ಅಹಮದಾಬಾದ್: ಕಳೆದ 3 ವಿಶ್ವಕಪ್ ಟೂರ್ನಿಯಲ್ಲಿ ಆತಿಥ್ಯ ವಹಿಸಿದ ರಾಷ್ಟ್ರಗಳೇ ಚಾಂಪಿಯನ್ ಆಗಿ ಮರೆದಾಡಿದ್ದವು. ಈ ಲೆಕ್ಕಾಚಾರದಲ್ಲಿ ಮತ್ತು ಭಾರತ ತಂಡ ಲೀಗ್ನಿಂದ ಸೆಮಿಫೈನಲ್ ತನಕ ತೋರಿದ ಪ್ರದರ್ಶನವನ್ನು ಕಂಡಾಗ ಈ ಸಲ ಕಪ್ ನಮ್ದೇ ಎಂಬ ನಂಬಿಕೆ ಭಾರತೀಯ ಅಭಿಮಾನಿಗಳಲ್ಲಿತ್ತು. ಆದರೆ ಫೈನಲ್ ಪಂದ್ಯದಲ್ಲಿ(IND vs AUS Final) ಭಾರತದ ಕನಸಿಗೆ ಆಸ್ಟ್ರೇಲಿಯಾ ಕೊಳ್ಳಿ ಇಟ್ಟಿತು. 6 ವಿಕೆಟ್ಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಭಾರತ ಸೋಲಿಗೆ 5 ಪ್ರಮುಖ ಕಾರಣ ಎನೆಂಬುದುವು ಈ ವರದಿಯಲ್ಲಿ ವಿವರಿಸಲಾಗಿದೆ.
ಭಾರತ ತಂಡದ ಸೋಲಿಗೆ 5 ಪ್ರಮುಖ ಕಾರಣ
1. ಆರಂಭಿಕ ವಿಕೆಟ್ ಬಿದ್ದಾಗ ಒತ್ತಡಕ್ಕೆ ಸಿಲುಕಿ ಆ ಬಳಿಕ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದು ತಂಡದ ಬೃಹತ್ ಮೊತ್ತಕ್ಕೆ ಹಿನ್ನಡೆಯಾಯಿತು. ಹೀಗಾಗಿ ದೊಡ್ಡ ಮೊತ್ತ ದಾಖಲಾಗಲಿಲ್ಲ. ಗಿಲ್, ಅಯ್ಯರ್, ಸೂರ್ಯಕುಮಾರ್ ಮತ್ತು ಜಡೇಜಾ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಲು ವಿಫಲವಾದದ್ದು.
2. ಅನುಭವಿ ಸ್ಪಿನ್ ಬೌಲರ್ ಆರ್. ಅಶ್ವಿನ್ ಅವರನ್ನು ಬೆಂಚ್ ಕಾಯಿಸಿದ್ದು. ಅಶ್ನಿನ್ ಇದೇ ಮೈದಾನದಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಮತ್ತು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಅವರಿಗೆ ಈ ಪಿಚ್ ಸಂಪೂರ್ಣ ನೆರವು ನೀಡುತ್ತಿತ್ತು. ಆದರೆ ಅವರಿಗೆ ಅವಕಾಶ ನೀಡಲಿಲ್ಲ. ಅಲ್ಲದೆ ಬ್ಯಾಟಿಂಗ್ ಆಲ್ರೌಂಡರ್ ಕೂಡ ಆಗಿದ್ದ ಅವರು ತಂಡದಲ್ಲಿರುತ್ತಿದ್ದರೆ ಬ್ಯಾಟಿಂಗ್ಗೆ ಕೂಡ ನೆರವಾಗುತ್ತಿದ್ದರು.
