Site icon Vistara News

IND vs NZ : ಸೆಮಿ ಫೈನಲ್ ನಡೆಯುವ ವಾಂಖೆಡೆ ಸ್ಟೇಡಿಯಮ್​ ಯಾವ ತಂಡಕ್ಕೆ ಫೇವರಿಟ್​​?

Wankhede cricket stadium

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಂಡಗಳು ಮುಖಾಮುಖಿಯಾಗಲಿವೆ. ಧರ್ಮಶಾಲಾದಲ್ಲಿ ನಡೆದ ಪಂದ್ಯಾವಳಿಯ ಗುಂಪು ಹಂತದಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾದವು. ಅಲ್ಲಿ ಮೊಹಮ್ಮದ್ ಶಮಿ (5/54) ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಮತ್ತು ವಿರಾಟ್ ಕೊಹ್ಲಿ (104 ಎಸೆತಗಳಲ್ಲಿ 95 ರನ್) ಅವರ ಸ್ಥಿರ ಪ್ರದರ್ಶನದಿಂದಾಗಿ ಭಾರತವು ನಾಲ್ಕು ವಿಕೆಟ್​ಗಳಿಂದ ಗೆದ್ದಿತು. ಗ್ರೂಪ್ ಹಂತದಲ್ಲಿ ಭಾರತ ಆಡಿದ ಎಲ್ಲಾ ಒಂಬತ್ತು ಪಂದ್ಯಗಳನ್ನು ಗೆದ್ದರೆ, ನ್ಯೂಜಿಲೆಂಡ್ ಐದು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ.

ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಕಳಪೆ ದಾಖಲೆಯನ್ನು ಹೊಂದಿದೆ. ಇಲ್ಲಿಯವರೆಗೆ ಎಲ್ಲಾ ಮೂರು ಮುಖಾಮುಖಿಗಳಲ್ಲಿ ಸೋತಿದೆ. 2000ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಹಾಗೂ 2021ರ ಡಬ್ಲ್ಯುಟಿಸಿ ಫೈನನಲ್​ನಲ್ಲಿ ಭಾರತ ಸೋತಿತ್ತು. 2017 ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಭಾರತವು ಇತ್ತೀಚಿನ ವರ್ಷಗಳಲ್ಲಿ ಐಸಿಸಿ ಸೆಮಿಫೈನಲ್ ಹಂತ ದಾಟಲು ಹೆಣಗಾಡಿತ್ತು. ಐಸಿಸಿ ಸ್ವರೂಪಗಳಲ್ಲಿ ತಮ್ಮ ಕೊನೆಯ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.

ಮತ್ತೊಂದೆಡೆ, ನ್ಯೂಜಿಲೆಂಡ್ ಐಸಿಸಿ ಸೆಮಿಫೈನಲ್​​ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದೆ. ಕಳೆದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. 2016 ಮತ್ತು 2022 ರ ಟಿ 20 ವಿಶ್ವಕಪ್ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಸೋತಿತು. ಆದರೆ ಅವರ ಇತರ ಸೆಮಿಫೈನಲ್​ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅನ್ನು ಸೋಲಿಸಿತ್ತು. ಇದು ಬುಧವಾರ ಉಭಯ ತಂಡಗಳ ನಡುವಿನ ಆಸಕ್ತಿದಾಯಕ ಕದನವಾಗಿದ್ದು, ಎರಡೂ ಕಡೆಯವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಭಾರತವು ಹಿಂದಿನದಕ್ಕೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ನ್ಯೂಜಿಲೆಂಡ್ ಐಸಿಸಿ ಟೂರ್ನಿಗಳಲ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಭಾರತ ನ್ಯೂಜಿಲ್ಯಾಂಡ್​ ಮುಖಾಮುಖಿ ದಾಖಲೆ

