ರಾಂಚಿ: ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ(IND vs ENG 4th Test) ಇಂಗ್ಲೆಂಡ್ ಒಂದು ದಿನ ಮುಂಚಿತವಾಗಿಯೇ ತಂಡವನ್ನು(England Men name XI for fourth Test) ಪ್ರಕಟಿದೆ. ತಂಡದಲ್ಲಿ 2 ಬದಲಾವಣೆ ಮಾಡಿದ್ದು, ರೆಹಾನ್ ಅಹ್ಮದ್(Rehan Ahmed) ಮತ್ತು ಮಾರ್ಕ್ ವುಡ್(Mark Wood) ಬದಲಿಗೆ ಓಲಿ ರಾಬಿನ್ಸನ್(Ollie Robinson) ಹಾಗೂ ಶೋಯೆಬ್ ಬಶೀರ್(Shoaib Bashir)ಗೆ ಅವಕಾಶ ನೀಡಲಾಗಿದೆ.
ಅಚ್ಚರಿ ಎಂದರೆ ಮೂರು ಟೆಸ್ಟ್ ಪಂದ್ಯಗಳ 6 ಇನಿಂಗ್ಸ್ನಲ್ಲಿ ಆಡಿ ಕೇವಲ 102 ರನ್ ಗಳಿಸಿರುವ ಜಾನಿ ಬೇರ್ಸ್ಟೋ ಅವರಿಗೆ ನಾಲ್ಕನೇ ಪಂದ್ಯದಲ್ಲಿಯೂ ಅವಕಾಶ ನೀಡಲಾಗಿದೆ. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 37 ಬಾರಿಸಿದ್ದು ಅವರ ಗರಿಷ್ಠ ವೈಯಕ್ತಿ ಮೊತ್ತವಾಗಿದೆ. ನಾಲ್ಕನೇ ಪಂದ್ಯದಲ್ಲಿಯೂ ಅವರು ಕಳಪೆ ಬ್ಯಾಟಿಂಗ್ ಮುಂದುವರಿಸಿದರೆ. ಅಂತಿಮ ಪಂದ್ಯದಲ್ಲಿ ಬೆಂಚ್ ಕಾಯುವುದು ಪಕ್ಕಾ ಆಗಿದೆ.
ರಾಬಿನ್ಸನ್ ಇಂಗ್ಲೆಂಡ್ ಪರ 19 ಟೆಸ್ಟ್ ಪಂದ್ಯಗಳನ್ನಾಡಿ 76 ವಿಕೆಟ್ ಕಿತ್ತಿದ್ದಾರೆ. ಅವರ ಆಗಮನದಿಂದ ತಂಡ ಬಲಿಷ್ಠವಾಗಿದೆ. ನಾಯಕ ಬೆನ್ ಸ್ಟೋಕ್ಸ್ ಕೂಡ ಈ ಪಂದ್ಯದಲ್ಲಿ ಬೌಲಿಂಗ್ ನಡೆಸುವ ಕಾರಣ ಮೂವರು ವೇಗಿಗಳ ಸಂಯೋಜನೆಯೊಂದಿಗೆ ಇಂಗ್ಲೆಂಡ್ 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಇದನ್ನೂ ಓದಿ IND vs ENG 4th Test : ರಾಂಚಿ ಸ್ಟೇಡಿಯಂಗೆ ಬಿಗಿ ಭದ್ರತೆ; ಪ್ರೇಕ್ಷಕರಿಗೆ 2 ಹಂತದ ತಪಾಸಣೆ!
England make two changes for the Ranchi Test 🔁
— ESPNcricinfo (@ESPNcricinfo) February 22, 2024
Ollie Robinson and Shoaib Bashir come in for Mark Wood and Rehan Ahmed #INDvENG pic.twitter.com/YplpwXS0w4
ನಿಷೇಧ ಶಿಕ್ಷೆ ಎದುರಿಸಿದ್ದ ರಾಬಿನ್ಸನ್
2021ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಅಶ್ಲೀಲ ಹಾಗೂ ಜನಾಂಗೀಯ ನಿಂದನೆಯ ಟ್ವೀಟ್‌ಗೆ ಸಂಬಂಧಿಸಿ ರಾಬಿನ್ಸನ್ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿತ್ತು. ರಾಬಿನ್ಸನ್ ಅವರಿಗೆ ತಪ್ಪಿನ ಶಿಕ್ಷೆಯಾಗಿ 8 ಪಂದ್ಯಗಳ ನಿಷೇಧದೊಂದಿಗೆ 4,400 ಡಾಲರ್ ದಂಡ ಕೂಡ ವಿಧಿಸಲಾಗಿತ್ತು. ರಾಬಿನ್ಸನ್ ಪದಾರ್ಪಣ ಟೆಸ್ಟ್‌ನಲ್ಲೇ 7 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡಿನ ಯಶಸ್ವಿ ಬೌಲರ್ ಆಗಿ ಮೂಡಿಬಂದಿದ್ದರು.
ಜೋ ರೂಟ್ ಕೂಡ ಈ ಬಾರಿ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿಲ್ಲ. ಅರೆಕಾಲಿಕ ಬೌಲರ್ ಆಗಿ ಕೊಂಚ ಮಟ್ಟಿನ ಯಶಸ್ಸು ಕಂಡಿದ್ದಾರೆ. ಇಂಗ್ಲೆಂಡ್ ಪಾಲಿಗೆ ಸರಣಿ ನಿರ್ಣಾಯಕ ಪಂದ್ಯದಲ್ಲಿ ಅವರು ತಮ್ಮ ಹಳೆಯ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡು ತಂಡಕ್ಕೆ ಆಸರೆಯಾಗಬೇಕಿದೆ.
ಇಂಗ್ಲೆಂಡ್ ತಂಡ
ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಓಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್, ಶೋಯೆಬ್ ಬಶೀರ್.
ರಾಂಚಿ ಸ್ಟೇಡಿಯಂಗೆ ಬಿಗಿ ಭದ್ರತೆ
ಈ ಪಂದ್ಯಕ್ಕೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ ಕಾರಣ, ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಸುತ್ತ ಭಾರೀ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಗುರುಪತ್ವಂತ್ ಸಿಂಗ್ ಪನ್ನುನ್ ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಪಂದ್ಯ ರದ್ದು ಮಾಡುವಂತೆ ಬೆದರಿಕೆ ಹಾಕಿದ್ದ. ಜತೆಗೆ ಸಿಪಿಐ (ಮಾವೋವಾದಿ)ಗೆ ಗಲಭೆ ಸೃಷ್ಟಿಸುವಂತೆ ವಿಡಿಯೊ ಮೂಲಕ ಒತ್ತಾಯಿಸಿದ್ದ. ಹೀಗಾಗಿ ರಾಂಚಿ ಪೊಲೀಸರು JSCA ಸ್ಟೇಡಿಯಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದೆ. ಕ್ರೀಡಾಂಗಣದಲ್ಲಿಯೇ ಸುಮಾರು 1500 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.