Site icon Vistara News

Team India : ಜನವರಿ, ಫೆಬ್ರವರಿಯಲ್ಲಿ ಭಾರತ-ಆಸ್ಟ್ರೇಲಿಯಾ ಟಿ 20 ಸರಣಿ

Team India

ನವ ದೆಹಲಿ : 2023ರ ವಿಶ್ವಕಪ್ ಬಳಿಕವೂ ಭಾರತ ಕ್ರಿಕೆಟ್ ತಂಡದ (Team India) ಸದಸ್ಯರಿಗೆ ಹೆಚ್ಚಿನ ಬಿಡುವು ಸಿಗುವ ಸಾಧ್ಯತೆಗಳು ಇಲ್ಲ. ನವೆಂಬರ್ ನಲ್ಲಿ ಮೆಗಾ ಈವೆಂಟ್ ಮುಗಿದ ಕೂಡಲೇ, ಭಾರತದ ಗಮನವು ಟೆಸ್ಟ್ ಮತ್ತು ಟಿ20 ಕ್ರಿಕೆಟ್​ ಮಾದರಿಯತ್ತ ತಿರುಗಬೇಕಾಗಿದೆ. ಈ ಅಭಿಯಾನವು ವಿಶ್ವಕಪ್ ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಪ್ರಾರಂಭವಾಗುತ್ತದೆ. ಆದರೆ ಅದಕ್ಕಿಂತ ಮುಖ್ಯವಾಗಿ ಭಾರತ ತಂಡ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಜನವರಿ- ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ವಿಶ್ವಕಪ್ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ 5 ಪಂದ್ಯಗಳ ಟಿ20 ಸರಣಿ ಆಡಲಿದೆ. 2024 ರ ಜನವರಿ-ಫೆಬ್ರವರಿಯಲ್ಲಿ ಈ ಸರಣಿಯ ಆಯೋಜನೆಗೊಂಡಿದೆ. ಬಳಿಕ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅದಾದ ಬಳಿಕ ಬಾಂಗ್ಲಾದೇಶ (2 ಪಂದ್ಯ) ಮತ್ತು ನ್ಯೂಜಿಲೆಂಡ್ (3 ಪಂದ್ಯ) ಭಾರತದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಿವೆ.

ವಿಶ್ವಕಪ್ ಬಳಿಕ ಭಾರತ ಕ್ರಿಕೆಟ್ ವೇಳಾಪಟ್ಟಿ

  • ಡಿಸೆಂಬರ್: ಭಾರತ-ಅಫ್ಘಾನಿಸ್ತಾನ (3 ಟಿ20 ಪಂದ್ಯಗಳು)
  • ಡಿಸೆಂಬರ್-ಜನವರಿ: ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ (2 ಟೆಸ್ಟ್, 3 ಏಕದಿನ, 3 ಟಿ20)
  • ಜನವರಿ-ಮಾರ್ಚ್: ಇಂಗ್ಲೆಂಡ್ ತಂಡದ ಭಾರತ ಪ್ರವಾಸ (5 ಟೆಸ್ಟ್)
  • ಜುಲೈ: ಭಾರತ ತಂಡದ ಶ್ರೀಲಂಕಾ ಪ್ರವಾಸ (3 ಏಕದಿನ, 3 ಟಿ 20)
  • ಸೆಪ್ಟೆಂಬರ್-ಅಕ್ಟೋಬರ್: ಬಾಂಗ್ಲಾದೇಶ ಭಾರತ ಪ್ರವಾಸ (2 ಟೆಸ್ಟ್, 3 ಟಿ20)
  • ಅಕ್ಟೋಬರ್-ನವೆಂಬರ್: ನ್ಯೂಜಿಲೆಂಡ್ ತಂಡದ ಭಾರತ ಪ್ರವಾಸ 2024 (3 ಟೆಸ್ಟ್)

ಏಕದಿನ ವಿಶ್ವಕಪ್ ಮುಗಿದ ನಂತರ ಭಾರತ ಕ್ರಿಕೆಟ್ ತಂಡವು ಚುಟುಕು ಕ್ರಿಕೆಟ್​ನತ್ತ ಗಮನ ಹರಿಸುವುದು ಸ್ವಾಭಾವಿಕ. ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡವು ಯುಎಸ್ಎಯಲ್ಲಿ ನಡೆಯುವ ವಿಶ್ವ ಕಪ್​ನ ಟ್ರೋಫಿಯನ್ನು ಮನೆಗೆ ತರುವ ಗುರಿಯನ್ನು ಹೊಂದಿದೆ. ಪ್ರಸ್ತುತ, ಭಾರತ ತಂಡ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿದೆ. ಅಲ್ಲಿ ಟೆಸ್ಟ್​, ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಆಡಲಿದೆ. ಆದಾಗ್ಯೂ ಮುಂಬರುವ ವಿಶ್ವಕಪ್​​ಗೆ ತಯಾರಿ ನಡೆಸುವುದು ರೋಹಿತ್ ಶರ್ಮಾ ಮತ್ತು ತಂಡದ ಪ್ರಮುಖ ಉದ್ದೇಶವಾಗಿದೆ.

ಮೊದಲೇ ಸಿದ್ದತೆ

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಉದ್ದೇಶ ಭಾರತ ತಂಡದ್ದು. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಮುಖ ಸರಣಿಗಾಗಿ ಅಲ್ಲಿಗೆ ಪ್ರಯಾಣಿಸುವ ಮೊದಲು ಭಾರತವು ಅಫ್ಘಾನಿಸ್ತಾನವನ್ನು 3 ಟಿ 20 ಪಂದ್ಯಗಳಿಗಾಗಿ ಆಹ್ವಾನಿಸಿದೆ. ಮುಂದಿನ ವರ್ಷದ ಆರಂಭದಲ್ಲಿ, ಇಂಗ್ಲೆಂಡ್ ತಂಡ ಭಾರತಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಉಭಯ ತಂಡಗಳು 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಖಾಮುಖಿಯಾಗಲಿವೆ. ಬೇಸಿಗೆಯಲ್ಲಿ ಭಾರತ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.

ಇದನ್ನೂ ಓದಿ : Team India Cricket : ಆಟಗಾರರ ಗಾಯದ ಸಮಸ್ಯೆ ಪರಿಹಾರಕ್ಕೆ ಹೊಸ ಮಾರ್ಗ ಹುಡುಕಿದ ಬಿಸಿಸಿಐ!

ಲಂಕಾ ಪ್ರವಾಸದ ಬಳಿಕ ಭಾರತ ತಂಡವು ಮುಂದಿನ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶ ಮತ್ತು ನಂತರ ನ್ಯೂಜಿಲೆಂಡ್ ತವರಿಗೆ ಸ್ವಾಗತಿಸಿದೆ. ಯುವ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಯುವ ತಂಡವನ್ನು ರಚಿಸಲು ಬಿಸಿಸಿಐ ನಿರ್ಧರಿಸಿದದರೆ ಹಿರಿಯ ಆಟಗಾರರ ಪರಸ್ಥಿತಿ ಏನೆಂಬುದನ್ನು ಕಾದು ನೋಡಬೇಕಾಗಿದೆ.

Exit mobile version