ರಾಜ್ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್(India vs England 3rd Test) ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಹಾಗೂ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್(Ravichandran Ashwin) ಅವರು ಜಾಕ್ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ದಾಖಲೆ ಬರೆದರು. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್. ಅನಿಲ್ ಕುಂಬ್ಳೆ ಟೆಸ್ಟ್ನಲ್ಲಿ 619 ವಿಕೆಟ್ ಪಡೆದಿದ್ದಾರೆ.
Milestone Man, R Ashwin 5⃣0⃣0⃣ pic.twitter.com/oQb2aRgRBS
— ESPNcricinfo (@ESPNcricinfo) February 16, 2024
37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(R Ashwin) ಅವರಿಗೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿಯೇ 500 ವಿಕೆಟ್ ಸಾಧನೆ ಮಾಡಬಹುದಿತ್ತು. ಆದರೆ ಅವರು ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು. ಇದೀಗ ಮೂರನೇ ಪಂದ್ಯದಲ್ಲಿ ಈ ಮೈಲುಗಲ್ಲು ನಿರ್ಮಿಸಿದರು. ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ 98 ಟೆಸ್ಟ್ ಪಂದ್ಯಗಳನ್ನು ಆಡಿ 500* ವಿಕೆಟ್ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 8 ಬಾರಿ 10 ವಿಕೆಟ್ ಗೊಂಚಲು ಪಡೆದಿದ್ದಾರೆ.
ಪ್ರಸಕ್ತ ಕ್ರಿಕೆಟ್ ಆಡುತ್ತಿರುವ ಬೌಲರ್ಗಳ ಪೈಕಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(696*) ಮತ್ತು ಆಸ್ಟ್ರೇಲಿಯಾದ ನಥಾನ್ ಲಿಯೋನ್(512*) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IND vs ENG: ಜುರೇಲ್-ಅಶ್ವಿನ್ ಉತ್ತಮ ಜತೆಯಾಟ; 445 ರನ್ ಬಾರಿಸಿದ ಭಾರತ
ಬ್ಯಾಟಿಂಗ್ನಲ್ಲಿ ಅಶ್ವಿನ್ ಹಲವು ಸಾಧನೆಗಳನ್ನು ಮಾಡಿದ್ದಾರೆ. 139 ಟೆಸ್ಟ್ ಇನಿಂಗ್ಸ್ನಿಂದ 3308* ರನ್ ಗಳಿಸಿದ್ದಾರೆ. 5 ಶತಕ ಕೂಡ ಬಾರಿಸಿದ್ದಾರೆ. ಇದರಲ್ಲಿ 124 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 14 ಅರ್ಧಶತಕ ಒಳಗೊಂಡಿದೆ. 116 ಏಕದಿನ ಪಂದ್ಯಗಳನ್ನಾಡಿ 707 ರನ್, 65 ಟಿ20ಯಿಂದ 85 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಮೂರು ಮಾದರಿಯ ಅಂತಾರಾಷ್ಟ್ರಿಯ ಕ್ರಿಕೆಟ್ನಲ್ಲಿ 4,199* ರನ್ ಕಲೆಹಾಕಿದ್ದಾರೆ.
𝗠𝘁. 𝟱𝟬𝟬! 🫡 🫡
— BCCI (@BCCI) February 16, 2024
Only the second #TeamIndia cricketer to reach this landmark in Tests 🙌 🙌
Congratulations, @ashwinravi99 👏 👏#INDvENG | @IDFCFIRSTBank pic.twitter.com/bP8wUs6rd0
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ
ಆಟಗಾರ | ದೇಶ | ವಿಕೆಟ್ |
ಮುತ್ತಯ್ಯ ಮುರಳೀಧರನ್ | ಶ್ರೀಲಂಕಾ | 800 |
ಶೇನ್ ವಾರ್ನ್ | ಆಸ್ಟ್ರೇಲಿಯಾ | 708 |
ಜೇಮ್ಸ್ ಆಂಡರ್ಸನ್ | ಇಂಗ್ಲೆಂಡ್ | 696* |
ಅನಿಲ್ ಕುಂಬ್ಳೆ | ಭಾರತ | 619 |
ಸ್ಟುವರ್ಟ್ ಬ್ರಾಡ್ | ಇಂಗ್ಲೆಂಡ್ | 604 |
ಗ್ಲೆನ್ ಮೆಕ್ಗ್ರಾತ್ | ಆಸ್ಟ್ರೇಲಿಯಾ | 563 |
ಕರ್ಟ್ನಿ ವಾಲ್ಷ್ | ವೆಸ್ಟ್ ಇಂಡೀಸ್ | 519 |
ನಾಥನ್ ಲಿಯಾನ್ | ಆಸ್ಟ್ರೇಲಿಯಾ | 512* |
ರವಿಚಂದ್ರನ್ ಅಶ್ವಿನ್ | ಭಾರತ | 500* |
ಡೇಲ್ ಸ್ಟೈನ್ | ದಕ್ಷಿಣ ಆಫ್ರಿಕಾ | 439 |