ಭಾರತ ಮತ್ತು ನ್ಯೂಜಿಲೆಂಡ್ ಪರಸ್ಪರ 117 ಏಕದಿನ ಪಂದ್ಯಗಳನ್ನು ಆಡಿದ್ದು, ಭಾರತ 59, ನ್ಯೂಜಿಲೆಂಡ್ 50 ರಲ್ಲಿ ಗೆದ್ದಿದೆ. ಒಂದು ಟೈ ಮತ್ತು ಏಳು ಫಲಿತಾಂಶಗಳನ್ನು ಪ್ರಕಟಗೊಂಡಿಲ್ಲ . 9 ವಿಶ್ವ ಕಪ್​ಗಳಲ್ಲಿ ನ್ಯೂಜಿಲೆಂಡ್ 5 ಬಾರಿ ಗೆದ್ದಿದ್ದರೆ, ಭಾರತ 4 ಬಾರಿ ಗೆದ್ದಿದೆ.

ವಾಂಖೆಡೆ ಸ್ಟೇಡಿಯಂ ಪಿಚ್ ವರದಿ

ವಾಂಖೆಡೆ ಕ್ರೀಡಾಂಗಣದ ಪಿಚ್ ಸಣ್ಣ ಬೌಂಡರಿಗಳನ್ನು ಹೊಂದಿದ್ದು, ಬ್ಯಾಟರ್​​ಗಳಿಗೆ ಸ್ವರ್ಗ. ವೇಗಿಗಳು ಸಂಜೆ ವೇಳೆ ಕೆಲವು ಆರಂಭಿಕ ವೇಗ ಚಲನೆಯನ್ನು ಆನಂದಿಸಬಹುದು. ಚೆಂಡು ಹೆಚ್ಚು ತಿರುಗುವುದಿಲ್ಲವಾದ್ದರಿಂದ ಸ್ಪಿನ್ನರ್​ಗಳು ಸ್ವಲ್ಪ ತಡಕಾಡಬೇಕಾಗುತ್ತದೆ.

ವಾಂಖೆಡೆ ಸ್ಟೇಡಿಯಂ ಏಕದಿನ ಕ್ರಿಕೆಟ್​​ ದಾಖಲೆ

ಈ ಮೈದಾನದಲ್ಲಿ ಆಡಿದ 27 ಏಕದಿನ ಪಂದ್ಯಗಳಲ್ಲಿ, ವೇಗಿಗಳು 30.16 ಸರಾಸರಿಯಲ್ಲಿ 248 ವಿಕೆಟ್​ಗಳನ್ನು ಪಡೆದಿದ್ದಾರೆ, ಸ್ಪಿನ್ನರ್​ಗಳು 38.22 ಸರಾಸರಿಯಲ್ಲಿ 123 ವಿಕೆಟ್​​ ಪಡೆದಿದ್ದಾರೆ. ಇಲ್ಲಿ ಬ್ಯಾಟಿಂಗ್ ಮಾಡುವ ಸರಾಸರಿ ಸ್ಕೋರ್ 261 ಆಗಿದೆ.

ಪರಿಣಾಮ ಬೀರುವ ಸಂಗತಿಗಳು

ಭಾರತ: ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ 30 ಇನ್ನಿಂಗ್ಸ್​ಗಳಲ್ಲಿ 41.87 ಸರಾಸರಿಯಲ್ಲಿ 1528 ರನ್ ಗಳಿಸಿದ್ದಾರೆ. ಅವರು ಭಾರತದ ಪರಿಣಾಮಕಾರಿ ಆಟಗಾರ.

ನ್ಯೂಜಿಲೆಂಡ್: ರಚಿನ್ ರವೀಂದ್
ರಚಿನ್ ರವೀಂದ್ರ ಈ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಪರ ಅತ್ಯುತ್ತಮ ಬ್ಯಾಟರ್​ ಆಗಿದ್ದು, ಮೂರು ಶತಕಗಳು ಸೇರಿದಂತೆ ಒಂಬತ್ತು ಇನ್ನಿಂಗ್ಸ್​ಗಳಲ್ಲಿ 565 ರನ್ ಗಳಿಸಿದ್ದಾರೆ.

