Site icon Vistara News

IND vs PAK : ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ತಮಾಷೆಯ ಪೋಸ್ಟ್​​ ಮಾಡಿದ ಡೆಲ್ಲಿ ಪೊಲೀಸರು

IND VS PAK

ನ್ಯೂಯಾರ್ಕ್: : ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ (T20 World Cup) ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು(IND vs PAK) ಮಣಿಸಿದೆ. ಇದರೊಂದಿಗೆ ಟಿ20 ವಿಶ್ವ ಕಪ್​ ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು 8-1ರ ಮುನ್ನಡೆಗೆ ಕೊಂಡೊಯ್ದಿದೆ. ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್​​ ಇಳಿಯುವುದರೊಂದಿಗೆ ಆಟ ಪ್ರಾರಂಭವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ಕೇವಲ 119 ರನ್ ಗಳಿಸಲಷ್ಟೇ ಶಕ್ತವಾಯಿತು. ಆದಾಗ್ಯೂ, ಮೆನ್ ಇನ್ ಬ್ಲೂ (Men In Blue) ತಂಡವು ಬೌಲಿಂಗ್​ ಸಾಮರ್ಥ್ಯವನ್ನು ಬಂಡವಾಳ ಮಾಡಿಕೊಂಡಿತು. ಒಂದು ಹಂತದಲ್ಲಿ ಕೈ ಜಾರುತ್ತಿರುವಂತೆ ಕಂಡುಬಂದರೂ ಭಾರತವು ಚೇತರಿಕೆಯ ನಂತರ ಅದನ್ನು ಮರಳಿ ತರುವಲ್ಲಿ ಯಶಸ್ವಿಯಾಯಿತು.

ಪಂದ್ಯದ ನಂತರ, ದೆಹಲಿ ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್ ತಮಾಷೆಯೊಂದನ್ನು ಮಾಡಿತು. ಪೊಲೀಸರ ಬಳಗ ಸಾಮಾಜಿಕ ಮಾಧ್ಯಮದ ಮೂಲಕ ನ್ಯೂಯಾರ್ಕ್​​ ಸಿಟಿ ಪೊಲೀಸರಿಗೆ ಸಂದೇಶವೊಂದನ್ನು ಟ್ಯಾಗ್ ಮಾಡಿತು “ಹೇ, @NYPDnews, ನಾವು ಎರಡು ದೊಡ್ಡ ಶಬ್ದಗಳನ್ನು ಕೇಳಿದ್ದೇವೆ. ಒಂದು “ಇಂಡಿಯಾ ಎ.. ಭಾರತ!” ಇನ್ನೊಂದು ಬಹುಶಃ ಮುರಿದ ಟಿವಿಗಳಾಗಿದ್ದರಬಹುದು. ದಯವಿಟ್ಟು ದೃಢೀಕರಿಸುವಿರಾ?” ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಪಂದ್ಯ ನಡೆದ ನ್ಯೂಯಾರ್ಕ್​ ಸಿಟಿಯ ನಸ್ಸೌ ಸ್ಟೇಡಿಯಮ್​ನಲ್ಲಿ ಸುಮಾರು 125 ಡೆಸಿಬಲ್​ನಷ್ಟು ಸದ್ದು ಭಾರತೀಯ ಕ್ರಿಕೆಟ್​ ಪ್ರೇಮಿಗಳಿಂದ ಕೇಳಿ ಬಂದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಸೋತ ಕಾರಣ ಯಥಾವತ್ ಅಲ್ಲಿನ ಪ್ರೇಕ್ಷಕರು ಟಿವಿ ಒಡೆದು ಹಾಕಿರಬಹುದು ಎಂದು ಡೆಲ್ಲಿ ಪೊಲೀಸರು ತಮಾಷೆ ಮಾಡಿದ್ದಾರೆ.

ಭಾರತಕ್ಕೆ ಸತತ ಎರಡನೇ ವಿಜಯ

ರೋಹಿತ್ ಶರ್ಮಾ 13 ಹಾಗೂ ವಿರಾಟ್ ಕೊಹ್ಲಿ 4 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ 20 ರನ್ ಗಳಿಸಿ ನಿರ್ಗಮಿಸಿದರೆ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಕ್ರಮವಾಗಿ ಕೇವಲ 7 ಮತ್ತು 3 ರನ್ ಸೇರಿಸಿದರು.

ರಿಷಭ್ ಪಂತ್ 31 ಎಸೆತಗಳಲ್ಲಿ 42 ರನ್ ಗಳಿಸುವ ಮೂಲಕ ಭಾರತ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡಿದರು. ಅವರ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ ಒಟ್ಟು 119 ರನ್ ಗಳಿಸಲು ಸಹಾಯ ಮಾಡಿತು. ಪಾಕಿಸ್ತಾನದ ಪರ ನಸೀಮ್ ಶಾ ಹಾಗೂ ಹ್ಯಾರಿಸ್ ರವೂಫ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಮೊಹಮ್ಮದ್ ಅಮೀರ್ 2 ವಿಕೆಟ್ ಕಿತ್ತರೆ, ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದರು.

ಇದನ್ನೂ ಓದಿ: T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

ಗುರಿ ಬೆನ್ನಟ್ಟಿದ ಪಾಕಿಸ್ತಾನ ಪರ ಆರಂಭಿಕ ಆಟಗಾರರಾದ ಬಾಬರ್ ಅಜಮ್ 13 ಮತ್ತು ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್ ಖಾನ್, ಫಖರ್ ಜಮಾನ್ ಮತ್ತು ಇಮಾದ್ ವಾಸಿಮ್ ಕ್ರಮವಾಗಿ 13, 13 ಮತ್ತು 15 ರನ್ ಗಳಿಸಿದರು.

ಪಂದ್ಯದ ಒಂದು ಹಂತದಲ್ಲಿ, ಪಾಕಿಸ್ತಾನವು ಪ್ರತಿ ಎಸೆತಕ್ಕೆ ಒಂದು ರನ್ ಗಳಿಸಬೇಕಾಗಿತ್ತು. ಆದರೆ ನಂತರದಲ್ಲಿ ಭಾರತವು ಪಂದ್ಯದಲ್ಲಿಹಿಡಿದ ಸಾಧಿಸಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ 3, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಹಾಗೂ ಅರ್ಷ್ದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.

Exit mobile version