IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ - Vistara News

ಕ್ರೀಡೆ

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

IND vs BAN: ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಡುತ್ತಿರುವ ಕಾರಣ ಟೀಮ್​ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್​ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.

VISTARANEWS.COM


on

IND vs BAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್​: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌(T20 World Cup 2024) ಕ್ರಿಕೆಟ್‌ ಪಂದ್ಯಾವಳಿಗೆ ಕ್ಷಣಗಣನೆ ಮೊದಲ್ಗೊಂಡಿದೆ. ಇಂದು(ಶನಿವಾರ) ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ(IND vs BAN) ತಂಡ ನೆರೆಯ ಬಾಂಗ್ಲಾದೇಶ(IND vs BAN Warm-up Match) ವಿರುದ್ಧ ಕಣಕ್ಕಿಳಿಯಲಿದೆ. ನ್ಯೂಯಾರ್ಕ್​ನಲ್ಲಿ ಈ ಪಂದ್ಯ ನಡೆಯಲಿದೆ.

ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್​ ಆಡುತ್ತಿರುವ ಕಾರಣ ಟೀಮ್​ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್​ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.

ಐಪಿಎಲ್​ ಆಡಿದ ಜೋಶ್​ನಲ್ಲಿರುವ ಭಾರತೀಯ ಆಟಗಾರರು ಈ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ. ಈ ಬಾರಿಯ ಐಪಿಎಲ್​ ಕೂಟದ ಗರಿಷ್ಠ ರನ್​ ಸರದಾರ ವಿರಾಟ್​ ಕೊಹ್ಲಿ ಅವರು ಅಭ್ಯಾಸ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಅವರು ನಿನ್ನೆಯಷ್ಟೇ ನ್ಯೂಯಾರ್ಕ್ ತಲುಪಿದ್ದಾರೆ. ಹೀಗಾಗಿ ಅವರು ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಬಾಂಗ್ಲಾದೇಶ ಈಗಾಗಲೇ ಅಮೆರಿಕ ವಿರುದ್ಧ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇರಿಸುವುದು ಕಷ್ಟ. ಅನುಭವಿ ಆಟಗಾರರ ಪಡೆಯೇ ಹೊಂದಿದ್ದರೂ, ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಇಂದು ನಡೆಯುವ ಉದ್ಘಾಟನ ಲೀಗ್​ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಸೆಣಸಾಡಲಿದೆ. ಅಮೆರಿಕದಲ್ಲಿ ಈ ಪಂದ್ಯ ಶನಿವಾರ ನಡೆದರೂ ಕೂಡ ಭಾರತೀಯ ಕಾಲಮಾನದಂತೆ ಈ ಪಂದ್ಯ ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶಿವಂ ದುಬೆ, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಅರ್ಷದೀಪ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌.

ಬಾಂಗ್ಲಾದೇಶ: ನಜ್ಮುಲ್‌ ಹುಸೇನ್‌ (ನಾಯಕ), ತಸ್ಕಿನ್‌ ಅಹ್ಮದ್‌, ಲಿಟನ್‌ ದಾಸ್‌, ಸೌಮ್ಯ ಸರ್ಕಾರ್‌, ತಾಂಜಿದ್‌ ಹಸನ್‌ ತಮೀಮ್‌, ಶಕಿಬ್‌ ಅಲ್‌ ಹಸನ್‌, ತೌಹಿದ್‌ ಹೃದಯ್‌, ಮಹ್ಮದುಲ್ಲ ರಿಯಾದ್‌, ಜಾಕರ್‌ ಅಲಿ ಅನಿಕ್‌, ತನ್ವೀರ್‌ ಇಸ್ಲಾಮ್‌, ಮಹೆದಿ ಹಸನ್‌, ರಿಷಾದ್‌ ಹುಸೇನ್‌, ಮುಸ್ತಫಿಜುರ್‌ ರೆಹಮಾನ್‌, ಶೊರೀಫುಲ್‌ ಇಸ್ಲಾಮ್‌, ತಾಂಜಿಮ್‌ ಹಸನ್‌.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

IND vs ENG: ಕಳೆದ ಆಸೀಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿದ್ದ ನಾಯಕ ರೋಹಿತ್​ ಶರ್ಮ ಅವರ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ತಂಡ ಭಾರೀ ಭರವಸೆ ಇರಿಸಿದೆ.

