IND VS AUS: ಭಾರತ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದ ಡೇವಿಡ್​ ವಾರ್ನರ್​ - Vistara News

ಕ್ರಿಕೆಟ್

IND VS AUS: ಭಾರತ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದ ಡೇವಿಡ್​ ವಾರ್ನರ್​

ಮೊಣಕೈ ಗಾಯಕ್ಕೆ ತುತ್ತಾದ ಆಸೀಸ್​ ತಂಡದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಭಾರತ ವಿರುದ್ಧದ ಇನ್ನುಳಿದ ಟೆಸ್ಟ್​ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

VISTARANEWS.COM


on

IND VS AUS: David Warner out of Test series against India
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತ(IND VS AUS) ವಿರುದ್ಧದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಟಗಾರ ಡೇವಿಡ್​ ವಾರ್ನರ್(david warner)​ ಗಾಯದಿಂದಾಗಿ ಟೆಸ್ಟ್​ ಸರಣಿಯಿಂದ ಹೊರಬಿದ್ದಿದ್ದಾರೆ.

ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್​ ಪಂದ್ಯದ ವೇಳೆ ಮೊಹಮ್ಮದ್​ ಸಿರಾಜ್‌ ಎಸೆತದಲ್ಲಿ ವಾರ್ನರ್‌ ಮೊಣಕೈಗೆ ಗಾಯಮಾಡಿಕೊಂಡಿದ್ದರು. ಇದಾದ ಬಳಿಕ ಅವರು ದ್ವಿತೀಯ ಇನಿಂಗ್ಸ್​ ವೇಳೆ ಕಣಕ್ಕಿಳಿದಿರಲಿಲ್ಲ. ಅವರ ಬದಲು ಮ್ಯಾಟ್‌ ರೆನ್‌ಶಾ ದ್ವಿತೀಯ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸಿದ್ದರು. ಇದೀಗ ಡೇವಿಡ್‌ ವಾರ್ನರ್‌ ಮೊಣಕೈಗೆ ಗಂಭೀರ ಗಾಯವಾಗಿರುವುದು ಎಕ್ಸ್‌ರೇ ವರದಿಯಲ್ಲಿ ಧೃಡಪಟ್ಟಿದ್ದು ಅವರು ಮುಂದಿನ ಎರಡು ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ ಎಂದು ಮಂಗಳವಾರ ಕ್ರಿಕೆಟ್‌ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

‘ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಇನ್ನುಳಿದ ಪಂದ್ಯಗಳಿಗೆ ಡೇವಿಡ್‌ ವಾರ್ನರ್‌ ಅಲಭ್ಯರಾಗಲಿದ್ದಾರೆ. ಜತೆಗೆ ಅವರು ತವರಿಗೆ ವಾಪಸ್‌ ಆಗಲಿದ್ದಾರೆ” ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ಖಚಿತಪಡಿಸಿದೆ.

ಇದನ್ನೂ ಓದಿ INDvsAUS : ಜಸ್​ಪ್ರಿತ್​ ಬುಮ್ರಾ ಇನ್ನೂ ಫಿಟ್​ ಆಗಿಲ್ಲ, ಐಪಿಎಲ್​ಗೆ ನೇರ ಪ್ರವೇಶದ ನಿರೀಕ್ಷೆ

“ವಾರ್ನರ್‌ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಣಕೈಗೆ ಚೆಂಡು ತಗುಲಿಸಿಕೊಂಡಿದ್ದರು. ಹಾಗಾಗಿ ಅವರ ಮೊಣಕೈಗೆ ಗಂಭೀರ ಗಾಯವಾಗಿರುವುದು ತಿಳಿದುಬಂದಿದೆ. ಅವರು ಆಸ್ಟ್ರೇಲಿಯಾಗೆ ಮರಳಿದ್ದಾರೆ ಹಾಗೂ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ” ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗಾಯಗೊಂಡು ತವರಿಗೆ ಮರಳಿದ ವಾರ್ನರ್​ ಏಕದಿನ ಸರಣಿಯಲ್ಲೂ ಆಡುವುದು ಅನುಮಾನ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni: ನೆಚ್ಚಿನ ಆಟಗಾರನನ್ನು ಹೆಸರಿಸಿದ ಧೋನಿ; ಕೊಹ್ಲಿ, ರೋಹಿತ್​ ಅಲ್ಲ, ಮತ್ಯಾರು?

