IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್​ ಶರ್ಮ - Vistara News

ಕ್ರೀಡೆ

IND vs ENG: ಸಹ ಆಟಗಾರನಿಗೆ ಅವಾಚ್ಯ ಪದಗಳಿಂದ ಬೈದ ರೋಹಿತ್​ ಶರ್ಮ

ರೋಹಿತ್​ ಅವರು ಸಹ ಆಟಗಾರ ವಿರುದ್ಧ ಫೀಲ್ಡಿಂಗ್​ ಮೇಲೆ ಗಮನ ಹರಿಸದೆ ಮೈದಾನದಲ್ಲಿ ಸುಮ್ಮಸುಮ್ಮನೆ ತಿರುಗಾಡಿದರೆ ಅಷ್ಟೇ…. ಎಂದು ಕೆಲ ಅವಾಚ್ಯ ಪದಗಳಿಂದ ಬೈದಿದ್ದಾರೆ.

VISTARANEWS.COM


on

Rohit Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್​ ಅಥವಾ ಬೌಲಿಂಗ್​ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್​ನ(IND vs ENG 2nd Test) 2ನೇ ದಿನದಾಟದ ವೇಳೆಯೂ ಕಂಡುಬಂದಿದೆ.

ಶನಿವಾರದ ದ್ವಿತೀಯ ದಿನದ ಆಟದಲ್ಲಿ ಇಂಗ್ಲೆಂಡ್​ ತಂಡ ಮೊದಲ ಇನಿಂಗ್ಸ್​ನ ಬ್ಯಾಟಿಂಗ್​ ವೇಳೆ ಕಳಪೆ ಫೀಲ್ಡಿಂಗ್​ ಮಾಡಿದ ಕುರಿತು ರೋಹಿತ್​ ಸಹ ಆಟಗಾರನ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಫೀಲ್ಡಿಂಗ್​ ಮೇಲೆ ಗಮನ ಹರಿಸದೆ ಮೈದಾನದಲ್ಲಿ ಸುಮ್ಮಸುಮ್ಮನೆ ತಿರುಗಾಡಿದರೆ ಅಷ್ಟೇ…. ಎಂದು ಕೆಲ ಅವಾಚ್ಯ ಪದಗಳಿಂದ ಬೈದಿದ್ದಾರೆ. ಇದು ಮೈಕ್​ ಸ್ಟಂಪ್​ನಲ್ಲಿ ರೆಕಾರ್ಡ್​ ಆಗಿದೆ.

ರೋಹಿತ್​ ಅವರು ಅವಾಚ್ಯ ಪದಗಳಿಂದ ಬೈಯುವಾಗ ಜಾನಿ ಬೇರ್​ ಸ್ಟೋ ಮತ್ತು ಬೆನ್​ ಸ್ಟೋಕ್ಸ್​ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಇಂಗ್ಲೆಂಡ್​ ನಾಲ್ಕು ವಿಕೆಟ್​ ಕಳೆದುಕೊಂಡು 143 ರನ್​ ಗಳಿಸಿತ್ತು. ಕಳೆದ ವರ್ಷ ಮಾರ್ಚ್​ನಲ್ಲಿ ಚೆನ್ನೈಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ ಅವರು ತಾಳ್ಮೆ ಕಳೆದುಕೊಂಡು ಕುಲ್​ದೀಪ್​ ವಿರುದ್ಧ ರೇಗಾಡಿದ್ದರು. ಏಕದಿನ ವಿಶ್ವಕಪ್​ ವೇಳೆಯೂ ರೋಹಿತ್​ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದರು. ಈ ವಿಡಿಯೊಗಳು ವೈರಲ್​ ಆಗಿತ್ತು.

ಇದೇ ವರ್ಷಾರಂಭದಲ್ಲಿ ನಡೆದ ಅಫಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ(India vs Afghanistan, 1st T20I) ರೋಹಿತ್​ ಶರ್ಮ ಅವರು ಶೂನ್ಯಕ್ಕೆ ಔಟಾಗಿದ್ದರು. ಇದು ರೋಹಿತ್​ ಅವರು 14 ತಿಂಗಳ ಬಳಿಕ ಆಡಿದ ಟಿ20 ಪಂದ್ಯವಾಗಿತ್ತು. ಅವರ ವಿಕೆಟ್​ ಪತನಕ್ಕೆ ಸಹ ಆಟಗಾರ ಶುಭಮನ್​ ಗಿಲ್(Shubman Gill)​ ಕಾರಣರಾಗಿದ್ದರು. ರನ್​ ಗಳಿಸುವ ಅವಕಾಶ ಇದ್ದರೂ ಕೂಡ ಗಿಲ್​ ಓಡದೆ ರೋಹಿತ್​ ರನೌಟ್​ ಆಗುವಂತೆ ಮಾಡಿದ್ದರು.  ಇದೇ ಸಿಟ್ಟಿನಲ್ಲಿ ರೋಹಿತ್​ ಮೈದಾನದಲ್ಲೇ ರೊಚ್ಚಿಗೆದ್ದು ಗಿಲ್​ಗೆ ಬೈದಿದ್ದರು.

