ಲಕ್ನೋ: ಸತತ ಸೋಲಿನಿಂದ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳುವ ಹಂತಕ್ಕೆ ಬಂದು ನಿಂತಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ (IND vs ENG) ಮತ್ತು ಸೆಮಿಫೈನಲ್ ಹೊಸ್ತಿಲಲ್ಲಿರುವ ಭಾರತ, ಲಕ್ನೋದಲ್ಲಿ ಲಕ್ ಪರೀಕ್ಷೆಗೆ ಸಿದ್ಧವಾಗಿದೆ. ಇತ್ತಂಡಗಳ ಈ ಪಂದ್ಯ ಇಂದು (ಅಕ್ಟೋಬರ್ 29) ಲಕ್ನೋದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂ (Ekana Cricket Stadium, Lucknow)ನಲ್ಲಿ ನಡೆಯಲಿದೆ.
20 ವರ್ಷಗಳ ಬಳಿಕ ಗೆಲುವು ಒಲಿದೀತೇ?
ಭಾರತ ತಂಡ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ನಲ್ಲಿ ಗೆಲುವು ಕಾಣದೆ 20 ವರ್ಷಗಳೇ ಕಳೆದಿದೆ. ಕೊನೆಯ ಬಾರಿ ಭಾರತ ತಂಡ ಗೆಲುವು ಸಾಧಿಸಿದ್ದು 2003ರಲ್ಲಿ. ಆ ಬಳಿಕ ಎರಡು ವಿಶ್ವಕಪ್ ಆಡಿದರೂ ಭಾರತ ಗೆಲುವು ಸಾಧಿಸಲು ವಿಫಲವಾಗಿದೆ. ಒಂದು ಪಂದ್ಯ ಟೈನಲ್ಲಿ ಅಂತ್ಯಕಂಡಿದೆ. 2015 ಆವೃತ್ತಿಯಲ್ಲಿ ಉಭಯ ತಂಡಗಳಿಗೆ ಮುಖಾಮುಖಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಭಾರತ 20 ವರ್ಷಗಳ ಬಳಿಕ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಸದ್ಯದ ಇಂಗ್ಲೆಂಡ್ ಪರಿಸ್ಥಿತಿಯನ್ನು ನೋಡುವಾಗ ಇದು ಭಾರತಕ್ಕೆ ಕಷ್ಟವಲ್ಲ.
Hosts take on the defending champions 👊
— ICC (@ICC) October 29, 2023
Who takes home the points in Lucknow?#CWC23 | #INDvENG pic.twitter.com/Ntc6NHhWxO
ಸೂರ್ಯಕುಮಾರ್ಗೆ ಮತ್ತೊಂದು ಅವಕಾಶ
ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಅವರು ಈ ಪಂದ್ಯಕ್ಕೂ ಅಲಭ್ಯರಾದ ಕಾರಣ ಸೂರ್ಯಕುಮಾರ್ ಯಾದವ್ ಅವರು ಆಡುವುದು ಖಚಿತ. ಕಳೆದ ಪಂದ್ಯದಲ್ಲಿ ಅವರು ಆಡಿದರೂ ರನೌಟ್ ಆಗಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಕಳೆದ ಪಂದ್ಯದ ವೈಫಲ್ಯಕ್ಕೆ ಈ ಪಂದ್ಯದಲ್ಲಿ ಸಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಶಾರ್ದೂಲ್ ಠಾಕೂರ್ ಆಲ್ರೌಂಡರ್ (Hardik Pandya) ಆಗಿದ್ದರೂ, ಅವರು ಈ ಹಿಂದಿನ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಹೀಗಾಗಿ ಅವರಿಗೆ ಜಾಗ ಸಿಗುವುದು ಕಷ್ಟ.
ಇದನ್ನೂ ಓದಿ AUS vs NZ: ಅಂತಿಮ ಓವರ್ನಲ್ಲಿ ರೋಚಕ ಗೆಲುವು ಸಾಧಿಸಿದ ಆಸ್ಟ್ರೇಲಿಯಾ
ಸಿರಾಜ್ಗೆ ವಿಶ್ರಾಂತಿ ಸಾಧ್ಯತೆ
ಲಕ್ನೋ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡಲಿದೆ. ಹಾಗಾಗಿ ಭಾರತದ ಮೂವರು ವೇಗಿಗಳ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಆರ್. ಅಶ್ವಿನ್ (R Ashwin) ಅವರನ್ನು ಆಯ್ಕೆ ಮಾಡಿ ಸಿರಾಜ್ ಅವರನ್ನು ಈ ಪಂದ್ಯದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಮಿಂಚಿದ ಮೊಹಮ್ಮದ್ ಶಮಿ(Mohammed Shami) ಈ ಪಂದ್ಯದಲ್ಲಿಯೂ ಆಡುವುದು ಖಚಿತ. ಹೀಗಾಗಿ ಸಿರಾಜ್ ಹೊರಗುಳಿಯಲಿದ್ದಾರೆ.
