Site icon Vistara News

IND VS PAK | ವಿರಾಟ್‌ ಕೊಹ್ಲಿ ಆಟ ನೋಡಲು ಪಾಕಿಸ್ತಾನದಿಂದ ಮೆಲ್ಬೋರ್ನ್‌ಗೆ ಬಂದ ಪಾಕ್‌ ಅಭಿಮಾನಿ

virat

ಮೆಲ್ಬೋರ್ನ್‌: ಟೀಮ್‌ ಇಂಡಿಯಾದ (IND VS PAK) ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ವ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. ಇವರ ಆಟ ನೋಡಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಇದೀಗ ಪಾಕಿಸ್ತಾನದ ಅಭಿಮಾನಿಯೊಬ್ಬ ತನ್ನ ತಂಡಕ್ಕಿಂತ ವಿರಾಟ್‌ ಕೊಹ್ಲಿ ಆಟನೋಡಲು ಪಾಕ್‌ನಿಂದ ಮೆಲ್ಬೋರ್ನ್‌ಗೆ ಬಂದಿದ್ದಾನೆ.

ಬಹುನಿರೀಕ್ಷಿತ ಪಾಕ್‌ ಮತ್ತು ಭಾರತ ವಿರುದ್ಧದ ಟಿ೨೦ ವಿಶ್ವ ಕಪ್‌ನ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿದೆ. ಟಾಸ್‌ ಸೋಲು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ ತಂಡ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್‌ ನಷ್ಟಕ್ಕೆ ೧೫೯ ರನ್‌ ಗಳಿಸಿ ಸವಾಲೊಡ್ಡಿದೆ.

ಈ ಪಂದ್ಯದ ವೇಳೆ ಪಾಕಿಸ್ತಾನ ಅಭಿಮಾನಿಯೊಬ್ಬ ಪಾಕ್‌ ತಂಡದ ಜೆರ್ಸಿ ತೊಟ್ಟು ವಿರಾಟ್‌ ಹೆಸರು ಬರೆಸಿದ್ದಾನೆ. ಅದರಂತೆ ಆತ ನಾನು ಪಾಕಿಸ್ತಾನದವನು ಆದರೆ ವಿರಾಟ್‌ ಕೊಹ್ಲಿಯ ಅಪ್ಪಟ ಅಭಿಮಾನಿ. ಅವರ ಆಟ ನೋಡಲು ಪಾಕ್‌ನಿಂದ ಬಂದಿದ್ದೇನೆ ಎಂದು ಹೇಳುವ ಮೂಲಕ ವಿರಾಟ್‌ ಮೇಲಿನ ಅಭಿಮಾನ ತೋರಿಸಿದ್ದಾರೆ.

ಇದನ್ನೂ ಓದಿ | IND vs PAK | ಅರ್ಶ್‌ದೀಪ್‌, ಹಾರ್ದಿಕ್‌ ಅಬ್ಬರ, ಭಾರತಕ್ಕೆ 160 ರನ್‌ ಗೆಲುವಿನ ಸವಾಲು ಒಡ್ಡಿದ ಪಾಕಿಸ್ತಾನ ತಂಡ

Exit mobile version