MS Dhoni: ಒಂದೊಮ್ಮೆ 4ಕ್ಕಿಂತ ಅಧಿಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಿದರೆ ಧೋನಿ ಚೆನ್ನೈ ತಂಡದ ಪರ ಇನ್ನೊಂದು ಐಪಿಎಲ್​ ಆಡಲಿದ್ದಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ.

VISTARANEWS.COM


on

MS Dhoni
Koo

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ತಮ್ಮ ನೆಚ್ಚಿನ ಕ್ರಿಕೆಟಿಗನ ಹೆಸರನ್ನು(Dhoni Picks His Favourite Cricketer) ಬಹಿರಂಗಪಡಿಸಿದ್ದಾರೆ. ಇದುವರೆಗೂ ಅಭಿಮಾನಿಗಳು ಧೋನಿಯ ನೆಚ್ಚಿನ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅಥವಾ ರೋಹಿತ್​ ಶರ್ಮ ಎಂದು ಭಾವಿಸಿದ್ದರು. ಆದರೆ, ಧೋನಿ ಅವರ ಸದ್ಯದ ಫೇವರಿಟ್​ ಕ್ರಿಕೆಟಿಗನೆಂದರೆ ಅದು ಜಸ್​ಪ್ರೀತ್​ ಬುಮ್ರಾ (Jasprit Bumrah). ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಧೋನಿ ಈ ವಿಚಾರವನ್ನು ರಿವೀಲ್​ ಮಾಡಿದ್ದಾರೆ.

ಪ್ರಸ್ತುತ ಕ್ರಿಕೆಟ್​ನಲ್ಲಿ ನಿಮ್ಮ ನೆಚ್ಚಿನ​ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧೋನಿ, “ಸದ್ಯ ಫೇವರಿಟ್ ಆಟಗಾರ ವೇಗಿ ಜಸ್​ಪ್ರೀತ್​ ಬುಮ್ರಾ. ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವಾಗ ನಾನು ಬ್ಯಾಟರ್ ನನ್ನು ಆಯ್ಕೆ ಮಾಡುವುದಿಲ್ಲ. ಅವರು ರನ್ ಗಳಿಸುತ್ತಲೇ ಇರುತ್ತಾರೆ. ನಾನು ಬೌಲರ್​ ಬುಮ್ರಾ ಅವರನ್ನು ಆಯ್ಕೆ ಮಾಡುತ್ತೇನೆ” ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ಆಟಗಾರ ಬುಮ್ರಾ ಎನ್ನುವುದನ್ನು ತಿಳಿಸಿದ್ದಾರೆ.

ಮುಂದಿನ ಐಪಿಎಲ್​ ಆಡಲಿದ್ದಾರಾ ಧೋನಿ?


ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇದೀಗ ಅವರು ಮುಂದಿನ ಐಪಿಎಲ್ ಆಡುತ್ತಾರಾ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯಾಗುತ್ತಿದೆ.

ಇದನ್ನೂ ಓದಿ MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

​ಕೆಲ ಮೂಲಗಳ ಪ್ರಕಾರ ಡಿಸೆಂಬರ್​ನಲ್ಲಿ ನಡೆಯುವ ಆಟಗಾರರ ಮೆಗಾ ಹರಾಜಿಗೆ ಬಿಸಿಸಿಐ(BCCI) ಈ ನಿಯಯ ಜಾರಿಗೆ ತಂದರೆ ಧೋನಿ ಅವರು 18ನೇ ಆವೃತ್ತಿ ಐಪಿಎಲ್(IPL 2025)​ ಆಡುವುದು ಅನುಮಾನ ಎನ್ನಲಾಗಿದೆ. ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾತ್ರ ನೀಡಿದ್ದಲ್ಲಿ ಧೋನಿಗೆ ಚೆನ್ನೈ(CSK) ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶ್ರೀಲಂಕಾದ ವೇಗಿ ಮತಿಶಾ ಪತಿರಾಣ ಮತ್ತು ಶಿವಂ ದುಬೆ ಅವರನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿದೆ ಎನ್ನಲಾಗಿದೆ. ಒಂದೊಮ್ಮೆ 4ಕ್ಕಿಂತ ಅಧಿಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಿದರೆ ಧೋನಿ ಚೆನ್ನೈ ತಂಡದ ಪರ ಇನ್ನೊಂದು ಐಪಿಎಲ್​ ಆಡಲಿದ್ದಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ.

Continue Reading

ಕ್ರೀಡೆ

India vs Sri Lanka: ಲಂಕಾ ಸರಣಿಯಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ರೋಹಿತ್​

India vs Sri Lanka: ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ.

