ ಒಂದು ಬದಲಾವಣೆ ಇದೆ. ಮುಖೇಶ್ ಬದಲಿಗೆ ಅವೇಶ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮದುವೆಯಾಗಿ ಅವರು ತಂಡದಿಂದ ಹೊರಕ್ಕೆ ಹೋಗಿದ್ದಾರೆ. ಅವರಿಗೆ ಶುಭ ಹಾರೈಸುತ್ತೇವೆ ಎಂದು ಹೇಳಿದ್ದಾರೆ.

ಮ್ಯಾಥ್ಯೂ ವೇಡ್ ಟಾಸ್ ಗೆದ್ದ ಬಳಿಕ ಮಾತನಾಡಿ ನಾವು ಬೌಲಿಂಗ್ ಮಾಡುತ್ತೇವೆ. ಈ ನಿರ್ಧಾರ ಪ್ರಮುಖವೆಂದು ನಾನು ಭಾವಿಸುವುದಿಲ್ಲ. ಮೈದಾಣ ಈಗಾಗಲೇ ಸಾಕಷ್ಟು ಒದ್ದೆಯಾಗಿದೆ. ಟ್ರಾವಿಸ್ ಹೆಡ್, ಕೇನ್ ರಿಚರ್ಡ್ಸನ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ಆಡುತ್ತಿದ್ದಾರೆ ಎಂದು ಹೇಳಿದರು.

ತಂಡಗಳು ಹೀಗಿವೆ

ಆಸ್ಟ್ರೇಲಿಯಾ ತಂಡ: ಟ್ರಾವಿಸ್ ಹೆಡ್, ಆ್ಯರೋನ್ ಹಾರ್ಡಿ, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ಸಿ & ವಿಕೆ), ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್ಡಾರ್ಫ್, ತನ್ವೀರ್ ಸಂಘಾ, ಕೇನ್ ರಿಚರ್ಡ್ಸನ್.

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆ), ಸೂರ್ಯಕುಮಾರ್ ಯಾದವ್ (ಸಿ), ರಿಂಕು ಸಿಂಗ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ.

Exit mobile version