Site icon Vistara News

IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್​ ಕಿಶನ್​; ಕಾರಣ ಏನು?

Shubman Gill has started the batting practice

ಅಹಮದಾಬಾದ್​: ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ(IND vs PAK) ವಿರುದ್ಧದ ವಿಶ್ವಕಪ್​ ಮುಖಾಮುಖಿ ಶನಿವಾರ ಅಹಮದಾಬಾದ್​ನಲ್ಲಿ ನಡೆಯಲಿದೆ. ಉಭಯ ತಂಡಗಳ ಕಾದಾಟಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಸರ್ವ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಆದರ ಈ ಪಂದ್ಯದಲ್ಲಿ ಇಶಾನ್​ ಕಿಶನ್​ಗೆ(ishan kishan) ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.

ಡೆಂಗ್ಯೂ ಜ್ವರದಿಂದ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಶುಭಮನ್‌ ಗಿಲ್‌(Shubham Gill) ಅವರು ಗುರುವಾರ ಸುಮಾರು 5 ತಾಸು ನೆಟ್‌ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಈ ಮೂಲಕ ಶನಿವಾರ ನಡೆಯುಯವ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಜ್ವರದಿಂದಾಗಿ ಗಿಲ್​ ಆಸ್ಟ್ರೇಲಿಯ ಮತ್ತು ಅಫಘಾನಿಸ್ತಾನ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದರು.

5 ತಾಸು ಬ್ಯಾಟಿಂಗ್​ ಅಭ್ಯಾಸ

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮೈದಾನಕ್ಕೆ ಬಂದ ಗಿಲ್​ ವಿಶೇಷ ನೆಟ್‌ ಅಭ್ಯಾಸ ನಡೆಸಿದರು. ಈ ವೇಳೆ ತಂಡದ ವೈದ್ಯ ರಿಜ್ವಾನ್‌ ಕೂಡ ಜತೆಗಿದ್ದರು. ಅವರ ಮಾರ್ಗದರ್ಶನದಲ್ಲೇ ಗಿಲ್​ ಬ್ಯಾಟಿಂಗ್​ ಅಭ್ಯಾಸ ನಡೆಸಿದರು. ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ ಗಿಲ್​ ಅವರು ಪಾಕಿಸ್ತಾನ ಪಂದ್ಯದಲ್ಲಿ ಆಡುವುದು 100 ಪ್ರತಿಶತ ಖಚಿತ ಎಂದಿದ್ದಾರೆ. ಗಿಲ್​ ಲಭ್ಯತೆಯ ಬಗ್ಗೆ ಬಿಸಿಸಿಐ ಇಂದು ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

ಇಶಾನ್​ಗೆ ಕೊಕ್​ ಸಾಧ್ಯತೆ

ಶುಭಮನ್​ ಗಿಲ್​ ಅವರ ಆಗಮನವಾದರೆ ಅವರ ಸ್ಥಾನದಲ್ಲಿ ಆಡುತ್ತಿದ್ದ ಎಡಗೈ ಬ್ಯಾಟರ್​ ಇಶಾನ್​ ಕಿಶನ್​ ಅವರು ಈ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ. ಉಳಿದ ಯಾವುದೇ ಸ್ಥಾನದಲ್ಲಿಯೂ ಅವರಿಗೆ ಅವಕಾಶ ಸಿಗುವುದು ಕಷ್ಟ ಸಾಧ್ಯ. ಏಕೆಂದರೆ ಎಲ್ಲ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಏಷ್ಯಾಕಪ್​ನ ಲೀಗ್​ ಪಂದ್ಯದಲ್ಲಿ ನಂಬುಗೆಯ ಬ್ಯಾಟರ್​ಗಳೆಲ್ಲಾ ಕೈಕೊಟ್ಟಾಗ ಇಶಾನ್​ ಕಿಶನ್​ ಅವರು ಪಾಕ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು ತಂಡಕ್ಕೆ ಆಸರೆಯಾಗಿದ್ದರು.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯ ನಡೆಯುವುದು ಅನುಮಾನ

ಗಿಲ್​ ಈಸ್​ ರೆಡಿ

“ಶುಭಮ್ ಗಿಲ್ ಕೋ ಮೈನೆ ತಗ್ದಾ ಕರ್ ದಿಯಾ(ನಾನು ಶುಭಮನ್​ ಗಿಲ್ ಅವರನ್ನು ಬಲಪಡಿಸಿದ್ದೇನೆ). ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವಾಗ ವಿಶ್ವಕಪ್‌ನಲ್ಲಿ ಆಡಿದ್ದೇನೆ ಎಂದು ಅವರಿಗೆ ಹೇಳಿದ್ದೇನೆ. ಇದನ್ನೂ ಅವರು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ತಂಡವನ್ನು ಸೇರಲು ಆಶಾದಾಯಕರಾಗಿದ್ದಾರೆ. ಜ್ವರ ಮತ್ತು ಡೆಂಗ್ಯೂ ಇದ್ದಾಗ ಕ್ರಿಕೆಟ್ ಪಂದ್ಯವನ್ನು ಆಡುವುದು ನಿಜವಾಗಿಯೂ ಕಠಿಣವಾಗಿದೆ ಎನ್ನುವುದು ನನಗೂ ತಿಳಿದಿದೆ. ಅಲ್ಲದೆ ನೋವನ್ನು ನಾನು ಕೂಡ ಅನುಭವಿಸಿದ್ದೇನೆ. ಖಂಡಿತವಾಗಿಯೂ ಗಿಲ್​ ಪಾಕ್​ ವಿರುದ್ಧ ಆಡುತ್ತಾರೆ” ಎಂದು ಯುವರಾಜ್​ ಸಿಂಗ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆತ್ಮವಿಶ್ವಾಸ ಇರಲಿ

 “2011ರ ವಿಶ್ವಕಪ್​ನಲ್ಲಿ(World Cup 2011) ನಾನು ಕ್ಯಾನ್ಸರ್​ನಿಂದ ಬಳಲುತ್ತಿದ್ದೆ. ಈ ವಿಚಾರ ನನಗೆ ಮಾತ್ರ ತಿಳಿದಿತ್ತು. ಆದರೂ ನಾನು ಜಗ್ಗಲಿಲ್ಲ, ಕುಗ್ಗಲಿಲ್ಲ. ಪಂದ್ಯವನ್ನು ಆಡಲಿಳಿದೆ. ಇದನ್ನೇ ನೀನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ನಿನ್ನಿಂದ ಎಲ್ಲವು ಸಾಧ್ಯ. ಆತ್ಮವಿಶ್ವಾಸ ಇರಲಿ. ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವುದನ್ನು ಎದುರು ನೋಡುತ್ತಿರುವೆ” ಎಂದು ಹೇಳುವ ಮೂಲಕ ಯುವರಾಜ್​ ಅವರು ಗಿಲ್​ಗೆ ಆತ್ಮವಿಶ್ವಾಸ ತುಂಬಿದ್ದಾರೆ.

Exit mobile version