ಸಿಡ್ನಿ: ತಾಯಿಯ ಅಗಲಿಕೆಯ ಕಾರಣ ಭಾರತ(IND VS AUS) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಪ್ಯಾಟ್ ಕಮಿನ್ಸ್(Pat Cummins) ಅಲಭ್ಯರಾಗಲಿದ್ದಾರೆ. ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್(Steven Smith) ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಸೀಸ್ ಕೋಚ್ ಖಚಿತಪಡಿಸಿದ್ದಾರೆ.
ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಮುಗಿದ ತಕ್ಷಣ ತಾಯಿಯ ಅನಾರೋಗ್ಯದ ನಿಮಿತ್ತ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದರು. ಆದರೆ ಕಳೆದ ವಾರ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಕಮಿನ್ಸ್ ಅವರ ತಾಯಿ ಮರಿಯಾ ನಿಧನರಾಗಿದ್ದರು. ಇದೀಗ ಅವರು ತಾಯಿಯ ಉತ್ತರಕ್ರಿಯೆಯ ನಿಮಿತ್ತ ಏಕ ದಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಸ್ಮಿತ್ಗೆ ಹಂಗಾಮಿಯಾಗಿ ನಾಯಕತ್ವ ನೀಡಲಾಗಿದೆ ಎಂದು ಕೋಚ್ ಮಾಹಿತಿ ನೀಡಿದ್ದಾರೆ.
ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ಸ್ಟೀವನ್ ಸ್ಮಿತ್ ಭಾರತ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರು. ಸತತ 2 ಸೋಲಿನಿಂದ ಕಂಗೆಟ್ಟಿದ ಆಸೀಸ್ ತಂಡ ಸ್ಮಿತ್ ನಾಯಕತ್ವದಲ್ಲಿ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇದೀಗ ಏಕ ದಿನದಲ್ಲಿಯೂ ಸ್ಮಿತ್ ಯಶಸ್ಸು ಕಾಣಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND VS AUS: ಪೂಜಾರ ಬೌಲಿಂಗ್ ಕಂಡು ಕೆಲಸ ಬಿಡಬೇಕೆ ಎಂದ ಆರ್. ಅಶ್ವಿನ್; ಪೂಜಾರ ನೀಡಿದ ಪ್ರತಿಕ್ರಿಯೆ ಏನು?
ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯ ಮಾರ್ಚ್ 17 ರಂದು ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.