Site icon Vistara News

IND VS AUS: ಭಾರತ-ಆಸೀಸ್​ ನಡುವಿನ ಟೆಸ್ಟ್ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ

Australia to open another consulate general in bengaluru Says PM Anthony Albanese

ಅಹಮದಾಬಾದ್: ಮಾರ್ಚ್​ 9 ರಿಂದ ಅಹಮದಾಬಾದ್​ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ(IND VS AUS) ಮತ್ತು ಭಾರತ ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ವೀಕ್ಷಿಸಲಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದ್ದು ಮಾರ್ಚ್​ 9 ರಂದು ಪ್ರಧಾನಿ ಅಹಮದಾಬಾದ್​ಗೆ ತೆರಳಲಿದ್ದಾರೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್(Anthony Albanese) ಅವರನ್ನು ಕೂಡ ಆಹ್ವಾನಿಸಲಾಗಿದೆ. ಹಾಗಾಗಿ ಎರಡು ದೇಶದ ಪ್ರಧಾನಿಗಳು ಈ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

ಈಗಾಗಲೇ ಸರಣಿಯಲ್ಲಿ ಭಾರತ ಮೊದಲೆರಡು ಟೆಸ್ಟ್​ ಪಂದ್ಯಗಳನ್ನು ಗೆದ್ದು ಪ್ರತಿಷ್ಠಿತ ಬಾರ್ಡರ್​-ಗವಾಸ್ಕರ್​ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಒಂದೊಮ್ಮೆ ಮೂರನೇ ಟೆಸ್ಟ್​ ಪಂದ್ಯದಲ್ಲಿಯೂ ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ. ಮೂರನೇ ಟೆಸ್ಟ್​ ಪಂದ್ಯ ಮಾರ್ಚ್ 1 ರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

ಇದನ್ನೂ ಓದಿ INDvsAUS : ಆಸ್ಟ್ರೇಲಿಯಾ ತಂಡದ ನೆರವಿಗೆ ಮುಂದಾದ ಮ್ಯಾಥ್ಯೂ ಹೇಡನ್​, ಸ್ಪಿನ್​ ಎದುರಿಸುವ ತಂತ್ರ ಹೇಳಿಕೊಡುವೆ ಎಂದ ಮಾಜಿ ಬ್ಯಾಟರ್

ಬಾರ್ಡರ್​-ಗಾವಸ್ಕರ್‌ ಟ್ರೋಫಿ’ಯನ್ನು ಉಳಿಸಿಕೊಂಡ ಖುಷಿಗಾಗಿ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರು ಸಂಭ್ರಮಾಚರಣೆ ಮಾಡಿದ್ದರು. ದ್ವಿತೀಯ ಟೆಸ್ಟ್‌ ಪಂದ್ಯವನ್ನು ರವಿವಾರವೇ ಗೆದ್ದ ಬಳಿಕ ಅಂದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್‌ದೇವ್‌ ಅವರ ದೆಹಲಿಯ ನಿವಾಸದಲ್ಲಿ ಅಂದಿನ ಹೀರೋಗಳೆಲ್ಲ ಸೇರಿ ಪಾರ್ಟಿ ನಡೆಸಿದರು. ಮದನ್‌ಲಾಲ್‌, ಕೀರ್ತಿ ಆಜಾದ್‌, ರವಿಶಾಸ್ತ್ರಿ, ಸುನೀಲ್‌ ಗಾವಸ್ಕರ್‌ ಅವರೆಲ್ಲ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇದೀಗ ಅಂತಿಮ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಾಕ್ಷಿಯಾಗುತ್ತಿರುವುದರಿಂದ ಈ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿದೆ.

Exit mobile version