VISTARANEWS.COM


on

India vs Sri Lanka
Koo

ಕೊಲಂಬೊ: ಕಳೆದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದ ಬಳಿಕ ಮೊದಲ ಏಕದಿನ ಪಂದ್ಯವನ್ನಾಡುತ್ತಿರುವ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರಾದ ನಾಯಕ ರೋಹಿತ್​ ಶರ್ಮ(rohit sharma) ಮತ್ತು ವಿರಾಟ್​ ಕೊಹ್ಲಿ(virat kohli) ಶ್ರೀಲಂಕಾ(India vs Sri Lanka) ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ದಾಖಲೆಯೊಂದನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ.

ರೋಹಿತ್​​ಗೆ ಬೇಕು 2 ಶತಕ

ರೋಹಿತ್​ ಈ ಸರಣಿಯಲ್ಲಿ 2 ಶತಕ ಬಾರಿಸಿದರೆ, ವಿರಾಟ್​ ಕೊಹ್ಲಿ(Virat Kohli) ಮತ್ತು ಸಚಿನ್ ತೆಂಡೂಲ್ಕರ್(Sachin Tendulkar)​ ಜತೆ ಎಲೈಟ್​ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ. ರೋಹಿತ್​ 2 ಶತಕ ಬಾರಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 50 ಶತಕ ಪೂರ್ತಿಗೊಳಿಸಿದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಮೂರನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್‌ ಕೊಹ್ಲಿ ಮೊದಲಿಗರು. ರೋಹಿತ್​ ಸದ್ಯ 48 ಶತಕ ಬಾರಿಸಿದ್ದಾರೆ. ಏಕದಿನದಲ್ಲಿ 31, ಟೆಸ್ಟ್​ನಲ್ಲಿ 12, ಟಿ20ಯಲ್ಲಿ 5 ಶತಕ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಒಟ್ಟು 100 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್​ ಕೊಹ್ಲಿ 80 ಶತಕ ಬಾರಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

14 ಸಾವಿರ ರನ್​ ದಾಖಲೆ ಮೇಲೆ ಕೊಹ್ಲಿ ಕಣ್ಣು


ವಿರಾಟ್​ ಕೊಹ್ಲಿ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ

Continue Reading

ಕ್ರೀಡೆ

IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

IND vs SL: ವಿಕೆಟ್​ ಕೀಪಿಂಗ್​ ವಿಚಾರದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಮತ್ತು ರಿಷಭ್‌ ಪಂತ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಕೂಡ ರಾಹುಲ್​ ಮೊದಲ ಆಯ್ಕೆಯ ಕೀಪರ್​ ಆಗಿದ್ದಾರೆ.

VISTARANEWS.COM


on

IND vs SL: When and where to watch ODI, squads, predicted XI, venues
Koo

ಕೊಲಂಬೊ: ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಸಾಧನೆಗೈದ ಭಾರತ ತಂಡ ಶುಕ್ರವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲು(IND vs SL) ಸಜ್ಜಾಗಿದೆ. ಇತ್ತಂಡಗಳ ಮೊದಲ ಪಂದ್ಯಕ್ಕೆ ಆರ್‌. ಪ್ರೇಮದಾಸ ಕ್ರೀಡಾಂಗಣ ಅಣಿಯಾಗಿದೆ. ಇಂದು ಮಧ್ಯಾಹ್ನ 2.30ರಿಂದ ಪಂದ್ಯ ಆರಂಭಗೊಳ್ಳಲಿದೆ. ಸೋನಿ ಸ್ಪೋರ್ಟ್ಸ್​ನಲ್ಲಿ ಪ್ರಸಾರ ಕಾಣಲಿದೆ.

ಕೊಹ್ಲಿ, ರೋಹಿತ್​ ಕಮ್​ಬ್ಯಾಕ್​


ಈ ಸರಣಿಯ ಮೂಲಕ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಮತ್ತೆ ಏಕದಿನ ಪಂದ್ಯಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ. ಕಳೆದ ವರ್ಷ(2023) ನವೆಂಬರ್​ 19ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಏಕದಿನ ಫೈನಲ್​ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಅಂತರದ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾ(jasprit bumrah) ಯಾವುದೇ ಏಕದಿನ ಪಂದ್ಯವನ್ನಾಡಿರಲಿಲ್ಲ. ಇದೀಗ ಬರೋಬ್ಬರಿ 9 ತಿಂಗಳ ಬಳಿಕ ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ. ಅತ್ತ ಇದು ಹೊಸ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಮೊದಲ ಏಕದಿನ ಸರಣಿಯಾಗಿದೆ. ಹೀಗಾಗಿ ನಿರೀಕ್ಷೆ ದೊಡ್ಡ ಮಟ್ಟದಿಂದ ಕೂಡಿದೆ.