ಇದನ್ನೂ ಓದಿ IND vs ENG 2nd Test: 6 ವಿಕೆಟ್ ಕೆಡವಿ ಹಲವು ದಾಖಲೆ ಬರೆದ ಜಸ್​ಪ್ರೀತ್​ ಬುಮ್ರಾ

ಹಿಡಿತ ಸಾಧಿಸಿದ ಭಾರತ


ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್(IND vs END 2nd Test)​ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ. ದ್ವಿತೀಯ ಇನಿಂಗ್ಸ್​ ಬ್ಯಾಟಿಂಗ್​ ಆರಂಭಿಸಿದ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171 ರನ್​ ಲೀಡ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದೆ. ಜೈಸ್ವಾಲ್​(15) ಮತ್ತು ರೋಹಿತ್​(13) ರನ್​ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ(Dr. Y.S. Rajasekhara Reddy ACA-VDCA Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ 6 ವಿಕೆಟ್​ಗೆ 336 ರನ್​ ಗಳಿಸಿದಲ್ಲಿಂದ ಶನಿವಾರ ದ್ವಿತೀಯ ದಿನದಾಟ ಆರಂಭಿಸಿದ ಭಾರತ, ಯಶಸ್ವಿ ಜೈಸ್ವಾಲ್(209)​ ಅವರ ದ್ವಿಶತಕದ ನೆರವಿನಿಂದ 396 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್​ ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್​ ಕಳೆದುಕೊಂಡು 253 ರನ್​ಗೆ ಆಲೌಟ್​ ಆಯಿತು. ಭಾರತ ಮಪದಲ ಇನಿಂಗ್ಸ್​ನಲ್ಲಿ 143 ರನ್​ ಲೀಡ್​ ಗಳಿಸಿತು. ಸದ್ಯ ದ್ವಿತೀಯ ಇನಿಂಗ್ಸ್​ ಆರಂಭಿಸಿರುವ ಭಾರತ ವಿಕೆಟ್​ ನಷ್ಟವಿಲ್ಲದೆ 28 ರನ್​ ಬಾರಿಸಿ ಒಟ್ಟು 171ರನ್​ ಲೀಡ್​ ಗಳಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

Jay Shah: ದುಲೀಪ್ ಟ್ರೋಫಿ ತಂಡಗಳು ಮತ್ತು ಮಹಿಳಾ ಅಂತರ-ವಲಯ ಪಂದ್ಯಾವಳಿಗಳು ಸೇರಿದಂತೆ ತಂಡದ ಆಯ್ಕೆಯಲ್ಲಿ ರಾಷ್ಟ್ರೀಯ ಆಯ್ಕೆದಾರರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ಜಯ್ ಶಾ ಗಮಿನಿದ್ದಾರೆ. ಈ ಕ್ರಮವು ಪ್ರತಿಭೆ ಗುರುತಿಸುವಿಕೆ ಮತ್ತು ತಂಡದ ಸಂಯೋಜನೆ ಸುಗಮಗೊಳಿಸುವ ಗುರಿ ಹೊಂದಿರುವ ವಲಯ ಆಯ್ಕೆ ಸಮಿತಿಗಳಿಂದ ನಿರ್ಗಮನ ಸೂಚಿಸುತ್ತದೆ.

VISTARANEWS.COM


on

jay Shah
Koo

ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಋತುವಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ಆಟಗಾರರ ಕಲ್ಯಾಣ ಮತ್ತು ಸ್ಪರ್ಧಾತ್ಮಕ ಸಮತೋಲನಕ್ಕೆ ಒತ್ತು ನೀಡಿ ಬಿಸಿಸಿಐ ಮುಂದೆ ಪ್ರಸ್ತಾಪಗಳನ್ನು ಮಂಡಿಸಿದ್ದಾರೆ. ಹೀಗಾಗಿ ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳು ಆಗಲಿವೆ.

ದಿನದಿಂದ ದಿನಕ್ಕೆ ಪಂದ್ಯಗಳ ಹೆಚ್ಚಳದ ಬಗ್ಗೆ ಬಗ್ಗೆ ಶಾರ್ದೂಲ್ ಠಾಕೂರ್ ಅವರಂತಹ ಆಟಗಾರರು ಎತ್ತಿರುವ ಕಳವಳಗಳನ್ನು ಪರಿಹರಿಸಲು, ರಣಜಿ ಟ್ರೋಫಿ ಮುಂದಿನ ವರ್ಷ ಎರಡು ಲೆಗ್ (ಚರಣಗಳನ್ನು) ಹೊಂದಿರಲಿವೆ. ಈ ಹೊಂದಾಣಿಕೆಯು ಆಟಗಾರರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ರಕ್ಷಿಸುವ ಗುರಿ ಹೊಂದಿದೆ. 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿಯಲ್ಲಿ ಕಾಯಿನ್ ಟಾಸ್ ಅನ್ನು ತೆಗೆದುಹಾಕಲು ಪ್ರಸ್ತಾಪಿಸಿದ ಬಿಸಿಸಿಐ ಕಾರ್ಯದರ್ಶಿ ಸಿಕೆ ನಾಯ್ಡು ಟ್ರೋಫಿಯಲ್ಲಿ ಟಾಸ್ ಅನ್ನು ಇನ್ನು ಮುಂದೆ ಘೋಷಿಸಲಿಲ್ಲ. ಪ್ರವಾಸಿ ತಂಡಗಳು ತಂಡಗಳು ಬ್ಯಾಟಿಂಗ್ ಅಥವಾ ಬೌಲಿಂಗ್ ಅನ್ನು ಆಯ್ಕೆ ಮಾಡಬಹುದು. ಪಂದ್ಯದ ಸಮತೋಲನಕ್ಕಾಗಿ ಪರಿಷ್ಕೃತ ಅಂಕಗಳ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತದೆ. ಯಶಸ್ವಿಯಾದರೆ ಈ ಬದಲಾವಣೆಗಳು ಭವಿಷ್ಯದಲ್ಲಿ ದೊಡ್ಡ ಹಂತದ ಸ್ಪರ್ಧೆಗಳಿಗೆ ವಿಸ್ತರಿಸಬಹುದು.

ದುಲೀಪ್ ಟ್ರೋಫಿ ತಂಡಗಳು ಮತ್ತು ಮಹಿಳಾ ಅಂತರ-ವಲಯ ಪಂದ್ಯಾವಳಿಗಳು ಸೇರಿದಂತೆ ತಂಡದ ಆಯ್ಕೆಯಲ್ಲಿ ರಾಷ್ಟ್ರೀಯ ಆಯ್ಕೆದಾರರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ಜಯ್ ಶಾ ಗಮಿನಿದ್ದಾರೆ. ಈ ಕ್ರಮವು ಪ್ರತಿಭೆ ಗುರುತಿಸುವಿಕೆ ಮತ್ತು ತಂಡದ ಸಂಯೋಜನೆ ಸುಗಮಗೊಳಿಸುವ ಗುರಿ ಹೊಂದಿರುವ ವಲಯ ಆಯ್ಕೆ ಸಮಿತಿಗಳಿಂದ ನಿರ್ಗಮನ ಸೂಚಿಸುತ್ತದೆ.

ಮಳೆಯ ಸಮಸ್ಯೆಗೆ ಪರಿಹಾರ

ಜಯ್ ಶಾ ಹವಾಮಾನ ಸಂಬಂಧಿತ ಸವಾಲುಗಳನ್ನು ತಗ್ಗಿಸುವ ಯೋಜನೆಗಳನ್ನು ವಿವರಿಸಿದರು/ ವಿಶೇಷವಾಗಿ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಕ್ರಿಕೆಟ್​ ಋತು ಆರಂಭವಾಗಲಿದೆ. ಈ ಋತುವು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇರಾನಿ ಕಪ್ ಮತ್ತು ರಣಜಿ ಟ್ರೋಫಿ ಎರಡು ಹಂತಗಳಲ್ಲಿ ನಡೆಯಲಿದೆ. ಸೂಕ್ತ ಆಟಗಾರರ ವಿಶ್ರಾಂತಿ ಮತ್ತು ಚೇತರಿಕೆಗಾಗಿ ವೈಟ್-ಬಾಲ್ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು

ಈ ಸುಧಾರಣೆಗಳು ಸ್ಪರ್ಧಾತ್ಮಕ ಮತ್ತು ಆಟಗಾರ ಕೇಂದ್ರಿತ ದೇಶೀಯ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಬಿಸಿಸಿಐನ ಬದ್ಧತೆ ಒತ್ತಿಹೇಳುತ್ತವೆ. ಪ್ರತಿಭೆಗಳನ್ನು ಪೋಷಿಸುವ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಈ ಬದಲಾವಣೆಗಳು ತಳಮಟ್ಟದಲ್ಲಿ ಭಾರತೀಯ ಕ್ರಿಕೆಟ್​​ನ ಹೊಸ ಯುಗವನ್ನು ಸೂಚಿಸುತ್ತವೆ.