VISTARANEWS.COM


on

IND vs ENG
Koo

ಪ್ರೊವಿಡೆನ್ಸ್‌: ಹಾಲಿ ಆವೃತ್ತಿಯ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯ ಗೆದ್ದು ಅಜೇಯ ಎನಿಸಿಕೊಂಡಿರುವ ಭಾರತ(IND vs ENG) ತಂಡ ಸೆಮಿಫೈನಲ್ ಆಡಲು ಸಜ್ಜಾಗಿ ನಿಂತಿದೆ. ಇಂದು ನಡೆಯುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಸೆಣಸಾಡಲಿದೆ. ಇದು ಭಾರತಕ್ಕೆ ಸೇಡಿನ ಪಂದ್ಯವೂ ಹೌದು. ಹೀಗಾಗಿ ಇತ್ತಂಡಗಳ ನಡುವಿನ ಕ್ರಿಕೆಟ್‌ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

​2022ರಲ್ಲಿ ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ ಸೆಮೀಸ್​ನಲ್ಲಿ ಇಂಗ್ಲೆಂಡ್​ ತಂಡ ಭಾರತಕ್ಕೆ 10 ವಿಕೆಟ್​ಗಳ ಹೀನಾಯ ಸೋಲುಣಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್​ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ.

ಅಡಿಲೇಡ್​ನಲ್ಲಿ ನಡೆದಿದ್ದ ಕಳೆದ ಟಿ20 ವಿಶ್ವಕಪ್​ ಸೆಮೀ ಫೈನಲ್​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ 6 ವಿಕೆಟ್​ಗೆ 168 ರನ್​ಗಳ ಸಾಧಾರಣ ಮೊತ್ತ​ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಇಂಗ್ಲೆಂಡ್​ 16 ಓವರ್​ಗಳಲ್ಲೇ ವಿಕೆಟ್​ ನಷ್ಟವಿಲ್ಲದೆ 170 ರನ್​ ಗಳಿಸಿ ಗೆದ್ದಿತ್ತು. ಜಾಸ್​ ಬಟ್ಲರ್​(80*) ಮತ್ತು ಅಲೆಕ್ಸ್​ ಹೇಲ್ಸ್​(86*) ಅಜೇಯ ಬ್ಯಾಟಿಂಗ್​ ಆರ್ಭಟದ ಮುಂದೆ ಭಾರತೀಯ ಬೌಲರ್​ಗಳು ಸಂಪೂರ್ಣ ಮಂಕಾದರು. ಭಾರತ ಪರ ವಿರಾಟ್​ ಕೊಹ್ಲಿ ಮತ್ತು ಹಾರ್ದಿಕ್​ ಪಾಂಡ್ಯ ಅರ್ಧಶತಕ ಬಾರಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. 2 ಶೂನ್ಯ ಕೂಡ ಸುತ್ತಿದ್ದಾರೆ. ಎರಡಂಕಿ ಮೊತ್ತ ಪೇರಿಸಿದ್ದು ಒಮ್ಮೆ ಮಾತ್ರ.

ಇದನ್ನೂ ಓದಿ IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

ಮಳೆ ಬಂದರೆ ಭಾರತಕ್ಕೆ ಲಾಭ


ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ನಡೆಯಲಿರುವ ಇತ್ತಂಡಗಳ ನಡುವಣ ಈ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ ಎಂದು ಎಚ್ಚರಿಕೆ ನೀಡಿದೆ. ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಹೇಳಿದೆ. ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದರೆ, ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್​ಗೇರಲಿದೆ. ಏಕೆಂದರೆ ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಸಂಭಾವ್ಯ ತಂಡಗಳು


ಭಾರತ:
 ರೋಹಿತ್​ ಶರ್ಮ(ನಾಯಕ), ವಿರಾಟ್ ಕೊಹ್ಲಿ, ರಿಷಭ್​ ಪಂತ್​(ವಿಕೀ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್​ಪ್ರೀತ್​ ಬುಮ್ರಾ.

ಇಂಗ್ಲೆಂಡ್​: ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.

Continue Reading

ಕ್ರೀಡೆ

IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

IND vs ENG Semi Final: ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್​ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್​ಗಳ ಪಂದ್ಯ ಆಡಬೇಕಾಗಿದೆ. ಲೀಗ್​, ಸೂಪರ್​-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಸಾಕಾಗಿತ್ತು.

