Site icon Vistara News

IND vs NZ: ಭಾರತ-ಕಿವೀಸ್​ ಪಂದ್ಯಕ್ಕೆ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ

Himachal Pradesh Cricket Association Stadium

ಧರ್ಮಶಾಲ: ಕ್ರಿಕೆಟ್​​ ಅಭಿಮಾನಿಗಳು ಕಾದು ಕುಳಿತಿರುವ ಹೈವೋಲ್ಟೇಜ್​ ಪಂದ್ಯವಾದ ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand)​ ನಡುವಣ ವಿಶ್ವಕಪ್​ ಕಾದಾಟ ನಡೆಯುವುದು ಅನುಮಾನ ಎಂದು ತಿಳಿದುಬಂದಿದೆ. ಪಂದ್ಯ ನಡೆಯುವ ಧರ್ಮಶಾಲಾದಲ್ಲಿ(Dharamsala) ಇಂದು ಭಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶನಿವಾರ ರಾತ್ರಿ ಕೂಡ ಇಲ್ಲಿ ಮಳೆಯಾಗಿದೆ. ಹೀಗಾಗಿ ಪಂದ್ಯ ನಡೆಯುವ ಸಂಜೆಯ ವೇಳೆಗೆ ಅಥವಾ ರಾತ್ರಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ತನ್ನ ವರದಿಯಲ್ಲಿ ತಿಳಿಸಿದೆ. ಅಕ್ಟೋಬರ್​ 17ರಂದು ಇಲ್ಲೇ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್​ ವಿರುದ್ಧದ ಪಂದ್ಯ ಮಳೆಯಿಂದ 43 ಓವರ್​ಗೆ ಸೀಮಿತಗೊಳಿಸಲಾಗಿತ್ತು. ಇದೀಗ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಕಿವೀಸ್​ ವಿರುದ್ಧ ಗೆಲುವು ಸಾಧಿಸುವ ಯೋಜನೆಯಲ್ಲಿದ್ದ ಭಾರತಕ್ಕೆ ಮಳೆ ಭೀತಿ ಕಾಡಿದೆ.

ಒಂದೊಮ್ಮೆ ಪಂದ್ಯ ನಡೆಯುವ ಭಾನುವಾರ ಮಳೆ ಬಿಡುವು ನೀಡದೇ ಹೋದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇರದ ಕಾರಣ ಇತ್ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಫೈನಲ್​ ಮತ್ತು ಎಡರು ಸೆಮಿಫೈನಲ್​ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಯಾಗಿದೆ.

ಮಳೆ ಬಂದರೆ ಕಿವೀಸ್​ಗೆ ಅದೃಷ್ಟ

ವಿಶ್ವಕಪ್​ ಟೂರ್ನಿಯಲ್ಲಿ ಭಾರತಕ್ಕೆ ಕಿವೀಸ್​ ವಿರುದ್ಧ ಮಳೆ ಕಂಟಕವಾಗಿಯೇ ಪರಿಣಮಿಸಿದೆ. ಏಕೆಂದರೆ ಲಂಡನ್​ನಲ್ಲಿ ನಡೆದಿದ್ದ 2019 ವಿಶ್ವಕಪ್​ ಲೀಗ್​ನಲ್ಲಿ ಉಭಯ ತಂಡಗಳ ನಡುವಣ ಲೀಗ್​ ಪಂದ್ಯ ಟಾಸ್​ ಕೂಡ ಕಾಣದೆ ರದ್ದುಗೊಂಡಿತ್ತು. ಸೆಮಿಫೈನಲ್​ನಲ್ಲಿ ಮತ್ತೆ ಉಭಯ ತಂಡಗಳು ಮುಖಾಮುಖಿಯಾಗಿತ್ತು. ಇಲ್ಲಿಯೂ ಕೂಡ ಮಳೆ ಅಡ್ಡಿ ಪಡಿಸಿ ಮೀಸಲು ದಿನನದ ವರೆಗೆ ಪಂದ್ಯ ಸಾಗುತ್ತು. ಮೀಸಲು ದಿನದಲ್ಲಿ ಬ್ಯಾಟಿಂಗ್​ ನಡೆಸಿದ ಭಾರತ ಸೋಲು ಕಂಡು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಕಾಕತಾಳಿಯ ಎಂಬಂತೆ ಇತ್ತಂಡಗಳ 2023ರ ವಿಶ್ವಕಪ್​ ಲೀಗ್​ ಪಂದ್ಯಕ್ಕೂ ಮಳೆಯ ಭೀತಿ ಕಾಡಿದೆ. ಅಂದಿನ ಪರಿಸ್ಥಿತಿ ಈ ಬಾರಿಯೂ ಮರುಕಳಿಸಲಿದೆಯಾ ಎಂದು ಕಾದು ನೋಡಬೇಕಿದೆ.

