Site icon Vistara News

IND VS AUS: ಭಾರತ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದ ಡೇವಿಡ್​ ವಾರ್ನರ್​

IND VS AUS: David Warner out of Test series against India

IND VS AUS: David Warner out of Test series against India

ನವದೆಹಲಿ: ಭಾರತ(IND VS AUS) ವಿರುದ್ಧದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಟಗಾರ ಡೇವಿಡ್​ ವಾರ್ನರ್(david warner)​ ಗಾಯದಿಂದಾಗಿ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ.

ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್​ ಪಂದ್ಯದ ವೇಳೆ ಮೊಹಮ್ಮದ್​ ಸಿರಾಜ್‌ ಎಸೆತದಲ್ಲಿ ವಾರ್ನರ್‌ ಮೊಣಕೈಗೆ ಗಾಯಮಾಡಿಕೊಂಡಿದ್ದರು. ಇದಾದ ಬಳಿಕ ಅವರು ದ್ವಿತೀಯ ಇನಿಂಗ್ಸ್​ ವೇಳೆ ಕಣಕ್ಕಿಳಿದಿರಲಿಲ್ಲ. ಅವರ ಬದಲು ಮ್ಯಾಟ್‌ ರೆನ್‌ಶಾ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸಿದ್ದರು. ಇದೀಗ ಡೇವಿಡ್‌ ವಾರ್ನರ್‌ ಮೊಣಕೈಗೆ ಗಂಭೀರ ಗಾಯವಾಗಿರುವುದು ಎಕ್ಸ್‌ರೇ ವರದಿಯಲ್ಲಿ ಧೃಡಪಟ್ಟಿದ್ದು ಅವರು ಮುಂದಿನ ಎರಡು ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಮಂಗಳವಾರ ಕ್ರಿಕೆಟ್‌ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

‘ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಇನ್ನುಳಿದ ಪಂದ್ಯಗಳಿಗೆ ಡೇವಿಡ್‌ ವಾರ್ನರ್‌ ಅಲಭ್ಯರಾಗಲಿದ್ದಾರೆ. ಜತೆಗೆ ಅವರು ತವರಿಗೆ ವಾಪಸ್‌ ಆಗಲಿದ್ದಾರೆ” ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ಖಚಿತಪಡಿಸಿದೆ.

ಇದನ್ನೂ ಓದಿ INDvsAUS : ಜಸ್​ಪ್ರಿತ್​ ಬುಮ್ರಾ ಇನ್ನೂ ಫಿಟ್​ ಆಗಿಲ್ಲ, ಐಪಿಎಲ್​ಗೆ ನೇರ ಪ್ರವೇಶದ ನಿರೀಕ್ಷೆ

“ವಾರ್ನರ್‌ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಣಕೈಗೆ ಚೆಂಡು ತಗುಲಿಸಿಕೊಂಡಿದ್ದರು. ಹಾಗಾಗಿ ಅವರ ಮೊಣಕೈಗೆ ಗಂಭೀರ ಗಾಯವಾಗಿರುವುದು ತಿಳಿದುಬಂದಿದೆ. ಅವರು ಆಸ್ಟ್ರೇಲಿಯಾಗೆ ಮರಳಿದ್ದಾರೆ ಹಾಗೂ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ” ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗಾಯಗೊಂಡು ತವರಿಗೆ ಮರಳಿದ ವಾರ್ನರ್​ ಏಕದಿನ ಸರಣಿಯಲ್ಲೂ ಆಡುವುದು ಅನುಮಾನ ಎನ್ನಲಾಗಿದೆ.

Exit mobile version