ಇದನ್ನೂ ಓದಿ IND vs ENG: ಆಂಗ್ಲರ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ ತಂಡ; ಪಿಚ್ ರಿಪೋರ್ಟ್ ಹೀಗಿದೆ
ರಾಹುಲ್ಗೆ ತವರು ಪಂದ್ಯ
ಐಪಿಎಲ್ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸುವ ಕೆ.ಎಲ್ ರಾಹುಲ್ ಅವರಿಗೆ ಇದು ತವರಿನ ಪಂದ್ಯವಾಗಿದೆ. ಏಕೆಂದರೆ ಲಕ್ನೋ ತನ್ನ ಪಂದ್ಯವನ್ನು ಇದೇ ಮೈದಾನಲ್ಲಿ ಹೆಚ್ಚು ಆಡಿದೆ. ಹೀಗಾಗಿ ಅವರಿಗೆ ತವರಿನ ಪಂದ್ಯ ಎಂದರೂ ತಪ್ಪಾಗಲಾದು. ಅತ್ತ ಇಂಗ್ಲೆಂಡ್ ತಂಡದ ಮಾರ್ಕ್ ವುಡ್ಗೂ ತವರಿನ ಪಂದ್ಯ ಎನ್ನಬಹುದು. ಅವರು ಕೂಡ ಐಪಿಎಲ್ನಲ್ಲಿ ಲಕ್ನೋ ತಂಡವನ್ನು ಪ್ರತಿನಿಧಿಸುತ್ತಾರೆ.
ನಿರೀಕ್ಷೆಗಳೆಲ್ಲ ನೀರಲ್ಲಿ ಹೋಮ
ವಿಶ್ವದ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದ ಇಂಗ್ಲೆಂಡ್ ತಂಡದ ಮೇಲೆ ಭಾರಿ ನಿರೀಕ್ಷೆ ಮಾಡಲಾಗಿತ್ತು. ಈ ಬಾರಿಯೂ ಅವರು ಕಪ್ ಗೆಲ್ಲುವುದು ಖಚಿತ ಎಂದು ಹೇಳಲಾಗಿತ್ತು. ಆದರೆ ತಂಡದ ಪ್ರದರ್ಶನ ನೋಡುವಾಗ ನಿರೀಕ್ಷೆಗಳೆಲ್ಲ ಹುಸಿಯಾಗಿದೆ. ದುರ್ಬಲ ಅಫಘಾನಿಸ್ತಾನ, ಶ್ರೀಲಂಕಾ ವಿರುದ್ಧವೂ ಸೋಲು ಕಂಡಿದೆ. ವಿಶ್ವಕಪ್ ಇತಿಹಾಸದಲ್ಲೇ ಇಂಗ್ಲೆಂಡ್ ಈ ರೀತಿಯ ಶೋಚನೀಯ ಸ್ಥಿತಿ ಎದುರಿಸಿದ್ದು ಇದೇ ಮೊದಲ ಬಾರಿ.
ನಾಯಕ ಜಾಸ್ ಬಟ್ಲರ್, ಜಾನಿ ಬೇರ್ ಸ್ಟೋ, ಬೆನ್ ಸ್ಟೋಕ್ಸ್, ಆಲ್ ರೌಂಡರ್ ಮೊಯಿನ್ ಅಲಿ ಇವರೆಲ್ಲ ಎರಡಂಕಿ ಮೊತ್ತ ಪೇರಿಸುವಲ್ಲಿ ವಿಫಲಾಗುತ್ತಿದ್ದಾರೆ. ಒಟ್ಟಾರೆಯಾಗಿ ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದಾರೆ. ಇವರೆಲ್ಲ ಸಿಡಿದು ನಿಂತರೆ ಎಂತಹ ತಂಡವನ್ನು ಮಗುಚು ಹಾಕುವ ಸಾಮರ್ಥ್ಯವಿದೆ. ಆದರೆ ಇವರೆಲ್ಲ ಕ್ರಿಕೆಟ್ ಜೋಶ್ ತೋರುತ್ತಿಲ್ಲ.