ರಾಜ್ಕೋಟ್: ಭಾರತ ಮತ್ತು ಇಂಗ್ಲೆಂಡ್(IND vs ENG 3rd Test) ನಡುವಣ ಮೂರನೇ ಟೆಸ್ಟ್ ಪಂದ್ಯ ಇನ್ನೇನು ಕೆಲವೇ ಕ್ಷಣದಲ್ಲಿ ಆರಭಂಗೊಳ್ಳಲಿದೆ. ಇಂಗ್ಲೆಂಡ್ ಈ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ತಂಡವನ್ನು ಪ್ರಕಟಿಸಿದೆ. ಭಾರತ ನೂತನ ಸ್ವರೂಪದ ತಂಡವನ್ನು ಆರಿಸಿ ಕಣಕ್ಕಿಳಿಯುವ ಅನಿವಾರ್ಯತೆಗೆ ಸಿಲುಕಿದೆ. ಇದಕ್ಕೆ ಕಾರಣ ಗಾಯದಿಂದ ಅನುಭವಿ ಆಟಗಾರರು ಅಲಭ್ಯರಾಗಿರುವುದು.
ಇಬ್ಬರು ಪದಾರ್ಪಣೆ ನಿರೀಕ್ಷೆ
23 ವರ್ಷದ ವಿಕೆಟ್ ಕೀಪರ್ ಧ್ರುವ ಜುರೆಲ್(Dhruv Jurel) ಮತ್ತು ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್(Sarfaraz Khan) ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತಗೊಂಡಿದೆ. ಇಬ್ಬರೂ ಆಟಗಾರರು ಕೂಡ ಭಾರತ ತಂಡದೊಂದಿಗೆ ಸುದೀರ್ಘ ಅಭ್ಯಾಸ ನಡೆಸಿದ್ದರು. ಅಲ್ಲದೆ ಬಿಸಿಸಿಐ ಬುಧವಾರ ಜುರೆಲ್ ಅವರನ್ನು ವಿಶೇಷ ಸಂದರ್ಶನ ಮಾಡುವ ಮೂಲಕ ಭಾರತದ ಜೆರ್ಸಿಯಲ್ಲಿ ಫೋಟೊ ಶೂಟ್ ಕೂಡ ಮಾಡಿದೆ. ಇದನೆಲ್ಲ ನೋಡುವಾಗ ಅವರು ಇಂದಿನ ಪಂದ್ಯದಲ್ಲಿ ಆಡುವುದು ಖಚಿತ ಎನ್ನಬಹುದು.
ಇದನ್ನೂ ಓದಿ R Ashwin: ದಾಖಲೆ ಬರೆಯಲು ಅಶ್ವಿನ್ಗೆ ಬೇಕಿದೆ ಕೇವಲ ಒಂದು ವಿಕೆಟ್!
Match-Day READY! 🙌 🙌#TeamIndia geared up for the 3️⃣rd #INDvENG Test in Rajkot 👍 👍
— BCCI (@BCCI) February 15, 2024
⏰ 9:30 AM IST
💻📱 https://t.co/Z3MPyeL1t7@IDFCFIRSTBank pic.twitter.com/Nh7cUi05qs
ಧ್ರುವ ಜುರೆಲ್ ಆಡಿದರೆ ಇವರಿಗಾಗಿ ಕೆ.ಎಸ್ ಭರತ್ ಜಾಗ ಬೀಡಬೇಕಿದೆ. ಭರತ್ ಸತತ 7 ಟೆಸ್ಟ್‌ಗಳನ್ನಾಡಿದ್ದರೂ ಕೂಡ ಇವರಿಂದ ಒಂದೂ ಅರ್ಧ ಶತಕ ಬಾರಿಸಲು ಸಾಧ್ಯವಾಗಿಲ್ಲ. ಕೀಪಿಂಗ್ ಕೂಡ ಗಮನಾರ್ಹ ಮಟ್ಟದಲಿಲ್ಲ. ಹೀಗಾಗಿ ಅವರನ್ನು ಮೂರನೇ ಪಂದ್ಯಕ್ಕೆ ಬೆಂಚ್ ಕಾಯಿಸುವ ಸಾಧ್ಯತೆ ಅಧಿಕವಾಗಿದೆ.
ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಸ್ಥಾನ ಮತ್ತು ಫಿಟ್ನೆಸ್ ಪಾಸ್ ಆಗದ ಕಾರಣ ಮೂರನೇ ಪಂದ್ಯದಿಂದ ಡ್ರಾಪ್ ಔಟ್ ಆಗಿರುವ ಕೆ.ಎಲ್ ರಾಹುಲ್ ಕ್ರಮಾಂಕವೂ ಖಾಲಿ ಇದೆ. ಈ 2 ಸ್ಥಾನಗಳ ಪೈಕಿ ಒಂದು ಸ್ಥಾನ ಸರ್ಫರಾಜ್ ಖಾನ್ಗೆ ಸಿಗುವು ಪಕ್ಕಾ ಆಗಿದೆ. ದೇಶೀಯ ಕ್ರಿಕೆಟ್ನಲ್ಲಿ ಅಭೂತಪೂರ್ವ ಸಾಧನೆ ತೋರಿರುವ ಮುಂಬೈಕರ್ ಸರ್ಫರಾಜ್ಗೆ ಈ ಹಿಂದೆಯೇ ಅನೇಕ ಮಾಜಿ ಆಟಗಾರರು ತಂಡದಲ್ಲಿ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಇದೀಗ ಅವರಿಗೆ ಭಾರತ ಪರ ಆಡುವ ಕಾಲ ಸನ್ನಿಹಿತವಾದಂತಿದೆ.
ಜಡೇಜಾ ಫಿಟ್
ಗಾಯದಿಂದಾಗಿ ದ್ವಿತೀಯ ಪಂದ್ಯದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಅವರು ಫಿಟ್ ಆಗಿದ್ದು ಈ ಪಂದ್ಯದಲ್ಲಿ ಆಡುವುದು ಖಚಿತ. ಇದು ಅವರಿಗೆ ತವರಿನ ಪಂದ್ಯ ಕೂಡ ಆಗಿದೆ. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಡೇಜಾ ತವರಿನಲ್ಲಿ ಆಡುವುದು ಸಂತಸದ ವಿಚಾರ ಎಂದು ಹೇಳಿದ್ದರು. ಅಲ್ಲದೆ 499 ವಿಕೆಟ್ ಪಡೆದಿರುವ ಅಶ್ವಿನ್ ಈ ಪಂದ್ಯದಲ್ಲಿ 500 ವಿಕೆಟ್ಗಳನ್ನು ಪೂರ್ತಿಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ರಾಹುಲ್ ಸ್ಥಾನಕ್ಕೆ ಆಯ್ಕೆಯಾದ ದೇವದತ್ತ ಪಡಿಕ್ಕಲ್ಗೆ ಈ ಪಂದ್ಯದಲ್ಲಿ ಅವಕಾಶ ಕಷ್ಟ. ರಜತ್ ಪಾಟೀದರ್ಗೆ ಇನ್ನೊಂದು ಅವಕಾಶ ನೀಡಬಹುದು.
ಪಿಚ್ ರಿಪೋರ್ಟ್
ರಾಜ್‌ಕೋಟ್‌ನ ಪಿಚ್ ಹೇಗಿರಲಿದೆ ಎನ್ನುವ ಕುತೂಹಲ ಇತ್ತಂಡಗಳಿಗೂ ಕಾಡಿದೆ. ಏಕೆಂದರೆ ಇಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಸ್ನೇಹಿಯಾಗಿದೆ. ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. ಹೀಗಿದ್ದರೂ ಕೂಡ ಬೌಲರ್ಗಳು ಕೂಡ ಇಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕೆಲವು ಪಂದ್ಯಗಳು ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ನೆರವಾದ ಉದಾಹರಣೆಯೂ ಇದೆ. ಹೀಗಾಗಿ ಪಿಚ್ ಹೇಗೆ ವರ್ತಿಸಲಿದೆ? ಎನ್ನುವ ಕುರಿತು ಉಭಯ ತಂಡಗಳಿಗೂ ಸವಾಲಿನಿಂದ ಕೂಡಿದೆ. ಈ ಪಂದ್ಯಕ್ಕೆ ಯಾವುದೇ ಹವಾಮಾನ ವೈಪರೀತ್ಯದ ಸಮಸ್ಯೆ ಇಲ್ಲ. ಹೀಗಾಗಿ 5 ದಿನ ಪಂದ್ಯ ಸಾಗಲಿದೆ.
ಇಂಗ್ಲೆಂಡ್ ಆಡುವ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಜೇಮ್ಸ್ ಆ್ಯಂಡರ್ಸನ್, ಮಾರ್ಕ್ ವುಡ್.
ಭಾರತ ಸಂಭಾವ್ಯ ತಂಡ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಸರ್ಫರಾಜ್ ಖಾನ್, ರಜತ್ ಪಾಟಿದಾರ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.