ಅಹಮದಾಬಾದ್: ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಅತ್ಯಧಿಕ ವಿಕೆಟ್ ಪಡೆದ ಟಾಪ್ ಬೌಲರ್ಗಳ ಸಾಧನೆಯ ಸಂಪೂರ್ಣ ವಿವರ ಇಲ್ಲಿದೆ. ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಸೋಲು ಕಾಣುವ ಮೂಲಕ ವಿಶ್ವಕಪ್ ಕಿರೀಟವನ್ನು ಕಳೆದುಕೊಂಡಿತು.
ಮೊಹಮ್ಮದ್ ಶಮಿ
ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಅವರ ಬೌಲಿಂಗ್ ಸಾಧನೆ ಮರೆಯಲು ಸಾಧ್ಯವಿಲ್ಲ. ಕೇವಲ 7 ಪಂದ್ಯಗಳಲ್ಲಿ ಆಡಿದ್ದರೂ, ಮೊನಚಾದ ದಾಳಿಯಿಂದಾಗಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಶಮಿ ಆ ಬಳಿಕ ಪ್ರತಿ ಪಂದ್ಯದಲ್ಲಿಯೂ ಗೆಲುವಿನ ಹೀರೊ ಆಗಿ ಮೆರೆದಾಡಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ 5 ವಿಕೆಟ್ ಪಡೆದರು. ಇಂಗ್ಲೆಂಡ್ ವಿರುದ್ಧ ಭಾರತ ಕಡಿಮೆ ಸ್ಕೋರ್ ಗಳಿಸಿದ್ದರೂ ಶಮಿ ಮಾತ್ರ ತಮ್ಮ ಬೌಲಿಂಗ್ ಸಾಹಸದಿಂದ 22 ರನ್‌ಗೆ 4 ವಿಕೆಟ್ ಪಡೆದು ಮಿಂಚಿದರು. ಲಂಕಾ ವಿರುದ್ಧ ಕೇವಲ 18 ರನ್‌ಗೆ 5 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ವಿರುದ್ಧ 2 ವಿಕೆಟ್ ಪಡೆದರು. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ 7 ವಿಕೆಟ್ ಪಡೆದ ಶಮಿ ಹೊಸ ದಾಖಲೆಯನ್ನೇ ನಿರ್ಮಿಸಿದರು. ಫೈನಲ್ ಪಂದ್ಯದಲ್ಲಿ 1 ವಿಕೆಟ್ ಕಿತ್ತರು. ಒಟ್ಟಾರೆ 23 ವಿಕೆಟ್ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಆಟಗಾರನಾಗಿ ಹೊರಹೊಮ್ಮಿದರು. 57ಕ್ಕೆ 7 ವಿಕೆಟ್ ಗರಿಷ್ಠ ವೈಯಕ್ತಿಕ ಬೌಲಿಂಗ್ ಸಾಧನೆ.
ಆ್ಯಂಡ ಜಂಪಾ
ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆ್ಯಡಂ ಜಂಪಾ ಅವರು ಕೂಡ ಈ ಬಾರಿಯ ವಿಶ್ವಕಪ್ನಲ್ಲಿ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಗಮನಸೆಳೆದರು. ಒಟ್ಟು ಟೂರ್ನಿಯಲ್ಲಿ ಅವರು ವಿಕೆಟ್ ಕಿತ್ತರು. 8 ರನ್‌ಗೆ 4 ವಿಕೆಟ್ ಕಿತ್ತದ್ದು ಅವರ ಗರಿಷ್ಠ ವೈಯಕ್ತಿಕ ಬೌಲಿಂಗ್ ಸಾಧನೆಯಾಗಿದೆ.
ದಿಲ್ಶಾನ್ ಮಧುಶಂಕ
ಶ್ರೀಲಂಕಾದ ದಿಲ್ಶಾನ್ ಮಧುಶಂಕ ಅವರು 9 ವಿಶ್ವಕಪ್ ಪಂದ್ಯಗಳನ್ನು ಆಡಿ 21 ವಿಕೆಟ್ ಕಡೆವಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕರ ಯಾದಿಯಲ್ಲಿ ಅವರಿಗೆ ಮೂರನೇ ಸ್ಥಾನ. 80 ರನ್‌ಗೆ 5 ವಿಕೆಟ್ ಉರುಳಿಸಿದ್ದು ಅವರ ಗರಿಷ್ಠ ವೈಯಕ್ತಿಕ ಬೌಲಿಂಗ್ ಸಾಧನೆಯಾಗಿದೆ.
ಜೆರಾಲ್ಡ್ ಕೋಟ್ಜಿ
ಚೊಚ್ಚಲ ಬಾರಿಗೆ ವಿಶ್ವಕಪ್ ಆಡಿದ ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಟ್ಜಿ ಅವರು ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 20 ವಿಕೆಟ್ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅವರಿಗೆ ನಾಲ್ಕನೇ ಸ್ಥಾನ. 44 ರನ್‌ಗೆ 4 ವಿಕಟ್ ಕೆಡವಿದ್ದು ಅವರ ಗರಿಷ್ಠ ವೈಯಕ್ತಿಕ ಬೌಲಿಂಗ್ ಸಾಧನೆಯಾಗಿದೆ.
ಜಸ್ಪ್ರೀತ್ ಬುಮ್ರಾ
ತೀವ್ರ ಸ್ವರೂಪದ ಬೆನ್ನು ನೋವಿನಿಂದ 11 ತಿಂಗಳ ಕಾಲ ಕ್ರಿಕೆಟ್ ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ ಅವರು ವಿಶ್ವಕಪ್ಗೆ ಆಯ್ಕೆಯಾದಗ ಅವರ ಬೌಲಿಂಗ್ ಬಗ್ಗೆ ಚಿಂತೆ ಇತ್ತು. ಆದರೆ ಬುಮ್ರಾ ತಮ್ಮ ಹಳೆಯ ಬೌಲಿಂಗ್ ಚಾರ್ಮ್ ಅನ್ನೇ ತೋರ್ಪಡಿಸುವ ಮೂಲಕ ತಮಡಕ್ಕೆ ನೆರವಾದರು. ಬಹುತೇಕ ಎಲ್ಲ ಪಂದ್ಯಗಳಲ್ಲೂ ತಮ್ಮ ಬೌಲಿಂಗ್ ತೀವ್ರತೆಯನ್ನು ಪ್ರದರ್ಶಿಸಿಕೊಂಡೇ ಬಂದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಲೀಗ್ ಪಂದ್ಯದಲ್ಲಿ 38 ರನ್ ನೀಡಿ 2 ವಿಕೆಟ್, ಆಫ್ಘನ್ ವಿರುದ್ಧದ 39 ರನ್ ನೀಡಿ 4, ಪಾಕ್ ವಿರುದ್ಧದ 19 ರನ್‌ಗೆ 2, ಬಾಂಗ್ಲಾ ವಿರುದ್ಧ 41 ರನ್ ನೀಡಿ 2, ಇಂಗ್ಲೆಂಡ್ ವಿರುದ್ಧ 32ಕ್ಕೆ 3, ನೆದರ್ಲೆಂಡ್ಸ್ ವಿರುದ್ಧ 2 ವಿಕೆಟ್ ಪಡೆದರು. ಫೈನಲ್ ಪಂದ್ಯದಲ್ಲಿ 2 ವಿಕೆಟ್ ಪಡೆದರು. ಒಟ್ಟಾರೆ ಅವರು ಈ ಬಾರಿ 20 ವಿಕೆಟ್ ಕಿತ್ತರು.
ಇದನ್ನೂ ಓದಿ IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು