Site icon Vistara News

IND VS ENG | ಭಾರತ-ಇಂಗ್ಲೆಂಡ್​ ತಂಡದ ಸೆಮಿಫೈನಲ್​​ ಕದನ ಮಳೆಯಿಂದ ರದ್ದಾದರೆ ಗೆಲುವು ಯಾರಿಗೆ?

rain

ಅಡಿಲೇಡ್​: ಟಿ20 ವಿಶ್ವ ಕಪ್​ನ ಭಾರತ ಮತ್ತು ಇಂಗ್ಲೆಂಡ್(IND VS ENG)​ ವಿರುದ್ಧದ ಸೆಮಿಫೈನಲ್​ ಪಂದ್ಯ ಮಳೆಯಿಂದ ರದ್ದುಗೊಂಡರೆ ಭಾರತ ತಂಡ ಫೈನಲ್​ ಪ್ರವೇಶ ಪಡೆಯಲಿದೆ. ಆದರೆ ಇದಕ್ಕೆ ಕೆಲ ಮಾನದಂಡಗಳಿವೆ ಇದನ್ನು ಈ ಕೆಳಗೆ ವಿವರಿಸಲಾಗಿದೆ.

ಕಳೆದ ವಾರವಷ್ಟೇ ಐಸಿಸಿ ಫೈನಲ್​ ಮತ್ತು ಸೆಮಿಫೈನಲ್​ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಕೆಲ ಬದಲಾವಣೆಗಳನ್ನು ಮಾಡಿತ್ತು. ಅದರಂತೆ ಪಂದ್ಯದಲ್ಲಿ ಫಲಿತಾಂಶ ನಿರ್ಣಯಿಸಲು ಎರಡೂ ಇನಿಂಗ್ಸ್​ಗಳಲ್ಲಿ ಕನಿಷ್ಠ ಹತ್ತು ಓವರ್ ಆಟ ನಡೆಯಬೇಕು ಎಂದು ಸೂಚಿಸಿತ್ತು. ಸೆಮಿ ಪಂದ್ಯ ಮಳೆಯ ಕಾರಣಕ್ಕೆ ಒಂದು ವೇಳೆ ತಲಾ ಹತ್ತು ಓವರ್ ನ ಪಂದ್ಯ ನಡೆಯಲು ಅವಕಾಶ ಸಿಗದಿದ್ದರೆ ಅದೇ ಪಂದ್ಯ ಮೀಸಲು ದಿನದಂದು ನಡೆಯಲಿದೆ. ಆದರೆ ಮೀಸಲು ದಿನದಲ್ಲೂ ಮಳೆ ಕಾಟ ಎದುರಾಗಿ ಕನಿಷ್ಠ ತಲಾ ಹತ್ತು ಓವರ್ ಪಂದ್ಯ ನಡೆಯದಿದ್ದರೆ, ಆಗ ಅಂಕ ಪಟ್ಟಿಯಲ್ಲಿ ಯಾವ ತಂಡ ಮುಂದಿರುತ್ತದೋ ಆ ತಂಡವು ಫೈನಲ್ ಪ್ರವೇಶ ಮಾಡಲಿದೆ ಎಂದು ತಿಳಿಸಿತ್ತು.

ಟೀಮ್​ ಇಂಡಿಯಾ ಫೈನಲ್​ಗೆ

ಐಸಿಸಿ ಮಳೆ ನಿಯಮದ ಪ್ರಕಾರ ಇಂಗ್ಲೆಂಡ್​ ಮತ್ತು ಭಾರತ ವಿರುದ್ಧದ ಸೆಮಿ ಪಂದ್ಯ ಗುರುವಾರ ಮಳೆಯಿಂದ ರದ್ದಾದರೆ ಮೀಸಲು ದಿನವಾದ ಶುಕ್ರವಾರಕ್ಕೆ ಪಂದ್ಯ ಮುಂದೂಡಲ್ಪಡುತ್ತದೆ. ಒಂದೊಮ್ಮೆ ಮೀಸಲು ದಿನದಲ್ಲಿಯೂ ಪಂದ್ಯ ನಡೆಯದೇ ಇದ್ದರೆ ಆಗ ಭಾರತ ತಂಡ ಫೈನಲ್ ಪ್ರವೇಶಿಸಲಿದೆ. ಏಕೆಂದರೆ ಗ್ರೂಪ್ 2ರಲ್ಲಿ ಭಾರತ 8 ಅಂಕಗಳಿಂದ ಮೊದಲ ಸ್ಥಾನದಲ್ಲಿದ್ದು, ಇಂಗ್ಲೆಂಡ್ ಗ್ರೂಪ್-1ನಲ್ಲಿ 7 ಅಂಕಗಳಿಂದ 2ನೇ ಸ್ಥಾನದಲ್ಲಿದೆ. ಹೀಗಾಗಿ ಪಂದ್ಯ ರದ್ದಾದರೆ ಟೀಮ್​ ಇಂಡಿಯಾಗೆ ಇದು ವರದಾನವಾಗಿ ಪರಿಣಮಿಸಲಿದೆ.

ಇದನ್ನೂ ಓದಿ | T20 World Cup | ವಿರಾಟ್​ ಕೊಹ್ಲಿಗೆ ಗಾಯ; ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯಕ್ಕೆ ಅನುಮಾನ?

Exit mobile version