Site icon Vistara News

IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್​ ಶರ್ಮ

Rohit Sharma

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್​ ಅಥವಾ ಬೌಲಿಂಗ್​ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ನ(IND vs ENG 2nd Test) 2ನೇ ದಿನದಾಟದ ವೇಳೆಯೂ ಕಂಡುಬಂದಿದೆ.

ಶನಿವಾರದ ದ್ವಿತೀಯ ದಿನದ ಆಟದಲ್ಲಿ ಇಂಗ್ಲೆಂಡ್​ ತಂಡ ಮೊದಲ ಇನಿಂಗ್ಸ್​ನ ಬ್ಯಾಟಿಂಗ್​ ವೇಳೆ ಕಳಪೆ ಫೀಲ್ಡಿಂಗ್​ ಮಾಡಿದ ಕುರಿತು ರೋಹಿತ್​ ಸಹ ಆಟಗಾರನ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಫೀಲ್ಡಿಂಗ್​ ಮೇಲೆ ಗಮನ ಹರಿಸದೆ ಮೈದಾನದಲ್ಲಿ ಸುಮ್ಮಸುಮ್ಮನೆ ತಿರುಗಾಡಿದರೆ ಅಷ್ಟೇ…. ಎಂದು ಕೆಲ ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದು ಮೈಕ್​ ಸ್ಟಂಪ್​ನಲ್ಲಿ ರೆಕಾರ್ಡ್​ ಆಗಿದೆ.

ರೋಹಿತ್​ ಅವರು ಅವಾಚ್ಯ ಪದಗಳಿಂದ ಬೈಯುವಾಗ ಜಾನಿ ಬೇರ್​ ಸ್ಟೋ ಮತ್ತು ಬೆನ್​ ಸ್ಟೋಕ್ಸ್​ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಇಂಗ್ಲೆಂಡ್​ ನಾಲ್ಕು ವಿಕೆಟ್​ ಕಳೆದುಕೊಂಡು 143 ರನ್​ ಗಳಿಸಿತ್ತು. ಕಳೆದ ವರ್ಷ ಮಾರ್ಚ್​ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ ಅವರು ತಾಳ್ಮೆ ಕಳೆದುಕೊಂಡು ಕುಲ್​ದೀಪ್​ ವಿರುದ್ಧ ರೇಗಾಡಿದ್ದರು. ಏಕದಿನ ವಿಶ್ವಕಪ್​ ವೇಳೆಯೂ ರೋಹಿತ್​ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದರು. ಈ ವಿಡಿಯೊಗಳು ವೈರಲ್​ ಆಗಿತ್ತು.

ಇದೇ ವರ್ಷಾರಂಭದಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(India vs Afghanistan, 1st T20I) ರೋಹಿತ್​ ಶರ್ಮ ಅವರು ಶೂನ್ಯಕ್ಕೆ ಔಟಾಗಿದ್ದರು. ಇದು ರೋಹಿತ್​ ಅವರು 14 ತಿಂಗಳ ಬಳಿಕ ಆಡಿದ ಟಿ20 ಪಂದ್ಯವಾಗಿತ್ತು. ಅವರ ವಿಕೆಟ್​ ಪತನಕ್ಕೆ ಸಹ ಆಟಗಾರ ಶುಭಮನ್​ ಗಿಲ್(Shubman Gill)​ ಕಾರಣರಾಗಿದ್ದರು. ರನ್​ ಗಳಿಸುವ ಅವಕಾಶ ಇದ್ದರೂ ಕೂಡ ಗಿಲ್​ ಓಡದೆ ರೋಹಿತ್​ ರನೌಟ್​ ಆಗುವಂತೆ ಮಾಡಿದ್ದರು.  ಇದೇ ಸಿಟ್ಟಿನಲ್ಲಿ ರೋಹಿತ್​ ಮೈದಾನದಲ್ಲೇ ರೊಚ್ಚಿಗೆದ್ದು ಗಿಲ್​ಗೆ ಬೈದಿದ್ದರು.

ಇದನ್ನೂ ಓದಿ IND vs ENG 2nd Test: 6 ವಿಕೆಟ್ ಕೆಡವಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಹಿಡಿತ ಸಾಧಿಸಿದ ಭಾರತ


ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್(IND vs END 2nd Test)​ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171 ರನ್​ ಲೀಡ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಜೈಸ್ವಾಲ್​(15) ಮತ್ತು ರೋಹಿತ್​(13) ರನ್​ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ 6 ವಿಕೆಟ್​ಗೆ 336 ರನ್​ ಗಳಿಸಿದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಭಾರತ, ಯಶಸ್ವಿ ಜೈಸ್ವಾಲ್(209)​ ಅವರ ದ್ವಿಶತಕದ ನೆರವಿನಿಂದ 396 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್​ ಕಳೆದುಕೊಂಡು 253 ರನ್​ಗೆ ಆಲೌಟ್​ ಆಯಿತು. ಭಾರತ ಮಪದಲ ಇನಿಂಗ್ಸ್​ನಲ್ಲಿ 143 ರನ್​ ಲೀಡ್​ ಗಳಿಸಿತು. ಸದ್ಯ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171ರನ್​ ಲೀಡ್​ ಗಳಿಸಿದೆ.

Exit mobile version