3. ಆರಂಭಿಕ ಹಂತದಲ್ಲಿ ಬೌಲರ್ಗಳು ಉತ್ತಮ ಹಿಡಿತ ಸಾಧಿಸಿದರೂ ಆ ಬಳಿಕ ಲಯ ಕಳೆದುಕೊಂಡದ್ದು. ಇನ್ನೊಂದು ದೊಡ್ಡ ಎಡವಟ್ಟೆಂದರೆ, ಮೊಹಮ್ಮದ್ ಸಿರಾಜ್ ಅವರಿಗೆ 15 ಓವರ್ ಬಳಿಕ ಬೌಲಿಂಗ್ ನೀಡಿದ್ದು. ಸಿರಾಜ್ ಹೊಸ ಚೆಂಡಿನಲ್ಲಿ ವಿಕೆಟ್ ಟೇಕರ್ ಎನ್ನುವುದನ್ನು ತಿಳಿದಿದ್ದರೂ ಕೂಡ ಹೊಸ ಪ್ರಯೋಗ ನಡೆಸಿದ್ದು ಕೂಡ ಹಿನ್ನಡೆಯಾಗಿ ಪರಿಣಮಿಸಿತು. ಕೈ ಕೊಟ್ಟ ಸ್ಪಿನ್ ವಿಭಾಗ.
ಇದನ್ನೂ ಓದಿ Virat Kohli: ಡ್ರೆಸ್ಸಿಂಗ್ ರೂಮ್ನಲ್ಲಿ ಬೇಸರದಿಂದ ಕುಳಿತ ಕೊಹ್ಲಿಯ ಫೋಟೊ ವೈರಲ್
4. ಕಳೆದ 10 ಪಂದ್ಯಗಳಲ್ಲಿ ಉತ್ಕೃಷ್ಟ ಮಟ್ಟದ ಬ್ಯಾಟಿಂಗ್ ತೋರ್ಪಡಿಸಿದ್ದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಈ ಪಂದ್ಯದಲ್ಲಿ ಕೈಕೊಟ್ಟದ್ದು. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ವಿಚಲಿತರಾಗಿ ಬ್ಯಾಟ್ ಬೀಸಿದ್ದು. ರಾಹುಲ್ ಮತ್ತು ಕೊಹ್ಲಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದೇ ಇದ್ದದೂ ಕೂಡ ಪ್ರಮುಖ ಕಾರಣ.
5. ಹಾರ್ದಿಕ್ ಪಾಂಡ್ಯ ಅವರ ಅಲಭ್ಯತೆ. ಹಾರ್ದಿಕ್ ಪಾಂಡ್ಯ ಅವರು ಟೂರ್ನಿಯ ಮಧ್ಯೆ ಗಾಯಗೊಂಡು ಹೊರಬಿದ್ದದ್ದು ಕೂಡ ಫೈನಲ್ ಪಂದ್ಯದ ಹಿನ್ನಡೆಯಲ್ಲಿ ಒಂದು ಕಾರಣವಾಗಿದೆ. ಅವರು ಇರುತ್ತಿದ್ದರೆ ಹೆಚ್ಚುವರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಸಿಗುತ್ತಿತ್ತು. ಅಲ್ಲದೆ ಅವರು ಸ್ಲೋ ಬೌಲಿಂಗ್ ಮೂಲಕ ವಿಕೆಟ್ ಕೀಳುದರಲ್ಲಿ ಎತ್ತಿದ ಕೈ. ಇನ್ನೊಂದು ಕಾರಣವೆಂದರೆ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಸಿಕ್ಕಿದ್ದು. ಚೇಸಿಂಗ್ ವೇಳೆ ಇಬ್ಬನಿ ಸಮಸ್ಯೆ ಇದ್ದ ಕಾರಣ ಬೌಲರ್ಗಳು ಹಿಡಿತ ತಪ್ಪಿದರು.
