Raja Marga Column : ಭಾರತ ವಿಶ್ವವಿಜಯಕ್ಕೆ ಎರಡೇ ಮೆಟ್ಟಿಲು; ಈ ಬಾರಿ ಗೆಲ್ಲದಿದ್ದರೆ ಇನ್ಯಾವಾಗ! - Vistara News

ಅಂಕಣ

Raja Marga Column : ಭಾರತ ವಿಶ್ವವಿಜಯಕ್ಕೆ ಎರಡೇ ಮೆಟ್ಟಿಲು; ಈ ಬಾರಿ ಗೆಲ್ಲದಿದ್ದರೆ ಇನ್ಯಾವಾಗ!

Raja Marga column : ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಫೈನಲ್‌ಗೇರಿದೆ. ಈ ಅಜೇಯ ಓಟ ಫೈನಲ್‌ವರೆಗೂ ಸಾಗಲಿದೆ. ಮೂರನೇ ಬಾರಿ ಟೀಮ್‌ ಭಾರತ್‌ ವಿಶ್ವಕಪ್‌ ಎತ್ತಲಿದೆ.. ಈವಾಗ ಅಲ್ಲದಿದ್ದರೆ ಇನ್ಯಾವಾಗ?!

VISTARANEWS.COM


on

Spirit of Team Bharat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJAMARGA Rajendra Bhat

ವಿಶ್ವಕಪ್ ಕ್ರಿಕೆಟ್‌ 2023ರ (ICC World cup 2023) ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯದ ಹಂತದಲ್ಲಿವೆ. ಭಾರತಕ್ಕೆ ಈ ವಾರಾಂತ್ಯದಲ್ಲಿ ನೆದರ್ಲ್ಯಾಂಡ್ ಜೊತೆಗೆ ಒಂದು ಔಪಚಾರಿಕ ಪಂದ್ಯ ಬಾಕಿ ಇದೆ. ಅದರಲ್ಲಿ ಒಂದಿಷ್ಟು ಪ್ರಯೋಗಗಳನ್ನು ಮಾಡಲು ಕೋಚ್ ರಾಹುಲ್ ದ್ರಾವಿಡ್ ಮನಸ್ಸು ಮಾಡಬಹುದು. ಟೇಬಲ್ ಟಾಪ್ ಆಗುವುದರ ಜೊತೆಗೆ ಅತೀ ಹೆಚ್ಚು ಸರಾಸರಿ ಕೂಡ ಪಡೆದು ಸೆಮೀಸ್ ಪ್ರವೇಶ (India entered into semifinals) ಮಾಡಿದ ಭಾರತೀಯ ಕ್ರಿಕೆಟ್ ತಂಡದ (Team INDIA) ಸಾಧನೆಯ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ ಆಗಬಹುದು (Raja Mara Column).

ಭಾರತಕ್ಕೆ ಇದೆ ಉಜ್ವಲ ಅವಕಾಶ

ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಮುಂದೆ ಗೆದ್ದು ಗೆಲ್ಲುವ ಟೀಮ್ ಯಾವುದು ಎಂದು ಕೇಳಿದರೂ ಎಲ್ಲರ ಉತ್ತರ ಭಾರತ ಮತ್ತು ಭಾರತವೇ ಆಗಿರುತ್ತದೆ!

ಅದಕ್ಕೆ ಕಾರಣ ಭಾರತ ಲೀಗ್ ಹಂತದ ಪಂದ್ಯಗಳನ್ನು ಅನಾಯಾಸವಾಗಿ ಗೆದ್ದ ರೀತಿ. ಭಾರತಕ್ಕೆ ಈ ಬಾರಿ ವಿಶ್ವಕಪ್‌ನ ಯಾವ ಟೀಮ್ ಕೂಡ ಸವಾಲೇ ಆಗಲಿಲ್ಲ. ಭಾರೀ ದೊಡ್ಡ ಸವಾಲು ಎಂದು ನಿರೀಕ್ಷೆ ಮೂಡಿಸಿದ ದಕ್ಷಿಣ ಆಫ್ರಿಕಾ ಕೋಲ್ಕೊತ್ತಾದಲ್ಲಿ 83ಕ್ಕೆ ಆಲೌಟ್ ಆದದ್ದು, ಶ್ರೀಲಂಕಾ ತಂಡ 55ಕ್ಕೆ ಕುಸಿದದ್ದು ಇಡೀ ಕ್ರಿಕೆಟ್ ಜಗತ್ತನ್ನು ನಿಬ್ಬೆರಗು ಮೂಡಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ರನ್ನಿಗೆ ಮೂರು ವಿಕೆಟ್ ಪತನವಾಗಿ ಕುಸಿದು ಹೋಗಿದ್ದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ಸ್ಮರಣೀಯವಾದ ಜೊತೆಯಾಟದ ಮೂಲಕ ಕಮ್ ಬ್ಯಾಕ್ ಮಾಡಿ ಮ್ಯಾಚ್ ಗೆದ್ದಾಗಲೇ ಭಾರತೀಯ ತಂಡ ಈ ಬಾರಿ ಫೇವರಿಟ್ ಟೀಮ್ ಆಗಿ ಮೂಡಿತ್ತು. ಅಲ್ಲಿಂದ ಭಾರತಕ್ಕೆ ಎಲ್ಲವೂ ಸಲೀಸು.

Team India

ಸ್ವಲ್ಪ ಬೆವರು ಹರಿಸಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯ. ಅದನ್ನೂ ಭಾರತ ಐದು ವಿಕೆಟ್ ಅಂತರದಲ್ಲಿ ಗೆದ್ದಿತ್ತು. ಈ ಬಾರಿಯ ಅಚ್ಚರಿಯ ತಂಡ ಆಗಿದ್ದ ಅಫ್ಘಾನಿಸ್ತಾನ್ ಕೂಡ ಭಾರತಕ್ಕೆ ಎಂಟು ವಿಕೆಟ್ ಅಂತರದಲ್ಲಿ ಶರಣಾಗಿತ್ತು. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಭಾರತ ಪಾಕಿಸ್ತಾನ ಪಂದ್ಯ ಕೂಡ ಏಕಪಕ್ಷೀಯ ಆಗಿ ಮುಗಿಯಿತು. ಭಾರತಕ್ಕೆ ಅಲ್ಲಿ ಕೂಡ ಏಳು ವಿಕೆಟ್ ಜಯ. ಪಾಕಿಸ್ತಾನದ ಸ್ಟಾರ್ ಆಟಗಾರರು ರೋಹಿತ್ ಪಡೆಯ ಮುಂದೆ ಮಂಕಾಗಿ ಹೋದರು.

ಭಾರತದ ಎಲ್ಲ ಆಟಗಾರರೂ ಅದ್ಭುತ ಫಾರ್ಮ್‌ನಲ್ಲಿ ಇದ್ದಾರೆ

ಸಾಮಾನ್ಯವಾಗಿ ಹೊಸ ಪ್ರಯೋಗಗಳಿಗೆ ಹೆಸರಾದ ಕೋಚ್ ರಾಹುಲ್ ದ್ರಾವಿಡ್ ಇಲ್ಲಿ ಹೆಚ್ಚು ಪ್ರಯೋಗ ಮಾಡಲು ಹೋಗಿಲ್ಲ ಎನ್ನುವುದೇ ತಂಡಕ್ಕೆ ಪ್ಲಸ್. ಯಾವಾಗ ಟೀಮ್ ಮ್ಯಾನೇಜಮೆಂಟ್ ಮತ್ತು ಕೋಚ್ ತಂಡದ ಆಟಗಾರರ ನೈತಿಕ ಬೆಂಬಲಕ್ಕೆ ನಿಲ್ಲುತ್ತಾರೆಯೋ ಆಗ ಎಲ್ಲಾ ಆಟಗಾರರೂ ಜೀವ ಬಿಟ್ಟು ಆಡುತ್ತಾರೆ. ಈ ಬಾರಿ ಆದದ್ದೂ ಹಾಗೆಯೇ! ಭಾರತದ ಟಾಪ್ ಫೋರ್ ಬ್ಯಾಟರುಗಳು (ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್) ಭಾರೀ ಫಾರ್ಮ್‌ನಲ್ಲಿ ಇದ್ದಾರೆ ಅನ್ನೋದು ಭಾರತಕ್ಕೆ ಪ್ಲಸ್. ಈ ನಾಲ್ವರಲ್ಲಿ ಒಬ್ಬಿಬ್ಬರು ವಿಫಲರಾದರೂ ಉಳಿದಿಬ್ಬರು ಕೊನೆಯತನಕ ಲಂಗರು ಹೊಡೆದು ನಿಲ್ಲುತ್ತಾರೆ ಅನ್ನುವುದು ಲೀಗ್ ಪಂದ್ಯಗಳಲ್ಲಿ ಸಾಬೀತಾಗಿದೆ. ಆರಂಭಿಕರು ಪವರ್ ಪ್ಲೇಯ ಭರ್ಜರಿ ಲಾಭ ಎತ್ತುತ್ತಿದ್ದಾರೆ ಅನ್ನೋದು ಭಾರತಕ್ಕೆ ಗ್ರೇಟ್ ನ್ಯೂಸ್. ಕೆ.ಎಲ್ ರಾಹುಲ್ ಅವರಿಂದ ಮಿಡಲ್ ಆರ್ಡರ್ ಸ್ಟ್ರಾಂಗ್ ಆಗಿದೆ.

ಸೂರ್ಯಕುಮಾರ್ ಯಾದವ್ ಸ್ವಲ್ಪ ಎಡವಟ್ಟು ಮಾಡದೆ ಆಡಿದರೆ ರನ್ ರೇಟ್ ಭಾರೀ ಹೈಪ್ ಆಗುತ್ತದೆ. ಈ ಬಾರಿ ಅಚ್ಚರಿ ಹುಟ್ಟಿಸಿದ್ದು ರವೀಂದ್ರ ಜಡೇಜಾ ಅವರ ಫಾರ್ಮ್. ಅವರು ಒಬ್ಬ ಯಶಸ್ವೀ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ. ಇದೆಲ್ಲವೂ ಭಾರತಕ್ಕೆ ಬ್ಯಾಟಿಂಗ್ ವಿಭಾಗದ ಪ್ಲಸ್ ಅಂಶಗಳು. ಅದರಲ್ಲಿಯೂ ರೋಹಿತ್ ಶರ್ಮ ಹತ್ತು ಓವರ್ ಆಡಿದರೂ ಎದುರಾಳಿಗಳ ಫೀಲ್ಡಿಂಗ್ ಚದುರಿಸಿಬಿಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ ರ‍್ಯಾಂಕ್ ಒನ್ ಬ್ಯಾಟರ್ ಶುಭಮನ್ ಗಿಲ್ ನಿಂತು ಆಡುತ್ತಿದ್ದಾರೆ.

Virat kohli in World cup

ವಿರಾಟ್ ಕೊಹ್ಲಿ ಲೆಜೆಂಡ್ ಆಟಗಾರ, ಗೆಲುವಿನ ರೂವಾರಿ

2011ರ ವಿಶ್ವಕಪ್ ಭಾರತ ಗೆದ್ದಾಗ ಅದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಆಗಿತ್ತು. ಆಗ ಸಚಿನ್ ಅವರನ್ನು ತನ್ನ ಬಲಿಷ್ಠ ಭುಜಗಳ ಮೇಲೆ ಕೂರಿಸಿ ಇಡೀ ಸ್ಟೇಡಿಯಂ ಸುತ್ತು ಬಂದವರು ವಿರಾಟ್ ಕೊಹ್ಲಿ. ಆ ದೃಶ್ಯವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ! ಈಗ ಅದೇ ಕೊಹ್ಲಿ ಸಚಿನ್ ಅವರ ಉತ್ತರಾಧಿಕಾರಿ ಆಗಿ ಕಂಡುಬರುತ್ತಿದ್ದಾರೆ. ಈ ಬಾರಿ ಕೊಹ್ಲಿ ಸಾಕಷ್ಟು ಮಾಗಿದ್ದಾರೆ. ಸನ್ನಿವೇಶಕ್ಕೆ ಸರಿಯಾಗಿ ಆಡುವುದನ್ನು ಕಲಿತಿದ್ದಾರೆ.