Continue Reading

ಕ್ರಿಕೆಟ್

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

IPL 2024: ಪಂಜಾಬ್​​ನ ಗುರ್ನೂರ್ ಬ್ರಾರ್ ಕಳೆದ ಆವೃತ್ತಿಯ ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಐಪಿಎಲ್ 2024 ಹರಾಜಿನಲ್ಲಿ ಮಾರಾಟವಾಗಲಿಲ್ಲ. ಐಪಿಎಲ್ 2023 ರಲ್ಲಿ ಅವರು ಪಂಜಾಬ್ ಮೂಲದ ತಂಡದ ಪರವಾಗಿ ಒಂದು ಪಂದ್ಯವನ್ನು ಆಡಿದ್ದಾರೆ. ಬ್ರಾರ್ ಈವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಒಂದು ಲಿಸ್ಟ್-ಎ ಪಂದ್ಯವನ್ನು ಆಡಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರ (IPL 2024) ಉಳಿದ ಭಾಗಕ್ಕೆ ಸುಶಾಂತ್ ಮಿಶ್ರಾ ಅಲಭ್ಯರಾಗಿರುವ ಕಾರಣ ಗುಜರಾತ್ ಟೈಟಾನ್ಸ್ ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಿದೆ. ಐಪಿಎಲ್​ನ ಅಧಿಕೃತ ಪ್ರಕಟಣೆ ಶನಿವಾರ (ಮೇ 11) ಈ ಬೆಳವಣಿಗೆಯನ್ನು ದೃಢಪಡಿಸಿದೆ. ಆದಾಗ್ಯೂ, ಸುಶಾಂತ್ ಮಿಶ್ರಾ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಿಂದ ಹೊರಗುಳಿಯುವ ಹಿಂದಿನ ಕಾರಣವನ್ನು ಬಿಡುಗಡೆ ಬಹಿರಂಗಪಡಿಸಿಲ್ಲ. ದೇಶೀಯ ಕ್ರಿಕೆಟ್​ನಲ್ಲಿ ಜಾರ್ಖಂಡ್ ಪರ ಆಡುವ ಎಡಗೈ ವೇಗಿ, ಐಪಿಎಲ್ 2024 ರಲ್ಲಿ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಪಡೆದಿಲ್ಲ. ಅಂದ ಹಾಗೆ ಪ್ರಸ್ತುತ ಋತುವು ಅವರ ಮೊದಲ ಐಪಿಎಲ್ ಸೀಸನ್ ಆಗಿತ್ತು.

ಪಂಜಾಬ್​​ನ ಗುರ್ನೂರ್ ಬ್ರಾರ್ ಕಳೆದ ಆವೃತ್ತಿಯ ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಐಪಿಎಲ್ 2024 ಹರಾಜಿನಲ್ಲಿ ಮಾರಾಟವಾಗಲಿಲ್ಲ. ಐಪಿಎಲ್ 2023 ರಲ್ಲಿ ಅವರು ಪಂಜಾಬ್ ಮೂಲದ ತಂಡದ ಪರವಾಗಿ ಒಂದು ಪಂದ್ಯವನ್ನು ಆಡಿದ್ದಾರೆ. ಬ್ರಾರ್ ಈವರೆಗೆ 5 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಒಂದು ಲಿಸ್ಟ್-ಎ ಪಂದ್ಯವನ್ನು ಆಡಿದ್ದಾರೆ.

ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಉಳಿದ ಭಾಗಕ್ಕೆ ಸುಶಾಂತ್ ಮಿಶ್ರಾ ಅವರ ಬದಲಿಯಾಗಿ ಗುಜರಾತ್ ಟೈಟಾನ್ಸ್ ವೇಗದ ಬೌಲರ್ ಗುರ್ನೂರ್ ಸಿಂಗ್ ಬ್ರಾರ್ ಅವರನ್ನು ಒಪ್ಪಂದ ಮಾಡಿಕೊಂಡಿದೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: IPL 2024 : ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ತಂಡದ ನಾಯಕ ಬದಲು; ಮಾಹಿತಿ ಬಹಿರಂಗ

“ಗುರ್ನೂರ್ ದೇಶೀಯ ಕ್ರಿಕೆಟ್​​ನಲ್ಲಿ ಪಂಜಾಬ್ ತಂಡವನ್ನು ಐದು ಪ್ರಥಮ ದರ್ಜೆ ಮತ್ತು ಒಂದು ಲಿಸ್ಟ್ ಎ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2023ರಲ್ಲಿ ಟಾಟಾ ಐಪಿಎಲ್​​ನಲ್ಲಿ ಪಂಜಾಬ್ ಕಿಂಗ್ಸ್ ಪರ ಏಕೈಕ ಪಂದ್ಯವನ್ನಾಡಿದ್ದರು. ಅವರು ತಮ್ಮ ಮೀಸಲು ಬೆಲೆ 50 ಲಕ್ಷ ರೂ.ಗೆ ಸಹಿ ಹಾಕುತ್ತಾರೆ” ಎಂದು ಅದು ಹೇಳಿದೆ.

ಪ್ಲೇ ಆಫ್ ಹಂತದಿಂದ ಹೊರಗುಳಿಯುವ ಸಾಧ್ಯತೆ

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಅವರು ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಗುಜರಾತ್ ಮೂಲದ ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತದಿಂದ ಹೊರಗುಳಿಯಲಿದೆ. ಅವರು 2022 ರಲ್ಲಿ ತಮ್ಮ ಚೊಚ್ಚಲ ಋತುವಿನಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದರು. 2023 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು.

ಹಾರ್ದಿಕ್ ಪಾಂಡ್ಯ ನಿರ್ಗಮನದ ನಂತರ ಅವರು ಶುಬ್ಮನ್ ಗಿಲ್ ಅವರನ್ನು ಹೊಸ ನಾಯಕನಾಗಿ ನೇಮಿಸಲಾಗಿದೆ. ಅವರು ಹೆಚ್ಚು ಪರಿಣಾಮ ಬೀರಿಲ್ಲ. ಟೈಟಾನ್ಸ್ ಇನ್ನೂ ಸ್ಪರ್ಧೆಯಲ್ಲಿ ಲೆಕ್ಕಾಚಾರದ ಪ್ರಕಾರ ಜೀವಂತವಾಗಿದ್ದರೂ, ಅವರ ಅವಕಾಶಗಳು ಬಹುತೇಕ ಶೂನ್ಯವಾಗಿದೆ.

ಸದ್ಯ ಆಡಿರುವ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಅವರು ತಮ್ಮ ಉಳಿದ ಎರಡು ಲೀಗ್ ಪಂದ್ಯಗಳನ್ನು ಗೆದ್ದರೂ, ಸತತ ಮೂರನೇ ಬಾರಿಗೆ ಪ್ಲೇಆಫ್ಗೆ ಪ್ರವೇಶಿಸಲು ಅವರಿಗೆ ಹಲವಾರು ಫಲಿತಾಂಶಗಳು ಬೇಕಾಗುತ್ತವೆ.

Continue Reading

ಪ್ರಮುಖ ಸುದ್ದಿ

IPL 2024 : ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ತಂಡದ ನಾಯಕ ಬದಲು; ಮಾಹಿತಿ ಬಹಿರಂಗ

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿಯಲಿದ್ದು, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಆದಾಗ್ಯೂ, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡದ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗುವುದು ಎಂದು ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಾಯಕ ರಿಷಭ್ ಪಂತ್ ಅವರ ಸೇವೆ ಲಭ್ಯವಿಲ್ಲ. ವಿಕೆಟ್ ಕೀಪರ್-ಬ್ಯಾಟರ್​​ಗೆ ಭಾರತದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಪಂದ್ಯದಿಂದ ಅಮಾನತುಗೊಳಿಸಿದೆ. ಹೀಗಾಗಿ ಬದಲಿ ನಾಯಕನನ್ನು ಘೋಷಿಸಿದೆ.

ನಿಧಾನಗತಿಯ ಓವರ್ ರೇಟ್ ಅಪರಾಧದಿಂದಾಗಿ ರಿಷಭ್ ಪಂತ್ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ. ಕೀಪರ್-ಬ್ಯಾಟರ್​ ಮೂರು ಬಾರಿ ಇದೇ ಅಪರಾಧವನ್ನು ಮಾಡಿದ್ದ ಕಾರಣ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲ, 30 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ನಿಧಾನಗತಿಯ ಓವರ್ ರೇಟ್​​ಗಾಗಿ ಅವರ ಮೇಲೆ ದಂಡ ಹಾಕಲಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿಯಲಿದ್ದು, ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಆದಾಗ್ಯೂ, ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡದ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರಿಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗುವುದು ಎಂದು ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ.

