Site icon Vistara News

ವಿಶ್ವಕಪ್​ನಲ್ಲಿ ಇಂಡೋ-ಪಾಕ್​ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!; ಬಗೆದಷ್ಟೂ ರೋಚಕ

india pakistan match

ಅಹಮದಾಬಾದ್​: ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ ಹಾಗೂ ದ್ವೇಷಮಯ ವಾತಾವರಣದ ನಡುವೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳ ಮಧ್ಯೆ ಕ್ರಿಕೆಟ್​ ಸಮರಕ್ಕೆ ವೇದಿಕೆಯೊಂದು ಸಿದ್ಧಗೊಂಡಿದೆ. ಶನಿವಾರ ನಡೆಯುವ ವಿಶ್ವಕಪ್​ನ(icc world cup 2023) ಲೀಗ್​ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಲಿವೆ.

ಉಭಯ ತಂಡಗಳ ಈ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವ ಕಪ್​ ಮುಖಾಮುಖಿಯ ಇತಿಹಾಸ ಮತ್ತು ಏಳು ಬೀಳಿನ ಸಂಪೂರ್ಣ ಮಾಹಿತಿ ಇಂತಿದೆ.

ಪ್ರತ್ಯೇಕ ಇತಿಹಾಸ

ವಿಶ್ವಕಪ್‌ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ! ಬಗೆದಷ್ಟೂ ರೋಚಕ ಅಂಕಿ-ಅಂಶ, ಘಟನಾವಳಿ, ರೋಮಾಂಚನ ಹಾಗೂ ಉದ್ವೇಗದ ಕ್ಷಣಗಳು ಉಕ್ಕಿ ಬರುತ್ತವೆ. ಇವುಗಳಲ್ಲಿ ಪ್ರಮುಖವಾದುದೆಂದರೆ, ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್‌ ಮುಖಾಮುಖೀಯಲ್ಲಿ ಭಾರತ ಸೋಲರಿಯದ ಸರದಾರನಾಗಿ ಮೆರೆದಿರುವುದು. ಈ ಪ್ರತಿಷ್ಠಿತ ಕೂಟದಲ್ಲಿ ಆಡಿದ ಏಳೂ ಪಂದ್ಯಗಳಲ್ಲಿ ಟೀಮ್‌ ಇಂಡಿಯಾ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿದೆ!. ಇದೀಗ ಎಂಟನೇ ಮುಖಾಮುಖಿಯಲ್ಲಿಯೂ ಅದರಲ್ಲೂ 7 ವರ್ಷಗಳ ಬಳಿಕ ತವರಿನಲ್ಲಿ ಮತ್ತೊಮ್ಮೆ ಸೋಲಿನ ಪಂಚ್​ ನೀಡಲು ಭಾರತ ಸಜ್ಜಾಗಿದೆ.

ಟಿ20 ವಿಶ್ವಕಪ್​ನಲ್ಲಿ ಮೊದಲ ಸೋಲು

ಒಟ್ಟಾರೆಯಾಗಿ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ಓಟ ಕಾಯ್ದುಕೊಂಡು ಬಂದಿದ್ದ ಭಾರತದ ಈ ಸಾಧನೆಯ ಕೊಂಡಿ 2021ರಲ್ಲಿ ಕಳಚಿ ಬಿದ್ದಿತ್ತು. ಭಾರತದ ಆತಿಥ್ಯದಲ್ಲಿ ದುಬೈನಲ್ಲಿ ನಡೆದಿದ್ದ ಈ ಟಿ20 ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಸಾರಥ್ಯದ ಭಾರತ ತಂಡ 10 ವಿಕೆಟ್​ಗಳ ಹೀನಾಯ ಸೋಲು ಕಂಡು, ಮೊದಲ ಬಾರಿಗೆ ವಿಶ್ವಕಪ್​ ಕೂಟದಲ್ಲಿ ಪಾಕ್​ ವಿರುದ್ಧ ಭಾರತ ಸೋಲು ಕಂಡ ಅವಮಾನಕ್ಕೆ ಸಿಲುಕಿತ್ತು. ಏಕದಿನ ವಿಶ್ವ ಕಪ್​ನಲ್ಲಿ ಮಾತ್ರ ಭಾರತ ಇದುವರೆಗೂ ಅಜೇಯ ಸಾಧನೆಯನ್ನು ಕಾಯ್ದುಕೊಂಡಿದೆ.