ಅವಸರದಲ್ಲಿ ವಿಕೆಟ್ ಚೆಲ್ಲಿ ಬರುತ್ತಿದ್ದ ವಿರಾಟ್ ಈ ಬಾರಿಯ ಟೂರ್ನಿಯಲ್ಲಿ ಕಾಣಲೇ ಇಲ್ಲ. ಈ ಬಾರಿಯ ಲೀಗ್ ಪಂದ್ಯಗಳಲ್ಲಿ ಪ್ರತೀ ಒಂದು ಪಂದ್ಯದಲ್ಲಿಯೂ (ಒಂದೆರಡು ಪಂದ್ಯ ಹೊರತುಪಡಿಸಿ) ವಿರಾಟ್ ಕೋಹ್ಲಿ ತಮ್ಮ ವಿರಾಟ್ ರೂಪವನ್ನು ತೋರಿಸಿದ್ದಾರೆ. ಟೂರ್ನಿಯ ಮೂರನೇ ಅತೀ ಹೆಚ್ಚು ಸ್ಕೋರರ್ ಆಗಿದ್ದಾರೆ. ಚೇಸ್ ಮಾಸ್ಟರ್ ಆಗಿ ಶೈನ್ ಆಗಿದ್ದಾರೆ. ಆಕ್ರಮಣಕಾರಿ ಆಗಿ ಗ್ರೌಂಡಿನಲ್ಲಿ ಎಲ್ಲೆಡೆ ಹಾರಾಡುತ್ತಿದ್ದ ಕೊಹ್ಲಿ ಈ ಬಾರಿ ತಣ್ಣಗಿನ ಜ್ವಾಲಾಮುಖಿ ಆಗಿದ್ದಾರೆ. ಈ ವಿಶ್ವಕಪ್ ಕೂಟದಲ್ಲಿಯೇ ವಿರಾಟ್ ಕೊಹ್ಲಿ ಸಚಿನ್ ಅವರ ಶತಕಗಳ ದಾಖಲೆ ಮುರಿಯುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ವಿರಾಟ್ ಅವರನ್ನು ಖಂಡಿತ ನಿರಾಸೆ ಮಾಡುವುದಿಲ್ಲ ಅನ್ನೋದು ನಮ್ಮ ಭರವಸೆ. ವಿರಾಟ್ ಕೊಹ್ಲಿ ಮುಂದೆ ಬರಲಿರುವ ಭಾರತೀಯ ಕ್ರಿಕೆಟ್ ಆಟಗಾರರಿಗೆ ಒಬ್ಬ ಅದ್ಭುತ ಐಕಾನ್ ಆಟಗಾರ ಆಗಿ ನಿಲ್ಲುವುದು ಗ್ಯಾರಂಟಿ.

ಭಾರೀ ಸ್ಟ್ರಾಂಗ್ ಆದ ಬೌಲಿಂಗ್ ಬ್ಯಾಟರಿ!

ಈ ಹಿಂದಿನ ಯಾವ ವಿಶ್ವಮಟ್ಟದ ಟೂರ್ನಿಯಲ್ಲಿಯೂ ಭಾರತದ ಬೌಲಿಂಗ್ ಬ್ಯಾಟರಿಯು ಇಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ ಅನ್ನೋದು ಎಲ್ಲರ ಅಭಿಪ್ರಾಯ. ಬುಮ್ರಾ ಸರ್ಜರಿ ಮುಗಿಸಿಕೊಂಡು ಬಂದ ನಂತರ ಎದುರಾಳಿ ಬ್ಯಾಟರಗಳಿಗೆ ಸಿಡಿಲೇ ಆಗಿದ್ದಾರೆ. ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಹಂತದಲ್ಲಿ ಸುಲಭವಾಗಿ ವಿಕೆಟ್ ಪಡೆಯುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡ ಮೊಹಮ್ಮದ್ ಶಮಿ ಈ ಬಾರಿ ಭಾರತದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಅವರ ಸ್ವಿಂಗ್ ಎಸೆತಗಳಿಗೆ ಈ ಬಾರಿ ಯಾವ ಆಟಗಾರರೂ ಉತ್ತರ ನೀಡಿಲ್ಲ! ಇದರಿಂದಾಗಿ ಭಾರತ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಗೈರು ಹಾಜರಿ ಕಾಡಲಿಲ್ಲ!

Team india Bowlers

ಇನ್ನು ಇಬ್ಬರು ಸ್ಪಿನ್ ಬೌಲರ್‌ಗಳು ತಮ್ಮ ಅತ್ಯುತ್ತಮ ಲಯದಲ್ಲಿ ಇದ್ದಾರೆ. ರವೀಂದ್ರ ಜಡೇಜಾ ಹೆಚ್ಚು ಕಡಿಮೆ ಎಲ್ಲಾ ಪಂದ್ಯಗಳಲ್ಲಿಯು ವಿಕೆಟ್ ಗೊಂಚಲು ಕಿತ್ತಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಇನ್ನೂ ಎದುರಾಳಿ ಬ್ಯಾಟರ್‌ಗಳಿಗೆ ಸಸ್ಪೆನ್ಸ್ ಆಗಿದ್ದಾರೆ. ಈ ಐದೇ ಬೌಲರ್‌ಗಳು ಮಿಂಚುತ್ತಿರುವ ಕಾರಣ ಪಾರ್ಟ್ ಟೈಮ್ ಬೌಲರ್ ಅಗತ್ಯವೇ ಭಾರತಕ್ಕೆ ಬೀಳಲಿಲ್ಲ. ಸೆಮೀಸ್ ಹೊತ್ತಿಗೆ ರವಿಚಂದ್ರನ್ ಅಶ್ವಿನ್ ಅಥವಾ ಪ್ರಸಿದ್ಧ ಕೃಷ್ಣ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಅಶ್ವಿನ್ ಬಂದರೆ ಭಾರತದ ಬೌಲಿಂಗ್ ಇನ್ನಷ್ಟು ಘಾತಕ ಆಗುವ ಸಾಧ್ಯತೆ ಇದೆ.

Team india Bowlers

ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಚೆನ್ನಾಗಿ ಮಾಡುವ ಕಾರಣ ಭಾರತೀಯ ಫೀಲ್ಡಿಂಗ್ ಈ ಬಾರಿ ಅತ್ಯುತ್ತಮ ಆಗಿಯೇ ಇದೆ. ರೋಹಿತ್ ಶರ್ಮಾ ಅವರ ನಾಯಕತ್ವ, ಅವರ ಬೌಲಿಂಗ್ ಬದಲಾವಣೆ, ಫೀಲ್ಡ್ ಸೆಟ್ ಭಾರತವನ್ನು ಸಲೀಸಾಗಿ ಗೆಲ್ಲಿಸುತ್ತಿದೆ. ಭಾರತ ಮೊದಲು ಬ್ಯಾಟ್ ಮಾಡಿ ಅಥವಾ ಚೇಸ್ ಮಾಡಿ ಎರಡೂ ವಿಭಾಗಗಳಲ್ಲಿ ಗೆದ್ದಿದೆ ಅನ್ನೋದು ಆಡೆಡ್ ಅಡ್ವಾಂಟೇಜ್! ಅದೃಷ್ಟವೂ ಭಾರತದ ಕಡೆಗಿದೆ ಅನ್ನೋದು ಮೇಲ್ನೋಟಕ್ಕೆ ಕಾಣುತ್ತದೆ.

ಇದನ್ನೂ ಓದಿ : Raja Marga Column : ಜೀವನದಲ್ಲಿ ಹೇಗೆ ಇರಬೇಕು, ಹೇಗೆ ಇರಬಾರದು? ಇಲ್ಲಿದೆ 30 TIPS

ಭರತವಾಕ್ಯ

1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ಪಡೆ ಮತ್ತು 2011ರಲ್ಲಿ ಗೆದ್ದ ಧೋನಿ ಪಡೆಗಿಂತ ಈ ಬಾರಿಯ ಟೀಮ್ ಇಂಡಿಯಾ ತುಂಬಾ ಬಲಿಷ್ಠ ಆಗಿದೆ. ತಂಡದಲ್ಲಿ ಮೆಚುರಿಟಿ ಎದ್ದು ಕಾಣುತ್ತಿದೆ. ಟೀಮ್ ಸ್ಪಿರಿಟ್ ತುಂಬಾ ಸ್ಟ್ರಾಂಗ್ ಇದೆ.

Team INDIA Celebration after winning in ICC World cup 2023
2011ರ ವಿಶ್ವಕಪ್‌ ಗೆಲುವು ಈ ಬಾರಿ ಮರುಕಳಿಸಲಿದೆ….

ಅದರಲ್ಲಿಯೂ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ವಿಶ್ವಕಪ್ ಎನ್ನುವ ಭಾವನಾತ್ಮಕ ಅಂಶವೇ ಭಾರತವನ್ನು ಗೆಲುವಿನ ಕಡೆಗೆ ಮುನ್ನಡೆಸುತ್ತದೆ. ಲೀಗ್ ಪಂದ್ಯಗಳಲ್ಲಿ ಭಾರತವು ಎಲ್ಲಾ ತಂಡಗಳನ್ನು ಅಧಿಕಾರಯುತವಾಗಿ ಸೋಲಿಸಿರುವ ಕಾರಣ ಅವುಗಳು ಮುಂದೆ ಭಾರತದ ವಿರುದ್ಧ ಆಡುವಾಗ ಭಯದಲ್ಲಿಯೇ ಆಡುತ್ತವೆ ಅನ್ನೋದು ಕಾಮನ್ ಸೆನ್ಸ್. ಇದು ಕೂಡ ಭಾರತಕ್ಕೆ ಪ್ಲಸ್. ಗೆದ್ದು ಬಾ ಭಾರತ. ಆಲ್ ದ ಬೆಸ್ಟ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಧವಳ ಧಾರಿಣಿ ಅಂಕಣ (Dhavall Dharini): ಗೌತಮ ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು. ಇಂದು ಬುದ್ಧ ಪೂರ್ಣಿಮಾ (Buddha Purnima) ಹಿನ್ನೆಲೆಯಲ್ಲಿ ಆತನ ಚಿಂತನೆಗಳ ಬಗ್ಗೆ ಒಂದು ಅವಲೋಕನ.

