Site icon Vistara News

IND vs ENG 2nd Test: ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಬರೆದ ದಾಖಲೆಗಳ ಪಟ್ಟಿ ಹೀಗಿದೆ​

yashasvi jaiswal

ವಿಶಾಖಪಟ್ಟಣಂ: ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರು ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್​ನ(IND vs ENG 2nd Test) ಮೊದಲ ಇನಿಂಗ್ಸ್​ನಲ್ಲಿ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಜತೆಗೆ ಟೀಮ್​ ಇಂಡಿಯಾದ ಭರವಸೆಯ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಯಶಸ್ವಿ ಜೈಸ್ವಾಲ್ ಇಂದು ದ್ವಿಶತಕ ಪೂರೈಸಿದರು. ಮೊದಲ ದಿನದಾಟದ ಅಂತ್ಯಕ್ಕೆ 179 ರನ್ ಗಳಿಸಿ ಅಜೇಯರಾಗಿದ್ದ ಜೈಸ್ವಾಲ್​ ದ್ವಿತೀಯ ದಿನದಾಟದಲ್ಲಿ 209 ರನ್​ ಬಾರಿಸುವ ಮೂಲಕ ಚೊಚ್ಚಲ ದ್ವಿಶತಕ ಬಾರಿಸಿ ಮಿಂಚಿದರು.

ಜೈಸ್ವಾಲ್​ ಅವರು ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿಯೂ ದ್ವಿಶತಕ ಬಾರಿಸಿದ ಆಟಗಾರನಾಗಿ ಮೂಡಿಬಂದರು. ಜತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ಪರ ಅತಿ ಕಿರಿಯ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ಮೂರನೇ ಆಟಗಾರ ಎನಿಸಿದರು.


ಸಿಕ್ಸರ್​ ಮೂಲಕ ಶತಕ ಬಾರಿಸಿದ್ದ ಜೈಸ್ವಾಲ್​ ದ್ವಿತೀಯ ದಿನದಾಟದಲ್ಲಿ ತಮ್ಮ ದ್ವಿಶತಕವನ್ನು ಬೌಂಡರಿ ಮೂಲಕ ಪೂರ್ತಿಗೊಳಿಸಿದರು. ಬಿರುಸಿನ ಆಟವಾಡಿದ ಜೈಸ್ವಾಲ್​ 290 ಎಸೆತ ಎದುರಿಸಿ ಬರೋಬ್ಬರಿ 19 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್​ ನೆರವಿನಿಂದ 209 ರನ್​ ಬಾರಿಸಿ ಹಿರಿಯ ಅನುಭವಿ ಆಟಗಾರ ಜೇಮ್ಸ್​ ಆ್ಯಂಡರ್ಸನ್​ಗೆ ವಿಕೆಟ್​ ಒಪ್ಪಿಸಿದರು.

ಯಶಸ್ವಿ ಬರೆದ ದಾಖಲೆಗಳ ಪಟ್ಟಿ


ಭಾರತದ ಪರ ಕಡಿಮೆ ಇನ್ನಿಂಗ್ಸ್ ನಲ್ಲಿ ಚೊಚ್ಚಲ ದ್ವಿಶತಕ


ಕರುಣ್ ನಾಯರ್(3 ಇನಿಂಗ್ಸ್​)

ವಿನೋದ್ ಕಾಂಬ್ಳಿ (4 ಇನಿಂಗ್ಸ್​)

ಸುನಿಲ್ ಗವಾಸ್ಕರ್/ ಮಯಾಂಕ್ ಅಗರ್ವಾಲ್ (8 ಇನಿಂಗ್ಸ್​)

ಚೇತೇಶ್ವರ ಪೂಜಾರ (9 ಇನಿಂಗ್ಸ್​)

ಯಶಸ್ವಿ ಜೈಸ್ವಾಲ್ (10 ಇನಿಂಗ್ಸ್​)


ಟೆಸ್ಟ್‌ನಲ್ಲಿ ಭಾರತದ ಪರ 200 ರನ್ ಗಳಿಸಿದ ಕಿರಿಯ ಆಟಗಾರ


ವಿನೋದ್ ಕಾಂಬ್ಲಿ 224 vs ಇಂಗ್ಲೆಂಡ್ ಮುಂಬೈ 1993 (21 ವರ್ಷ 35 ದಿನ)

ವಿನೋದ್ ಕಾಂಬ್ಲಿ 227 vs ಜಿಂಬಾಬ್ವೆ ಡೆಲ್ಲಿ 1993 (21 ವರ್ಷ 55 ದಿನ)

ಸುನಿಲ್ ಗವಾಸ್ಕರ್ 220 vs ವೆಸ್ಟ್ ಇಂಡಿಸ್ ಪೋರ್ಟ್ ಆಫ್ ಸ್ಪೇನ್ 1971 (21 ವರ್ಷ 283 ದಿನ)

ಯಶಸ್ವಿ ಜೈಸ್ವಾಲ್ 209 vs ಇಂಗ್ಲೆಂಡ್ ವೈಜಾಗ್ 2024(22 ವರ್ಷ 37ದಿನ)

ಇದನ್ನೂ ಓದಿ Jasprit Bumrah: ಜೋ ರೂಟ್​ ವಿಕೆಟ್​ ಕಿತ್ತು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಟೆಸ್ಟ್‌ ನಲ್ಲಿ ಭಾರತದ ಪರ ಎಡಗೈ ಬ್ಯಾಟರ್‌ಗಳಿಂದ ದ್ವಿಶತಕ


239 ಸೌರವ್ ಗಂಗೂಲಿ vs ಪಾಕಿಸ್ತಾನ, ಬೆಂಗಳೂರು, 2007

227 ವಿನೋದ್ ಕಾಂಬ್ಲಿ vs ಜಿಂಬಾಬ್ವೆ, ನವದೆಹಲಿ, 1993

224 ವಿನೋದ್ ಕಾಂಬ್ಲಿ vs ಇಂಗ್ಲೆಂಡ್, ಮುಂಬೈ, 1993

206 ಗೌತಮ್ ಗಂಭೀರ್ vs ಆಸ್ಟ್ರೇಲಿಯಾ, ನವದೆಹಲಿ, 2006

209 ಯಶಸ್ವಿ ಜೈಸ್ವಾಲ್ vs ಇಂಗ್ಲೆಂಡ್ ವಿಶಾಖಪಟ್ಟಣಂ, 2024

Exit mobile version