Site icon Vistara News

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

IND vs BAN

IND vs BAN: Virat Kohli to miss India vs Bangladesh warm-up match?

ನ್ಯೂಯಾರ್ಕ್​: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಇಂದು(ಶನಿವಾರ) ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ(IND vs BAN) ತಂಡ ನೆರೆಯ ಬಾಂಗ್ಲಾದೇಶ(IND vs BAN Warm-up Match) ವಿರುದ್ಧ ಕಣಕ್ಕಿಳಿಯಲಿದೆ. ನ್ಯೂಯಾರ್ಕ್​ನಲ್ಲಿ ಈ ಪಂದ್ಯ ನಡೆಯಲಿದೆ.

ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಡುತ್ತಿರುವ ಕಾರಣ ಟೀಮ್​ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್​ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.

ಐಪಿಎಲ್​ ಆಡಿದ ಜೋಶ್​ನಲ್ಲಿರುವ ಭಾರತೀಯ ಆಟಗಾರರು ಈ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ. ಈ ಬಾರಿಯ ಐಪಿಎಲ್​ ಕೂಟದ ಗರಿಷ್ಠ ರನ್​ ಸರದಾರ ವಿರಾಟ್​ ಕೊಹ್ಲಿ ಅವರು ಅಭ್ಯಾಸ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಅವರು ನಿನ್ನೆಯಷ್ಟೇ ನ್ಯೂಯಾರ್ಕ್ ತಲುಪಿದ್ದಾರೆ. ಹೀಗಾಗಿ ಅವರು ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಬಾಂಗ್ಲಾದೇಶ ಈಗಾಗಲೇ ಅಮೆರಿಕ ವಿರುದ್ಧ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇರಿಸುವುದು ಕಷ್ಟ. ಅನುಭವಿ ಆಟಗಾರರ ಪಡೆಯೇ ಹೊಂದಿದ್ದರೂ, ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಇಂದು ನಡೆಯುವ ಉದ್ಘಾಟನ ಲೀಗ್​ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಸೆಣಸಾಡಲಿದೆ. ಅಮೆರಿಕದಲ್ಲಿ ಈ ಪಂದ್ಯ ಶನಿವಾರ ನಡೆದರೂ ಕೂಡ ಭಾರತೀಯ ಕಾಲಮಾನದಂತೆ ಈ ಪಂದ್ಯ ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಬಾಂಗ್ಲಾದೇಶ: ನಜ್ಮುಲ್‌ ಹುಸೇನ್‌ (ನಾಯಕ), ತಸ್ಕಿನ್‌ ಅಹ್ಮದ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ತಾಂಜಿದ್‌ ಹಸನ್‌ ತಮೀಮ್‌, ಶಕಿಬ್‌ ಅಲ್‌ ಹಸನ್‌, ತೌಹಿದ್‌ ಹೃದಯ್‌, ಮಹ್ಮದುಲ್ಲ ರಿಯಾದ್‌, ಜಾಕರ್‌ ಅಲಿ ಅನಿಕ್‌, ತನ್ವೀರ್‌ ಇಸ್ಲಾಮ್‌, ಮಹೆದಿ ಹಸನ್‌, ರಿಷಾದ್‌ ಹುಸೇನ್‌, ಮುಸ್ತಫಿಜುರ್‌ ರೆಹಮಾನ್‌, ಶೊರೀಫುಲ್‌ ಇಸ್ಲಾಮ್‌, ತಾಂಜಿಮ್‌ ಹಸನ್‌.

Exit mobile version