VISTARANEWS.COM


on

dhavala dharini column buddha ಧವಳ ಧಾರಿಣಿ
Koo
dhavala dharini by Narayana yaji

­ಧವಳ ಧಾರಿಣಿ ಅಂಕಣ: ಭಾರತದ ಇತಿಹಾಸದಲ್ಲಿ ಗೌತಮ ಬುದ್ಧ (Gautama Buddha) ಮಹತ್ವದ ಸ್ಥಾನ ಪಡೆಯುವುದು ಆತ ಹೊಸ ಧರ್ಮವನ್ನು ಸ್ಥಾಪಿಸಿದ್ದಾನೆ ಎನ್ನುವುದಕ್ಕೆ ಅಲ್ಲ. ಬೌದ್ಧ ಧರ್ಮವನ್ನು (buddhism) ನೇರವಾಗಿ ಬುದ್ಧನೇ ಸ್ಥಾಪಿಸಲಿಲ್ಲ. ಆತನ ನಿರ್ವಾಣದ ನಂತರದ ಇನ್ನೂರು ವರ್ಷಗಳ ನಂತರ ಆತನ ಶಿಷ್ಯರು ಒಂದೆಡೆ ಸೇರಿ ಬುಧ್ದನ ತತ್ತ್ವಕ್ಕೆ ಒಂದು ಧಾರ್ಮಿಕ ಸ್ವರೂಪವನ್ನು ಕೊಟ್ಟರು. ಶಾಕ್ಯಮುನಿ ಗೌತಮನಿಗೆ ಲೋಕದ ಜನತೆ ಬದುಕುತ್ತಿರುವ ವಿಧಾನದಲ್ಲಿ ಬದಲಾವಣೆ ತರಬೇಕಾಗಿತ್ತು. ವರ್ಣವ್ಯವಸ್ಥೆಯ ಮೂಲಕ ಅಸ್ತಿತ್ವಕ್ಕೆ ಬಂದ ಬ್ರಾಹ್ಮಣಿಕೆಯೆನ್ನುವುದು ಅದಾಗ ಜಾತಿಯಾಗಿ ಬದಲಾವಣೆಯಾಗಿತ್ತು. ಆದರೂ ಅದು ಅಷ್ಟು ಗಟ್ಟಿಯಾಗಿ ಅನುಷ್ಟಾನಕ್ಕೆ ಬಂದಿರಲಿಲ್ಲ. ಬ್ರಾಹ್ಮಣರ ಪಾರಮ್ಯವೆನ್ನುವುದು ಧಾರ್ಮಿಕ ರಂಗದಲ್ಲಿ ಇತ್ತು. ಆತನ ಜನನದ ಕಾಲಘಟ್ಟವಾದ ಸುಮಾರು ಕ್ರಿ. ಪೂ. 623 ಶತಮಾನದಲ್ಲಿ ಭಾರತ ಧಾರ್ಮಿಕವಾಗಿ ಹಲವು ಪಲ್ಲಟಗಳನ್ನು ಅನುಭವಿಸಿತ್ತು. ಸನಾತನ ಧರ್ಮದ ಆಚರಣೆಯಲ್ಲಿ ಸಮಗ್ರವಾದ ದಿಕ್ಕುಗಳನ್ನು ತೋರಿಸುವವರು ಇರಲಿಲ್ಲ. ಧಾರ್ಮಿಕ ನಾಯಕತ್ವವೆನ್ನುವದು ತತ್ವಜ್ಞಾನಿಗಳು ತಮಗೆ ತೋಚಿದ ದಿಕ್ಕಿನಲ್ಲಿ ಅರ್ಥೈಸಿಕೊಂಡು ಅದನ್ನೇ ಬೋಧಿಸುತ್ತಿದ್ದರು. ಈ ಕಾಲಘಟ್ಟದಲ್ಲಿಯೇ ತಂತ್ರಶಾಸ್ತ್ರ, ಅಘೋರಿಗಳು, ಕಾಪಾಲಿಕರು ಹೀಗೆ ಸಾಧನೆಗಳಿಗೆ ಸಾತ್ವಿಕಮಾರ್ಗಗಳ ಜೊತೆಗೆ ಹಟಯೋಗವೂ ಸೇರಿಹೋಗಿತ್ತು. ರಾಜರುಗಳು ಯಾವ ಹಾದಿಯನ್ನು ಹಿಡಿಯುತ್ತಿದ್ದಾರೋ ಅದೇ ಹಾದಿಯನ್ನು ಜನಸಾಮಾನ್ಯರು ನಡೆದುಕೊಳ್ಳುತ್ತಿದ್ದರು.

ಇಂತಹ ಹೊತ್ತಿನಲ್ಲಿ ಪ್ರವೇಶ ಮಾಡಿದ ಬುದ್ಧನ ಉಪದೇಶಗಳು ಸನಾತನ ಧರ್ಮಕ್ಕೇ ಹೊಸ ವ್ಯಾಖ್ಯಾನವನ್ನು ಕೊಟ್ಟವು. ಹಾಗಂತ ಆತ ಭಾರತೀಯ ದರ್ಶನ ಶಾಸ್ತ್ರಕ್ಕೆ ವಿಲೋಮವಾದದ್ದನ್ನು ತನ್ನು ಬೋಧನೆಯಲ್ಲಿ ಹೇಳಲಿಲ್ಲ. ಬುದ್ಧ ಅರ್ಥವಾಗಬೇಕಾದರೆ ಭಾರತೀಯ ತತ್ತ್ವಶಾಸ್ತ್ರ ಅರ್ಥವಾಗಬೇಕು. ಸ್ವರ್ಗಕಾಮಕ್ಕಾಗಿ ಯಜ್ಞ ಯಾಗಾದಿಗಳು ಎಂದು ಸಾರುತ್ತಿದ ಪುರಾಣಗಳ ನಡುವೆ ವೇದಾಂತದ ಪರಮ ಸತ್ಯವನ್ನು ಆತನ ಉಪದೇಶಗಳಲ್ಲಿ ಗಮನಿಸಬಹುದಾಗಿದೆ. “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತಂದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರಿದ ವಿಶಾಲಹೃದಯಿಯಾಗಿ ಬುದ್ದ ಕಾಣಿಸಿಸಿಕೊಳ್ಳುತ್ತಾನೆ ಎಂದು ವಿವೇಕಾನಂದರು ಹೇಳುತ್ತಾರೆ. “ಕಿಸಾಗೌತಮಿಗೆ ಆಕೆಯ ಮಗನ ಸಾವಿನ ನೋವನ್ನೂ ಮರೆಯಿಸಿ ಭವಚಕ್ರಗಳ ಬಂಧನದ ಜಗತ್ತಿನ ಮಾಯೆಯನ್ನು ಹೋಗಲಾಡಿಸಿದ ಬುದ್ಧ ಬಿಡಿಸಿದಷ್ಟೂ ಬಿಡಿಸಲಾಗದ ಒಗಟು”. ಸನಾತನ ಧರ್ಮದ ಸಾರವೇ ಬುದ್ಧನ ಉಪದೇಶವೆನ್ನಬಹುದಾಗಿದೆ. ಅದಕ್ಕೇ ಸ್ವಾಮಿ ವಿವೇಕಾನಂದರು ತಮ್ಮ ಕೃತಿಶ್ರೇಣಿಯಲ್ಲಿ “ಭಾರತದಲ್ಲಿ ಬೌದ್ಧಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದೆ. ಅದು ನವಯುಗದ ಹಿಂದೂ ಧರ್ಮವಾಯಿತು” ಎನ್ನುತ್ತಾರೆ.

ಜೀವನದ ನಶ್ವರತೆಯೆನ್ನುವುದು ಬುದ್ಧನ ಬದುಕಿನಲ್ಲಿ ಬಂದ ಮೊದಲ ತಿರುವು. ಪ್ರಸಿದ್ಧವಾದ ಆತನ ವಾಕ್ಯ “ಆಸೆಯೇ ದುಃಖಕ್ಕೆ ಕಾರಣ” ಎನ್ನುವುದು ನೋಡಲು ಸರಳವಾಗಿ ಕಂಡರೂ ಈ ಸತ್ಯವನ್ನು ಮನಗಾಣುವಲ್ಲಿ ಬುದ್ಧ ಸುಮಾರು ಆರುವರ್ಷಗಳ ಕಾಲ ಹುಡುಕಾಡಿದ್ದಾನೆ. ತನ್ನ ಕುಲಗುರು ಅಸಿತದೇವಲನಿಂದ ಹಿಡಿದು ಆಲಾರಾ ಕಲಮ್, ಉದ್ಧತ ರಾಮಪುತ್ತ ಮುಂತಾದ ಅನೇಕರ ಹತ್ತಿರ ಈ ವಿಷಯವನ್ನು ಚರ್ಚಿಸಿದ್ದಾನೆ. ಹಿಮಾಲಯದ ತಪ್ಪಲಿನ ಕೆಲ ಸನ್ಯಾಸಿಗಳು ಪ್ರಾಪಂಚಿಕ ಸುಖ ಮತ್ತು ದುಃಖಗಳ ಕಾರಣವನ್ನು ಅರಿತು ವೇದೋಪನಿಷತ್ತುಗಳ ನಿಜವಾದ ಅರ್ಥಗಳನ್ನು ತಿಳಿದು ಅದನ್ನೇ ಬೊಧಿಸುತ್ತಿದ್ದರು. ಅವರೆಲ್ಲರೂ ಈತನಿಗೆ ತಮ್ಮಲ್ಲಿದ ವಿದ್ಯೆಯನ್ನು ಧಾರೆ ಎರೆದರೂ ಅವೆಲ್ಲವೂ ಬದುಕಿನ ಪರಮ ಸತ್ಯವನ್ನು ಸಾಧಿಸುವತ್ತ ಪ್ರಯೋಜನಕ್ಕೆ ಬಾರದವುಗಳು ಎನ್ನುವುದು ಅರಿವಾಯಿತು. ಉದ್ಧಕ ರಾಪಪುತ್ತನ ಹತ್ತಿರ ಸಮಾಧಿಗೆ ಹೋಗುವ ತಂತ್ರವನ್ನು ಕೇವಲ ಹದಿನೈದನೇ ದಿನಗಳಲ್ಲಿ ಕಲಿತ. ಆಗ ಅವನಿಗೆ ಅರಿವಾಗಿದ್ದು ಎಚ್ಚರಕ್ಕೂ ಮತ್ತು ಸಮಾಧಿಗೂ ಇರುವ ಸ್ಥಿತಿಯೆಂದರೆ ಗ್ರಹಿಕೆ ಮತ್ತು ಗ್ರಹಿಕೆಯಲ್ಲದ ಸ್ಥಿತಿ ಎನ್ನುವುದು. ಆದರೆ ಎಚ್ಚರಾದ ಮೇಲೆ ಮತ್ತೆ ಈ ಲೋಕದ ಅವಸ್ಥೆಗಳಲ್ಲೇ ಇರುತ್ತೇವೆ ಎನ್ನುವುದು ಅರಿತಾಗ ಸಮಾಧಿಯೆನ್ನುವುದು ಸ್ವಪ್ನ ಅಥವಾ ಸುಷುಪ್ತಿಯ ಅವಸ್ಥೆಗಳಲ್ಲಿರುವ ಸ್ಥಿತಿಯೇ ಹೊರತೂ ಬೇರೆನೂ ಅಲ್ಲವೆಂದು ಅರಿವಿಗೆ ಬಂತು. ಪರಿಪೂರ್ಣ ಜ್ಞಾನವೆನ್ನುವುದನ್ನು ಸಾಧಿಸಿದ ವ್ಯಕ್ತಿಗೆ ಮತ್ತೆ ಲೌಕಿಕ ಬಾಧಿಸಬಾರದು. ಹಾಗಾಗಿ ಯಾವುದು ಸ್ಥಾಯಿ ಸ್ವರೂಪವಲ್ಲವೋ ಅವೆಲ್ಲವೂ ಅವಿದ್ಯೆ ಎನ್ನುವ ತೀರ್ಮಾನಕ್ಕೆ ಬಂದವ ಗಯಾಕ್ಕೆ ಬಂದು ಅಲ್ಲಿನ ಸ್ಮಶಾನದಲ್ಲಿರುವ ಬೋಧಿವೃಕ್ಷದ ಕೆಳಗೆ ಧ್ಯಾನಮಾಡಲು ತೊಡಗಿದ. ಜ್ಞಾನವೆನ್ನುವದು ಪ್ರಾಪಂಚಿಕ ವಸ್ತುಗಳಿಂದ ವಿಮುಖನಾಗುವದಲ್ಲ, ನಮ್ಮ ಉಸಿರು, ಹಕ್ಕಿಯ ಹಾಡು, ಎಲೆ, ಸೂರ್ಯನ ಕಿರಣ ಇವೆಲ್ಲವೂ ಧ್ಯಾನಕ್ಕೆ ಸಾಧನವಾಗಬಹುದೆಂದು ಆತನಿಗೆ ಅನಿಸಿತು. ಒಂದು ಧೂಳಿನ ಕಣದಿಂದಲೇ ಸಮಗ್ರವಾಗಿ ಬ್ರಹ್ಮಾಂಡದ ಲಕ್ಷಣವನ್ನು ಅರಿಯಬಹುದೆನ್ನುವ ವಿಷಯ ಹೊಳೆಯಿತು. ಜ್ಞಾನೋದಯವೆನ್ನುವದು ವಾಸ್ತವ ಪ್ರಪಂಚದಲ್ಲಿದೆಯೇ ಹೊರತು ಕಾಣದ ಆತ್ಮ ಅಥವಾ ಬ್ರಹ್ಮದ ವಿಷಯದಲ್ಲಿ ಇಲ್ಲ. ಆತ್ಮ ಪ್ರತ್ಯೇಕವೆನ್ನುವ ಭಾವನೆಯನ್ನು ಮೀರಿ ಪ್ರಕೃತಿಯ ಪ್ರತೀ ವಸ್ತುವಿನಲ್ಲಿ ಸೌಂದರ್ಯವಿದೆಯೆನ್ನುವದನ್ನು ಗೌತಮನ ಅರಿತುಕೊಂಡ. ಪ್ರಪಂಚವೇ ಪರಸ್ಪರ ಅವಲಂಬಿತ ಮತ್ತು ಸ್ವಯಂ ಸ್ವಭಾವವುಳ್ಳ ಸತ್ಯವೆನ್ನುವ ಸೂತ್ರ ಆತನಿಗೆ ಅರಿವಾಯಿತು. ಜ್ಞಾನವೆನ್ನುವದು ಒಳಗಣ್ಣು ಎನ್ನುವ ಭ್ರಮೆಗಿಂತ ಹೊರಗಣ್ಣಿಗೆ ಕಾಣುವ ಪ್ರಪಂಚದ ಸಮಸ್ಥವಸ್ತುವಿನಲ್ಲಿ ಇದೆ ಎನ್ನುವದು ಸ್ಪಷ್ಟವಾಯಿತು.