ವಿಕೆಟ್​ ಕೀಪಿಂಗ್​ ವಿಚಾರದಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಮತ್ತು ರಿಷಭ್‌ ಪಂತ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಕೂಡ ರಾಹುಲ್​ ಮೊದಲ ಆಯ್ಕೆಯ ಕೀಪರ್​ ಆಗಿದ್ದಾರೆ. ಏಕೆಂದರೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್ಕರ್​ ತಂಡ ಪ್ರಕಟಿಸುವ ವೇಳೆಯೇ ರಾಹುಲ್​ ಮೊದಲ ಕೀಪಿಂಗ್​ ಆಯ್ಕೆ ಎಂದು ಹೇಳಿದ್ದರು. ಮುಂದಿನ ವರ್ಷ ಪಾಕ್​ ಆತಿಥ್ಯದಲ್ಲಿ ನಡೆಯುವ ಏಕದಿನ ಮಾದರಿಯ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯ ನಿಟ್ಟಿನಲ್ಲಿ ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬಹುದು.

ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಇದನ್ನೂ ಓದಿ IND vs SL 1st ODI: ವಿಶ್ವಕಪ್​ ಫೈನಲ್​ ಸೋಲಿನ ಬಳಿಕ ಮೊದಲ ಏಕದಿನ ಆಡಲು ಸಜ್ಜಾದ ಕೊಹ್ಲಿ, ರೋಹಿತ್​, ಬುಮ್ರಾ

ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಲಂಕಾ ತಂಡ ಭಾರತದ ಸವಾಲು ಎದುರಿಸೀತೇ ಎನ್ನುವುದು ಇಲ್ಲಿ ಪ್ರಮುಖ ಸಂಗತಿ. ತಂಡದ ಪ್ರಧಾನ ವೇಗಿಗಳಾದ ಮತೀಷ ಪತಿರಣ ಮತ್ತು ದಿಲ್ಶನ್‌ ಮಧುಶಂಕ ಹೊರಬಿದ್ದಿರುವುದರಿಂದ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading

ಪ್ರಮುಖ ಸುದ್ದಿ

MS Dhoni : ಧೋನಿಯನ್ನು ತಂಡದಲ್ಲಿ ಉಳಿಸಿಕೊಳ್ಳಲು ನಿಯಮವನ್ನೇ ಬದಲಾಯಿಸಲು ಕೋರಿದ ಚೆನ್ನೈ ಸೂಪರ್ ಕಿಂಗ್ಸ್​

MS Dhoni: ಮುಂಬೈನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಸಮಿತಿ ಮತ್ತು ಹತ್ತು ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಸಿಎಸ್​ಕೆ ಹಳೆಯ ನಿಯಮವನ್ನು ಮರಳಿ ತರಲು ಪ್ರಸ್ತಾಪಿಸಿದೆ. ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್​ ಧೋನಿಯನ್ನು ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ ಸಿಎಸ್​ಕೆ ಮುಂದಿನ ಋತುವಿನಲ್ಲಿ ಧೋನಿಯನ್ನು ಉಳಿಸಿಕೊಳ್ಳಲಿದೆ. ಅದಕ್ಕಾಗಿ ಪ್ರಸ್ತುತ ಅವರು ಹೊಂದಿರುವ 12 ಕೋಟಿ ರೂ. ವೇತನದಲ್ಲಿ ಉಳಿಕೆಯಾಗಲಿದೆ.