VISTARANEWS.COM


on

IND vs ENG Semi Final
Koo

ಗಯಾನಾ: ಭಾರತ ಮತ್ತು ಇಂಗ್ಲೆಂಡ್​ ನಡುವಣ ಸೆಮಿಫೈನಲ್​(IND vs ENG Semi Final)​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.​ ಇಂದು(ಗುರುವಾರ) ಪ್ರಾವಿಡೆನ್ಸ್​ ಸ್ಟೇಡಿಯಂನಲ್ಲಿ ಇತ್ತಂಡಗಳ ಈ ಮುಖಾಮುಖಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಎದುರಾಗಿದ್ದು ಪಂದ್ಯ ನಡೆಯುವದೇ ಅನುಮಾನ ಎನ್ನಲಾಗಿದೆ. ಮಳೆ ಬಂದರೂ ಕೂಡ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಹೀಗಾಗಿ ಐಸಿಸಿ ನೂತನ ನಿಯಮವೊಂದನ್ನು ಈ ಪಂದ್ಯಕ್ಕೆ ಜಾರಿಗೊಳಿಸಿದೆ.

ಈಗಾಗಲೇ ಹವಾಮಾನ ವರದಿಗಳ ಪ್ರಕಾರ ಪಂದ್ಯದ ವೇಳೆ ಶೇ. 88ರಷ್ಟು ಮಳೆಯಾಗಲಿದ್ದು ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಮೀಸಲು ದಿನ ಇರದ ಕಾರಣ ಮಳೆಯಿಂದ ಪಂದ್ಯ ರದ್ದಾದರೆ ವಿಜೇತರನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಮೂಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ನೇರವಾಗಿ ಫೈನಲ್​ಗೇರಲಿದೆ. ಸೂಪರ್​-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದ್ದು ಇಂಗ್ಲೆಂಡ್​ ಸೂಪರ್​-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.

ಪಂದ್ಯಕ್ಕೆ ಮೀಸಲು ದಿನ ಇರದಿದ್ದರೂ ಕೂಡ ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಜತೆಗೆ ಸೆಮಿಫೈನಲ್​ನಲ್ಲಿ ಸ್ಪಷ್ಟ ಫಲಿತಾಂಶ ಬರಬೇಕಾದರೆ ಉಭಯ ತಂಡಗಳು ಕನಿಷ್ಠ 10 ಓವರ್​ಗಳ ಪಂದ್ಯ ಆಡಬೇಕಾಗಿದೆ. ಲೀಗ್​, ಸೂಪರ್​-8ನಲ್ಲಿ ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಸಾಕಾಗಿತ್ತು.

ಇದನ್ನೂ ಓದಿ Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

ಭಾರತಕ್ಕೆ ಕೊಹ್ಲಿಯದ್ದೇ ಚಿಂತೆ


ಪ್ರತಿ ಐಸಿಸಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿಯ ಬ್ಯಾಟ್​ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸದ್ದು ಮಾಡುತ್ತಿಲ್ಲ. ಇದು ಭಾರತ ತಂಡಕ್ಕೆ ದೊಡ್ಡ ಚಿಂತೆ ಉಂಟು ಮಾಡಿದೆ. ಆಡಿದ 7 ಪಂದ್ಯಗಳಲ್ಲಿ 2 ಶೂನ್ಯ ಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಎರಡಂಕಿ ದಾಟಿದ್ದಾರೆ. ಹೀಗಾಗಿ ಕೊಹ್ಲಿ ಇಂಗ್ಲೆಂಡ್‌ ವಿರುದ್ಧ ಸಿಡಿದು ನಿಲ್ಲಬೇಕಾದುದ ಅನಿವಾರ್ಯತೆ ಇದೆ. ಕೊಹ್ಲಿ ಜತೆಗೆ ಶಿವಂ ದುಬೆ ಕೂಡ ಸಿಡಿದು ನಿಲ್ಲಬೇಕಿದೆ. ಐಪಿಎಲ್​ನಲ್ಲಿ ತೋರಿದ ಬ್ಯಾಟಿಂಗ್​ ಆರ್ಭಟವನ್ನು ದುಬೆ ಈ ಟೂರ್ನಿಯಲ್ಲಿ ಇದುವರೆಗೆ ತೋರಿಸಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಆಮೆ ಗತಿಯ ಬ್ಯಾಟಿಂಗ್​ ನಡೆಸಿ ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆ ಉಂಟುಮಾಡುತ್ತಿದ್ದಾರೆ.

