ಧರ್ಮಶಾಲಾ: ಇಂಗ್ಲೆಂಡ್ ಎದುರಿನ ಅಂತಿಮ ಟೆಸ್ಟ್ ಪಂದ್ಯ(India vs England 5th Test)ದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ತಂಡದ ಅನುಭವಿ ಮತ್ತು ಹಿರಿಯ ಆಟಗಾರ ಆರ್.ಅಶ್ವಿನ್(Ravichandran Ashwin) ಅವರು 100ನೇ ಟೆಸ್ಟ್ ಪಂದ್ಯವಾಡಿದ 14ನೇ ಭಾರತೀಯ ಆಟಗಾರ ಎನಿಸಿಕೊಂಡರು. ಶತಕದ ಟೆಸ್ಟ್ ಆಡುತ್ತಿರುವ ಅಶ್ವಿನ್ಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ವಿಶೇಷ ಟೆಸ್ಟ್ ಕ್ಯಾಪ್ ಸ್ಮರಣಿಕೆಯಾಗಿ ನೀಡಿ ಗೌರವಿಸಿದರು. ಈ ಸಂದರ್ಭ ಅಶ್ವಿನ್ ಪತ್ನಿ ಪ್ರೀತಿ ಮತ್ತು ಇಬ್ಬರು ಮಕ್ಕಳು ಕೂಡ ಉಪಸ್ಥಿತರಿದ್ದರು.
A milestone moment for Ravichandran Ashwin as he becomes the 14th man to play 100 Test matches for India 👏#INDvENG | #WTC25
— ICC (@ICC) March 7, 2024
More 👉 https://t.co/mAx8iRAZWE pic.twitter.com/hfP6Mru3vB
100ನೇ ಟೆಸ್ಟ್ ಪಂದ್ಯವಾಡುತ್ತಿರುವ ಆರ್.ಅಶ್ವಿನ್ ಅಶ್ವಿನ್ಗೆ ಬಿಸಿಸಿಐ, ಸಚಿನ್ ತೆಂಡೂಲ್ಕರ್, ಸುನೀಲ್ ಗವಾಸ್ಕರ್ ಸೇರಿ ಹಲವು ಮಾಜಿ ಮತ್ತು ಹಾಲಿ ಆಟಗಾರರು ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಇನ್ನೂ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿ ಉನ್ನತ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.
Truly a surreal moment in the History of #IndianCricket
— Anil P Joseph (@Anil4Joseph) March 7, 2024
Two greats of the game in a single frame at a momentous occasion
(Match winner n MatchSaver)
@ashwinravi99 – 👏👏👏🙏🙏🙏
@prithinarayanan @bcci pic.twitter.com/bzGdzAiTO1
ಅಶ್ವಿನ್ ಅವರು ಕಳೆದ 13 ವರ್ಷಗಳಿಂದ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವರು 500 ಟೆಸ್ಟ್ ವಿಕೆಟ್ಗಳನ್ನು ಪೂರ್ತಿಗೊಳಿಸಿದ ಸಾಧನೆ ಕೂಡ ಮಾಡಿದ್ದರು. ಸದ್ಯ ಅವರು 507 ವಿಕೆಟ್ ಪಡೆದಿದ್ದಾರೆ. ಅತ್ಯಧಿಕ 35 ಸಲ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಉರುಳಿಸಿದ ಭಾರತೀಯ ದಾಖಲೆ ಕೂಡ ಇವರ ಹೆಸರಿನಲ್ಲಿದೆ. 8 ಬಾರಿ 10ಕ್ಕಿಂತ ಅಧಿಕ ವಿಕೆಟ್ ಕಿತ್ತ ದಾಖಲೆ ಕೂಡ ಇವರದ್ದಾಗಿದೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಇವರು 3 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರಲ್ಲಿ 5 ಶತಕಗಳು ಕೂಡ ಒಳಗೊಂಡಿದೆ. 14 ಅರ್ಧಶತಕ ಬಾರಿಸಿದ್ದಾರೆ.
