ಸಿಡ್ನಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4-3 ಗೋಲ್ಗಳ ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ 13 ಪಂದ್ಯಗಳ ಬಳಿಕ ಆಸೀಸ್ ವಿರುದ್ಧ ಭಾರತ ತಂಡ ಮೊದಲ ಜಯ ಸಂಪಾದಿಸಿತು.
ಬುಧವಾರ ಇಲ್ಲಿ ನಡೆದ ರೋಚಕ ಹೋರಾಟದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಬಳಗ ಎಲ್ಲ ವಿಭಾಗದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1-2ರಿಂದ ಹಿನ್ನಡೆಯಲ್ಲಿದ್ದರೂ ಸರಣಿ ಗೆಲುವಿನ ಆಸೆ ಜೀವಂತವಿರಿಸಿದೆ. ಕಳೆದ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 0-7ರಿಂದ ಆಸ್ಟ್ರೇಲಿಯಾಕ್ಕೆ ಮಣಿದಿದ್ದ ಭಾರತಕ್ಕೆ ಇದು ಅಪರೂಪದ ಗೆಲುವಾಗಿದೆ.
ಭಾರತ ಪರ ಹರ್ಮನ್‌ಪ್ರೀತ್ ಸಿಂಗ್ (12 ನಿಮಿಷ), ಅಭಿಷೇಕ್ (47 ನಿಮಿಷ), ಶಂಷೇರ್ ಸಿಂಗ್ (57 ನಿಮಿಷ) ಮತ್ತು ಆಕಾಶದೀಪ್ ಸಿಂಗ್ (60 ನಿಮಿಷ) ಪಂದ್ಯದ ನಿಗದಿತ ಸಮಯದ ಮುಕ್ತಾಯಕ್ಕೆ 54 ಸೆಕೆಂಡುಗಳಿರುವಾಗ ಗಳಿಸಿದ ಗೋಲು ಭಾರತ ತಂಡ ಗೆಲುವಿಗೆ ಕಾರಣವಾಯಿತು. ಆಸ್ಟ್ರೇಲಿಯಾ ಪರ ಜಾಕ್ ವೆಲ್ಶ್ (25ನೇ ನಿ.), ನಾಯಕ ಆ್ಯರನ್ ಜಲೆವ್‌ಸ್ಕಿ (32ನೇ ನಿ.) ಮತ್ತು ನೇಥನ್ ಎಪರ್ಮಸ್ (59ನೇ ನಿ.) ಗೋಲು ಹೊಡೆದರು.
ಇದನ್ನೂ ಓದಿ | Sports Awards | ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆದ ಸಾಧಕರ ಪಟ್ಟಿಯ ಸಂಪೂರ್ಣ ಮಾಹಿತಿ