buddha Purnima 2023

ಬುದ್ಧನ ಬೋಧನೆಗಳು ಮೊದಲನೆಯದಾಗಿ ಜೀವನವು ದುಃಖದಿಂದ ಕೂಡಿದೆ. ಜನನ, ಮರಣ, ರೋಗ, ವೃದ್ಧಾಪ್ಯ, ವಿರಹ, ಮನಸ್ಸು ಮತ್ತು ದೇಹಗಳ ವ್ಯವಸ್ಥೆಯೇ ದುಃಖಮಯ, ಎರಡನೆಯದಾಗಿ ಈ ದುಃಖಕ್ಕೆ ಕಾರಣವಿದೆ. ಮನುಷ್ಯ ತನ್ನ ಮೂಲರೂಪವನ್ನು ಅರಿಯದಿರುವದು, ಈ ಅಜ್ಞಾನಗಳಿಂದಾಗಿಯೇ ಆತ ದೇಹ-ಮನಸ್ಸುಗಳಿಗೆ ಅಂಟಿಕೊಳ್ಳುತ್ತಾನೆ. ಈ ಕಾರ್ಯಕಾರಣ ಸಂಬಂಧದಿಂದಾಗಿ ಕರ್ಮಚಕ್ರಗಳ ಮೂಲಕ ಪುನರ್ಜನದ ಭವಚಕ್ರಗಳಿಗೆ ಸಿಕ್ಕುಬೀಳುತ್ತಾನೆ, ಈ ಯಾತನೆಗಳಿಗೆ ಕಾರಣ ಆಯಾ ವ್ಯಕ್ತಿಯೇ ಹೊರತೂ ವಿಧಿ, ಆಕಸ್ಮಿಕ ಇತ್ಯಾದಿಗಳೆಲ್ಲ ಸುಳ್ಳು. ಮೂರನೆಯದು ಈ ಭವಚಕ್ರಗಳಿಂದ ಬಿಡುಗಡೆ. ಬುದ್ಧ ಇದು ಅವಿದ್ಯೆ, ಅಜ್ಞಾನಾವಸ್ಥೆಯೆನುತ್ತಾನೆ. ಲೋಕದಲ್ಲಿನ ಎಲ್ಲಾ ಅವಸ್ಥೆಗಳಿಗೂ ಇದೇ ಕಾರಣ, ಇದೇ “ಪ್ರತ್ಯೀತ್ಯಸಮುತ್ಪಾದ” ಸಿದ್ಧಾಂತ. ನಾಲ್ಕನೆಯದೇ ಈ ಭವಚಕ್ರಗಳಿಂದ ಬಿಡುಗಡೆಯ ಮಾರ್ಗವೆಂದರೆ ಈ ದುಃಖದಿಂದ ಬಿಡುಗಡೆ. ಅದೇ ಅವಿಧ್ಯಾ ಜಿವನದಿಂದ ಬಿಡುಗಡೆ. ಇದನ್ನು ಸಾಧಿಸಲು ಅಷ್ಟಾಂಗಿಕ ಮಾರ್ಗಗಳಾದ ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್ಕು, ಸಮ್ಯಕ್ ಕ್ರಿಯಾ ಸಮ್ಯಕ್ ಆಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ ಸಮಾಧಿಯ ಮೂಲಕ ಸಾಧಿಸಬಹುದು. ಈ ಅಷ್ಟಾಂಗ ಮಾರ್ಗವೆಂದರೆ ನೈತಿಕತೆ, ಸಾಧನೆ, ಸಾಕ್ಷಾತ್ಕಾರ, ಸ್ವಾರ್ಥವನ್ನು ತ್ಯಜಿಸುವದು, ಬೂತದಯೆಗಳು. ಬುದ್ದ ಇದನ್ನು ಸ್ವಯಂ ತನ್ನ ಕೊನೆಯಕ್ಷಣದವರೆಗೂತಾನೇ ಆಚರಿಸಿದ್ದನು. ಕುಂಡ ಕಮ್ಮಾರಪುತ್ತ ನೀಡಿದ ವಿಷಯುಕ್ತ ಆಹಾರದಿಂದ ಸಾಯುವ ಸಂದರ್ಭದಲ್ಲಿಯೂ ಅವನನ್ನು ಕ್ಷಮಿಸಿದನು. ಪ್ರಪಂಚದಲ್ಲಿ ಕಾಣುವ ವಸ್ತುಗಳನ್ನು ಅವು ಇರುವಂತೆಯೇ ತಿಳಿದವ ಬುದ್ಧ. ಹಾಗಂತ ಇದು ಚಾರ್ವಾಕ ಮತಕ್ಕೆ ಹತ್ತಿರವಾದಂತೆ ಕಂಡರೂ ಆತ ನಾಸ್ತಿಕವಾದಿಯಲ್ಲ. ಬುದ್ಧ ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ, ಅದು ಅದ್ವೈತವನ್ನು ಹೋಲುತ್ತದೆ. ಬೌದ್ಧರು ಆತ್ಮದ ಅಸ್ತಿತ್ವವನ್ನು ಒಪ್ಪುವದಿಲ್ಲ ಎನ್ನುವ ಸಾಮಾನ್ಯ ನಂಬಿಕೆ. ಆದರೆ ಇದಕ್ಕೆ ಆಧಾರವಿಲ್ಲ.

ಬೌದ್ಧ ದರ್ಶನಗಳಲ್ಲಿ ಬುದ್ಧತ್ತ್ವಕ್ಕೆ ಏರುವುದು ಅಂದರೆ ಅದು ತುರೀಯಾವಸ್ಥೆ. ಸಾಮಾನ್ಯ ವ್ಯಕ್ತಿ ಬುದ್ಧನಾಗಲಿಕ್ಕೆ ಅನೇಕ ಜನ್ಮಗಳನ್ನು ಪಡೆಯಬೇಕಾಗುತ್ತದೆ. ಅದರಲ್ಲಿಯೂ ಕೊನೆಯ ಮೂರು ಹಂತಗಳಾದ ಅರಿಹಂತ, ಪಚ್ಛೇಕ ಬುದ್ಧತ್ವವನ್ನು ಸಾಧಿಸಿದ ಮೇಲೆ ಗೌತಮ ಬುದ್ಧ ತಲುಪಿದ ಸ್ಥಿತಿ ಸಮ ಸಂಬುದ್ಧತ್ವದ ಸ್ಥಿತಿ. ಜಾತಕದ ಕತೆಗಳಲ್ಲಿ ಬುದ್ಧನ ಹಿಂದಿನ ಜನ್ಮದ ವಿವರಗಳು ಕಥೆಯ ರೂಪದಲ್ಲಿ ಬರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮದ ಅಸ್ತಿತ್ವವನ್ನು ಬುದ್ಧ ಒಪ್ಪುವದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ. ವಚ್ಚಗೋತ್ತ ಎನ್ನುವ ಬ್ರಾಹ್ಮಣ ಇದೇ ವಿಷಯದಲ್ಲಿ ಬುದ್ಧನ ಹತ್ತಿರ ಕೇಳುವ ಪ್ರಶ್ನೆ ತೆವಿಜ್ಜ ಸುತ್ತದಲ್ಲಿ ಬರುತ್ತದೆ. ಆತ ಬುದ್ಧನಲ್ಲಿ ಕೇಳುವ ಆತ್ಮವಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆಗೆ ಆತ ಮೌನವಾಗಿಬಿಡುತ್ತಾನೆ. ಆತನ ಪ್ರಕಾರ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

ಇದರ ಅರ್ಥವಿಷ್ಟೇ ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ” ಎಂದು ಉಪದೇಶವನ್ನು ಮಾಡಿದ್ದ. ಬದುಕಿನಲ್ಲಿ ಕಾಣುವ ವಸ್ತುಗಳಲ್ಲಿಯೇ ಆನಂದವಿದೆ ಎನ್ನುವದರ ಮೂಲಕವೇ ಆತನಿಗೆ ಜ್ಞಾನೋದಯವಾದದ್ದರಿಂದ ಆತ “ತಿವಿಜ್ಜಸುತ್ತ”ದಲ್ಲಿ ಹೇಳುವಂತೆ. “ಹಳೆಯ ಓಲೆಗರಿಯಲ್ಲಿ ಹೇಳಿದೆ ಎನ್ನುವ ಮಾತ್ರಕ್ಕೆ ನಂಬಬಾರದು. ಎಲ್ಲವನ್ನೂ ವಿಚಾರಣೆ ಮಾಡಿ ವಿಶ್ಲೇಷಿಸಿ ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದಾದರೆ ಅದರಂತೆ ನೀವೂ ಬಾಳಿ” ಎಂದಿದ್ದಾನೆ. ಬುದ್ಧನ ಪ್ರಕಾರ ನಿರ್ವಾಣವೆಂದರೆ ಅದು ‘ಸಂವೇದನೆ ಮತ್ತು ಭಾವನೆಗಳು ನಿಂತುಹೋಗುವ ಕ್ರಿಯೆ’. ಇದು ಜ್ಞಾತ್ರಾಜ್ಞೇಯದ ಸಂಬಂಧದ ಆಭಾವ. ಈ ನಿರ್ವಾಣಕ್ರಿಯೆಯನ್ನು ಮಾಂಡುಕ್ಯೋಪನಿಷತ್ತಿನ ತುರೀಯಾವಸ್ಥೆಗೆ ಹೋಲಿಸಬಹುದು. (ನಾಂತಃಪ್ರಜ್ಞಂ ನ ಬಹಿಃಪ್ರಜ್ಞಂ..ಮಾಂಡೂಕ್ಯ-7) ಇವೆರಡರಲ್ಲೂ ಭಾವನಾತ್ಮಕವಾದ ವಿಷಯಗಳಿಲ್ಲ. ಅವು ವಿಷಯ, ವಿಷಯಿ ಸಂಬಂಧ, ದೇಶ ಕಾಲ ನಿಮಿತ್ತ ಇವುಗಳಿಗೆ ಅತೀತವಾಗಿದೆ. ಇವೆರಡರಲ್ಲೂ ಚೇತನಾವಿಷಯಗಳಿಲ್ಲ; ಚೈತನ್ಯಸ್ವರೂಪವಿದೆ. ಪಾಲಿ ಭಾಷೆಯಲ್ಲಿರುವ ತೇರವಾದ ಬೌದ್ಧಗ್ರಂಥ ‘ಉದಾನ”ದಲ್ಲಿ “ಅಜವೂ ಅನಾದಿಯೂ ಅಕೃತವೂ ಅಸಂಯುಕ್ತವೂ ಆದುದೊಂದಿದೆ. ಎಲೈ ಭಿಕ್ಕು, ಅದಿಲ್ಲವಾದರೆ ಹುಟ್ಟುಳ್ಳದ್ದೂ, ಸಾದಿಯೂ ಕೃತವೂ ಸಂಯುಕ್ತವೂ ಆದ ಜಗತ್ತಿನಿಂದ ಮುಕ್ತಿಯೇ ಇರುವದಿಲ್ಲ” (ಉದಾನ 8-3) ಎಂದಿದ್ದಾನೆ. ಆತ ನಿರ್ವಿಕಾರವೂ ಶಾಶ್ವತವೂ ಆದ ಶಾಶ್ವತ ಸತ್ಯವನ್ನು ಒಪ್ಪುತ್ತಾನೆಂಬುದು ಇದರಿಂದ ಸ್ಪಷ್ಟ. ಇದಲ್ಲದಿದ್ದರೆ ಅವನ ನಿರ್ವಾಣವಾದವೇ ಬಿದ್ದುಹೋಗುತ್ತದೆ. ಆತ ಹೇಳಿದ್ದು “ಆತ್ಮ ಮತ್ತು ಬ್ರಹ್ಮ ವಿಷಯಕವಾದ ವಿಚಾರಗಳಿಂದ ಯಾವ ಪ್ರಯೋಜನವೂ ಇಲ್ಲ, ಒಳ್ಳೆಯದನ್ನು ಮಾಡಿರಿ; ಒಳ್ಳೆಯವರಾಗಿರಿ, ಇದೇ ನಿಮ್ಮನ್ನು ನಿರ್ವಾಣಕ್ಕೆ ಕೊಂಡೊಯ್ಯುತ್ತದೆ”. ಬುದ್ಧನೇ ನೇರವಾಗಿ ಬೋಧಿಸಿದ ತತ್ತ್ವಗಳನ್ನು ಗಮನಿಸಿದಾಗ ಆತನ ತತ್ತ್ವಗಳು ಭಾರತೀಯ ದರ್ಶನ ಶಾಸ್ತ್ರದ ಮುನ್ನುಡಿಯಾಗಿವೆ ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

Continue Reading

ಅಂಕಣ

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

ರಾಜಮಾರ್ಗ ಅಂಕಣ: ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು.

