ಪುಣೆ: ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭಗೊಳ್ಳಲಿರುವ ಭಾರತ ಮತ್ತು ಬಾಂಗ್ಲಾಶದೇಶ(India vs Bangladesh) ನಡುವಣ ವಿಶ್ವಕಪ್ನ 17ನೇ ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ತಾಪ ಕೊಂಚ ಅಧಿಕವಾಗಿಯೇ ಇರಲಿದೆ ಎಂದು ಹೇಳಿದೆ. ಇದರಿಂದ ಮೊದಲು ಫೀಲ್ಡಿಂಗ್ ನಡೆಸುವ ಆಟಗಾರರು ಬಿಸಿಯ ಧಗೆಯಿಂದ ಬಳಲಲಿದ್ದಾರೆ.
ಹವಾಮಾನ ವರದಿ
ಪುಣೆಯಲ್ಲಿ ಯಾವುದೇ ಮಳೇಯ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಬಿಸಿಲಿನ ಧಗೆ ಹೆಚ್ಚಿರಲಿದೆ ಎಂದು ತಿಳಿಸಿದೆ. ಪಂದ್ಯ ನಡೆಯುವ ಮಧ್ಯಾಹ್ನ ಇಲ್ಲಿನ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಇದರಲಿದೆ ಎಂದು ವರದಿಯಲ್ಲಿ ತಿಳಿಸಿದೆ. ಸಂಜೆಯ ವೇಳೆ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹೀಗಾಗಿ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು.
ಭಾರತ ತಂಡದಲ್ಲಿ ಒಂದು ಬದಲಾವಣೆ ಖಚಿತ
ವಿರಾಟ್ ಕೊಹ್ಲಿ, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಜವಾಬ್ದಾರಿಗೆ ತಕ್ಕ ಆಟವನ್ನು ಪ್ರದರ್ಶಿಸುವ ಮೂಲಕ ತಂಡಕ್ಕೆ ನೆರವಾಗುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಸದ್ಯಕ್ಕೆ ತಂಡದಲ್ಲಿರುವ ಸಮಸ್ಯೆ ಎಂದರೆ ಶಾರ್ದೂಲ್ ಠಾಕೂರ್ ಅವರ ಆಯ್ಕೆ. ಹೆಚ್ಚುವರಿ ಬ್ಯಾಟಿಂಗ್ ನಿಟ್ಟಿನಲ್ಲಿ ಅವರನ್ನು ಆಯ್ಕೆ ಮಾಡಿದರೂ ಅವರಿಗೆ ಬ್ಯಾಟಿಂಗ್ ಸಿಗುತ್ತಿಲ್ಲ. ಅಲ್ಲದೆ ಬೌಲಿಂಗ್ನಲ್ಲಿಯೂ ಅವರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೇವಲ ಒಂದೆರಡು ಓವರ್ಗೆ ಸೀಮಿತಗೊಳಿಸಲಾಗುತ್ತಿದೆ. ಇದರ ಬದಲು ಅನುಭವಿ ಮತ್ತು ಪೂರ್ಣಾವಧಿಯ ಬೌಲರ್ ಆಗಿರುವ ಮೊಹಮ್ಮದ್ ಶಮಿ ಆಯ್ಕೆ ಉತ್ತಮ ಎನ್ನಲಡ್ಡಿಯಿಲ್ಲ. ಏಕೆಂದರೆ ಅವರು 10 ಓವರ್ ಎಸೆಯಬಲ್ಲರು. ಅಲ್ಲದೆ ಹೊಸ ಚೆಂಡಿನಲ್ಲಿ ಸ್ವಿಂಗ್ ಕೂಡ ಮಾಡಬಲ್ಲರು. ಮೂಲಗಳ ಮಾಹಿತಿ ಪ್ರಕಾರ ಅವರಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧಯತೆ ಇದೆ.
ಇದನ್ನೂ ಓದಿ ICC World Cup 2023: ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಆಫರ್ ನೀಡಿದ ನಮ್ಮ ಮೆಟ್ರೋ
ದೊಡ್ಡ ಮೊತ್ತದ ನಿರೀಕ್ಷೆ
ಉಭಯ ತಂಡಗಳು ಕೂಡ ಸ್ಪಿನ್ ಪಿಚ್ನಲ್ಲಿ ಉತ್ತಮ ಪ್ರದರ್ಶನ ತೋರುವ ಕಾರಣ ಈ ಪಂದ್ಯ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಬಹುದೆಂದು ನಿರೀಕ್ಷೆ ಮಾಡಬಹುದಾಗಿದೆ. ಭಾರತ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ, ಈ ಪಂದ್ಯವನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಏಕೆಂದರೆ ಕ್ರಿಕೆಟ್ನಲ್ಲಿ ಏನೂ ಕೂಡ ಸಂಭವಿಸಬಹುದು ಎಂಬುದಕ್ಕೆ ಆಘ್ಘನ್ ಮತ್ತು ನೆದರ್ಲೆಂಡ್ಸ್ ತಂಡಗಳ ಗೆಲುವುವೇ ಉತ್ತಮ ನಿದರ್ಶನ. ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಈ ತಂಡಗಳು ಬಲಿಷ್ಠ ತಮಡಕ್ಕೆ ಸೋಲಿನ ರುಚಿ ತೋರಿಸಿತ್ತು. ಹೀಗಾಗಿ ಭಾರತೀಯ ಆಟಗಾರರು ಪ್ರತಿ ಹಂತದಲ್ಲೂ ಎಚ್ಚರಿಕೆಯ ಆಟವಾಡುವುದು ಅಗತ್ಯ.
ಬಲಾಬಲ
ಭಾರತ ಮತ್ತು ಬಾಂಗ್ಲಾದೇಶ ವಿಶ್ವಕಪ್ನಲ್ಲಿ ಇದುವರೆಗೆ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಮೂರು ಪಂದ್ಯಗಲ್ಲು ಗೆದ್ದರೆ, ಬಾಂಗ್ಲಾ 1 ಪಂದ್ಯ ಗೆದ್ದಿದೆ. ಇತ್ತಂಡಗಳು ವಿಶ್ವಕಪ್ನಲ್ಲಿ ಮೊದಲು ಮುಖಾಮುಖಿಯಾಗಿದ್ದು 2007ರಲ್ಲಿ. ಈ ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಸೋಲು ಕಂಡಿತ್ತು. ಆಗ ರಾಹುಲ್ ದ್ರಾವಿಡ್ ಅವರ ನಾಯಕತ್ವ ಭಾರತ ಆಡಿತ್ತು. ಇದಾದ ಬಳಿಕ ಭಾರತ ಆಡಿದ ಮೂರು ಪಂದ್ಯಗಳಲ್ಲಿಯೂ ಗೆದ್ದು ಬೀಗಿದೆ. ಸಾರಸ್ಯವೆಂದರೆ ಈ ಬಾರಿ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ಅಂದಿನ ಸೋಲಿಗೆ ಸೇಡು ತೀರಿಸುವ ಇರಾದೆಯಲ್ಲಿದ್ದಾರೆ.