2024ರ ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಗೆ ದೊಡ್ಡ ಹೊಡೆತ ಬಿದ್ದಿದೆ. ಟೀಂ ಇಂಡಿಯಾ ನಾಯಕ ರಿಷಭ್ ಪಂತ್ (Rishabh Pant) ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂದು ಪಂದ್ಯ ನಿಷೇಧ ಹೇರಿದೆ. ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್​​ಗಾಗಿ ರಿಷಭ್ ಪಂತ್​ಗೆ ದಂಡ ವಿಧಿಸಲಾಗಿದೆ. ಕೀಪರ್-ಬ್ಯಾಟರ್​​ ಒಂದು ಪಂದ್ಯದಿಂದ ಅಮಾನತು ಶಿಕ್ಷೆ ವಿಧಿಸಲಾಗಿದೆ. ಇದಲ್ಲದೆ, ಈ ಅಪರಾಧಕ್ಕಾಗಿ ಅವರಿಗೆ 30 ಲಕ್ಷ ರೂ.ಗಳ ದಂಡವನ್ನೂ ವಿಧಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ನಿಧಾನಗತಿಯ ಓವರ್ ರೇಟ್​ಗಾಗಿ ರಿಷಭ್ ಪಂತ್​ಗೆ ದಂಡ ವಿಧಿಸುತ್ತಿರುವುದು ಇದು ಮೂರನೇ ಬಾರಿ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಕೀಪರ್-ಬ್ಯಾಟರ್​​ಗ ​ಮೊದಲು 12 ಲಕ್ಷ ರೂ.ಗಳ ದಂಡ ವಿಧಿಸಲಾಯಿತು ಮತ್ತು ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ 24 ಲಕ್ಷ ರೂ.ಗಳ ದಂಡ ವಿಧಿಸಲಾಯಿತು.

ಎಲ್ಲ ಆಟಗಾರರಿಗೆ ದಂಡ

ರಿಷಭ್ ಪಂತ್ ಮಾತ್ರವಲ್ಲ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಭಾಗವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​​ನ ಎಲ್ಲಾ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದಂಡ ವಿಧಿಸಿದೆ. ನಿಧಾನಗತಿಯ ಓವರ್ ರೇಟ್​​ಗೆ ಆಟಗಾರರಿಗೆ 12 ಲಕ್ಷ ರೂಪಾಯಿ ಅಥವಾ ಆಯಾ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿದೆ.

ಇದನ್ನೂ ಓದಿ: James Anderson : ಕೋಚ್ ಒತ್ತಡಕ್ಕೆ ಮಣಿದು ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​

ಮ್ಯಾಚ್ ರೆಫರಿ ನಿರ್ಧಾರವನ್ನು ಪ್ರಶ್ನಿಸಿದ ರಿಷಭ್ ಪಂತ್ ಗೆ ಪ್ರಯೋಜನ ಸಿಗಲಿಲ್ಲ. ಕ್ಯಾಪಿಟಲ್ಸ್ ನಾಯಕ ಅಧಿಕೃತ ಮೇಲ್ಮನವಿ ಸಲ್ಲಿಸಿದ್ದರು. ನಂತರ ಅದನ್ನು ಪರಿಶೀಲನೆಗಾಗಿ ಬಿಸಿಸಿಐ ಒಂಬುಡ್ಸ್​​ಮನ್​ಗೆ ಕಳುಹಿಸಲಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿದಿರುವುದು ಡೆಲ್ಲಿ ಕ್ಯಾಪಿಟಲ್ಸ್​ಗೆ ದೊಡ್ಡ ಹೊಡೆತವಾಗಿದೆ. ಫ್ರಾಂಚೈಸಿ ಪಾಯಿಂಟ್ಸ್ ಟೇಬಲ್​​ನಲ್ಲಿ 5 ನೇ ಸ್ಥಾನದಲ್ಲಿದೆ ಮತ್ತು ಪ್ಲೇಆಫ್​ಗೆ ತಮ್ಮ ಸ್ಥಾನ ಬಲಪಡಿಸಲು ಎರಡು ಗೆಲುವುಗಳ ಅಗತ್ಯವಿದೆ.

ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಭ್ ಪಂತ್ ಅತ್ಯುತ್ತಮ ಬ್ಯಾಟರ್​​ ಆಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅವರು ಆಡಿದ 12 ಪಂದ್ಯಗಳಲ್ಲಿ 413 ರನ್ ಗಳಿಸಿದ್ದಾರೆ. ಹೆಚ್ಚಿನ ಡಿಸಿ ಬ್ಯಾಟರ್​ಗಳು ಬ್ಯಾಟ್​ನೊಂದಿಗೆ ಮುಂದುವರಿಯಲು ಹೆಣಗಾಡುತ್ತಿರುವುದರಿಂದ ಪಂತ್ ಅಲಭ್ಯತೆ ಸಮಸ್ಯೆ ಮಾಡಲಿದೆ.

