Site icon Vistara News

IND VS AUS: ಆಸೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ಗೂ ಶ್ರೇಯಸ್​ ಅಯ್ಯರ್​ ಅನುಮಾನ

shreyas iyer

#image_title

ನವದೆಹಲಿ: ಬೆನ್ನು ನೋವಿನಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣದಿಂದಾಗಿ ಶ್ರೇಯಸ್​ ಅಯ್ಯರ್(shreyas iyer)​ ಆಸ್ಟ್ರೇಲಿಯಾ ವಿರುದ್ಧದ(IND VS AUS) ಬಾರ್ಡರ್ ಗವಾಸ್ಕರ್ ಟ್ರೋಫಿಯ(border gavaskar trophy) ದ್ವಿತೀಯ ಟೆಸ್ಟ್​ ಪಂದಕ್ಕೂ ಅನುಮಾನ ಎನ್ನಲಾಗಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೂ ಮುನ್ನ ಶ್ರೇಯಸ್​ ಅಯ್ಯರ್​ ಅವರು ಬೆನ್ನು ನೋವಿನ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಶಿಬಿರಕ್ಕೆ ಸೇರಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ವೇಳೆಗೆ ತಂಡಕ್ಕೆ ಮರಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಸಂಪೂರ್ಣ ಫಿಟ್​ ಆಗದ ಕಾರಣದಿಂದ ಮೊದಲ ಪಂದ್ಯದಿಂದ ಅವರನ್ನು ಕೈಬಿಡಲಾಗಿತ್ತು. ದ್ವಿತೀಯ ಟೆಸ್ಟ್​ ಪಂದ್ಯಕ್ಕೆ ತಂಡ ಸೇರುವ ಸಾಧ್ಯತೆ ಇದೆ ಎಂದು ಬಿಸಿಸಿಐ ತಿಳಿಸಿತ್ತು. ಇದೀಗ ಅವರು ದ್ವಿತೀಯ ಪಂದ್ಯಕ್ಕೂ ಅನುಮಾನ ಎನ್ನಲಾಗಿದೆ.

ಇನ್ನೂ ಕೂಡ ತಂಡ ಸೇರದ ಶ್ರೇಯಸ್ ಅಯ್ಯರ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಪುನರ್ವಸತಿಯಲ್ಲಿದ್ದಾರೆ. ಒಂದು ವೇಳೆ ಅವರು ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡರೆ ಆಸ್ಟ್ರೇಲಿಯಾ ವಿರುದ್ಧದ ಏಕ ದಿನ ಸರಣಿಯಲ್ಲಿ ತಂಡಕ್ಕೆ ಮರಳುವುದು ಖಚಿತವಾಗಿದೆ ಎಂದು ವರದಿಯಾಗಿದೆ.

2023 ಏಕ ದಿನ ವಿಶ್ವ ಕಪ್‌ ದೃಷ್ಟಿಯಲ್ಲಿ ಬಿಸಿಸಿಐ ಆಟಗಾರರ ಫಿಟ್ನೆಸ್‌ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಆದ್ದರಿಂದಲೇ ಸಂಪೂರ್ಣವಾಗಿ ಫಿಟ್‌ ಆಗದ ಹೊರತು ಆಟಗಾರರನ್ನು ಕಣಕ್ಕಿಳಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದೇ ಕಾರಣಕ್ಕೆ ಬುಮ್ರಾ ಅವರನ್ನು ಟೆಸ್ಟ್​ ಸರಣಿಯಿಂದ ದೂರ ಇಡಲು ಕಾರಣ.

Exit mobile version