ಭಾರತ ಪರ 100 ಟೆಸ್ಟ್ ಪಂದ್ಯ ಆಡಿದ ಆಟಗಾರರು
ಆಟಗಾರ | ಪಂದ್ಯ |
ಸಚಿನ್ ತೆಂಡೂಲ್ಕರ್ | 200 |
ರಾಹುಲ್ ದ್ರಾವಿಡ್ | 163 |
ವಿವಿಎಸ್ ಲಕ್ಷ್ಮಣ್ | 134 |
ಅನಿಲ್ ಕುಂಬ್ಳೆ | 132 |
ಕಪಿಲ್‌ದೇವ್ | 131 |
ಸುನೀಲ್ ಗಾವಸ್ಕರ್ | 125 |
ಸೌರವ್ ಗಂಗೂಲಿ | 113 |
ವಿರಾಟ್ ಕೊಹ್ಲಿ | 113* |
ಇಶಾಂತ್ ಶರ್ಮ | 103* |
ಹರ್ಭಜನ್ ಸಿಂಗ್ | 103 |
ವೀರೇಂದ್ರ ಸೆಹವಾಗ್ | 103 |
ಚೇತೇಶ್ವರ್ ಪೂಜಾರ | 103* |
ಆರ್.ಅಶ್ವಿನ್ | 100* |
ಬೇರ್ಸ್ಟೋಗೆ ವಿಶೇಷ ಕ್ಯಾಪ್ ನೀಡಿದ ರೂಟ್
ಮತ್ತೊಂದೆಡೆ, ಇಂಗ್ಲೆಂಡ್ ತಂಡದ ಬೈರ್‌ಸ್ಟೋ ಅವರಿಗೂ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ನೂರನೇ ಟೆಸ್ಟ್ ಪಂದ್ಯದಲ್ಲಿ ಆಡಲಿಳಿದ ಅವರಿಗೆ ಜೋ ರೂಟ್ ವಿಶೇಷ ಟೆಸ್ಟ್ ಕ್ಯಾಪ್ ನೀಡಿ ಗೌರವಿಸಿದರು. ಕ್ಯಾಪ್ ಪಡೆದ ಬೈರ್‌ಸ್ಟೋ ಆನಂದಭಾಷ್ಪ ಸುರಿಸಿದರು. ಬೈರ್‌ಸ್ಟೋ ತಾಯಿ, ಪತ್ನಿ ಮತ್ತು ಮಗು ಕೂಡ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಹೊಡಿಬಡಿ ಆಟಕ್ಕೆ ಖ್ಯಾತಿ ಪಡೆದಿರುವ ಬೇರ್ಸ್ಟೊ ಈ ಬಾರಿ ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ. ಭಾರತ ವಿರುದ್ಧ ಆಡಿದ 4 ಪಂದ್ಯಗಳಲ್ಲಿ ಕೇವಲ 21 ಸರಾಸರಿಯಲ್ಲಿ 170 ರನ್ ಮಾತ್ರ ಗಳಿಸಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ 100ನೇ ಟೆಸ್ಟ್ ಆಡಿದ 17ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಸ್ಮರಣೀಯ ಪಂದ್ಯದಲ್ಲಾದರೂ ಬೇರ್ಸ್ಟೊ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುತ್ತಾರೋ ಎಂದು ಕಾದು ನೋಡಬೇಕಿದೆ. 99 ಟೆಸ್ಟ್‌ಗಳಲ್ಲಿ, ಬೈರ್‌ಸ್ಟೋ 36.42 ಸರಾಸರಿಯಲ್ಲಿ 12 ಶತಕ ಮತ್ತು 26 ಅರ್ಧಶತಕಗಳನ್ನು ಒಳಗೊಂಡಂತೆ 5974 ರನ್ ಗಳಿಸಿದ್ದಾರೆ.
Congratulations to Jonny Bairstow as he becomes just the 17th player from England to play 100 Tests for his country 🙌#INDvENG | #WTC25
— ICC (@ICC) March 7, 2024
More 👉 https://t.co/VJxnFsXG4E pic.twitter.com/pxUKL9IrFq