ಇಂದೋರ್: ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್(Umesh Yadav) ಅವರು ಆಸೀಸ್(IND VS AUS) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ದಿಗ್ಗಜ ರವಿ ಶಾಸ್ತ್ರಿ(Ravi Shastri) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ಇಂದೋರ್ನಲ್ಲಿ ಆರಂಭವಾದ ಈ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮೊದಲ ಇನಿಂಗ್ಸ್ನಲ್ಲಿ 109 ರನ್ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆಸೀಸ್ 4 ವಿಕೆಟ್ಗೆ 156 ರನ್ ಗಳಿಸಿ ಸದ್ಯ 47 ರನ್ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಇದೇ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸಿ ಮಿಂಚಿದ ಉಮೇಶ್ ಯಾದವ್ ನೂತನ ದಾಖಲೆಯೊಂದನ್ನು ಬರೆದರು. 2 ಸಿಕ್ಸರ್ ಬಾರಿಸಿದ ಅವರು ಟೆಸ್ಟ್ ಕ್ರಿಕೆಟ್ನಲ್ಲಿ 24 ಸಿಕ್ಸರ್ಗಳನ್ನು ಪೂರ್ತಿಗೊಳಿಸಿದರು. ಇದರೊಂದಿಗೆ ರವಿ ಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆ ಪತನಗೊಂಡಿತು. ಶಾಸ್ತ್ರಿ ಟೀಮ್ ಇಂಡಿಯಾ ಪರ 121 ಟೆಸ್ಟ್ ಇನಿಂಗ್ಸ್ ಆಡಿ 22 ಸಿಕ್ಸರ್ ಬಾರಿಸಿದ್ದರು. ಇದೀಗ ಉಮೇಶ್ 24 ಸಿಕ್ಸರ್ನೊಂದಿಗೆ ಮುನ್ನುಗ್ಗಿದ್ದಾರೆ.
ಇದನ್ನೂ ಓದಿ IND VS AUS: ತಂಡದ ಕಳಪೆ ಪ್ರದರ್ಶನದ ಮಧ್ಯೆಯೂ ಮೈದಾನದಲ್ಲಿ ನೃತ್ಯ ಮಾಡಿದ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
ಈ ಸಾಧನೆಯ ಜತೆಗೆ ಉಮೇಶ್ ಅವರು ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ 181 ಟೆಸ್ಟ್ ಇನಿಂಗ್ಸ್ಗಳಲ್ಲಿ ಒಟ್ಟು 24 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇದೀಗ 64 ಇನಿಂಗ್ಸ್ ಮೂಲಕ ಉಮೇಶ್ ಯಾದವ್ ಕೂಡ 24 ಸಿಕ್ಸರ್ ಬಾರಿಸಿ ಕೊಹ್ಲಿಯ ಸಾಧನೆಯನ್ನು ಸರಿಗಟ್ಟಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಹಾರ್ಡ್ ಹಿಟ್ಟರ್ ವೀರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಅವರು ಭಾರತ ಪರ 180 ಟೆಸ್ಟ್ ಇನಿಂಗ್ಸ್ ಆಡಿ ಒಟ್ಟು 91 ಸಿಕ್ಸರ್ಗಳನ್ನು ಬಾರಿಸಿ ಅಗ್ರ ಸ್ಥಾನದಲ್ಲಿದ್ದಾರೆ.