VISTARANEWS.COM


on

rajamarga column mangalore flight crash 1
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಇಂದಿಗೂ ಭಾರತೀಯ ಜನಮಾನಸದಲ್ಲಿ ಗಾಂಧಿ – ನೆಹರೂ ಹೆಸರಿನ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

VISTARANEWS.COM


on

nanna desha nanna dani column ambedkar jinnah
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: ಪಾಕಿಸ್ತಾನಕ್ಕೆ (pakistan) ಸಂಬಂಧಿಸಿದಂತೆ, 1940ರಷ್ಟು ಹಿಂದೆಯೇ, ಡಾ।। ಅಂಬೇಡ್ಕರ್ (Dr Ambedkar) ಅವರು ಜನಸಂಖ್ಯಾ ವಿನಿಮಯವನ್ನು ಪ್ರಸ್ತಾಪಿಸಿದ್ದರು. ಕ್ವಾಯಿಡ್-ಏ-ಆಜಂ (ಮಹಾನ್ ನಾಯಕ) ಎಂದೇ ಹೆಸರಾದ ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪಾಕಿಸ್ತಾನದ ನಿರ್ಮಾತೃ. ಪಾಕಿಸ್ತಾನದ ನಿರ್ಮಾಣದ ಅನಂತರ ಅವರು ಅಲ್ಲಿನ ಗವರ್ನರ್ ಜನರಲ್ ಆದರು. ಆ ಪದವಿ ಎಂದರೆ “ಸಶಸ್ತ್ರ ಪಡೆಗಳ ಮಹಾ ದಂಡನಾಯಕ” ಎಂದರ್ಥ. ಅದು ಬಹಳ ಬಹಳ ಮಹತ್ತ್ವದ್ದು ಎಂಬುದು ಜಿನ್ನಾಗೆ ಗೊತ್ತಿತ್ತು. ಭಾರತದ “ನಮ್ಮ” ನಾಯಕರು, ಯಾವುದಕ್ಕೂ ಹೇಸದ ನೀಚ – ಕುತಂತ್ರಿ ಮೌಂಟ್ ಬ್ಯಾಟನ್ ನನ್ನೇ ಇಲ್ಲಿನ ಗವರ್ನರ್ ಜನರಲ್ ಆಗಿ ಉಳಿಸಿಕೊಂಡುದರಿಂದ ಬಹಳ ಬಹಳ ತೊಂದರೆಯಾಯಿತು. ನವನಿರ್ಮಿತ ಇಸ್ಲಾಮಿಕ್ ದೇಶ ಪಾಕಿಸ್ತಾನದ ಕಡೆಯಿಂದ ಕಾಶ್ಮೀರವನ್ನು (Kashmir) ಆಕ್ರಮಿಸಿಕೊಳ್ಳಲು, ವಶಪಡಿಸಿಕೊಳ್ಳಲು ಪಾಕ್ ಸೇನೆ ನುಗ್ಗಿ ಬರುತ್ತಿದ್ದರೂ ನಮ್ಮ ಸೇನಾ ಪ್ರತ್ಯಾಕ್ರಮಣಕ್ಕೆ ಮೌಂಟ್ ಬ್ಯಾಟನ್ ಅನುಮತಿ ನೀಡಲೇ ಇಲ್ಲ. ಅವನು ಮೂಲಭೂತವಾಗಿ ಅಂತಹ ನೀಚನೇ, ಧೂರ್ತನೇ. ಹಾಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಇಂದಿಗೂ ಪಾಕಿಸ್ತಾನದಲ್ಲಿಯೇ ಇದೆ. ನಮ್ಮ “ಮಹಾನ್” ನಾಯಕರು ಮಾಡಿದ ಇಂತಹ ಅವಿವೇಕಗಳು ಒಂದು, ಎರಡು ಅಲ್ಲ.

ಜಿನ್ನಾ ಪಾಕಿಸ್ತಾನದ “ಫಾದರ್ ಆಫ್ ದ ನೇಷನ್” ಸಹ ಆದರು. ಅವರ ಚಿತ್ರವೇ ಪಾಕಿಸ್ತಾನದ ಕರೆನ್ಸಿ ನೋಟುಗಳ ಮೇಲೆ ಇಂದಿಗೂ ರಾರಾಜಿಸುತ್ತಿದೆ. ಪಾಕ್ ನಿರ್ಮಾಣಕ್ಕೆ ಮೊದಲೇ, ಅವಿಭಜಿತ ಭಾರತದಲ್ಲಿಯೇ ಜಿನ್ನಾ 1941ರಲ್ಲಿ “ದ ಡಾನ್” ಇಂಗ್ಲಿಷ್ ಪತ್ರಿಕೆಯನ್ನು ಹುಟ್ಟುಹಾಕಿದರು. “ದ ಡಾನ್” ಮುಸ್ಲಿಂ ಲೀಗಿನ ಮುಖವಾಣಿಯಾಗಿ ಬೆಳೆಯಿತು. ಅಭಿಲೇಖಾಗಾರಗಳಲ್ಲಿ (Archives) ದೊರೆಯುವ ಈ ಪತ್ರಿಕೆಯ ಸಂಚಿಕೆಗಳು, ಪ್ರಚಲಿತ ಸುಳ್ಳು ಇತಿಹಾಸವನ್ನೇ ಓದುತ್ತ ಬಂದವರಿಗೆ ಆಘಾತವನ್ನೇ ಉಂಟುಮಾಡುತ್ತವೆ.

1946-47ರ ಅತ್ಯಂತ ಭಯಾನಕ ಕಾಲಘಟ್ಟದಲ್ಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಕಾರಣದಿಂದ, 20ಲಕ್ಷಕ್ಕೂ ಹೆಚ್ಚು ಜನರ ಹತ್ಯೆ, ಆ ಕಾಲಕ್ಕೆ ಅತಿ ದೊಡ್ಡ ಸಂಖ್ಯೆ ಎನಿಸುವ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿ ವಲಸೆ ಹೋಗಿದ್ದು, ಅಕ್ಷರಶಃ ಅನೇಕ ಲಕ್ಷ ಹೆಣ್ಣುಮಕ್ಕಳ ಮೇಲೆ ಬರ್ಬರ ಅತ್ಯಾಚಾರ ಆದುದು ಕಟುವಾಸ್ತವ. ವಿಭಜನೆಯ ಮಹಾಕ್ಷೋಭೆಯನ್ನು ನಿರ್ವಹಿಸಲು “ಬ್ರಿಟಿಷರ ಪ್ರೀತಿಪಾತ್ರ”ರಂತೂ ಸಂಪೂರ್ಣವಾಗಿ ಅಸಮರ್ಥರಾಗಿದ್ದರು ಮತ್ತು ಗಮನಿಸಿ ನೋಡಿದರೆ, ಅವರ ಎಲ್ಲ ನಿರ್ಧಾರ – ಉದ್ದೇಶಗಳೂ ಅನುಮಾನಕ್ಕೆ ಕಾರಣವಾಗುತ್ತವೆ. ಪ್ರಸ್ತುತ ಬಾಂಗ್ಲಾದೇಶಕ್ಕೆ ಸೇರಿಹೋಗಿರುವ ಇಡೀ ನೋವಾಖಾಲೀ ಪ್ರದೇಶದಲ್ಲಿ ನಡೆದ ಮುಸ್ಲಿಮರ ದೌರ್ಜನ್ಯ, ಅತ್ಯಾಚಾರ, ಜಿಜಿಯಾ ತೆರಿಗೆ ಹಾಕುವುದು, ನರಸಂಹಾರಗಳು ಬೀಭತ್ಸ ಸ್ವರೂಪದವು. ವಿಚಿತ್ರವೆಂದರೆ, ಅಲ್ಲಿನ ಹಿಂದೂಗಳು ರೋಸಿಹೋಗಿ ಪ್ರತ್ಯಾಘಾತ ನೀಡಲು ಉದ್ಯುಕ್ತರಾದಾಗ, ಮಹಾತ್ಮರು ಅಲ್ಲಿಗೇ “ಶಾಂತಿಸ್ಥಾಪನೆಗೆಂದು ಹೋಗಿ” ಹಿಂದೂಗಳ ಕೈಕಟ್ಟಿಹಾಕಿದರು. ಅಂತೆಯೇ, ಬಿಹಾರದ ಮುಸ್ಲಿಮರ ಹಿಂಸೆ ಅತ್ಯಾಚಾರಗಳು ಮಿತಿಮೀರಿ, ಅಲ್ಲಿನ ಹಿಂದೂಗಳೂ ತಿರುಗೇಟು ನೀಡಲು ಪ್ರಾರಂಭಿಸಿದಾಗ ನೆಹರೂ ಅವರು ಬಿಹಾರದ ಮೇಲೆ ಬಾಂಬ್ ಹಾಕುವುದಾಗಿ ಘರ್ಜಿಸಿದರು.

ನಿಜೇತಿಹಾಸದ ಪುಟಗಳನ್ನು ಗಮನಿಸಿ ವಿಶ್ಲೇಷಿಸಿದಾಗ, ಹಿಂದೂ ಸಮಾಜಕ್ಕೆ ತನ್ನ “ಸ್ವಯಂಘೋಷಿತ ಶತ್ರುಗಳು” ಯಾರು, “ಅಘೋಷಿತ ಶತ್ರುಗಳು” ಯಾರು ಎನ್ನುವುದು ಅಂದಿಗೂ ಗೊತ್ತಾಗಿಲ್ಲ, ಇಂದಿಗೂ ಅರ್ಥವಾಗುತ್ತಿಲ್ಲ, ಎನಿಸಿ ವಿಷಾದವೆನಿಸಿಬಿಡುತ್ತದೆ.

ಡಾ|| ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ಜನಸಂಖ್ಯಾ ವಿನಿಮಯವನ್ನು ಕಾಂಗ್ರೆಸ್ ಒಪ್ಪಿದ್ದರೆ ಕೋಟಿಗಟ್ಟಲೆ ಹಿಂದೂಗಳ ಮಾನಹಾನಿ, ಪ್ರಾಣಹಾನಿಗಳನ್ನು ತಪ್ಪಿಸಬಹುದಿತ್ತು. ವಿಚಿತ್ರ ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ವಿಭಜನೆಯ ಮಹಾದುರಂತಕ್ಕೆ ಮೊದಲೇ ಮುಸ್ಲಿಂ ಲೀಗ್ ಸಹ, ಜನಸಂಖ್ಯಾ ವಿನಿಮಯಕ್ಕೆ (Exchange of Population) ಒತ್ತಾಯಿಸಿತ್ತು. ಅಷ್ಟೇ ಅಲ್ಲ, “ಕಾಂಗ್ರೆಸ್ ರಕ್ತಪಾತವನ್ನು ಬಯಸುತ್ತದೆ” ಎಂದು ಟೀಕಿಸಿತ್ತು. “ಡಾನ್” ಪತ್ರಿಕೆಯ 1946ರ ಡಿಸೆಂಬರ್ 3ರ ಸಂಚಿಕೆಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಲಾಹೋರ್ ಮೂಲದ ಈ ಸುದ್ದಿ ಮತ್ತು “Exchange of Population – A most practicable solution” ಮತ್ತು “Congress prefers Bloodshed to Peaceful Settlement” ಎನ್ನುವ ಶೀರ್ಷಿಕೆಗಳು ನಮ್ಮ ದುಃಖವನ್ನು ಮಡುಗಟ್ಟಿಸಿಬಿಡುತ್ತವೆ. ಸ್ವತಃ ಮುಸ್ಲಿಂ ಲೀಗ್ ಈ ವಿನಿಮಯಕ್ಕೆ ಒತ್ತಾಯಿಸಿದರೂ, ನಮ್ಮ ನಾಯಕರು ಬೇಕೆಂದೇ ವಿನಿಮಯವನ್ನು ಅನುಷ್ಠಾನಗೊಳಿಸದೇ, ಎಂತಹ ಅಕಾರ್ಯವನ್ನೆಸಗಿಬಿಟ್ಟರಲ್ಲಾ ಎನಿಸಿಬಿಡುತ್ತದೆ.

