Site icon Vistara News

IND VS AUS: ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ವೀಕ್ಷಿಸಿದ ತಲೈವಾ

IND VS AUS: Thalaiva watched the India-Australia match

IND VS AUS: Thalaiva watched the India-Australia match

ಮುಂಬಯಿ: ಭಾರತ ಮತ್ತು ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ತಮಿಳ್​​ ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಸಾಕ್ಷಿಯಾಗಿದ್ದಾರೆ. ರಜನಿಕಾಂತ್ ಅವರು ಪಂದ್ಯ ವೀಕ್ಷಿಸಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ 35.4 ಓವರ್​ಗಳಲ್ಲಿ ಕೇವಲ 188 ರನ್​ಗೆ ಸರ್ವಪತನ ಕಂಡಿದೆ. ಈ ಪಂದ್ಯವನ್ನು ರಜನಿಕಾಂತ್​ ವೀಕ್ಷಿಸಿದ್ದಾರೆ.

ಇದನ್ನೂ ಓದಿ IND VS AUS: ಮೊದಲ ಏಕದಿನ; ರಾಹುಲ್​ಗೆ ಅವಕಾಶ

ಪಂದ್ಯಕ್ಕೂ ಮುನ್ನ ರಜನಿಕಾಂತ್​ ಟೀಮ್​ ಇಂಡಿಯಾದ ಆಟಗಾರರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಕೂಡ ತಿಳಿದುಬಂದಿದೆ. ರೋಹಿತ್​ ಅನುಪಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಭಾರತ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸುತ್ತಿದ್ದಾರೆ.

Exit mobile version