ಉಪನಾಯಕ ಹಾರ್ದಿಕ್​ ಪಾಂಡ್ಯ ಅವರು ಈ ಬಾರಿಯ ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಘೋರ ವೈಫಲ್ಯ ಕಂಡಿದ್ದರು. ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದಾಗ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಆದರೆ, ಪಾಂಡ್ಯ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ನೆರವಾಗುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಂದು ಪಾಂಡ್ಯ ಬೇಡ ಎಂದವರು ಇಂದು ಪಾಂಡ್ಯ ಇಲ್ಲದೇ ಇದ್ದರೆ ಗೆಲುವು ಕಷ್ಟ ಎನ್ನುತ್ತಿದ್ದಾರೆ. ಕಳೆದ ಆಸೀಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿದ ನಾಯಕ ರೋಹಿತ್​ ಶರ್ಮ ಅವರ ಬ್ಯಾಟಿಂಗ್​ ಮೇಲೆ ಈ ಪಂದ್ಯದಲ್ಲಿಯೂ ತಂಡ ನಂಬಿಕೆ ಇರಿಸಿದೆ.

Continue Reading

ಕ್ರೀಡೆ

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Fazalhaq Farooqi :

VISTARANEWS.COM


on

Fazalhaq Farooqi
Koo

ಬೆಂಗಳೂರು: ವೆಸ್ಟ್​ ಇಂಡೀಸ್​​ನ ಟ್ರಿನಿಡಾಡ್ ಮತ್ತು ಟೊಬಾಗೊದ ಬ್ರಿಯಾನ್ ಲಾರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂನ್ 27 ರಂದು ನಡೆದ ಐಸಿಸಿ ಟಿ 20 ವಿಶ್ವಕಪ್ 2024 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ಎಡಗೈ ವೇಗಿ ಫಜಲ್ಹಾಕ್ ಫಾರೂಕಿ (Fazalhaq Farooqi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಂದ್ಯದಲ್ಲಿ ಅವರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿರುವ ಹೊರತಾಗಿಯೂ ಫಜಲ್ಹಾಕ್​ಗೆ ಇದು ಸ್ಮರಣೀಯ ಪಂದ್ಯವಾಗಲಿದೆ.

ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್ ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಗೆ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಪ್ರಬಲ ಪ್ರದರ್ಶನವನ್ನು ನೀಡಿತು. ಇದೇ ವೇಳೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಈ ಸೋಲು ಕಹಿ ಕ್ಷಣ. ಆದರೆ ಟಿ 20 ವಿಶ್ವಕಪ್ 2024 ರಲ್ಲಿ ಅವರ ಗಮನಾರ್ಹ ಪಯಣವು ಅವರ ರಾಷ್ಟ್ರ ಮತ್ತು ಅಭಿಮಾನಿಗಳಿಗೆ ಅಪಾರ ಹೆಮ್ಮೆ ತಂದಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಹೊರತಾಗಿಯೂ ಸಂಭ್ರಮಿಸಲು ಅವರಿಗೊಂದು ಕಾಣವಿದೆ. ಅವರೇ ಎಡಗೈ ವೇಗಿ ಅವರ ಎಡಗೈ ವೇಗಿ ಫಜಲ್ಹಾಕ್ ಫಾರೂಕಿ. ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ರೂಪದಲ್ಲಿ 2024 ರ ಟಿ 20 ವಿಶ್ವಕಪ್ನಲ್ಲಿ 17 ನೇ ವಿಕೆಟ್ ಪಡೆಯುವ ಮೂಲಕ ಅವರು ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

2024 ರ ಟಿ 20 ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಫಾರೂಕಿ ಪಾತ್ರರಾಗಿದ್ದಾರೆ. ಅಫ್ಘಾನಿಸ್ತಾನದ ವೇಗದ ಬೌಲರ್ 2021 ರಲ್ಲಿ ಸ್ಥಾಪಿಸಲಾದ ಟಿ 20 ವಿಶ್ವಕಪ್​ನ ಒಂದೇ ಆವೃತ್ತಿಯಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಅವರ ಹಿಂದಿನ 16 ವಿಕೆಟ್​ಗಳ ದಾಖಲೆ ಮುರಿದಿದ್ದಾರೆ.

