ನವದೆಹಲಿ: ರವೀಂದ್ರ ಜಡೇಜಾ ಅವರ ಸ್ಪಿನ್ ಜಾದೂಗೆ ಮಂಡಿಯೂರಿದ ಆಸ್ಟ್ರೇಲಿಯಾ(IND VS AUS) ದ್ವಿತೀಯ ಇನಿಂಗ್ಸ್ನಲ್ಲಿ 113 ರನ್ಗೆ ಸರ್ವಪತನ ಕಂಡಿದೆ. ಭಾರತ ಗೆಲುವಿಗೆ 115 ರನ್ ಪೇರಿಸಬೇಕಿದೆ.
ಅರುಣ್ ಜೇಟ್ಲಿ ಕ್ರಿಕೆಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 12 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿ 62 ರನ್ಗಳ ಮುನ್ನಡೆ ಪಡೆದುಕೊಂಡು ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಮೂರನೇ ದಿನದಾಟ ಮುಂದುವರಿಸಿದ ಆಸೀಸ್ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಅರ್ಧ ದಾರಿ ಕ್ರಮಿಸುವ ವೇಳೆ ಹಠಾತ್ ಕುಸಿತ ಕಂಡು 133 ರನ್ಗೆ ಆಲೌಟ್ ಆಯಿತು. ಸದ್ಯ ಆಸೀಸ್ 114 ರನ್ಗಳ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ INDvsAUS : ಎರಡನೇ ಇನಿಂಗ್ಸ್ನಲ್ಲಿ ವೇಗದ ರನ್ ಗಳಿಕೆಗೆ ಮೊರೆ ಹೋದ ಆಸ್ಟ್ರೇಲಿಯಾ; 62 ರನ್ ಮುನ್ನಡೆ
ಮೂರನೇ ದಿನದಾಟದಲ್ಲಿ ಆಸೀಸ್ ಕೇವಲ 52 ರನ್ಗಳಷ್ಟೆ ಒಟ್ಟುಗೂಡಿಸಿತು. ರವಿಂದ್ರ ಜಡೇಜಾ ಯಾರೂ ಊಹಿಸದ ರೀತಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಆಸೀಸ್ ಬ್ಯಾಟರ್ಗಳ ಹೆಡೆಮುರಿ ಕಟ್ಟಿದರು. ಅವರುಕೇವಲ 42 ರನ್ಗೆ 7 ವಿಕೆಟ್ ಕಿತ್ತು ಮಿಂಚಿದರು. ಆರ್ ಅಶ್ವಿನ್ ಮೂರು ಕಿಕೆಟ್ ಕೆಡವಿದರು. ಆಸೀಸ್ ಪರ ಟ್ರಾವಿಸ್ ಹೆಡ್(43), ಮಾರ್ನಸ್ ಲಬುಶೇನ್(35) ಹೊರತು ಪಡಿಸಿ ಉಳಿದ ಯಾವ ಆಟಗಾರರು ಎರಡಂಕ್ಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಾಣಲಿಲ್ಲ.