VISTARANEWS.COM


on

MS Dhoni
Koo

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ಆಟಗಾರರನ್ನು ಪರಿಗಣಿಸುವ ನಿಯಮ ಬದಲಾವಣೆ ಮಾಡುವಂತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಐಪಿಎಲ್ ಮ್ಯಾನೇಜ್ಮೆಂಟ್​ಗೆ ಕೋರಿದೆ. ಅದರ ಮೂಲ ಉದ್ದೇಶ ಧೋನಿಯನ್ನು (MS Dhoni) ಉಳಿಸಿಕೊಳ್ಳುವುದು. ‘ಎಂಎಸ್ ಧೋನಿ ಅವರನ್ನು 2025 ರ ಋತುವಿನಲ್ಲಿ ಅನ್​ಕ್ಯಾಪ್ಡ್​​ ಆಟಗಾರನಾಗಿ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಪ್ರಸ್ತಾಪವು ಫ್ರಾಂಚೈಸಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಲೀಗ್​ನಲ್ಲಿ ಆಟಗಾರರ ಮೌಲ್ಯಮಾಪನ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಐಪಿಎಲ್ 2008 ರಲ್ಲಿ ಪ್ರಾರಂಭವಾದ ಐಪಿಎಲ್​ ಭಾರತೀಯ ಕ್ರಿಕೆಟ್​​ನ ಮೂಲಾಧಾರವಾಗಿದೆ. ಇಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನಿಯಮಗಳು ಬದಲಾಯಿಸಲಾಗುತ್ತದೆ. 2021 ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದದ ನಿವೃತ್ತಿ ಪಡೆದು ದೂರವಿದ್ದ ಆಟಗಾರರನ್ನು ಅನ್​ಕ್ಯಾಪ್ಡ್​ ಎಂದು ವರ್ಗೀಕರಿಸುವ ನಿಯಮವಿತ್ತು. ತಂಡಗಳ ಕೋರಿಕೆಯ ಮೇರೆಗೆ ಈ ನಿಯಮ ರದ್ದುಪಡಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ ಸಿಎಸ್​ಕೆ ಈಗ ಅದರ ಪುನಃಸ್ಥಾಪನೆಯನ್ನು ಬಯಸಿದೆ. ಯಾಕೆಂದರೆ ತಂಡದಲ್ಲಿ ಧೋನಿಯನ್ನು ಅನ್​ಕ್ಯಾಪ್ಡ್​ ಪ್ಲೇಯರ್ ಎಂದು ಉಳಿಸಿಕೊಳ್ಳುವುದೇ ಅವರ ಉದ್ದೇಶವಾಗಿದೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಸಮಿತಿ ಮತ್ತು ಹತ್ತು ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಸಿಎಸ್​ಕೆ ಹಳೆಯ ನಿಯಮವನ್ನು ಮರಳಿ ತರಲು ಪ್ರಸ್ತಾಪಿಸಿದೆ. ಆಗಸ್ಟ್ 15, 2020 ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್​ ಧೋನಿಯನ್ನು ಉಳಿಸಿಕೊಳ್ಳುವುದು ಅವರ ಉದ್ದೇಶವಾಗಿದೆ. ಈ ಬದಲಾವಣೆ ಜಾರಿಗೆ ಬಂದರೆ ಸಿಎಸ್​ಕೆ ಮುಂದಿನ ಋತುವಿನಲ್ಲಿ ಧೋನಿಯನ್ನು ಉಳಿಸಿಕೊಳ್ಳಲಿದೆ. ಅದಕ್ಕಾಗಿ ಪ್ರಸ್ತುತ ಅವರು ಹೊಂದಿರುವ 12 ಕೋಟಿ ರೂ. ವೇತನದಲ್ಲಿ ಉಳಿಕೆಯಾಗಲಿದೆ.

ಈ ಸಲಹೆಯು ಇತರ ಫ್ರಾಂಚೈಸಿಗಳಿಂದ ಪ್ರತಿರೋಧವನ್ನು ಎದುರಿಸಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರು ನಿವೃತ್ತ ಅಂತಾರಾಷ್ಟ್ರೀಯ ಆಟಗಾರರನ್ನು ಅನ್​ಕ್ಯಾಪ್ಡ್​​ ಆಟಗಾರರು ಎಂದು ವರ್ಗೀಕರಿಸುವುದು ಅವರ ಮೌಲ್ಯಕ್ಕೆ ಅಗೌರವ ಎಂದಿದ್ದಾರೆ. ಹರಾಜು ಪ್ರಕ್ರಿಯೆಯ ಮೂಲಕ ಆಟಗಾರನ ಮೌಲ್ಯ ನಿರ್ಧರಿಸಲು ಅವಕಾಶ ನೀಡುವುದು ಹೆಚ್ಚು ಸೂಕ್ತವಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 2ರಂದು ಭಾರತದ ಅಥ್ಲೀಟ್​ಗಳ ಸ್ಪರ್ಧೆಯ ವಿವರ ಇಲ್ಲಿದೆ

ಇತರ ತಂಡಗಳು ಸಹ ಈ ಹೇಳಿಕೆಯನ್ನು ಬೆಂಬಲಿಸಿವೆ. ಹಲವಾರು ಫ್ರಾಂಚೈಸಿಗಳು ಮಾಜಿ ಅಂತರರಾಷ್ಟ್ರೀಯ ಆಟಗಾರರನ್ನು ಅವರ ನಿವೃತ್ತಿಯ ಅವಧಿಯನ್ನು ಲೆಕ್ಕಿಸದೆ ಅನ್​ಕ್ಯಾಪ್ಡ್​ ವಿಭಾಗದಲ್ಲಿ ಪರಿಗಣಿಸುವ ಆಲೋಚನೆಯನ್ನು ವಿರೋಧಿಸಿದವು.

