Site icon Vistara News

IND vs NZ: ಸಚಿನ್​,ರೋಹಿತ್ ದಾಖಲೆ​ ಮುರಿಯಲಿದ್ದಾರಾ ಕೊಹ್ಲಿ,ರಚಿನ್​?

virat kohli and rachin ravindra

ಮುಂಬಯಿ: ವಿಶ್ವಕಪ್(icc world cup 2023)​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ದಾಖಲೆಯೊಂದನ್ನು ಮುರಿಯಲು ವಿರಾಟ್​ ಕೊಹ್ಲಿ(virat kohli) ಮತ್ತು ನ್ಯೂಜಿಲ್ಯಾಂಡ್​ ತಂಡದ ರಚಿನ್​ ರವೀಂದ್ರ​ ಮುಂದಾಗಿದ್ದಾರೆ. ಹಾಲಿ ಆವೃತ್ತಿಯ ವಿಶ್ವಕಪ್​ನಲ್ಲಿ 594 ರನ್ ಗಳಿಸಿರುವ ಕೊಹ್ಲಿ ಅವರು ಸದ್ಯ ಅತ್ಯಧಿಕ ರನ್​ ಗಳಿಸಿದ ಆಟಗಾರರ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರಿಗೆ ಇಂದು ನಡೆಯುವ ಕಿವೀಸ್​ ವಿರುದ್ಧದ(IND vs NZ) ಸೆಮಿಫೈನಲ್​ ಪಂದ್ಯದಲ್ಲಿ​ ಸಚಿನ್ ಅವರ ದಾಖಲೆಯನ್ನು ಮುರಿಯುವ ಅವಕಾಶವಿದೆ. ಅತ್ತ ರಚಿನ್​ಗೂ ಇದೇ ಅವಕಾಶವಿದೆ.

ಮೂರು ಆಟಗಾರರ ಪೈಪೋಟಿ

ಸಚಿನ್ ತೆಂಡೂಲ್ಕರ್​ ಅವರು ವಿಶ್ವಕಪ್​ ಆವೃತ್ತಿಯೊಂದರಲ್ಲಿ 11 ಪಂದ್ಯಗಳನ್ನು ಆಡಿ 673 ರನ್​ ಬಾರಿಸಿದ್ದರು. ಸದ್ಯ ಇದು ಈವರೆಗೆ ವಿಶ್ವಕಪ್​ನ ದಾಖಲೆಯಾಗಿಯೇ ಉಳಿದುಕೊಂಡಿದೆ. ಈ ದಾಖಲೆಯನ್ನು ಮುರಿಯುವ ಅವಕಾಶ ವಿರಾಟ್​ ಕೊಹ್ಲಿ, ರಚಿನ್​ ರವೀಂದ್ರ ಮತ್ತು ದಕ್ಷಿಣ ಆಫ್ರಿಕಾ ಬ್ಯಾಟರ್​ ಕ್ವಿಂಟನ್​ ಕಾಕ್​ಗೆ ಇದೆ.

ಇದನ್ನೂ ಓದಿ Virat Kohli: ನನಸಾಗಲಿ ಕೊಹ್ಲಿಯ 50ನೇ ಶತಕದ ಕನಸು…

ಒಂದೇ ಆವೃತ್ತಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ಅಗ್ರ 5 ಆಟಗಾರರು

ಆಟಗಾರರುಪಂದ್ಯಇನಿಂಗ್ಸ್​ರನ್​
ಸಚಿನ್​ ತೆಂಡೂಲ್ಕರ್​1111673
ಮ್ಯಾಥ್ಯೂ ಹೇಡನ್‌1110659
ರೋಹಿತ್​ ಶರ್ಮ99648
ಡೇವಿಡ್​ ವಾರ್ನರ್​1010647
ಶಕೀಬ್​ ಅಲ್​ ಹಸನ್​88606