Continue Reading

ಪ್ರಮುಖ ಸುದ್ದಿ

James Anderson : ಕೋಚ್ ಒತ್ತಡಕ್ಕೆ ಮಣಿದು ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​

James Anderson : ಬರ್ನ್ಲಿ ಮೂಲದ ಈ ಬೌಲರ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪಡೆದಷ್ಟು ವಿಕೆಟ್​ಗಳನ್ನು ಬೇರೆ ಯಾವುದೇ ವೇಗಿಗಳೂ ಪಡೆದಿಲ್ಲ. ಆಂಡರ್ಸನ್ 400 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 987 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ನಂತರದ ಸ್ಥಾನದಲ್ಲಿದ್ದಾರೆ.

VISTARANEWS.COM


on

James Anderson
Koo

ಬೆಂಗಳೂರು: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ (James Anderson) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ (England Cricket team) ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ವೇಗದ ಬೌಲರ್ ತಮ್ಮ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ಅಂದ ಹಾಗೆ 41 ವರ್ಷದ ಅವರು ನಿವೃತ್ತಿ ಹೇಳುವುದಕ್ಕೆ ಕೋಚ್​ ಬ್ರೆಂಡನ್ ಮೆಕಲಮ್ ಕಾರಣ. ನೂತನ ತಂಡವನ್ನು ನಿರ್ಮಿಸುವ ಉದ್ದೇಶದಿಂದ ಅವರಿಗೆ ವಿದಾಯ ಹೇಳಲು ಸೂಚಿಸಿದ್ದಾರೆ ಎನ್ನಲಾಗಿದೆ.

2002ರ ಡಿಸೆಂಬರ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್, ಸಾರ್ವಕಾಲಿಕ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. ಬರ್ನ್ಲಿ ಮೂಲದ ಈ ಬೌಲರ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಪಡೆದಷ್ಟು ವಿಕೆಟ್​ಗಳನ್ನು ಬೇರೆ ಯಾವುದೇ ವೇಗಿಗಳೂ ಪಡೆದಿಲ್ಲ. ಆಂಡರ್ಸನ್ 400 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 987 ವಿಕೆಟ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ನಂತರದ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ನಡೆದ ಭಾರತ ತಂಡದ ಇಂಗ್ಲೆಂಡ್ ಪ್ರವಾಸದಲ್ಲಿ, 41 ವರ್ಷದ ಆ್ಯಂಡರ್ಸನ್​ ತಮ್ಮ 700 ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಈ ಸಾಧನೆ ಮಾಡಿದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಜೇಮ್ಸ್ ಆಂಡರ್ಸನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ನಿವೃತ್ತಿ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ಪ್ರಮುಖ ವೇಗಿ ಇಂಗ್ಲೆಂಡ್ ಪರ ಆಡುವುದನ್ನು ತಪ್ಪಿಸಿಕೊಳ್ಳುವುದಾಗಿ ಹೇಳಿದ್ದಾರೆ ಮತ್ತು ತಂಡಕ್ಕಾಗಿ ತಮ್ಮ 20 ವರ್ಷಗಳ ಪ್ರಯಾಣವನ್ನು ಸ್ಮರಿಸಿದ್ದಾರೆ. ಅವರು ತಮ್ಮ ಕುಟುಂಬದ ಬೆಂಬಲಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿ ಗಾರ್ಡಿಯನ್ ವರದಿಯ ಪ್ರಕಾರ, ಮೆಕಲಮ್ ಇತ್ತೀಚೆಗೆ ಇಂಗ್ಲೆಂಡ್​ಗೆ ಐದು ದಿನಗಳ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ ಆಂಡರ್ಸನ್ ಭೇಟಿಯಾಗಿ ಟೆಸ್ಟ್ ತಂಡದ ಭವಿಷ್ಯಕ್ಕಾಗಿ ನಿವೃತ್ತಿ ಘೋಷಿಸುವಂತೆ ತಿಳಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

2025-26ರ ಚಳಿಗಾಲದಲ್ಲಿ ನಡೆಯಲಿರುವ ಮುಂದಿನ ಆಶಸ್ ಸರಣಿಗೆ ಇಂಗ್ಲೆಂಡ್​ ತಂಡವು ವೇಗದ ದಾಳಿಯನ್ನು ರೂಪಿಸಲು ಎದುರು ನೋಡುತ್ತಿದೆ. ಇಂಗ್ಲೆಂಡ್ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಟೆಸ್ಟ್ ಮತ್ತು ಆಗಸ್ಟ್​ನಲ್ಲಿ ಶ್ರೀಲಂಕಾ ವಿರುದ್ಧ ಇನ್ನೂ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಆಂಡರ್ಸನ್ ಅವರ ತವರು ಮೈದಾನವಾದ ಓಲ್ಡ್ ಟ್ರಾಫರ್ಡ್​​ನಲ್ಲಿ ನಡೆಯಲಿದೆ.