ಇದಕ್ಕೂ ಮೊದಲೇ ಇದೇ “ಡಾನ್” ಪತ್ರಿಕೆಯ (ದಿನಾಂಕ 26ನೆಯ ನವೆಂಬರ್ 1946) ಕರಾಚಿ ಮೂಲದ ಸುದ್ದಿಯಲ್ಲಿಯೂ “Exchange of Population Question must be taken up immediately” (ಹಿಂದೂ – ಮುಸ್ಲಿಂ ಜನಸಮುದಾಯದ ವಿನಿಮಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು) ಎನ್ನುವ ಒತ್ತಾಯವಿದೆ. ಆದರೂ ಗಾಂಧೀ – ನೆಹರೂ ಮತ್ತು ಕಾಂಗ್ರೆಸ್ಸಿಗರ ಹೃದಯ ಹಿಂದೂಗಳಿಗಾಗಿ ಕರಗಲೇ ಇಲ್ಲ, ಮರುಗಲೇ ಇಲ್ಲ.

partition

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ಸ್ವತಃ ಮುಸ್ಲಿಂ ಲೀಗ್ ಒತ್ತಾಯಿಸಿದ ಜನಸಂಖ್ಯಾ ವಿನಿಮಯ ಏಕೆ ಆಗಲಿಲ್ಲ? ವಿಭಜನೆಯನ್ನೇ ಒಪ್ಪುವುದಿಲ್ಲ, ಎನ್ನುತ್ತಿದ್ದ ಗಾಂಧೀಜಿಯವರು ಜೂನ್ 1947ರ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಪ್ರತಿಭಟನೆ ಪ್ರತಿರೋಧಗಳನ್ನು ಮಾಡದೆಯೇ ವಿಭಜನೆಯನ್ನು ಏಕೆ ಒಪ್ಪಿಕೊಂಡರು, ಎನ್ನುವುದನ್ನೂ ಪ್ರಶ್ನಿಸಬೇಕಾಗುತ್ತದೆ. ದೇಶವಿಭಜನೆಗೆ, ಹತ್ಯಾಕಾಂಡಕ್ಕೆ ಕಾಂಗ್ರೆಸ್ಸಿಗರು RSS – ಸಾವರ್ಕರ್ – ಹಿಂದೂ ಮಹಾಸಭಾಗಳನ್ನು ಅಂದಿಗೂ ದೂಷಿಸುತ್ತಿದ್ದರು, ಇಂದಿಗೂ ಹೊಣೆ ಮಾಡುತ್ತಾರೆ. ಡಾ।। ಲೋಹಿಯಾ ತಮ್ಮ “GUILTY MEN OF PARTITION” ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಅಂದಿನ ವಿಶೇಷವೆಂದರೆ, ಇವರೀರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ಸಾರ್ವಜನಿಕ ಭಾಷಣಗಳಲ್ಲಿ “ದೇಶ ತುಂಡು ಮಾಡುವ ಮುನ್ನ, ನನ್ನ ದೇಹವನ್ನು ತುಂಡರಿಸಲಿ” ಎನ್ನುತ್ತಿದ್ದ ಗಾಂಧೀಜಿಯವರು ಮಾತ್ರ ಆ ನಿರ್ಣಾಯಕ ಸಭೆಯಲ್ಲಿ ವಿಭಜನೆಯನ್ನು ವಿರೋಧಿಸಲೇ ಇಲ್ಲ. ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದರು, ಡಾ।। ಲೋಹಿಯಾ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

“ಡಾನ್” ಪತ್ರಿಕೆಯ 4ನೆಯ ಡಿಸೆಂಬರ್ 1946ರ ಪತ್ರಿಕೆಯಲ್ಲಿ ಲಕ್ನೋ (ಇಂದಿನ ಉತ್ತರ ಪ್ರದೇಶದ ರಾಜಧಾನಿ) ಮೂಲದ ಸುದ್ದಿಯಲ್ಲಿ ಅಂದಿನ ಸಿಂಧ್ ಪ್ರಾಂತದ ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಹುಸೇನ್ ಹಿದಾಯತುಲ್ಲಾ “ಸಿಂಧ್ ಪ್ರಾಂತದಲ್ಲಿ ನೆಲೆಸುವ ಉತ್ತರ ಪ್ರದೇಶದ ಮುಸ್ಲಿಮರಿಗಾಗಿ ಕೃಷಿ ಭೂಮಿ ನೀಡಲು ವ್ಯವಸ್ಥೆ” ಮಾಡುವುದಾಗಿ ಹೇಳಿದ್ದ. ಇತಿಹಾಸ ಬಹಳ ಬಹಳ ವಿಚಿತ್ರವಾದುದು. ಪಾಕಿಸ್ತಾನದ ಕಲ್ಪನೆ ಅಂಕುರಿಸಿದ್ದೇ ಉತ್ತರಪ್ರದೇಶದಲ್ಲಿ. ಇಂದಿಗೂ ಅಲ್ಲಿ ರಾರಾಜಿಸುತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿಯೇ “ಹಿಂದೂ ಮುಸ್ಲಿಂ ಸಹಬಾಳ್ವೆ ಸಾಧ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶವೇ ಬೇಕು” ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಶತಮಾನದ ಕಾಲ ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದವರು ಮುಸ್ಲಿಂ ಪ್ರತ್ಯೇಕತೆಯನ್ನೇ ಪೋಷಿಸಿಕೊಂಡು ಬಂದರು. ಆದರೂ, ದೆಹಲಿ, ಬಿಹಾರ, ಮುಖ್ಯವಾಗಿ ಉತ್ತರಪ್ರದೇಶ ಮುಂತಾದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಗಾಂಧಿ – ನೆಹರೂ ಜೋಡಿ ಬಿಡಲೇ ಇಲ್ಲ. ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಇಲ್ಲೇ ಉಳಿಸಿಕೊಂಡರು ಮತ್ತು ಸಂವಿಧಾನದ ಕೆಲವು ಅನುಚ್ಛೇದಗಳಲ್ಲಿ (ಅನುಚ್ಛೇದ 29, 30 ಇತ್ಯಾದಿ) ಅಲ್ಪಸಂಖ್ಯಾತರ ಹೆಸರಿನಲ್ಲಿ ಅಪರಿಮಿತ ಹಕ್ಕುಗಳನ್ನೂ ಸೌಲಭ್ಯಗಳನ್ನೂ ನೀಡಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅನೇಕ ಮುಸ್ಲಿಮರು, ಅಲ್ಲಿ ಅವರಿಗೆ “ಸರಿಹೋಗದೆ” ಮತ್ತೆ ಭಾರತಕ್ಕೆ ಹಿಂತಿರುಗಿ ಬಂದಾಗ, ಅವರ ಎಲ್ಲ ಆಸ್ತಿಪಾಸ್ತಿ ಉಳಿಸಿಕೊಟ್ಟರು, ವಾಪಸ್ ಕೊಡಿಸಿದರು. ಎರಡೂ ದೇಶಗಳ ಹಿಂದೂಗಳು ಮಾತ್ರ ತುಂಬಾ ತುಂಬಾ ದುರದೃಷ್ಟಶಾಲಿಗಳು. ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದ ಬಹುಪಾಲು ಎಲ್ಲ ಹಿಂದೂಗಳ ಕಗ್ಗೊಲೆಯಾಯಿತು, ಬಲವಂತದ ಮತಾಂತರವಾಯಿತು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಂತೂ ಅವರ್ಣನೀಯ. ಅಲ್ಲಿ ಅಳಿದುಳಿದ ಸಿಖ್ಖರ ಸ್ಥಿತಿಯೂ ತೀರಾ ಹೀನಾಯ.

ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಈ ಎಲ್ಲ ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಗಾಂಧಿ – ನೆಹರೂ ಹೆಸರಿನಲ್ಲಿ ಬಡಾವಣೆಗಳು, ರಸ್ತೆಗಳು, ವೃತ್ತಗಳು, ಶಾಲೆಗಳು, ಸಂಸ್ಥೆಗಳನ್ನು ಹುಟ್ಟುಹಾಕಿದರೆ, ಸಹಜವಾಗಿ ಇಡೀ ಜನಕೋಟಿ “ಇವರೇ ಈ ದೇಶವನ್ನು ಕಟ್ಟಿ ಬೆಳೆಸಿದವರು, ಇವರೇ ಕಡಿದು ಕಟ್ಟೆಹಾಕಿದವರು” ಎಂದುಕೊಂಡುಬಿಡುತ್ತದೆ. ನಮಗೆಲ್ಲ ಆದುದೂ ಅದೇ! ಇಂದಿಗೂ ಭಾರತೀಯ ಜನಮಾನಸದಲ್ಲಿ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ.

ಪುಣ್ಯಕ್ಕೆ ಈಚಿನ ವರ್ಷಗಳಲ್ಲಿ ಮಹತ್ತ್ವದ ಅನೇಕ ಸತ್ಯಸಂಗತಿಗಳು, ದಾಖಲೆಗಳು ಜನರ ಮುಂದೆ ಕಾಣಿಸಿಕೊಳ್ಳುತ್ತಿವೆ. ಆ ಎಲ್ಲ ಬಹುಪಾಲು ದಾಖಲೆಗಳೂ ನಮ್ಮೊಳಗೆ ಉತ್ಪಾತವನ್ನೇ ಮಾಡುತ್ತಿವೆ, ಮಾಡಿಬಿಡುತ್ತವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Continue Reading

ಅಂಕಣ

ಸೈಬರ್‌ ಸೇಫ್ಟಿ ಅಂಕಣ: ಸ್ಮಾರ್ಟ್‌ ಫೋನಿನ ಸ್ಮಾರ್ಟ್ ಬಳಕೆಗೆ 12 ಸೂತ್ರಗಳು

ಸೈಬರ್‌ ಸೇಫ್ಟಿ ಅಂಕಣ: ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

VISTARANEWS.COM


on

ಸೈಬರ್‌ ಸೇಫ್ಟಿ cyber safety rules
Koo
cyber-safty-logo

ಸೈಬರ್‌ ಸೇಫ್ಟಿ ಅಂಕಣ: ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 1.12 ಬಿಲಿಯನ್‌ ಮೊಬೈಲ್‌ ಸಂಪರ್ಕಗಳು (mobile connections) ಸಕ್ರಿಯವಾಗಿವೆಯಂತೆ. ಅದರಲ್ಲಿ ಶೇಕಡ 68.4ರಷ್ಟು ಅಂದರೆ 974.69 ಮಿಲಿಯನ್‌ ಸ್ಮಾರ್ಟ್‌ ಫೋನ್‌ (Smartphone) ಬಳಕೆದಾರರು. ಇಷ್ಟೆಲ್ಲಾ ಜನರು ದಿನ ನಿತ್ಯ ತಮ್ಮ ಬಹುತೇಕ ಸಮಯವನ್ನು ಇದರೊಂದಿಗೆ ಕಳೆಯುತ್ತಾರೆ. ಡಿಜಿಟೈಸೇಶನ್‌ (digitisation) ಆದ ಮೇಲಂತೂ ಎಲ್ಲಿ ಹೊಗುವುದಾದರೂ ಮೊಬೈಲ್‌ ಕೈಯಲ್ಲಿರಲೇ ಬೇಕು. ಜೇಬಿನಲ್ಲಿ ಪರ್ಸ್ ಇರುತ್ತೋ ಇಲ್ವೊ, ಮೊಬೈಲ್‌ ಅಂತೂ ಬೇಕೇ ಬೇಕು. ದೂರವಾಣಿಯ ಬದಲಿಗೆ ಸಂಪರ್ಕ ಸಾಧನವಾಗಿ ಬಂದ ಮೊಬೈಲ್‌ ಇಂದು ನಮ್ಮ ಜೀವನದಿಂದ ಬಹಳಷ್ಟು ವಸ್ತುಗಳನ್ನು ನುಂಗಿ ನಮ್ಮ ಕೈಯಲ್ಲಿ ಬೇರೂರಿದೆ. ಸೆಲ್ಯುಲಾರ್ ಫೋನ್ ಅಥವಾ ಸೆಲ್‌ ಫೋನ್‌ ಎಂದು ಮಾರುಕಟ್ಟೆಗೆ ಬಂದು ತನ್ನ ಬಳಕೆದಾರರನ್ನೇ ತನ್ನ ಸೆಲ್‌ನಲ್ಲಿ ಬಂಧಿಸಿದೆ.

