Site icon Vistara News

IND VS AUS: ಅಭಿಮಾನಿಗೆ ಸುಂದರ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್​ ಶರ್ಮಾ; ವಿಡಿಯೊ ವೈರಲ್​​

Captain Rohit Sharma says he is not worried about Suryakumar Yadav's failure

IND VS AUS: Rohit Sharma proposes to fan; The video is viral

ವಿಶಾಖಪಟ್ಟಣ: ಇಲ್ಲಿ ನಡೆದ ಆಸ್ಟ್ರೇಲಿಯಾ(IND VS AUS) ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್​ಗಳ ಅಂತರದ ಗೀನಾಯ ಸೋಲು ಕಂಡಿದೆ. ಭಾರತದ 117 ರನ್​ ಸವಾಲನ್ನು ಮಿಚೆಲ್​ ಮಾರ್ಷ್(Mitchell Marsh​) ಮತ್ತು ಟ್ರಾವಿಸ್​ ಹೆಡ್(Travis Head)​ ಸೇರಿಕೊಂಡು ಕೇವಲ 11 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 121 ರನ್​ ಬಾರಿಸಿ ಗೆಲುವು ದಾಖಲಿಸಿದರು. ಆದರೆ ಈ ಪಂದ್ಯಕ್ಕೂ ಮುನ್ನ ರೋಹಿತ್​ ಶರ್ಮಾ(Rohit Sharma) ಅವರು ಅಭಿಮಾನಿಯ ಜತೆಗೆ ಮಾತನಾಡಿದ ಒಂದು ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದ್ವಿತೀಯ ಏಕದಿನ ಪಂದ್ಯವನ್ನಾಡಲು ವಿಶಾಖಪಟ್ಟಣಕ್ಕೆ ಭಾರತದ ಆಟಗಾರರು ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಈ ವೇಳೆ ಅಭಿಯಾನಿಯೊಬ್ಬ ಮೊಬೈಲ್ ಮೂಲಕ ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು. ಇದೇ ವೇಳೆ ಆಗಮಿಸಿದ ರೋಹಿತ್ ಶರ್ಮಾ ಅಭಿಮಾನಿಗೆ ಕೈಯಲ್ಲಿದ್ದ ಗುಲಾಬಿ ಹೂವು ನೀಡಿ “ವಿಲ್ ಯು ಮ್ಯಾರಿ ಮಿ”(ನನ್ನನ್ನು ಮದುವೆ ಆಗ್ತೀಯಾ) ಎಂದು ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ INDvsAUS : ಆಸ್ಟ್ರೇಲಿಯಾ ವಿರುದ್ಧದ 2ನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ 10 ವಿಕೆಟ್​ ಹೀನಾಯ ಸೋಲು

ಸಾರಸ್ಯವೆಂದರೆ ರೋಹಿತ್​ ಶರ್ಮಾ ಅವರು ಪ್ರಪೋಸ್​ ಮಾಡಿದ್ದು ಪುರುಷ ಅಭಿಮಾನಿಗೆ. ಈ ಅಭಿಮಾನಿ ವಿಮಾನ ನಿಲ್ದಾಣದಲ್ಲಿ ಸೆಲ್ಫಿ ವಿಡಿಯೊ ಮೂಲಕ ಟೀಮ್​ ಇಂಡಿಯಾ ಕ್ರಿಕೆಟಿಗರ ಜತೆ ತನ್ನ ವಿಡಿಯೊ ಸೆರೆ ಹಿಡಿಯುತ್ತಿದ್ದ. ಇದೇ ದಾರಿಯಲ್ಲಿ ಸಾಗಿ ಬಂದ ರೋಹಿತ್ ತನ್ನ ಕೈಯಲ್ಲಿದ್ದ ಗುಲಾಬಿ ಹೂವನ್ನು ನೀಡಿ, ಇದನ್ನು ತೆಗೆದುಕೊಳ್ಳಿ, ಇದು ನಿಮಗಾಗಿ, ವಿಲ್ ಯು ಮ್ಯಾರಿ ಮಿ ಎಂದು ಪ್ರಪೋಸ್ ಮಾಡಿದ್ದಾರೆ. ರೋಹಿತ್ ಅವರ ಈ ಮಾತು ಕೇಳಿದ ಅಭಿಮಾನಿ ದಿಕ್ಕೇ ತೋಚದಂತೆ ನಕ್ಕು ಸಂಭ್ರಮಿಸಿದ್ದಾರೆ.

Exit mobile version