ಭಾರತ ತಂಡದ ನಿವೃತ್ತ ಆಟಗಾರರಿಗೆ ಸಂಬಂಧಿಸಿದ ವಿಷಯದ ಬಗ್ಗೆಯೂ ಚರ್ಚೆ ನಡೆಯಿತು. ಐದು ವರ್ಷಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಭಾರತೀಯ ಆಟಗಾರರಿಗೆ ಹರಾಜಿನಲ್ಲಿ ತಮ್ಮ ಮೂಲ ಬೆಲೆಯನ್ನು ಕಡಿಮೆ ಮಾಡಲು ಅವಕಾಶ ನೀಡುವ ಪ್ರಸ್ತಾಪವನ್ನು ಫ್ರಾಂಚೈಸಿಗಳು ಸರ್ವಾನುಮತದಿಂದ ಒಪ್ಪಿಕೊಂಡವು.

Continue Reading
Advertisement
intel layoffs
ವಿದೇಶ2 mins ago

Intel Layoffs: ಆರ್ಥಿಕ ಬಿಕ್ಕಟ್ಟು- ಇಂಟೆಲ್‌ ಕಂಪನಿಯಿಂದ 18,000 ಉದ್ಯೋಗಿಗಳು ವಜಾ

Sexual Abuse
Latest7 mins ago

Sexual Abuse: ಹಾಸ್ಟೆಲ್‌ ಬಾತ್‌ರೂಮ್‌ನಲ್ಲಿ ಮಗು ಜನನ! ಆಘಾತಗೊಂಡು ಅಲ್ಲೇ ಕೂತಿದ್ದ ಬಾಲಕಿ

BJP-JDS Padayatra
ಕರ್ನಾಟಕ11 mins ago

BJP-JDS Padayatra: ಮೈಸೂರು ಚಲೋಗೆ ಸರ್ಕಾರ ಅನುಮತಿ; ನಾಳೆ ಬೆಳಗ್ಗೆ ಚಾಲನೆ, ಪಾದಯಾತ್ರೆ ಮಾರ್ಗದ ವಿವರ ಇಲ್ಲಿದೆ

1 lakh crore Rs dues paid to farmers in current sugar season says Pralhad Joshi
ದೇಶ23 mins ago

Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

Viral Video
Latest26 mins ago

Viral Video: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬಿದ್ದ ಕಬ್ಬಿಣದ ಗೇಟ್; ಶಾಕಿಂಗ್‌ ವಿಡಿಯೊ

ಸಿನಿಮಾ30 mins ago

OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

kidnap case
ಬೆಂಗಳೂರು39 mins ago

Kidnap case : ಪತಿ ಮೇಲಿನ ಸಿಟ್ಟಿಗೆ ಗೆಳೆಯನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ!

NEET UG 2024
ದೇಶ57 mins ago

NEET UG 2024: ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಎರಡು ನಗರಗಳಿಗೆ ಸೀಮಿತ; ಮರು ಪರೀಕ್ಷೆ ಅಗತ್ಯವಿಲ್ಲ-ಸುಪ್ರೀಂಕೋರ್ಟ್‌

ಸಿನಿಮಾ1 hour ago

Rakshit Shetty: ಯಶವಂತಪುರ ಪೊಲೀಸರ ಮುಂದೆ ಹಾಜರಾದ ನಟ ರಕ್ಷಿತ್‌ ಶೆಟ್ಟಿ, ಕಾಪಿರೈಟ್‌ ಉಲ್ಲಂಘನೆ ವಿಚಾರಣೆ

MS Dhoni
ಕ್ರೀಡೆ1 hour ago

MS Dhoni: ನೆಚ್ಚಿನ ಆಟಗಾರನನ್ನು ಹೆಸರಿಸಿದ ಧೋನಿ; ಕೊಹ್ಲಿ, ರೋಹಿತ್​ ಅಲ್ಲ, ಮತ್ಯಾರು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