ಜೇಮ್ಸ್ ಆಂಡರ್ಸನ್ ವೃತ್ತಿ ಕ್ರಿಕೆಟ್​ ಒಂದು ನೋಟ

ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇತ್ತೀಚೆಗೆ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಟದ ದೀರ್ಘ ಸ್ವರೂಪದಲ್ಲಿ 700 ವಿಕೆಟ್​​ಗಳನ್ನು ಪೂರೈಸಿದ್ದರು. ಅವರು ಕ್ರಿಕೆಟ್​​ ಆಟದ ದೀರ್ಘ ಸ್ವರೂಪದಲ್ಲಿ ಮೂರನೇ ಪ್ರಮುಖ ವಿಕೆಟ್ ಟೇಕರ್ ಮತ್ತು ವೇಗದ ಬೌಲರ್​ಗಳ ವಿಷಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.

ಇಂಗ್ಲೆಂಡ್ ಪರ 187 ಪಂದ್ಯಗಳನ್ನಾಡಿರುವ ಜೇಮ್ಸ್ ಆಂಡರ್ಸನ್ 700 ವಿಕೆಟ್ ಪಡೆದಿದ್ದಾರೆ. ಶೇನ್ ವಾರ್ನ್ ಅವರ 708 ವಿಕೆಟ್​ಗಳ ಸಂಖ್ಯೆಯಿಂದ ಕೇವಲ 9 ವಿಕೆಟ್​ಗಳ ದೂರದಲ್ಲಿದ್ದಾರೆ/ ಆಟದ ದೀರ್ಘ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್ ಹೊರತಾಗಿ, ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ ಪರ 194 ಏಕದಿನ ಮತ್ತು 19 ಟಿ 20 ಪಂದ್ಯಗಳಲ್ಲಿ ಕ್ರಮವಾಗಿ 269 ಮತ್ತು 18 ವಿಕೆಟ್​ಗಳನ್ನು ಪಡೆದಿದ್ದಾರೆ.

Continue Reading
Advertisement
jay Shah
ಪ್ರಮುಖ ಸುದ್ದಿ35 mins ago

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಬೆಂಗಳೂರು39 mins ago

Child Actor Master OM: ಓದಿಗೂ ಸೈ, ಮಾಡೆಲಿಂಗ್‌ಗೂ ಸೈ ಈ ಸೂಪರ್‌ ಟೀನ್‌ ಮಾಡೆಲ್‌ ಮಾಸ್ಟರ್‌ ಓಂ!

ಬೆಂಗಳೂರು1 hour ago

LuLu Fashion Week 2024: ಲುಲು ಫ್ಯಾಷನ್ ವೀಕ್ 2024; ಕಲರ್ ಫುಲ್ ಬಟ್ಟೆ ತೊಟ್ಟು ಕಂಗೊಳಿಸಿದ ನಾರಿಮಣಿಗಳು

IPL 2024
ಕ್ರಿಕೆಟ್1 hour ago

IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು?

Devarajegowda
ಕರ್ನಾಟಕ3 hours ago

ಮಹಿಳೆಗೆ ಲೈಂಗಿಕ ದೌರ್ಜನ್ಯ ಕೇಸ್;‌ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

Murder Case
ಕರ್ನಾಟಕ3 hours ago

Murder Case: ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ; ಬಾಲಕಿಯ ಅಪಹರಿಸಿ ಕತ್ತು ಕೊಯ್ದ ಕಿರಾತಕರು

Richard Hansen
ಕರ್ನಾಟಕ3 hours ago

Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

Legislative Council Election
ಕರ್ನಾಟಕ3 hours ago

ವಿಧಾನ ಪರಿಷತ್ ಚುನಾವಣೆ; 5 ಕ್ಷೇತ್ರ ಬಿಜೆಪಿಗೆ, 1 ಕ್ಷೇತ್ರ ಜೆಡಿಎಸ್‌ಗೆ; ಕಮಲ ಪಾಳಯದ ಪಟ್ಟಿ ಇಲ್ಲಿದೆ

Rain News
ಮಳೆ4 hours ago

Rain News: ಮಳೆ ಆರ್ಭಟ: ಸಿಡಿಲು ಬಡಿದು ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ; ನೆಲಕಚ್ಚಿದ ಬಾಳೆ ತೋಟ

ICMR Dietary Guidelines
ಆರೋಗ್ಯ4 hours ago

ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru News
ಬೆಂಗಳೂರು8 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ19 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

ಟ್ರೆಂಡಿಂಗ್‌