ಇದನ್ನೂ ಓದಿ IND vs PAK: ಇಂಡೋ-ಪಾಕ್​ ಪಂದ್ಯದ 10 ಸೆಕೆಂಡ್​ ಜಾಹೀರಾತಿನ ಮೌಲ್ಯ ಕೇಳಿದರೆ ಅಚ್ಚರಿ ಖಚಿತ

ಏಳು ಬಾರಿ ವಿಶ್ವ ಕಪ್​ ಮುಖಾಮುಖಿ

ಭಾರತ ಮತ್ತು ಪಾಕ್​ ಮೊದಲ ಬಾರಿಗೆ ಮಿಶ್ವ ಕಪ್​ನಲ್ಲಿ ಮುಖಾಮುಖಿಯಾಗಿದ್ದು 1992ರಲ್ಲಿ ಆ ಬಳಿಕ 1996, 1999, 2003, 2011, 2015, 2019 ಈ ಎಲ್ಲ ಮುಖಾಮುಖಿಯಲ್ಲಿಯೂ ಭಾರತ ಗೆಲುವು ಸಾಧಿಸಿದೆ. ಈ ಬಾರಿಯೂ ಗೆದ್ದು ಪಾಕಿಗೆ ಎಂಟನೇ ಏಟು ನೀಡಲಿ ಎನ್ನುವುದು ಎಲ್ಲ ಭಾರತೀಯರ ಆಶಯವಾಗಿದೆ.

2011ರಲ್ಲಿ ಪಾಕ್​ಗೆ ಸೆಮಿಫೈನಲ್​ನಲ್ಲಿ ಸೋಲು​

ಭಾರತ ಮತ್ತು ಪಾಕಿಸ್ತಾನ 2011ರ ವಿಶ್ವ ಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಮೊಹಾಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ತಂಡ ಸಚಿನ್​ ತೆಂಡೂಲ್ಕರ್​ ಅವರು(88) ಅರ್ಧಶತಕದ ನೆರವಿನಿಂದ 9 ವಿಕೆಟ್​ ಕಳೆದುಕೊಂಡು 260 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 49.5 ಓವರ್​ಗಳಲ್ಲಿ 231 ರನ್​ ರನ್​ ಗಳಿಸಲಷ್ಟೇ ಶಕ್ತವಾಗಿ 29 ರನ್​ ಅಂತರದಿಂದ ಸೋಲು ಕಂಡಿತ್ತು.

ಇದನ್ನೂ ಓದಿ IND vs PAK: ಪಾಕಿಸ್ತಾನ ಪಂದ್ಯದಿಂದ ಹೊರಬಿದ್ದ ಇಶಾನ್​ ಕಿಶನ್​; ಕಾರಣ ಏನು?

ಈ ಪಂದ್ಯದ ಮೊದಲ ಓವರ್​ನಲ್ಲೇ ಪಾಕ್​ ಬೌಲರ್​ ಉಮ್ಮರ್​ ಗುಲ್​ ಅವರು ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹವಾಗ್​ ಅವರನ್ನು ಕೆಣಕಿ ಸರಿಯಾಗಿಯೇ ದಂಡಿಸಿಕೊಂಡಿದ್ದರು. ಬೌನ್ಸರ್​ ಎಸೆದು ಕೆಣಕಿದ ಗುಲ್​ಗೆ ಸತತ ನಾಲ್ಕು ಬೌಂಡರಿ ಬಾರಿಸುವ ಮೂಲಕ ವೀರು ಪ್ರತ್ಯುತ್ತರ ನೀಡಿದ್ದರು. ಫೈನಲ್​ನಲ್ಲಿ ಲಂಕಾವನ್ನು ಮಣಿಸಿ ಭಾರತ ಗೆಲುವು ಸಾಧಿಸಿ 28 ವರ್ಷಗಳ ಬಳಿಕ ವಿಶ್ವ ಕಪ್​ ಎತ್ತಿ ಹಿಡಿದಿತ್ತು. ಇದಾದ ಬಳಿಕ 8 ಐಸಿಸಿ ಟ್ರೋಫಿಗಳನ್ನು ಕಳೆದುಕೊಂಡಿರುವ ಭಾರತ ಈ ಟೂರ್ನಿಯಲ್ಲಿ ಗೆದ್ದು ಐಸಿಸಿ ಟ್ರೋಫಿಯ ಕೊರಗನ್ನು ಹೋಗಲಾಡಿಸುವ ಯೋಜನೆಯಲ್ಲಿದೆ.

Exit mobile version