Site icon Vistara News

IND vs ENG: ಹಲವು ದಾಖಲೆ ಬರೆಯಲು ಸಜ್ಜಾದ ಅಶ್ವಿನ್​, ಜಡೇಜಾ

Ravichandran ashwin and Ravindra jadeja

ಹೈದರಾಬಾದ್​: ಭಾರತ ಮತ್ತು ಇಂಗ್ಲೆಂಡ್​ ನಡುವಣ 5 ಪಂದ್ಯಗಳ ಟೆಸ್ಟ್​ ಸರಣಿ ನಾಳೆಯಿಂದ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್​ ಇಂಡಿಯಾದ ಹಿರಿಯ ಸ್ಪಿನ್​ ಬೌಲರ್​ ರವಿಚಂದ್ರನ್(R Ashwin) ಅಶ್ವಿನ್ ಮತ್ತು ಸ್ಟಾರ್​ ಆಲ್​ ರೌಂಡರ್​ ರವೀಂದ್ರ ಜಡೇಜಾ(Ravindra Jadeja) ಟೆಸ್ಟ್ ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ.

500 ವಿಕೆಟ್​ ಸನಿಹ ಅಶ್ವಿನ್​


5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆರ್​. ಅಶ್ವಿನ್​ 10 ವಿಕೆಟ್​ ಉರುಳಿಸಿದರೆ ನೂತನ ಮೈಲುಗಲ್ಲೊಂದನ್ನು ತಲುಪಲಿದ್ದಾರೆ. ಟೆಸ್ಟ್​ನಲ್ಲಿ 500 ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ. ಜತೆಗೆ ಈ ಸಾಧನೆ ಮಾಡಿದ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅನಿಲ್​ ಕುಂಬ್ಳೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​. ಅನಿಲ್ ಕುಂಬ್ಳೆ ಟೆಸ್ಟ್​ನಲ್ಲಿ 619 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​ನ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ, ಹವಾಮಾನ ವರದಿ ಹೇಗಿದೆ?

37 ವರ್ಷದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದ ಪರ 95 ಟೆಸ್ಟ್ ಪಂದ್ಯಗಳನ್ನು ಆಡಿ 490 ವಿಕೆಟ್​ಗಳನ್ನು ಉರುಳಿಸಿದ್ದಾರೆ. 34 ಬಾರಿ ಇನಿಂಗ್ಸ್​ ಒಂದರಲ್ಲಿ 5 ವಿಕೆಟ್ ಕಿತ್ತ ಸಾಧನೆಯೂ ಇವರದ್ದಾಗಿದೆ. 8 ಬಾರಿ ಪಂದ್ಯವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ತವರಿನಲ್ಲಿ ಉತ್ತಮ ಬೌಲಿಂಗ್​ ದಾಖಲೆ ಹೊಂದಿರುವ ಅಶ್ವಿನ್​ಗೆ 500 ವಿಕೆಟ್​ ಪೂರ್ತಿಗೊಳಿಸುವುದು ಕಷ್ಟವಾಗದು. ಮೊದಲ ಪಂದ್ಯದಲ್ಲೇ ಅವರು 10 ವಿಕೆಟ್​ ಕಿತ್ತು ಈ ದಾಖಲೆ ಬರೆದರೂ ಅಚ್ಚರಿಯಿಲ್ಲ.

ಇದನ್ನೂ ಓದಿ IND vs ENG: ಒಂದು ದಿನ ಮುಂಚಿತವಾಗಿ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್​; ತಂಡದಲ್ಲಿ ಏಕೈಕ ವೇಗಿ!

ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್

ಆಟಗಾರದೇಶವಿಕೆಟ್​
ಮುತ್ತಯ್ಯ ಮುರಳೀಧರನ್ಶ್ರೀಲಂಕಾ800
ಶೇನ್ ವಾರ್ನ್ ಆಸ್ಟ್ರೇಲಿಯಾ708
ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್​690*
ಅನಿಲ್ ಕುಂಬ್ಳೆಭಾರತ619
ಸ್ಟುವರ್ಟ್ ಬ್ರಾಡ್ಇಂಗ್ಲೆಂಡ್​604
ಗ್ಲೆನ್ ಮೆಕ್‌ಗ್ರಾತ್ಆಸ್ಟ್ರೇಲಿಯಾ563
ಕರ್ಟ್ನಿ ವಾಲ್ಷ್ ವೆಸ್ಟ್​ ಇಂಡೀಸ್​519
ನಾಥನ್ ಲಿಯಾನ್ಆಸ್ಟ್ರೇಲಿಯಾ512*
ರವಿಚಂದ್ರನ್ ಅಶ್ವಿನ್ಭಾರತ490*
ಡೇಲ್ ಸ್ಟೈನ್ದಕ್ಷಿಣ ಆಫ್ರಿಕಾ439

ಹಲವು ದಿಗ್ಗಜರ ಜತೆ ಎಲೈಟ್​ ಪಟ್ಟಿ ಸೇರಲು ಸಜ್ಜಾದ ಜಡೇಜಾ


ರವೀಂದ್ರ ಜಡೇಜಾ(Ravindra Jadeja) ಅವರು ಇಂಗ್ಲೆಂಡ್​ ಸರಣಿಯಲ್ಲಿ ಕೇವಲ 2 ವಿಕೆಟ್​ ಕಿತ್ತರೆ ವಿಶೇಷ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸೇರಿ 550ನೇ ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ.

ಇದನ್ನೂ ಓದಿ IND vs ENG: ಭಾರತದಲ್ಲಿ ಇಂಗ್ಲೆಂಡ್​ ತಂಡದ ಟೆಸ್ಟ್​ ಇತಿಹಾಸವೇ ಬಲು ರೋಚಕ!

ಸದ್ಯ ಜಡೇಜಾ 548 ಅಂತಾರಾಷ್ಟ್ರೀಯ ವಿಕೆಟ್ ಕಲೆಹಾಕಿದ್ದಾರೆ. ಏಕದಿನದಲ್ಲಿ 220, ಟೆಸ್ಟ್​ನಲ್ಲಿ ​275, ಟಿ20ಯಲ್ಲಿ 53 ವಿಕೆಟ್​ ಕಿತ್ತಿದ್ದಾರೆ. 550 ವಿಕೆಟ್​ ಪೂರ್ತಿಗೊಳಿಸಿದರೆ ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಅನಿಲ್ ಕುಂಬ್ಳೆ, ಕಪಿಲ್ ದೇವ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಜಾವಗಲ್​ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ್ದಾರೆ.

35 ವರ್ಷದ ಜಡೇಜಾ ಸದ್ಯ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಶ್ರೇಷ್ಠ ಸಾಧನೆ ತೋರುತ್ತಿದ್ದಾರೆ. ಅದರಲ್ಲೂ ತವರಿನಲ್ಲಿ ಉತ್ತಮ ಬೌಲಿಂಗ್​ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ 16 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 51 ವಿಕೆಟ್ ಉರುಳಿಸಿದ್ದಾರೆ. ಈ ಬಾರಿಯ ಸರಣಿಯಲ್ಲೂ ಜಡೇಜಾ ಸ್ಪಿನ್​ ಜಾದು ಮಾಡುವ ನಿರೀಕ್ಷೆ ಇದೆ.

Exit mobile version