ಇದನ್ನೂ ಓದಿ ‘ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’; ಸೋಲಿಗೆ ಕಾರಣ ತಿಳಿಸಿದ ರೋಹಿತ್
ಆಸ್ಟ್ರೇಲಿಯಾ ತಂಡದ ಗೆಲುವಿಗೆ ಪ್ರಮುಖ 5 ಕಾರಣ
1. ಟಾಸ್ ಗೆದ್ದದ್ದು ಆಸೀಸ್ ತಂಡದ ಗೆಲುವಿಗೆ ಮೊದಲ ಕಾರಣ. ಇಲ್ಲಿ ಇಬ್ಬನಿ ಕಾಟ ಇರಲಿದೆ ಎನ್ನುವುದು ಮೊದಲ ತಿಳಿದಿತ್ತು. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್ ನಡೆಸಿದರೆ ಗೆಲುವು ಖಚಿತ ಎಂದು ಹೇಳಲಾಗಿತ್ತು. ಅದರಂತೆ ಆಸೀಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
2. ಭಾರತ ತಂಡದ ಮೊತ್ತಕ್ಕಿಂತ ಮೊದಲೇ ಮೂರು ವಿಕೆಟ್ ಕಳೆದುಕೊಂಡರೂ ಯಾವುದೇ ಗಲಿಬಿಲಿ ಮತ್ತು ಒತ್ತಡಕ್ಕೆ ಸಿಲುಕದೇ ಬ್ಯಾಟಿಂಗ್ ನಡಸಿದ್ದು ಆಸೀಸ್ ಗೆಲುವಿಗೆ ಇನ್ನೊಂದು ಕಾರಣ. 47 ರನ್ಗೆ ಮೂರು ವಿಕೆಟ್ ಬಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೆಡ್ ಮತ್ತು ಲಬುಶೇನ್ ಉತ್ತಮ ಇನಿಂಗ್ಸ್ ಕಟ್ಟಿದ್ದು.
ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು
3. ಉತ್ಕೃಷ್ಟ ಮಟ್ಟದ ಫೀಲ್ಡಿಂಗ್ ಕೂಡ ಆಸೀಸ್ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿತು. ಟ್ರಾವಿಸ್ ಹೆಡ್ ಅವರು ರೋಹಿತ್ ಶರ್ಮ ಅವರ ಕ್ಯಾಚ್ ಪಡೆದಲ್ಲಿಂದ ಪಂದ್ಯದ ಕೊನೆಯ ತನಕವೂ ಆಸೀಸ್ ಆಟಗಾರರು ಫೀಲ್ಡಿಂಗ್ನಲ್ಲಿ ಇಲ್ಲಿಯೂ ಕೂಡ ಸಣ್ಣ ತಪ್ಪು ಮಾಡದೆ. ಸುಮಾರು 20ರಿಂದ 30 ರನ್ಗಳನ್ನು ಫೀಲ್ಡಿಂಗ್ ಮೂಲಕವೇ ತಡೆದರು.
4. ಟ್ರಾವಿಸ್ ಹೆಡ್ ಮತ್ತು ಲಬುಶೇನ್ ಅವರು ನಡೆಸಿದ ಬೃಹತ್ ಜತೆಯಾಟ. ಎಲ್ಲಿಯೂ ಕೂಡ ಮಿಸ್ ಹಿಟ್ಟಿಂಗ್ ನಡೆಸದೆ ಆಡಿದ್ದು ಕೂಡ ಆಸೀಸ್ಗೆ ವರದಾನವಾಯಿತು.
5. ಇದೇ ಮೈದಾನದಲ್ಲಿ ಐಪಿಎಲ್ ಆಡಿದ ಅನುಭವ ಆಸೀಸ್ ಆಟಗಾರರಿಗೆ ಕೈ ಹಿಡಿಯಿತು. ಅಲ್ಲದೆ ಭಾರತದ ಎಲ್ಲ ಆಟಗಾರರ ಪ್ಲಸ್ ಮತ್ತು ಮೈನಸ್ ಅಂಶಗಳನ್ನು ಸರಿಯಾಗಿ ಅಧ್ಯಯನ ಮಾಡಿ ಇದಕ್ಕೆ ತಕ್ಕಂತ ಆಟ ಪ್ರದರ್ಶಿಸಿದ್ದೂ ಆಸೀಸ್ ಮಲುಗೈಗೆ ಕಾರಣ.