ಇಂದೋರ್: ಆಸೀಸ್ ಸ್ಪಿನ್ ದಾಳಿಗೆ ನಲುಗಿದ ಟೀಮ್ ಇಂಡಿಯಾ ಮೂರನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 109 ರನ್ಗಳಿಗೆ ಕುಸಿತ ಕಂಡಿದೆ. ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾ 12 ರನ್ಗೆ ಒಂದು ವಿಕೆಟ್ ಕಳೆದುಕೊಂಡು ಆಟ ಮುಂದುವರಿಸಿದೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಿಂದಲೇ ಕುಸಿತ ಕಂಡಿತು. ಆಸೀಸ್ ಸ್ಪಿನ್ನರ್ಗಳಾದ ನಥಾನ್ ಲಿಯೋನ್ ಮತ್ತು ಮ್ಯಾಥ್ಯೂ ಕುಹ್ನೆಮನ್ ಭಾರತದ ಹೆಡೆಮುರಿ ಕಟ್ಟಿದರು. ಉಭಯ ಆಟಗಾರರು ಸೇರಿ 8 ವಿಕೆಟ್ ಕಿತ್ತರು. ಇದರಲ್ಲಿ ಕುಹ್ನೆಮನ್5 ಮತ್ತು ಲಿಯೋನ್ 3 ವಿಕೆಟ್ ಪಡೆದರು.
ರಾಹುಲ್ ಬದಲಿಗೆ ಆಡಲಿಳಿದ ಶುಭಮನ್ ಗಿಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಿಸಿಕೊಳ್ಳುವಲ್ಲಿ ಎಡವಿದರು. ಕೇವಲ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ರಾಹುಲ್ ಬಲಿಗೆ ಗಿಲ್ ಆಡಿದರೂ ಭಾರತದ ಓಪನಿಂಗ್ ಸಮಸ್ಯೆ ಮತ್ತೆ ಮುಂದುವರಿಯಿತು. ನಾಯಕ ರೋಹಿತ್ ಕೂಡ ಜವಾಬ್ದಾರಿಯುತ ಆಟವಾಡುವಲ್ಲಿ ವೈಫಲ್ಯ ಕಂಡರು.
ಇದನ್ನೂ ಓದಿ IND VS AUS: ಭಾರತದ ಸವಾಲು ಎದುರಿಸಲು ಸಿದ್ಧ; ಸ್ಟೀವನ್ ಸ್ಮಿತ್ ವಿಶ್ವಾಸ
ವಿರಾಟ್ ಕೊಹ್ಲಿ 22 ರನ್ ಗಳಿಸಿ ಭಾರತ ಪರ ಅತ್ಯಧಿಕ ಮೊತ್ತ ಪೇರಿಸಿದ ಆಟಗಾರನಾಗಿ ಗುರುತಿಸಿಕೊಂಡರು. ಅಂತಿಮವಾಗಿ ಅಕ್ಷರ್ ಪಟೇಲ್ 12 ರನ್ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಒಬ್ಬ ಆಟಗಾರ ಸಾಥ್ ನೀಡುತ್ತಿದ್ದರೂ ಭಾರತ ಮೊತ್ತ ಕೊಂಚವಾದರೂ ಏರಿಕೆ ಕಾಣುವ ಸಾಧ್ಯತೆ ಇತ್ತು.