ಚೆನ್ನೈ: ಏಕದಿನ ವಿಶ್ವಕಪ್ನ(icc world cup 2023) ಅತ್ಯಂತ ಯಶಸ್ವಿ ತಂಡವಾದ ಆಸ್ಟ್ರೇಲಿಯಾ 5 ಬಾರಿ ಕಪ್ ಗೆದ್ದ ಸಾಧನೆ ಮಾಡಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಆತಿಥೇಯ ಭಾರತ(IND vs AUS) ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಉಭಯ ತಂಡಗಳಿಗೂ ಇದು ಟೂರ್ನಿಯ ಮೊದಲ ಪಂದ್ಯವಾಗಿದೆ. ಭಾನುವಾರ ನಡೆಯುವ ಈ ಪಂದ್ಯಕ್ಕೆ ಚೆನ್ನೈಯ ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಭಾರತ-ಆಸೀಸ್ ನಡುವಣ ವಿಶ್ವಕಪ್ ಸಾಧನೆಯ ಸಂಪೂರ್ಣ ವರದಿ ಇಲ್ಲಿದೆ.
ಭಾರತ ಮತ್ತು ಆಸೀಸ್ ತಂಡಗಳು 12 ಆವೃತ್ತಿಯ ವಿಶ್ವಕಪ್ ಮಹಾ ಸಮರದಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಒಂದು ಬಾರಿ ಫೈನಲ್ನಲ್ಲಿ ಸೆಣಸಾಡಿವೆ. ಇದು 2003ರ ವಿಶ್ವಕಪ್ ಟೂರ್ನಿ. ಫೈನಲ್ನಲ್ಲಿ ಭಾರತ ಸೋಲು ಕಂಡು 2ನೇ ಬಾರಿ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. 12 ಪಂದ್ಯಗಳ ಪೈಕಿ ಭಾರತ 4 ಪಂದ್ಯಗಳಲ್ಲಿ ಗೆದ್ದರೆ, ಆಸ್ಟ್ರೇಲಿಯಾ 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಚೆನ್ನೈಯಲ್ಲೂ ನಡೆದಿತ್ತು ಒಂದು ಪಂದ್ಯ
1987ರ ವಿಶ್ವಕಪ್ನಲ್ಲಿ ಚೆನ್ನೈಯಲ್ಲಿ ನಡೆದ ಅತ್ಯಂತ ರೋಚಕವಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತ ವಿರುದ್ಧ ಕೇವಲ ಒಂದು ರನ್ಗಳಿಂದ ಗೆಲುವು ಸಾಧಿಸಿತ್ತು. ಜೆಫ್ ಮಾರ್ಷ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಬಾರಿಯೂ ಭಾರತ ತನ್ನ ಮೊದಲ ಪಂದ್ಯವನ್ನು ಚೆನ್ನೈಯಲ್ಲೇ ಆಸೀಸ್ ವಿರುದ್ಧ ಆಡಲಿದೆ. 87ರ ಸೋಲಿಗೆ ಭಾರತ ಸೇಡು ತೀರಿಸೀತೇ ಎನ್ನುವುದು ಪಂದ್ಯದ ಕೌತುಕ.
ಇದನ್ನೂ ಓದಿ South Africa vs Sri Lanka: ಹರಿಣಗಳ ಸವಾಲು ಮೆಟ್ಟಿ ನಿಂತಿತೇ ಸಿಂಹಳಿಯರ ಪಡೆ?
ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವಕಪ್ನಲ್ಲಿ ಬಾರಿಸಿದ ಗರಿಷ್ಠ ಮೊತ್ತ 352. ಆಸೀಸ್ ಬಾರಿಸಿದ ಬೃಹತ್ ಮೊತ್ತ 359. ಇದೀಗ ಚೆನ್ನೈಯಲ್ಲಿ ಈ ದಾಖಲೆ ಪತನಗೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ. ಭಾರತ ಕೆಲ ದಿನಗಳ ಹಿಂದೆ ತವರಿನಲ್ಲಿ ಆಸೀಸ್ ವಿರುದ್ಧ ಸರಣಿ ಗೆದ್ದು ಬೀಗಿತ್ತು. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತ-ಆಸ್ಟ್ರೇಲಿಯಾ ಸೋಲು ಮತ್ತು ಗೆಲುವಿನ ಪಟ್ಟಿ
ವರ್ಷ | ಸ್ಥಳ | ಫಲಿತಾಂಶ | ಪಂದ್ಯಶ್ರೇಷ್ಠ |
1983 | ನಾಟಿಂಗ್ಹ್ಯಾಮ್ | ಆಸ್ಟ್ರೇಲಿಯಾಕ್ಕೆ 162 ರನ್ ಜಯ | ಟ್ರೆವರ್ ಚಾಪೆಲ್ |
1983 | ಚೆಲ್ಮ್ಸ್ ಫೋರ್ಡ್ | ಭಾರತಕ್ಕೆ 118 ರನ್ ಜಯ | ರೋಜರ್ ಬಿನ್ನಿ |
1987 | ಚೆನ್ನೈ | ಆಸ್ಟ್ರೇಲಿಯಾಕ್ಕೆ 1ರನ್ ಗೆಲುವು | ಜೆಫ್ ಮಾರ್ಷ್ |
1987 | ನವದೆಹಲಿ | ಭಾರತಕ್ಕೆ 56 ರನ್ ಜಯ | ಎಂ. ಅಜರುದ್ದೀನ್ |
1992 | ಬ್ರಿಸ್ಬೇನ್ | ಆಸ್ಟ್ರೇಲಿಯಾಕ್ಕೆ 1 ರನ್ ಜಯ | ಡೀನ್ ಜೋನ್ಸ್ |
1996 | ಮುಂಬಯಿ | ಆಸ್ಟ್ರೇಲಿಯಾಕ್ಕೆ 16 ರನ್ ಜಯ | ಮಾರ್ಕ್ ವೋ |
1999 | ಓವಲ್ | ಆಸ್ಟ್ರೇಲಿಯಾಕ್ಕೆ 77 ರನ್ ಜಯ | ಗ್ಲೆನ್ ಮೆಕ್‌ಗ್ರಾತ್ |
2003 | ಸೆಂಚುರಿಯನ್ | ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಜಯ | ಜಾಸನ್ ಗಿಲೆಸ್ಪಿ |
2003 | ಜೊಹಾನ್ಸ್ಬರ್ಗ್ | ಆಸ್ಟ್ರೇಲಿಯಾಕ್ಕೆ 125 ರನ್ ಜಯ | ರಿಕಿ ಪಾಂಟಿಂಗ್ |
2011 | ಅಹ್ಮದಾಬಾದ್ | ಭಾರತಕ್ಕೆ 5 ವಿಕೆಟ್ ಜಯ | ಯುವರಾಜ್ ಸಿಂಗ್ |
2015 | ಸಿಡ್ನಿ | ಆಸ್ಟ್ರೇಲಿಯಾಕ್ಕೆ 95 ರನ್ ಜಯ | ಸ್ಟೀವನ್ ಸ್ಮಿತ್ |
2019 | ಓವಲ್ | ಭಾರತಕ್ಕೆ 36 ರನ್ | ಶಿಖರ್ ಧವನ್ |