ಅಫ್ಘಾನಿಸ್ತಾನ ಪರ ಚೆಂಡಿನೊಂದಿಗೆ ಫಾರೂಕಿ ಅಸಾಧಾರಣವಾಗಿದ್ದರು, ಅಲ್ಲಿ ಅವರು ಎಂಟು ಪಂದ್ಯಗಳಲ್ಲಿ 9.41 ರ ಪ್ರಭಾವಶಾಲಿ ಸರಾಸರಿ ಮತ್ತು 6.31 ಎಕಾನಮಿ ರೇಟ್​ನಲ್ಲಿ ಒಟ್ಟು 17 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರ ಗಮನಾರ್ಹ ಅಭಿಯಾನವು ಮೆಗಾ ಐಸಿಸಿ ಈವೆಂಟ್​​ನಲ್ಲಿ ಐದು ವಿಕೆಟ್ ಸಾಧನೆ ಮತ್ತು ನಾಲ್ಕು ವಿಕೆಟ್ ಸಾಧನೆಯನ್ನು ಒಳಗೊಂಡಿದೆ,

​ದೀಪ್​ಗೆ ಸಿಂಗ್ ಇದೆ ದಾಖಲೆ ಮುರಿಯುವ ಅವಕಾಶ

ಫಾರೂಕಿ ಅವರ ಸಾಧನೆಯು ತಕ್ಷಣದ ಬೆದರಿಕೆಗೆ ಒಳಗಾಗಿದೆ. ಏಕೆಂದರೆ ಭಾರತದ ವೇಗಿ ಅರ್ಷ್ದೀಪ್ ಸಿಂಗ್ ಪ್ರಸ್ತುತ ನಡೆಯುತ್ತಿರುವ ಟಿ 20 ವಿಶ್ವಕಪ್ 2024 ರಲ್ಲಿ ಆರು ಪಂದ್ಯಗಳಲ್ಲಿ 15 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರಿಗೆ ತಮ್ಮ ದಾಖಲೆ ಮುರಿಯಲು ಕೇವಲ ಎರಡು ವಿಕೆಟ್​ಗಳ ಅಗತ್ಯವಿದೆ

ಗಯಾನಾದಲ್ಲಿ ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್​​ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸುವಾಗ ಅಫ್ಘಾನ್ ಬೌಲರ್​ ದಾಖಲೆ ಮುರಿಯಲು ಉತ್ತಮ ಅವಕಾಶ ಹೊಂದಿದ್ದಾರೆ.

ಟಿ 20 ವಿಶ್ವಕಪ್ 2024 ರ ಫೈನಲ್​​ನಲ್ಲಿ ಸ್ಥಾನ ಪಡೆಯಲು ಭಾರತ ಇನ್ನೂ ಸ್ಪರ್ಧೆಯಲ್ಲಿರುವುದರಿಂದ, ಯುವ ವೇಗಿ ಫಾರೂಕಿ ಅವರ ದಾಖಲೆಯನ್ನು ಮೀರಿಸಲು ಮತ್ತು ಪಂದ್ಯಾವಳಿಯಲ್ಲಿ ಹೊಸ ವಿಶ್ವ ದಾಖಲೆ ಸ್ಥಾಪಿಸಲು ಅರ್ಶ್​ದೀಪ್​ ಅವರಿಗೆ ಸಾಧ್ಯವಿದೆ. ವಿಶೇಷವೆಂದರೆ, ಫೈನಲ್ ಜೂನ್ 29 ರಂದು ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್​​ನಲ್ಲಿ ನಡೆಯಲಿದೆ.

ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿ ಇಲ್ಲಿದೆ

  • ಫಜಲ್ಹಾಕ್ ಫಾರೂಕಿ (ಅಫ್ಘಾನಿಸ್ತಾನ) – 2024ರಲ್ಲಿ 17 ವಿಕೆಟ್
  • ವನಿಂದು ಹಸರಂಗ (ಶ್ರೀಲಂಕಾ) – 2021ರಲ್ಲಿ 16 ವಿಕೆಟ್
  • ಅಜಂತಾ ಮೆಂಡಿಸ್ (ಶ್ರೀಲಂಕಾ) – 2012ರಲ್ಲಿ 15 ವಿಕೆಟ್
  • ಅರ್ಷ್ದೀಪ್ ಸಿಂಗ್ (ಭಾರತ) – 2024ರಲ್ಲಿ 15 ವಿಕೆಟ್
  • ವನಿಂದು ಹಸರಂಗ (ಶ್ರೀಲಂಕಾ) – 2022ರಲ್ಲಿ 15 ವಿಕೆಟ್
  • ರಶೀದ್ ಖಾನ್ (ಅಫ್ಘಾನಿಸ್ತಾನ) – 2024ರಲ್ಲಿ 14 ವಿಕೆಟ್
Continue Reading

