Site icon Vistara News

IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ; ಸರಣಿ ಗೆದ್ದ ಭಾರತ

ind-vs-aus-india-australia-final-test-match-ends-in-draw

ind-vs-aus-india-australia-final-test-match-ends-in-draw

ಅಹಮದಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯ ಅಂತಿಮ ಪಂದ್ಯ ಡ್ರಾದಲ್ಲಿ ಮುಕ್ತಾಯಕಂಡಿದೆ. ಈ ಮೂಲಕ ಭಾರತ 2-1 ಅಂತರದಿಂದ ಸರಣಿ ಗೆದ್ದು ಬೀಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡ ಕಾರಣ ಭಾರತ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಪ್ರವೇಶ ಪಡೆದಿತ್ತು.

​ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 480 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ 571 ರನ್​ ಗಳಿಸಿತು. 91 ರನ್​ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ 2 ವಿಕೆಟ್​ಗೆ 175 ರನ್​ ಗಳಿಸಿದ ವೇಳೆ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾ ಮಾಡಲು ನಿರ್ಧರಿಸಿದರು. ದ್ವಿತೀಯ ಇನಿಂಗ್ಸ್​ ವೇಳೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್​ 90 ಮತ್ತು ಮಾರ್ನಸ್​ ಲಬುಶೇನ್​ ಅಜೇಯ 63 ರನ್​ ಬಾರಿಸಿದರು.

ಇದನ್ನೂ ಓದಿ ICC Test Championship; ಕಿವೀಸ್​ ವಿರುದ್ಧ ಲಂಕಾಗೆ ಸೋಲು; ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದ ಭಾರತ

ಭಾರತ ಪರ ಮೊದಲ ಇನಿಂಗ್ಸ್​ನಲ್ಲಿ ಶುಭಮನ್​ ಗಿಲ್(Shubman Gill) 128, ವಿರಾಟ್​ ಕೊಹ್ಲಿ(Virat Kohli) 186 ರನ್​ ಬಾರಿಸಿದ್ದರು. ಹಿರಿಯ ಸ್ಪಿನರ್​ ಆರ್​​. ಅಶ್ವಿನ್ ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್​ ಕಿತ್ತು ಮಿಂಚಿದರು. ಆಸೀಸ್​ ಪರ ನಥಾನ್​ ಲಿಯೋನ್​ ಮತ್ತು ಟಾಡ್​ ಮರ್ಫಿ ತಲಾ ಮೂರು ವಿಕೆಟ್​ ಕಿತ್ತರು.

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮಾರ್ಚ್​ 17ರಿಂದ ಆರಂಭಗೊಳ್ಳಲಿದೆ. ಇದಾದ ಬಳಿಕ ಐಪಿಎಲ್​ ಟೂರ್ನಿ ಆರಂಭಗೊಳ್ಳಲಿದೆ.

ಸಂಕ್ಷಿಪ್ತ ಸ್ಕೋರ್​: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್:​ 480; (ಉಸ್ಮಾನ್​ ಖಾವಾಜ 180, ಕ್ಯಾಮೆರೂನ್​ ಗ್ರೀನ್​ 114, ಆರ್​. ಆಶ್ವಿನ್​ 91ಕ್ಕೆ 6). ಭಾರತ ಮೊದಲ ಇನಿಂಗ್ಸ್​: 571; ವಿರಾಟ್​ ಕೊಹ್ಲಿ 186, ಶುಭಮನ್​ ಗಿಲ್​ 128, ಅಕ್ಷರ್​ ಪಟೇಲ್ 79, ನಥಾನ್​ ಲಿಯೋನ್​ 90ಕ್ಕೆ 3, ಟಾಡ್​ ಮರ್ಫಿ 113ಕ್ಕೆ 3). ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್​: 175ಕ್ಕೆ 2; ಟ್ರಾವಿಸ್​ ಹೆಡ್​ 90, ಮಾರ್ನಸ್​ ಲಬುಶೇನ್​ ಅಜೇಯ 63, ಅಕ್ಷರ್​ ಪಟೇಲ್​ 36ಕ್ಕೆ 1). ಪಂದ್ಯಶ್ರೇಷ್ಠ: ವಿರಾಟ್​ ಕೊಹ್ಲಿ. ಸರಣಿ ಶ್ರೇಷ್ಠ: ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ.

Exit mobile version