ದುಬೈ : ಏಷ್ಯಾ ಕಪ್‌ನ ಸೂಪರ್-೪ ಹಂತದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಸೋತಿದ್ದು, ಬ್ಯಾಟಿಂಗ್ ಮಾಡುವಂತೆ ಎದುರಾಳಿ ತಂಡದ ನಾಯಕ ಆಹ್ವಾನ ಕೊಟ್ಟಿದ್ದಾರೆ. ಸೂಪರ್-೪ ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿರುವ ಭಾರತ ತಂಡ ಸ್ವಲ್ಪ ಹಿನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆದ್ದರೆ ಮಾತ್ರ ಫೈನಲ್‌ಗೇರುವ ಅವಕಾಶ ದೊರೆಯಲಿದೆ.
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ. ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ರವಿ ಬಿಷ್ಣೋಯಿ ಬದಲಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಡುವ ಬಳಗಕ್ಕೆ ಸೇರ್ಪಡೆಗೊಂಡಿದ್ದಾರೆ.
ತಂಡಗಳು:
ಭಾರತ: ರೋಹಿತ್ ಶರ್ಮ (ನಾಯಕ), ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡ, ಯಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಆರ್. ಅಶ್ವಿನ್.
ಶ್ರೀಲಂಕಾ : ದಸುನ್ ಶನಕ (ನಾಯಕ), ದನುಷ್ಕಾ ಗುಣತಿಲಕ, ಪಾಥುಮ್ ನಿಸ್ಸಂಕಾ, ಕುಸಾಲ್ ಮೆಂಡಿಸ್, ಚರಿತಾ ಅಸಲಂಕಾ, ಭಾನುಕಾ ರಾಜಪಕ್ಸ, ಆಶೆನ್ ಭಂಡಾರ, ಧನಂಜಯ ಡಿ ಸಿಲ್ವಾ, ವಾನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವಂಡರ್ಸೆ, ಪ್ರವೀಣ್ ಜಯವಿಕ್ರಮ, ಚಾಮಿಕಾ ಕರುಣಾರತ್ನೆ, ದಿಲ್ಶನ್ ಮಧುಶನಕ, ಮತೀಶ್ ಪತಿರಾಣಾ, ದಿನೇಶ್ ಚಂಡಿಮಲ್.