ಒಂದೊಮ್ಮೆ ಉಭಯ ತಂಡಗಳ ನಡುವಣ ಈ ಪಂದ್ಯ ರದ್ದುಗೊಂಡರೆ ಅಂಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸುವುದಿಲ್ಲ. ಯಥಾಸ್ಥಿತಿಲ್ಲೇ ಮುಂದುವರಿಯಲಿದೆ. ನ್ಯೂಜಿಲ್ಯಾಂಡ್​ ಅಗ್ರಸ್ಥಾನದಲ್ಲಿ ಮುತ್ತು ಭಾರತ ದ್ವಿತೀಯ ಸ್ಥಾನದಲ್ಲೇ ಇರಲಿದೆ. ಅಂಕ ಮಾತ್ರ ಸಮಾನವಾಗಿರುತ್ತದೆ.

ಇದನ್ನೂ ಓದಿ Ind vs NZ : ಧರ್ಮಶಾಲಾ ಕ್ರೀಡಾಂಗಣದ ದಾಖಲೆ, ಮತ್ತಿತರ ವಿವರ ಇಲ್ಲಿದೆ

ಶಾರ್ದೂಲ್​ ಬದಲು ಶಮಿ

ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲವಾದರೂ ಅವರಿಗೆ ಪದೇಪೆ ಅವಕಾಶ ನೀಡುತ್ತಿರುವ ಬಗ್ಗೆ ಈಗಾಗಲೇ ಟೀಮ್​ ಮ್ಯಾನೆಜ್​ಮೆಂಟ್​ ವಿರುದ್ಧ ಅಪಸ್ವರ ಕೇಳಿಬಂದಿದೆ. ಅವರ ಪತ್ರಿ ಪಂದ್ಯದಲ್ಲೂ ದುಬಾರಿಯಾಗುತ್ತಿದ್ದಾರೆ. ಅಲ್ಲದೆ ಹಾರ್ದಿಕ್​ ಪಾಂಡ್ಯ ಕೂಡ ತಂಡದಲ್ಲಿ ಇರದ ಕಾರಣ ಶಾರ್ದೂಲ್ 10 ಓವರ್​ ಎಸೆಯಬೇಕಾಗಿದೆ. ಒಂದೊಮ್ಮೆ ಅವರಿಗೆ 10 ಓವರ್​ ನೀಡಿದರೆ ವಿಪರೀತ ರನ್​ ಸೋರಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಅನುಭವಿ ಮೊಹಮ್ಮದ್​ ಶಮಿ ಅವರನ್ನು ಈ ಪಂದ್ಯದಲ್ಲಿ ಆಡಿಸುವುದು ಸೂಕ್ತ. ಆಗ ಭಾರತ ತಂಡದ ಬೌಲಿಂಗ್​ ವಿಭಾಗವೂ ಅತ್ಯಂತ ಬಲಿಷ್ಠವಾಗಲಿದೆ. ತ್ರಿವಳಿ ವೇಗಿಗಳಾಗಿ ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್, ಶಮಿ ಸೇರಿಕೊಂಡು ಕಿವೀಸ್​ ಕಿವಿ ಹಿಂಡಬಹುದು. ಸ್ಪಿನ್​ ವಿಭಾಗದಲ್ಲಿ ಜಡೇಜಾ ಮತ್ತು ಕುಲ್​ದೀಪ್​ ಇದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಉಭಯ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅಶ್ವಿನ್​ಗೆ ಅವಕಾಶ ಕಷ್ಟ.

ಸಂಭಾವ್ಯ ತಂಡ

ನ್ಯೂಜಿಲ್ಯಾಂಡ್​: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್​, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.

ಭಾರತ: ರೋಹಿತ್​ ಶರ್ಮ, ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆ.ಎಲ್​ ರಾಹುಲ್​, ಸೂರ್ಯಕುಮಾರ್​ ಯಾದವ್​, ರವೀಂದ್ರ ಜಡೇಜಾ, ಮೊಹಮ್ಮದ್​ ಸಿರಾಜ್, ಮೊಹಮ್ಮದ್​ ಶಮಿ, ಜಸ್​ಪ್ರೀತ್​ ಬುಮ್ರಾ, ಕುಲ್​ದೀಪ್​ ಯಾದವ್​.

Exit mobile version