ಅಹಮದಾಬಾದ್: ಗುರುವಾರದಿಂದ(ಮಾರ್ಚ್ 9) ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಆಸ್ಟ್ರೇಲಿಯ ಪ್ರಧಾನಿ ಆಂಟೋನಿ ಅಲ್ಬನೀಸ್(Anthony Albanese) ಸಾಕ್ಷಿಯಾಗಲಿದ್ದಾರೆ. ವಿಶೇಷ ಎಂದರೆ ಪ್ರಧಾನಿ ಮೋದಿ ಅವರು ಕಾಮೆಂಟರಿ ಮಾಡುವ ಮೂಲಕ ಈ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ಉಭಯ ದೇಶಗಳ ಪ್ರಧಾನಿಗಳು ಈ ಟೆಸ್ಟ್ ಪಂದ್ಯವನ್ನು ವೀಕ್ಷಿಸಿವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಜತೆಗೆ ಅಹಮದಾಬಾದ್ ಸ್ಟೇಡಿಯಂನಲ್ಲಿ ಭಾರಿ ಭದ್ರತೆ ವಹಿಸಲಾಗಿದೆ. ರಕ್ಷಣಾ ಪಡೆಗಳು ಕ್ರೀಡಾಂಗಣದಲ್ಲಿ ತೀವ್ರ ತಪಾಸಣೆ ನಡೆಸುತ್ತಿದೆ.
ಅಹಮದಾಬಾದ್ ಕ್ರೀಡಾಂಗಣಕ್ಕೆ ತಮ್ಮ ಹೆಸರಿಟ್ಟ ಬಳಿಕ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಇಲ್ಲಿ ಪಂದ್ಯವೊಂದನ್ನು ವೀಕ್ಷಿಸಲಿದ್ದಾರೆ. ಈ ವೇಳೆ ಮೋದಿಗೆ ಆಂಟೋನಿ ಅಲ್ಬನೀಸ್ ಸಾಥ್ ನೀಡಲಿದ್ದಾರೆ. ಈ ಇಬ್ಬರೂ ನಾಯಕರು ಮೊದಲ ದಿನದ ಟೆಸ್ಟ್ ಪಂದ್ಯವನ್ನು ಜತೆಯಲ್ಲೇ ವೀಕ್ಷಿಸಲಿದ್ದಾರೆ.
ಇದನ್ನೂ ಓದಿ IND VS AUS: ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಶಾನ್ ಕಿಶನ್ಗೆ ಅವಕಾಶ ಸಾಧ್ಯತೆ!
ಇಂದೋರ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡ ಕಾರಣ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಟಿಕೆಟ್ ಖಾತ್ರಿ ಪಡಿಸಬೇಕಿದ್ದರೆ ಭಾರತಕ್ಕೆ ಅಹಮದಾಬಾದ್ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.