ಅಗ್ರಸ್ಥಾನದಲ್ಲಿ ಕೊಹ್ಲಿ

ಪ್ರಸಕ್ತ ಸಾಗುತ್ತಿರುವ ವಿಶ್ವಕಪ್​ ಪಂದ್ಯಾವಳಿಯಲ್ಲಿ ಗರಿಷ್ಠ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 9 ಪಂದ್ಯಗಳನ್ನು ಆಡಿ ಸದ್ಯ 594*ರನ್​ ಬಾರಿಸಿದ್ದಾರೆ. ಕಿವೀಸ್​ ವಿರುದ್ಧ ಇಂದು ನಡೆಯುವ ಪಂದ್ಯದಲ್ಲಿ ಕೊಹ್ಲಿ 80 ರನ್​ ಬಾರಿಸಿದರೆ ಸಚಿನ್​ ಅವರ ಸಾರ್ವಕಾಲಿಕ ದಾಖಲೆ ಪತನಗೊಳ್ಳಲಿದೆ. 55 ರನ್​ ಗಳಿಸಿದರೆ ರೋಹಿತ್​ ಶರ್ಮ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ರೋಹಿತ್​ ಅವರು ಕಳೆದ ವಿಶ್ವಕಪ್​ನಲ್ಲಿ 648 ಬಾರಿಸಿದ್ದರು.

ಇದನ್ನೂ ಓದಿ IND vs NZ: ಇಂದು ಭಾರತ-ಕಿವೀಸ್​ ಸೆಮಿ ಸಮರ; ಹೇಗಿದೆ ವಾಂಖೆಡೆ ಹವಾಮಾನ?

ದ್ವಿತೀಯ ಸ್ಥಾನದಲ್ಲಿ ಡಿ ಕಾಕ್​

ದಕ್ಷಿಣ ಆಫ್ರಿಕಾದ ಎಡಗೈ ಆಟಗಾರ ಡಿ ಕಾಕ್​ ಹಾಲಿ ಆವೃತ್ತಿಯಲ್ಲಿ ನಾಲ್ಕು ಶತಕ ಬಾರಿಸಿದ್ದು ಸದ್ಯ 9 ಪಂದ್ಯಗಳಿಂದ 591 ರನ್ ಬಾರಿಸಿದ್ದಾರೆ. ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿಯಲು ಇನ್ನು 83 ರನ್​ಗಳ ಅಗತ್ಯವಿದೆ. ಗುರುವಾರ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಈ ಮೊತ್ತವನ್ನು ಬಾರಿಸಿದರೆ ಸಚಿನ್​ ದಾಖಲೆ ಪತನಗೊಳ್ಳಲಿದೆ. ವಿಶ್ವಕಪ್​ ಟೂರ್ನಿಯ ಬಳಿಕ ಡಿ ಕಾಕ್​ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ.

ರಚಿನ್​ಗೆ 109 ರನ್ ಅಗತ್ಯ

ರಚಿನ್​ ರವೀಂದ್ರ ಮೂರನೇ ಸ್ಥಾನದಲ್ಲಿದ್ದು ಸದ್ಯ ಅವರು 565*ರನ್​ ಬಾರಿಸಿದ್ದಾರೆ. ಇಂದು ನಡೆಯುವ ಭಾರತ ವಿರುದ್ಧದ ಸೆಮಿ ಫೈನಲ್​ ಪಂದ್ಯದಲ್ಲಿ 109 ರನ್ ಬಾರಿಸಿದರೆ ಸಚಿನ್​ ದಾಖಲೆ ಮುರಿಯಲಿದ್ದಾರೆ. ಸದ್ಯ ಅವರ ಪ್ರಚಂಡ ಬ್ಯಾಟಿಂಗ್​ ನೋಡುವಾಗ ಈ ಮೊತ್ತವನ್ನು ಪೇರಿಸುವ ಎಲ್ಲ ಲಕ್ಷಣವಿದೆ.

Exit mobile version