ಯಾರೆಲ್ಲ ನಡುವಿನ ಸ್ಪರ್ಧೆ?

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವರ್ಸಸ್​ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಟಿಮ್ ಸೌಥಿ ಮತ್ತು ಟ್ರೆಂಟ್ ಬೌಲ್ಟ್ ವಿರುದ್ಧ ಹೆಣಗಾಡುತ್ತಿದ್ದಾರೆ. ಸೌಥಿ ವಿರುದ್ಧ 17 ಇನ್ನಿಂಗ್ಸ್​ಗಳಲ್ಲಿ ಕೊಹ್ಲಿ 22.25 ಸರಾಸರಿಯಲ್ಲಿ 205 ರನ್ ಗಳಿಸಿದ್ದಾರೆ ಮತ್ತು ಆರು ಬಾರಿ ಔಟ್​ ಆಗಿದ್ದಾರೆ. ಏತನ್ಮಧ್ಯೆ, ಬೌಲ್ಟ್ ವಿರುದ್ಧ 12 ಇನಿಂಗ್ಸ್​ಗಳಲ್ಲಿ ಕೊಹ್ಲಿ 48.33 ಸರಾಸರಿಯಲ್ಲಿ 145 ರನ್ ಗಳಿಸಿದ್ದಾರೆ. ಮೂರು ಬಾರಿ ಔಟ್ ಆಗಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಸೌಥಿ ಮತ್ತು ಬೌಲ್ಟ್ ವಿರುದ್ಧ ರೋಹಿತ್ ಹೆಣಗಾಡುತ್ತಿದ್ದಾರೆ. ಸೌಥಿ ವಿರುದ್ಧ 14 ಇನಿಂಗ್ಸ್​ಗಳಲ್ಲಿ , ಅವರು 20.80 ಸರಾಸರಿಯಲ್ಲಿ 104 ರನ್ ಗಳಿಸಿದ್ದಾರೆ. ಐದು ಬಾರಿ ಔಟ್​ ಆಗಿದ್ದಾರೆ. ಬೌಲ್ಟ್ ವಿರುದ್ಧದ 11 ಇನಿಂಗ್ಸ್​ಗಳಲ್ಲಿ ರೋಹಿತ್ 26.75 ಸರಾಸರಿಯಲ್ಲಿ 107 ರನ್ ಗಳಿಸಿದ್ದಾರೆ. ನಾಲ್ಕು ಬಾರಿ ಔಟ್ ಆಗಿದ್ದಾರೆ. ವಾಂಖೆಡೆ ಕ್ರೀಡಾಂಗಣದ ಪಿಚ್ ಆರಂಭಿಕ ಸ್ವಿಂಗ್ ಅನ್ನು ಬೆಂಬಲಿಸುತ್ತದೆ, ಇದು ಸೌಥಿ ಮತ್ತು ಬೌಲ್ಟ್​ಗೆ ಅನುಕೂಲಕರ.

ಕುಲದೀಪ್ ಯಾದವ್ ವಿರುದ್ಧ ಟಾಮ್ ಲಾಥಮ್
ಟಾಮ್ ಲಾಥಮ್ ಕುಲ್ದೀಪ್​ ವಿರುದ್ಧ 92 ಎಸೆತಗಳಲ್ಲಿ 33.66 ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಮೂರು ಬಾರಿ ಔಟ್ ಆಗಿದ್ದಾರೆ. ಈಗಾಗಿ ಲೇಥಮ್ ವಿರುದ್ಧ ರೋಹಿತ್​ ಕುಲ್ದೀಪ್ ಅಸ್ತ್ರವನ್ನು ಬಿಡಲಿದ್ದಾರೆ.

Exit mobile version