ಸ್ಮಾರ್ಟ್ ಫೋನ್‌ಗಳನ್ನೇನೋ ಬಳಸುತ್ತಿದ್ದೇವೆ. ಆದರೆ ನಾವೆಷ್ಟು ಸ್ಮಾರ್ಟ್‌ ಆಗಿದ್ದೇವೆ?

ಇಂದು ಇಂಟರ್ನೆಟ್ (ಅಂತರ್ಜಾಲ), ಕಂಪ್ಯೂಟರ್ (ಗಣಕ ಯಂತ್ರ), ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ಸ್ಮಾರ್ಟ್ ಸಾಧನಗಳಲ್ಲಿ ನಾವು ಪ್ರತಿದಿನ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂದು ಯೋಚಿಸಿದ್ದೀರಾ? ಅಂಗೈಯಲ್ಲೇ ಅಂತರ್ಜಾಲ, ಅರಿವಿದೆಯೇ ಅಪಾಯ?

ನಾವು ಇಂಟರ್ನೆಟ್ ಸಂವಹನ ಮಾಧ್ಯಮಗಳಾದ Google, ಇಮೇಲ್‌ಗಳು, ವಾಟ್ಸಪ್ (WhatsApp), ಫೇಸ್ಬುಕ್ (Facebook), ಇನ್ಸಟಗ್ರಾಮ್ (Instagram), ಯೂ ಟ್ಯೂಬ್ (YouTube), ಟ್ವಿಟ್ಟರ್ (Twitter) ಇತ್ಯಾದಿಗಳನ್ನು ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ಮಾಡಿದ್ದೇವೆ. ಇದೆಲ್ಲವೂ ನಮಗೆ ಸ್ಮಾರ್ಟ್‌ಫೋನಿನಲ್ಲೇ ಲಭ್ಯ. ಜೊತೆಗೆ ವಿಧ ವಿಧವಾದ ಆಟಗಳು, ಆಕರ್ಷಿಸುವ ವಿಡಿಯೋಗಳು ನಮ್ಮ ಗಮನವನ್ನು ಯಾವಾಗಲೂ ತಮ್ಮತ್ತ ಸೆಳೆಯುತ್ತಿರುತ್ತದೆ. ಆನ್ಲೈನ್ ತರಗತಿಗಳಿಗೆ, ಮತ್ತು ಶೈಕ್ಷಣಿಕ ವಿಚಾರಗಳಿಗೆ, ಕಲಿಕೆಗೆ ಕೊಂಡ ಮೊಬೈಲ್ ದುರ್ಬಳಕೆ ಆಗಬಹುದು. ಈ ಸಂದರ್ಭದಲ್ಲಿ, ಸೈಬರ್ ಜಗತ್ತಿನ ಬಗ್ಗೆ, ಮತ್ತು ಅಲ್ಲಿ ಸುರಕ್ಷಿತವಾಗಿರಲು ಹೇಗಿರಬೇಕು ಅಥವಾ ಏನು ಮಾಡಬಾರದು ಎಂದು ತಿಳಿದಿರುವುದಿಲ್ಲ. ಜೊತೆಗೆ, ನಮ್ಮಲ್ಲಿ ಹೆಚ್ಚಿನವರಿಗೆ ಸೈಬರ್ ಸುರಕ್ಷತೆ ಮತ್ತು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಭದ್ರತಾ ಅಗತ್ಯಗಳ ಬಗ್ಗೆ ತಿಳಿದಿಲ್ಲ.

ಇಂಟರ್ನೆಟ್ ಒಂದು ಜಾಗತಿಕ ನೆಟ್ವರ್ಕ್. ಜಗದೆಲ್ಲಾ ಮಾಹಿತಿಗಳ ಆಗರ. ನಿಮ್ಮ ಮೆಸೇಜ್, ನೀವು ಓದುವ ವಿಷಯಗಳು, ವಾಟ್ಸಪ್, ಫೇಸ್ಬುಕ್, ಗೂಗಲ್ ಮುಂತಾದ ಆಪ್ಗಳು ಕೆಲಸಮಾಡಲು ಇಂಟರ್ನೆಟ್ ಸೌಲಭ್ಯ ಅತ್ಯವಶ್ಯಕ. ಇಂಟರ್ನೆಟ್‌ ಮುಖಾಂತರ ಹಂಚಿಕೊಳ್ಳಲಾದ ಯಾವುದೇ ಮಾಹಿತಿ ಅಥವಾ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಆನ್ಲೈನ್ ಗೆ ಅಪ್ ಲೋಡ್ ಆದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸುವುದು ತುಂಬಾ ಕಷ್ಟ. ಮತ್ತು ನೀವು ನೋಡಿದ ಪ್ರತಿಯೊಂದು ವೆಬ್ ಸೈಟ್, ವಿಡಿಯೋ, ನೋಡಿದ ಯಾವುದೇ ತರಹದ ಮಾಹಿತಿ ನಿಮ್ಮ ಆನ್ಲೈನ್ ವರ್ತನೆಯನ್ನು ಯಾರಿಗಾದರೂ ತಿಳಿಸುತ್ತದೆ. ಇದನ್ನು ‘ಡಿಜಿಟಲ್ ಫುಟ್ ಪ್ರಿಂಟ್’ ಎನ್ನುತ್ತಾರೆ. ಈ ಫುಟ್ ಪ್ರಿಂಟನ್ನು ಅಳಿಸುವುದು ಅಸಾಧ್ಯ. ಅದು ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರು, ಸಂಬಂಧಿಗಳ ಬಗ್ಗೆ, ನಿಮ್ಮ ಇಷ್ಟ ಮತ್ತು ಆಧ್ಯತೆಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಸುಲಭವಾಗಿ ತಿಳಿಸುತ್ತದೆ.

ಮೊಬೈಲನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಸೈಬರ್ ಜಗತ್ತಿನಲ್ಲಿ ಮಾಲ್‌ವೇರ್, ಫಿಶರ್ ಗಳು, ಅಶ್ಲೀಲ ವೆಬ್‌ಸೈಟ್‌ಗಳು, ಡೇಟಾ ಕಳ್ಳತನ, ಗುರುತಿನ ಕಳ್ಳತನ ಅಥವಾ ಹ್ಯಾಕಿಂಗ್ ಪ್ರಯತ್ನಗಳು, ಮೋಸದ ಯೋಜನೆಗಳು ಮತ್ತಿತರ ವಂಚನೆಗಳಿಗೀಡಾಗುವ ಸಾಧ್ಯತೆಗಳಿವೆ. ಸರಿಯಾದ ಮಾಹಿತಿ ತಿಳಿದುಕೊಂಡು ನಮ್ಮ ದೈನಂದಿನ ಅವಶ್ಯಕತೆಗೆ ಪೂರಕವಾಗಿ, ಜಾಗರೂಕರಾಗಿ ಮೊಬೈಲ್ ಬಳಸುವುದರಿಂದ ಸೈಬರ್ ಅಪರಾಧಗಳಿಗೆ ಬಲಿಯಾಗೋದು ತಪ್ಪುತ್ತದೆ.

ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಜಾಗರೂಕತೆಯಿಂದಿದ್ದರೆ ನೀವು ಸೈಬರ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.

ಸುರಕ್ಷಿತವಾಗಿ ಮೊಬೈಲ್ ಬಳಸಲು ಹನ್ನೆರಡು ಸೂತ್ರಗಳು:

1) ಪಿನ್‌ಗಳು ಮತ್ತು ಪಾಸ್‌ವರ್ಡ್‌ಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಫೋನ್‌ಗೆ ಅನಧಿಕೃತ ಪ್ರವೇಶವನ್ನು ತಡೆಯಲು, ನಿಮ್ಮ ಫೋನ್ ಕಳೆದುಹೋದರೆ ಅಥವಾ ಕಳುವಾದಾಗ ರಕ್ಷಣೆಯ ಮೊದಲ ಸಾಲಿನಂತೆ (first line of defence) ನಿಮ್ಮ ಫೋನ್‌ನ ಮುಖಪುಟದಲ್ಲಿ ಪಾಸ್‌ವರ್ಡ್ ಅಥವಾ ವೈಯಕ್ತಿಕ ಗುರುತಿನ ಸಂಖ್ಯೆಯನ್ನು (ಪಿನ್) ಹೊಂದಿಸಿ. ನಿಮ್ಮ ಪ್ರತಿಯೊಂದು ಪ್ರಮುಖ ಲಾಗ್-ಇನ್‌ಗಳಿಗೆ (ಇಮೇಲ್, ಬ್ಯಾಂಕಿಂಗ್, ವೈಯಕ್ತಿಕ ಸೈಟ್‌ಗಳು, ಇತ್ಯಾದಿ) ಬೇರೆ ಪಾಸ್‌ವರ್ಡ್ ಬಳಸಿ. ನಿಮ್ಮ ಫೋನ್ ನಿಷ್ಕ್ರಿಯವಾಗಿರುವಾಗ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ನಂತರ ಸ್ವಯಂಚಾಲಿತವಾಗಿ ಲಾಕ್ ಆಗುವಂತೆ ನಿಮ್ಮ ಫೋನಿನಲ್ಲಿ ಸಂಯೋಜಿಸಿಕೊಳ್ಳಿ.

2) ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿ ಮತ್ತು ಸುರಕ್ಷಿತಗೊಳಿಸಿ. ನಿಮ್ಮ ಫೋನ್‌ನಲ್ಲಿ ಸಂಗ್ರಹವಾಗಿರುವ ಎಲ್ಲಾ ಡೇಟಾವನ್ನು ನೀವು ಬ್ಯಾಕಪ್ ಮಾಡಬೇಕು – ಉದಾಹರಣೆಗೆ ನಿಮ್ಮ ಸಂಪರ್ಕಗಳು, ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳು. ಈ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ, ಅಥವಾ ಕ್ಲೌಡ್‌ನಲ್ಲಿ ಸಂಗ್ರಹಿಸಬಹುದು. ನಿಮ್ಮ ಫೋನ್ ಕಳೆದುಹೋದರೆ, ಕದ್ದಿದ್ದರೆ ಅಥವಾ ಅಳಿಸಿದರೆ ಅದನ್ನು ಅನುಕೂಲಕರವಾಗಿ ಮರುಸ್ಥಾಪಿಸಲು ಇದು ಸಹಾಯಮಾಡುತ್ತದೆ.

3) ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ಅಪ್ಲಿಕೇಶನ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಡು ಅಳವಡಿಸಿಕೊಳ್ಳಿ. ಅಪ್ಲಿಕೇಶನ್‌ನ ನ್ಯಾಯಸಮ್ಮತತೆಯನ್ನು ಪರಿಶೀಲಿಸಲು ಅದರ ಬಗ್ಗೆ ಇರುವ ವಿಮರ್ಶೆಗಳನ್ನು ನೋಡಿ, ಅಪ್ಲಿಕೇಶನ್ ಸ್ಟೋರ್‌ನ ಕಾನೂನುಬದ್ಧತೆಯನ್ನು ದೃಢೀಕರಿಸಿಕೊಳ್ಳಿ, ಮತ್ತು ಅಪ್ಲಿಕೇಶನ್ ಪ್ರಾಯೋಜಕರ ಅಧಿಕೃತ ವೆಬ್‌ಸೈಟ್ ಅನ್ನು ನೋಡಿ. ವಿಶ್ವಾಸಾರ್ಹವಲ್ಲದ ಮೂಲಗಳಿಂದ ಅಳವಡಿಸುವ ಅನೇಕ ಅಪ್ಲಿಕೇಶನ್‌ಗಳು ಮಾಲ್‌ವೇರ್ ಅನ್ನು ಒಳಗೊಂಡಿರುತ್ತವೆ. ಅದು ಒಮ್ಮೆ ನಿಮ್ಮ ಫೋನಿನಲ್ಲಿ ಸ್ಥಾಪಿತವಾದರೆ ಮಾಹಿತಿಯನ್ನು ಕದಿಯಬಹುದು, ವೈರಸ್‌ಗಳನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ಫೋನ್‌ನಲ್ಲಿರುವ ವಿಷಯಗಳಿಗೆ ಹಾನಿಯನ್ನು ಉಂಟುಮಾಡಬಹುದು.

cyber safety

4) ಅಪ್ಲಿಕೇಶನ್ ಅನುಮತಿಗಳನ್ನು ಸ್ವೀಕರಿಸುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಫೋನ್‌ನಲ್ಲಿನ ವೈಯಕ್ತಿಕ ಮಾಹಿತಿಗೆ ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ನೀಡುವ ಬಗ್ಗೆ ಅಥವಾ ನಿಮ್ಮ ಫೋನ್‌ನಲ್ಲಿ ಕಾರ್ಯಗಳನ್ನು ನಿರ್ವಹಿಸಲು ಅಪ್ಲಿಕೇಶನ್‌ಗೆ ಪ್ರವೇಶವನ್ನು ಅನುಮತಿಸುವ ಬಗ್ಗೆ ನೀವು ಜಾಗರೂಕರಾಗಿರಬೇಕು. ಸ್ಥಾಪಿಸುವ ಮೊದಲು ಪ್ರತಿ ಅಪ್ಲಿಕೇಶನ್‌ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಹ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

5) ಉಪಯೋಗಿಸದ ಆಪ್ ಗಳನ್ನು ತೆಗೆದು ಹಾಕಿ. ನಿಮ್ಮ ಮೊಬೈಲ್‌ನಲ್ಲಿ ನೀವು ನಿತ್ಯ ಬಳಸುವ ಎಷ್ಟು ಆ್ಯಪ್‌ಗಳಿವೆ? ಅವುಗಳು ಉಪಯೋಗ ಆಗದಿದ್ದರೂ ನಿಮ್ಮ ಫೋನಿನಿಂದ ಮಾಹಿತಿಯನ್ನು ಹೊರಗೆ ಕಳಿಸಬಹುದಲ್ಲವೇ? ಅನಗತ್ಯ ಆ್ಯಪ್‌ಗಳನ್ನು ‘ಅನ್‌ಇನ್ಸ್‌ಟಾಲ್‌’ ಮಾಡಿ. ನಿಮ್ಮ ಫೋನಿನ ಸೆಟ್ಟಿಂಗ್ಸ್‌ನಲ್ಲಿ ಅಪ್ಲಿಕೇಶನ್ಸ್ ವಿಭಾಗದಲ್ಲಿ ಅಳವಡಿಕೆಯಾಗಿರುವ ಎಲ್ಲಾ ಆ್ಯಪ್‌ಗಳನ್ನು ನೋಡಬಹುದು. ಅಲ್ಲಿಂದಲೇ ಅಸ್ಥಾಪಿಸಿ.

6) ನಿಮ್ಮ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಿ. ಜೊತೆಗೆ ನಿಮ್ಮ ಮೊಬೈಲ್ ಸುರಕ್ಷತೆಗೆ ಸರಿಯಾದ ಆಂಟಿವೈರಸ್ ಸಾಫ್ಟ್ ವೇರ್ ಬಳಸಿರಿ.

7) ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆಯೇ ನಿಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸುರಕ್ಷಿತಗೊಳಿಸಿ: ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೀವು ಸರಿಯಾದ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡದಿದ್ದರೆ, ಪೋಸ್ಟ್ ಮಾಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮಗೆ ತಿಳಿಯದೆ ಇತರರು ವೀಕ್ಷಿಸಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು.

8) ವೀಡಿಯೊ ಚಾಟ್ ಮತ್ತು ವೀಡಿಯೊ ಕರೆಗಳಲ್ಲಿ ನಿಮ್ಮ ಗೋಚರಿಸುವಿಕೆಯ ಬಗ್ಗೆ ಗಮನವಿರಲಿ: ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿನ ನಿಮ್ಮ ವೀಡಿಯೊ ಚಾಟ್‌ಗಳನ್ನು ಇನ್ನೊಂದು ಬದಿಯಲ್ಲಿರುವ ವ್ಯಕ್ತಿ ರೆಕಾರ್ಡ್ ಮಾಡಬಹುದು. ಅಪರಿಚಿತರಿಂದ ಚಾಟ್ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

9) ಸೂಕ್ಷ್ಮ ವೈಯಕ್ತಿಕ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆಯಲು ಸ್ಮಾರ್ಟ್‌ಫೋನ್ ಬಳಸಬೇಡಿ: ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಇಂಟರ್ನೆಟ್ ಮತ್ತು ಕ್ಲೌಡ್ ಸ್ಟೋರೇಜ್‌ಗೆ ಸಂಪರ್ಕ ಹೊಂದಿರುತ್ತದೆ. ಕ್ಲೌಡ್‌ನೊಂದಿಗೆ ಸಂಪರ್ಕಗೊಂಡಿರುವ ಸ್ಮಾರ್ಟ್‌ಫೋನ್ ಬಳಸಿ ಚಿತ್ರ ಅಥವಾ ವೀಡಿಯೊವನ್ನು ಕ್ಲಿಕ್ ಮಾಡಿದ್ದರೆ/ರೆಕಾರ್ಡ್ ಮಾಡಿದ್ದರೆ, ಅದು ಸ್ವಯಂಚಾಲಿತವಾಗಿ ಕ್ಲೌಡ್‌ನಲ್ಲಿ ಸೇವ್ ಆಗಬಹುದು. ಬಳಕೆದಾರರು ತಮ್ಮ ಫೋನ್‌ನಿಂದ ತಮ್ಮ ಫೋಟೋಗಳು ಅಥವಾ ವೀಡಿಯೊಗಳನ್ನು ಅಳಿಸಿದರೂ ಸಹ, ಅದೇ ಫೋಟೋ ಅಥವಾ ವೀಡಿಯೊವನ್ನು ಕ್ಲೌಡ್ ಖಾತೆಯಿಂದ ಅಥವಾ ಅದೇ ಖಾತೆಯನ್ನು ಬಳಸಿಕೊಂಡು ಕ್ಲೌಡ್‌ಗೆ ಸಂಪರ್ಕಗೊಂಡಿರುವ ಯಾವುದೇ ಇತರ ಸಾಧನ/ಪಿಸಿಯಿಂದ ಮರುಪಡೆಯಬಹುದು.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

10) ಸೈಬರ್ ಹಿಂಬಾಲಿಸುವಿಕೆಯಿಂದ (stalking) ನಿಮ್ಮನ್ನು ರಕ್ಷಿಸಿಕೊಳ್ಳಿ: ನಿಮ್ಮಿಂದ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಸೈಬರ್ ಹಿಂಬಾಲಕರು ನಿಮ್ಮ ಮೇಲೆ ಪದೇ ಪದೇ ಆಸಕ್ತಿಯನ್ನು ತೋರಿಸುತ್ತಾರೆ. ಅವರು ಹಿಂಬಾಲಿಸಲು ಇಂಟರ್ನೆಟ್, ಇಮೇಲ್, ಸಾಮಾಜಿಕ ಮಾಧ್ಯಮ ಅಥವಾ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಂವಹನವನ್ನು ಬಳಸುತ್ತಾರೆ. ಸಾಮಾಜಿಕ ಮಾಧ್ಯಮ ಸೈಟ್‌ಗಳು, ಮೊಬೈಲ್ ಸಾಧನಗಳು ಇತ್ಯಾದಿಗಳಿಗೆ ಸ್ಥಳ ಸೇವೆಗಳನ್ನು(location) ನಿಷ್ಕ್ರಿಯಗೊಳಿಸಿ. ನಿಮ್ಮ ವೈಯಕ್ತಿಕ ಮಾಹಿತಿಯಾದ ಫೋನ್ ಸಂಖ್ಯೆ, ಇಮೇಲ್ ವಿಳಾಸ, ಛಾಯಾಚಿತ್ರಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದನ್ನು ತಡೆಯಿರಿ. ನೀವು ಸೈಬರ್ ಹಿಂಬಾಲಿಕೆಗೆ ಸಿಕ್ಕಿದ್ದೀರಿ ಎಂದು ನೀವು ಭಾವಿಸಿದರೆ, ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಸಹಾಯ ಪಡೆಯಿರಿ.

11) ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಎಚ್ಚರದಿಂದಿರಿ- ಎಲ್ಲಾ ಖಾತೆಗಳು ನಿಜವಲ್ಲ ಮತ್ತು ಖಾತೆಗಳಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯು ನಿಜವಲ್ಲ. ಅಪರಿಚಿತರಿಂದ ಸ್ನೇಹಿತರ ವಿನಂತಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ.

12) ಸೇವೆ/ದುರಸ್ತಿ/ಮಾರಾಟ ಅಥವಾ ರಿಚಾರ್ಜ್ ಗೆ ನಿಮ್ಮ ಮೊಬೈಲ್ ಸಾಧನಗಳನ್ನು ನೀಡುವಾಗ ಜಾಗರೂಕರಾಗಿರಿ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಜೀವನವೇ ಸ್ಕ್ರೋಲಿಂಗ್: ನೀವು ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿದ್ದೀರಾ?

Continue Reading
Advertisement
IPL 2024
ಕ್ರೀಡೆ16 mins ago

IPL 2024 : ಮುಂದಿನ ವರ್ಷವೂ ಧೋನಿ ಐಪಿಎಲ್​ ಆಡ್ತಾರೆ; ಸಿಎಸ್​ಕೆ ಸಿಇಒ ಸ್ಪಷ್ಟನೆ

Golden Star Ganesh Krishnam Pranaya Sakhi movie first song release on May 25 in Mysore
ಸಿನಿಮಾ24 mins ago

Golden Star Ganesh: ಮೈಸೂರಿನಲ್ಲಿ ಮೇ 25ರಂದು ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಫಸ್ಟ್‌ ಸಾಂಗ್‌ ರಿಲೀಸ್‌

Prashant Kishor
ದೇಶ42 mins ago

Prashant Kishor: ಜೂನ್‌ 4ರಂದು ಪ್ರತಿಪಕ್ಷಗಳು ನೀರು ಕುಡಿಯಲಿವೆ; ಪ್ರಶಾಂತ್‌ ಕಿಶೋರ್‌ ಮಾತಿನ ಮರ್ಮವೇನು?

Virat Kohli
ಕ್ರೀಡೆ44 mins ago

Virat Kohli : ಕೊಹ್ಲಿಗೆ ಗೌರವ ಸಲ್ಲಿಸಲೇಬೇಕು ಎಂದು ಹೇಳಿದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್​​

Karnataka rain
ಮಳೆ1 hour ago

Karnataka Rain : ಮಳೆ ಅವಘಡಕ್ಕೆ ಜನರು ತತ್ತರ; ಧರೆಗುರುಳಿದ ಮರಗಳು, ಕುಸಿದು ಬಿದ್ದ ಮನೆಗಳು

Shivasharane Hemaraddi Mallamma Jayanti celebration in Srisailam
ಯಾದಗಿರಿ1 hour ago

Yadgiri News: ಶ್ರೀಶೈಲಂನಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ

union minister Pralhad Joshi latest statement in bidar
ಕರ್ನಾಟಕ2 hours ago

Pralhad Joshi: ಅಮಾಯಕ ಹೆಣ್ಣುಮಕ್ಕಳ ಹತ್ಯೆಯಾದರೂ ಪೊಲೀಸರ ಮೌನ; ಪ್ರಲ್ಹಾದ ಜೋಶಿ ಆರೋಪ

Rave party 86 people including Hema and Ashi consumed drugs in the rave party Blood report positive
ಕ್ರೈಂ2 hours ago

Rave party: ರೇವ್‌ ಪಾರ್ಟಿಯಲ್ಲಿ ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

Remedies For SadeSati
ಧಾರ್ಮಿಕ2 hours ago

Remedies For SadeSati: ಶನಿಯ ವಕ್ರದೃಷ್ಟಿ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

Sharad Kelkar
ಸಿನಿಮಾ2 hours ago

Sharad Kelkar: ‘ಬಾಹುಬಲಿ’ಗೆ ಧ್ವನಿ ನೀಡಿದ್ದು ಮರೆಯಲಾಗದ ಅನುಭವ ಎಂದ ಶರದ್ ಕೇಳ್ಕರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ15 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