ಕ್ರೀಡೆ

Rohit Sharma : ಇಂಗ್ಲೆಂಡ್​ ಸೋಲಿಸುವ ಯೋಜನೆ ವಿವರಿಸಿದ ನಾಯಕ ರೋಹಿತ್ ಶರ್ಮಾ

Rohit Sharma: ಸೆಮಿಫೈನಲ್ ಪಂದ್ಯವನ್ನು ವಿಶ್ವ ಕಪ್​ನ ಮತ್ತೊಂದು ಪಂದ್ಯವೆಂದೇ ಪರಿಗಣಿಸುವುದಾಗಿ ಶರ್ಮಾ ಹೇಳಿದ್ದಾರೆ. ತಂಡ ಅದೇ ರೀತಿಯ ಭಾವನೆಯಲ್ಲಿದೆ. ಪ್ರತಿಯೊಬ್ಬರೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದರೂ ಸಮಾನ ಭಾವನೆ ಉತ್ತಮ ಎಂದು ಹೇಳಿದ್ದಾರೆ.

VISTARANEWS.COM


on

Rohit Sharma
Koo

ಬೆಂಗಳೂರು: ಗಯಾನಾದ ಪ್ರಾವಿಡೆನ್ಸ್​​ನಲ್ಲಿ ಜೂನ್ 27 ರಂದು ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಟಿ 20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತ ತಂಡ ತಯಾರಿ ನಡೆಸುತ್ತಿದೆ. ಹಿಂದಿನ ಆವೃತ್ತಿಯಲ್ಲಿ ಸೆಮಿಫೈನಲ್​ ಸೋಲಿಗೆ ಪ್ರತೀಕಾರ ತೀರಿಸಲು ಸಜ್ಜಾಗುತ್ತಿದೆ. ಇವೆಲ್ಲದರ ನಡುವೆ ರೋಹಿತ್ ಶರ್ಮಾ (Rohit Sharma) ತಂಡದ ವಾತಾವರಣ ಮತ್ತು ಸ್ಪಷ್ಟ ಚಿಂತನೆಯನ್ನು ಅಭಿಮಾನಿಗಳಿಗೆ ವಿವರಿಸಿದ್ದಾರೆ. ಗೆದ್ದೇ ಗೆಲ್ಲುವೆವು ಎಂಬ ಭರವಸೆಯನ್ನು ನೀಡಿದ್ದಾರೆ.

ಸೆಮಿಫೈನಲ್ ಪಂದ್ಯವನ್ನು ವಿಶ್ವ ಕಪ್​ನ ಮತ್ತೊಂದು ಪಂದ್ಯವೆಂದೇ ಪರಿಗಣಿಸುವುದಾಗಿ ಶರ್ಮಾ ಹೇಳಿದ್ದಾರೆ. ತಂಡ ಅದೇ ರೀತಿಯ ಭಾವನೆಯಲ್ಲಿದೆ. ಪ್ರತಿಯೊಬ್ಬರೂ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿದಿದ್ದರೂ ಸಮಾನ ಭಾವನೆ ಉತ್ತಮ ಎಂದು ಹೇಳಿದ್ದಾರೆ.

“ನೋಡಿ, ಈ ಪಂದ್ಯವನ್ನು ನಾವು ವಿಶ್ವ ಕಪ್​ನಲ್ಲಿ ಆಡಲಿರುವ ಮತ್ತೊಂದು ಪಂದ್ಯವೆಂದು ಪರಿಗಣಿಸಲು ಬಯಸುತ್ತೇವೆ” ಎಂದು ಅವರು ಪಂದ್ಯದ ಮುನ್ನಾದಿನದಂದು ಸುದ್ದಿಗೋಷ್ಠೀಯಲ್ಲಿ ಹೇಳಿದ್ದಾರೆ. “ಮುಂದೆ ಏನಿದೆ ಮತ್ತು ಆಟದ ಸಂದರ್ಭ ಏನು ಮತ್ತು ಇವೆಲ್ಲದರ ಬಗ್ಗೆ ನಾವು ಯೋಚಿಸಲು ಬಯಸುವುದಿಲ್ಲ. ಪ್ರತಿಯೊಬ್ಬರಿಗೂ ಇದು ಸೆಮಿಫೈನಲ್ ಎಂದು ತಿಳಿದಿದೆ. ಆದರೆ ನಾವು ಅದರ ಬಗ್ಗೆ ಮತ್ತೆ ಮತ್ತೆ ಮಾತನಾಡಲು ಬಯಸುವುದಿಲ್ಲ. ಹಿಂದೆ ಏನಾಯಿತು ಎಂಬುದರ ಬಗ್ಗೆ ಯೋಚಿಸಬಾರದು.” ಎಂಬುದಾಗಿ ರೋಹಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯವು 2022 ರ ಸೆಮಿಫೈನಲ್​ನ ಪುನರಾವರ್ತನೆಯಾಗಿದೆ. ಅಡಿಲೇಡ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತವು ಹತ್ತು ವಿಕೆಟ್​ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ನೋವಿನ ಇತಿಹಾಸದ ಹೊರತಾಗಿಯೂ ತಂಡವು ಸಕಾರಾತ್ಮಕ ಮನಸ್ಥಿತಿಯಲ್ಲಿದೆ ಎಂದು ಶರ್ಮಾ ಹೇಳಿದ್ದಾರೆ.

