ಡಬ್ಲಿನ್(ಐರ್ಲೆಂಡ್): ಭಾರತ ಹಾಗೂ ಐರ್ಲೆಂಡ್ (IND vs IRE T20) ತಂಡಗಳ ನಡುವೆ ಡಬ್ಲಿನ್‌ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಮಳೆ ಅಡ್ಡಿಯಾಗಿದ್ದರಿಂದ ಪಂದ್ಯದ ಆರಂಭ ವಿಳಂಬವಾಗಿದ್ದು, ಮಳೆ ನಿಂತ ಬಳಿಕ ಆರಂಭವಾಗಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದು ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಪದಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆತಿರಲಿಲ್ಲ. ಇದೀಗ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಾರತದ ತಂಡ: ಹಾರ್ದಿಕ್ ಪಾಂಡ್ಯ, ಋತುರಾಜ್ ಗಾಯಕ್ವಾಡ್, ಇಷಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹುಡಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್(ಉಪನಾಯಕ), ಯುಜುವೇಂದ್ರ ಚಾಹಲ್, ಆವೇಶ್ ಖಾನ್, ಉಮ್ರಾನ್ ಮಲಿಕ್.
ಐರ್ಲೆಂಡ್ ತಂಡ: ಆಂಡ್ರೂ ಬಾಲ್ನಿರ್ನಿ(ನಾಯಕ), ಹ್ಯಾರಿ ಟೆಕ್ಟಾರ್, ಗ್ಯಾರಿ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಲೊರ್ಕಾನ್ ಟಕ್ಕರ್, ಮಾರ್ಕ್ ಅಡೈರ್, ಜಷುವಾ ಲಿಟಿಲ್, ಜಾರ್ಜ್ ಡಾಕ್ರೆಲ್, ಆಂಡಿ ಮೈಕ್ ಬ್ರೈನ್, ಕಾನರ್ ಆಲ್ಫರ್ಟ್, ಕ್ರೆಯಿಗ್ ಯಂಗ್.
ಇದನ್ನೂ ಓದಿ | the 6ixty: ಹೊಸ ಮಾದರಿಯ ಕ್ರಿಕೆಟ್ ಲೀಗ್ ಜಾರಿಗೆ ತಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