ಅಹಮದಾಬಾದ್: ಭಾರತ(IND VS AUS) ಮತ್ತು ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಡ್ರಾ ಗೊಳ್ಳುವತ್ತ ಮುಖಮಾಡಿದೆ. ಭಾರತದ ಮೊದಲ ಇನಿಂಗ್ಸ್‌ನ 91 ರನ್‌ಗಳ ಮುನ್ನಡೆಯನ್ನು ಬೆನ್ನಟ್ಟುತ್ತಿರುವ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಸದ್ಯ 88 ರನ್‌ಗಳ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಅಂತಿಮ ದಿನವಾದ ಸೋಮವಾರ ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಯಾವುದೇ ಚಿಂತೆ ಇಲ್ಲದೆ ಅಧಿಕೃತವಾಗಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ(ICC World Test Championship) ಪ್ರವೇಶ ಪಡೆಯಲಿದೆ. ಫೈನಲ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಒಂದೊಮ್ಮೆ ಈ ಪಂದ್ಯ ಡ್ರಾ ಗೊಂಡರೆ ಭಾರತಕ್ಕೆ ಫೈನಲ್ ಪ್ರವೇಶದ ಅವಕಾಶ ಇದೆಯಾ ಎಂಬ ಮಾಹಿತಿ ಇಂತಿದೆ.
ಇದನ್ನೂ ಓದಿ IND VS AUS: ವಿರಾಟ್ ಕೊಹ್ಲಿ ಶತಕ ಸಂಭ್ರಮ; ಭಾರತಕ್ಕೆ 91 ರನ್ ಲೀಡ್
ಅಂತಿಮ ಟೆಸ್ಟ್ ಡ್ರಾ ಗೊಂಡರೆ ಭಾರತ ಚೆಸ್ಟ್ ಚಾಂಪಿಯನ್‌ಶಿಪ್‌ಗೆ ಪ್ರವೇಶ ಪಡೆಯಲು ಪ್ರಸಕ್ತ ಸಾಗುತ್ತಿರುವ ಶ್ರೀಲಂಕಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಫಲಿತಾಂಶಕ್ಕಾಗಿ ಕಾಯಬೇಕಿದೆ. ಒಂದೊಮ್ಮೆ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯ ಸೋತರೂ ಭಾರತ ಫೈನಲ್ ಪ್ರವೇಶ ಪಡೆಯಲಿದೆ. ಆದರೆ ಲಂಕಾ ಈ ಸರಣಿಯಲ್ಲಿ ಮೇಲುಗೈ ಸಾಧಿಸಿದರೆ ಭಾರತ ಈ ರೇಸ್‌ನಿಂದ ಹೊರ ಬಿದ್ದು ಲಂಕಾ ತಂಡ ಫೈನಲ್ ಪ್ರವೇಶ ಪಡೆಯಲಿದೆ. ಒಟ್ಟಾರೆ ಭಾರತ ಟೆಸ್ಟ್ ಚಾಂಪಿಯನ್ ಶಿಪ್‌ನ ಭವಿಷ್ಯ ನ್ಯೂಜಿಲ್ಯಾಂಡ್ ತಂಡದ ಕೈಯಲ್ಲಿದೆ.