“ನಾವೆಲ್ಲರೂ, ತಂಡದ ಮನಸ್ಥಿತಿಯಲ್ಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಒಂದು ತಂಡವಾಗಿ ಉತ್ತಮವಾಗಿ ಆಡುತ್ತಿದ್ದೇವೆ. ಪರಸ್ಪರರ ಸಹಕಾರವನ್ನು ಆನಂದಿಸುತ್ತಿದ್ದೇವೆ. ಕೆಲವೊಮ್ಮೆ ಪರಸ್ಪರರ ಯಶಸ್ಸನ್ನು ಕಂಡಿದ್ದೇವೆ. ಈ ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳಲ್ಲಿ ನಾವು ಒತ್ತಡಕ್ಕೆ ಒಳಗಾಗಿದ್ದೇವೆ. ಆದರೆ ನಾವು ಉತ್ತಮವಾಗಿ ಪ್ರತಿಕ್ರಿಯಿಸಿದ್ದೇವೆ ಎಂದು ನಾನು ಭಾವಿಸಿದ್ದೇನೆ ಎಂದು ರೋಹಿತ್ ನುಡಿದಿದ್ದಾರೆ.

ಅತಿಯಾದ ಯೋಚನೆ ಇಲ್ಲ

ನಾವು ಎಷ್ಟು ಚೆನ್ನಾಗಿ ಆಡಬಹುದು ಮತ್ತು ನಾವು ಹುಡುಕುತ್ತಿರುವ ಫಲಿತಾಂಶವನ್ನು ಸಾಧಿಸಲು ತಂಡವಾಗಿ ನಾವು ಏನು ಮಾಡಬಹುದು ಎಂಬುದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅತಿಯಾದ ಯೋಚನೆ ಇಲ್ಲ. ಹೆಚ್ಚು ಯೋಚಿಸಿದರೆ, ಮೈದಾನದಲ್ಲಿ ತೆಗೆದುಕೊಳ್ಳಲು ಬಯಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. , ನಾವು ಏನು ಮಾಡಲು ಬಯಸುತ್ತೇವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಂಡಿದ್ದೇವೆ. ನಾವು ಆಟಗಾರರೊಂದಿಗೆ ಸಾಕಷ್ಟು ಮಾತನಾಡಿದ್ದೇವೆ. ಪ್ರತಿಯೊಬ್ಬರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬುದನ್ನು ವಿವರಿಸಲಾಗಿದೆ “ಎಂದು ಶರ್ಮಾ ಹೇಳಿದರು.

ಇದನ್ನೂ ಓದಿ: IND vs ENG : ಭಾರತದ ವಿರುದ್ಧ ಹೂಡಲಿರುವ ತಂತ್ರಗಳನ್ನು ವಿವರಿಸಿದ ಇಂಗ್ಲೆಂಡ್ ಕೋಚ್​ ಮ್ಯಾಥ್ಯೂ ಮಾಟ್​

ಈ ಟಿ 20 ವಿಶ್ವಕಪ್​​ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಪ್ರಾವಿಡೆನ್ಸ್​​ನಲ್ಲಿ ಆಡುತ್ತಿರುವುದರಿಂದ ಪಿಚ್​ ಪರಿಸ್ಥಿತಿಗಳನ್ನು ತ್ವರಿತವಾಗಿ ನಿರ್ಣಯಿಸಬೇಕಾಗುತ್ತದೆ. ನಿರ್ದಿಷ್ಟ ಶಾಟ್​ಗಳನ್ನು ಆಡುವುದು ಅಥವಾ ನಿರ್ದಿಷ್ಟ ರೀತಿಯ ಚೆಂಡುಗಳನ್ನು ಎಸೆಯುವುದು ಸೇರಿದಂತೆ ಮೈದಾನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ತಂಡವು ಆಟಗಾರರನ್ನು ಅವಲಂಬಿಸಿದೆ ಎಂಬುದಾಗಿ ರೋಹಿತ್​ ಹೇಳಿದ್ದಾರೆ.

