Site icon Vistara News

IND vs NED: ನೆದರ್ಲೆಂಡ್ಸ್​ ಪಂದ್ಯಕ್ಕೆ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರು ಅಲಭ್ಯ

Team India

ಬೆಂಗಳೂರು: ಹಾಲಿ ಆವೃತ್ತಿಯ ವಿಶ್ವಕಪ್​ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರಿಸಿರುವ ಟೀಮ್​ ಇಂಡಿಯಾ(IND vs NED) ತನ್ನ ಅಂತಿಮ ಲೀಗ್​ ಪಂದ್ಯವನ್ನಾಡಲು ಸಜ್ಜಾಗಿದೆ. ಭಾನುವಾರ ನಡೆಯುವ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಇದು ಟೂರ್ನಿಯ ಕೊನೆಯ ಲೀಗ್​ ಪಂದ್ಯ ಕೂಡ ಆಗಿದೆ.

ಸ್ಟಾರ್​ ಆಟಗಾರರಿಗೆ ವಿಶ್ರಾಂತಿ!

ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಟೀಮ್​ ಇಂಡಿಯಾ ಆಟಗಾರರು ಅಭ್ಯಾಸವನ್ನು ನಡೆಸಿದ್ದಾರೆ. ಮೂಲಗಳ ಪ್ರಕಾರ ಈ ಪಂದ್ಯಕ್ಕೆ ತಂಡದ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ, ಜಸ್​ಪ್ರೀತ್​ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸೆಮಿಫೈನಲ್​ ದೃಷ್ಟಿಯಿಂದ ಈ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಶ್ರೇಯಸ್ ಅಯ್ಯರ್ ಮತ್ತು ಇತರರು ಶುಕ್ರವಾರ ನೆಟ್ಸ್​ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು. ಒಂದೊಮ್ಮೆ ವಿರಾಟ್​, ಜಡೇಜಾ ಮತ್ತು ಬುಮ್ರಾ ಅವರು ಈ ಪಂದ್ಯದಿಂದ ಹೊರಗುಳಿದರೆ ಅವರ ಸ್ಥಾನದಲ್ಲಿ ಇಶಾನ್​ ಕಿಶನ್​/ಶಾರ್ದೂಲ್​ ಠಾಕೂರ್​, ಆರ್​.ಅಶ್ವಿನ್​ ಮತ್ತು ಪ್ರಸಿದ್ಧ್​ ಕೃಷ್ಣ ಆಡಬಹುದು.

ಇದನ್ನೂ ಓದಿ Raja Marga Column : ಭಾರತ ವಿಶ್ವವಿಜಯಕ್ಕೆ ಎರಡೇ ಮೆಟ್ಟಿಲು; ಈ ಬಾರಿ ಗೆಲ್ಲದಿದ್ದರೆ ಇನ್ಯಾವಾಗ!

ಪ್ರಸಿದ್ಧ್​ ಕೃಷ್ಣ ಅವರು ಹಾರ್ದಿಕ್​ ಪಾಂಡ್ಯ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಅವರ ಸ್ಥಾನಕ್ಕೆ ಬದಲಿಯಾಗಿ ತಂಡ ಸೇರಿದ ಆಟಗಾರನಾಗಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಅವರಿಗೆ ತವರಿನ ಪಿಚ್​ ಆದ ಕಾರಣ ಅವರು ಈ ಪಂದ್ಯದಲ್ಲಿ ಆಡಬಹುದು. ಭಾರತ ಈಗಾಗಲೇ ಸೆಮಿ ಕೂಡ ತಲುಪಿರುವ ಕಾರಣ ಸ್ಟಾರ್​ ಆಟಗಾರರಿಗೆ ವಿಶ್ರಾಂತಿ ನೀಡಲೂಬಹುದು. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಟಿಕೆಟ್​ ಸೋಲ್ಡ್​ ಔಟ್​

ಬೆಂಗಳೂರಿನಲ್ಲಿ ವಿರಾಟ್​ ಕೊಹ್ಲಿ ಅವರ ಅಪಾರ ಅಭಿಮಾನಿಗಳಿರುವ ಕಾರಣ ಈ ಪಂದ್ಯದ ಟಿಕೆಟ್​ಗಳಯ ಸೋಲ್ಡ್​ ಔಟ್​ ಆಗಿದೆ ಎಂದು ತಿಳಿದುಬಂದಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿಯೂ ಇದೆ. ಕಳೆದ ಮೂರು ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಲ್ಲದೆ ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ನಡುವಣ ಶನಿವಾರದ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದುಗೊಂಡಿತ್ತು. ಹೀಗಾಗಿ ಈ ಪಂದ್ಯಕ್ಕೂ ಮಳೆಯ ಭೀತಿ ಇದೇ ಇದೆ. ಪಂದ್ಯ ರದ್ದಾದರೂ ಭಾರತಕ್ಕೆ ಯಾವುದೇ ಚಿಂತೆಯಿಲ್ಲ. ಭಾರತ ಸೆಮಿಫೈನಲ್ ಪ್ರವೇಶ ಪಡೆದಾಗಿದೆ.

ಭಾರತ ಸಂಭಾವ್ಯ ತಂಡ

ರೋಹಿತ್​ ಶರ್ಮ(ನಾಯಕ), ಶುಭಮನ್​ ಗಿಲ್​, ಇಶಾನ್​ ಕಿಶನ್​/ಶಾರ್ದೂಲ್​ ಠಾಕೂರ್​, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಕುಲ್​ದೀಪ್​ ಯಾದವ್​, ಆರ್​. ಅಶ್ವಿನ್​, ಸೂರ್ಯಕುಮಾರ್​ ಯಾದವ್​, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​, ಪ್ರಸಿದ್ಧ್​ ಕೃಷ್ಣ.

Exit mobile version