ನಮ್ಮ ಮುಂದೆ ಯಾವ ಪರಿಸ್ಥಿತಿಗಳಿವೆ ಮತ್ತು ನಾವು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಈ ಗುಂಪಿನ ಅನುಭವದ ಬಗ್ಗೆ ಮಾತನಾಡಿದ್ದೇನೆ, ಮತ್ತು ರಿವರ್ಸ್ ಸ್ವೀಪ್ ಆಡುತ್ತಿರಲಿ, ಯಾರ್ಕರ್ ಬೌಲಿಂಗ್ ಆಗಿರಲಿ, ಬೌನ್ಸರ್ ಬೌಲಿಂಗ್ ಮಾಡುತ್ತಿರಲಿ, ಆ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ಪ್ರತಿಯೊಬ್ಬ ಆಟಗಾರನಿಗೆ ಸ್ವಾತಂತ್ರ್ಯ ಇದೆ ಎಂದು ರೋಹಿತ್​ ಹೇಳಿದರು

Continue Reading
Advertisement
IND vs ENG
ಕ್ರೀಡೆ9 mins ago

IND vs ENG: ಹೈವೋಲ್ಟೇಜ್ ಸೆಮಿ ಕಾದಾಟಕ್ಕೆ ಕ್ಷಣಗಣನೆ; ಸೇಡು ತೀರಿಸಲು ರೋಹಿತ್​ ಪಡೆ ಸಜ್ಜು

Parliament Sessions
ದೇಶ21 mins ago

Parliament Sessions: ಸೆಂಗೋಲ್‌ ಮೇಲೆ ಪ್ರತಿಪಕ್ಷಗಳ ಕಣ್ಣು; ಸಂಸತ್‌ನಲ್ಲಿ ಭಾರೀ ಕೋಲಾಹಲ

Bengaluru Metro
Latest22 mins ago

Bengaluru Metro: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

Nitin Gadkari
ಪ್ರಮುಖ ಸುದ್ದಿ26 mins ago

Nitin Gadkari : ಕೆಟ್ಟದಾಗಿರುವ ಹೈವೆಗಳಿಗೆ ಟೋಲ್​ ಶುಲ್ಕ ಕಟ್ಟಬೇಡಿ; ನಿತಿನ್​ ಗಡ್ಕರಿ ಸೂಚನೆ

IND vs ENG Semi Final
ಕ್ರೀಡೆ42 mins ago

IND vs ENG Semi Final: ಮೀಸಲು ದಿನ ಇರದ ಭಾರತ-ಇಂಗ್ಲೆಂಡ್​ ಸೆಮಿ ಪಂದ್ಯದ ಮಳೆ ನಿಯಮ ಹೇಗಿದೆ?

Droupadi Murmu
ದೇಶ54 mins ago

Droupadi Murmu: ನೀಟ್‌ ಅಕ್ರಮ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು

Fazalhaq Farooqi
ಕ್ರೀಡೆ55 mins ago

Fazalhaq Farooqi : ವಿಶ್ವ ಕಪ್​ 2024ರಲ್ಲಿ ಹೊಸ ದಾಖಲೆ ಬರೆದ ಆಪ್ಘನ್ ಬೌಲರ್​ ಫಜಲ್ಹಾಕ್​ ಫಾರೂಕಿ

Vande Bharath Train
Latest58 mins ago

Vande Bharath Train: ಬೆಂಗಳೂರು-ಮಧುರೈ ʼವಂದೇ ಭಾರತ್ʼ ರೈಲು ಜುಲೈನಿಂದ ಆರಂಭ

Actor Darshan
ಸಿನಿಮಾ1 hour ago

Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ

cm siddaramaiah price hikes
ಕರ್ನಾಟಕ2 hours ago

CM Siddaramaiah: ₹2000 ಕೊಟ್ಟು ₹4740 ಕಿತ್ತುಕೊಳ್ಳುತ್ತಿರುವ ರಾಜ್ಯ ಸರಕಾರ! ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದರ ಲೆಕ್ಕ ಇಲ್ಲಿದೆ ನೋಡಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rains Effected
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

ಟ್ರೆಂಡಿಂಗ್‌