Site icon Vistara News

IND vs PAK: ಇಂಡೋ-ಪಾಕ್​ ಪಂದ್ಯ ನೋಡಲು ಪ್ರವಾಸ, ಸುತ್ತಾಟ ಬದಿಗಿಟ್ಟ ಅಭಿಮಾನಿಗಳಿಗೆ ನಿರಾಸೆ…

Rain is expected to play spoilsport in Indo-Pak super 4 clash

ಕೊಲಂಬೊ: ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಏಷ್ಯಾಕಪ್​ನ(Asia Cup 2023) ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ನಿರಾಸೆಗೊಂಡಿದ್ದ ಉಭಯ ದೇಶದ ಅಭಿಮಾನಿಗಳು ಇದೀಗ ಇತ್ತಂಡಗಳ ಮಧ್ಯೆ ಇಂದು ನಡೆಯುವ ಸೂಪರ್​-4(Pakistan vs India, Super Fours) ಕದನವನ್ನು ವೀಕ್ಷಿಸಲು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ತಮ್ಮ ಎಲ್ಲ ಮೋಜು ಮಸ್ತಿಗೆ ಬ್ರೇಕ್​ ಹಾಕಿ ಈ ಪಂದ್ಯವನ್ನು ಕಣ್ತುಂಬಿಕೊಳ್ಳುವ ಕಾರತದಲ್ಲಿದ್ದಾರೆ. ಆದರೆ ಇವರಿಗೆ ಮತ್ತೊಮ್ಮೆ ನಿರಾಸೆಯಾಗುವು ಖಚಿತ ಎನ್ನುತ್ತಿದೆ ಹವಾಮಾನ ವರದಿ.

ಶೇ.90ರಷ್ಟು ಮಳೆ

ಪಂದ್ಯ ನಡೆಯುವ ಕೊಲಂಬೊದಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದಂತೆ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿದೆ. ಹೀಗಾಗಿ ಮೈದಾನಕ್ಕೆ ಹಾಕಿರುವ ಕವರ್​ಗಳನ್ನು ತೆಗೆಯದೆ ಹಾಗೆ ಇರಿಸಲಾಗಿದೆ. ಶುಕ್ರವಾರ ರಾತ್ರಿ ಇಲ್ಲಿ ಮಳೆಯಾಗಿರುವುದಾಗಿ ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಒಂದೊಮ್ಮೆ ಮಧ್ಯಾಹ್ನ ಮಳೆಯ ಅಡಚಣೆ ಇಲ್ಲದಿದ್ದರೂ ಸಂಜೆಯ ವೇಳೆ ಮಳೆಯಾಗುವುದು ಖಚಿತ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ಕಾರಣಕ್ಕೆ ಮೀಸಲು ದಿನವನ್ನು ನಿಗದಿಪಡಿಸಿದ್ದು.

ಮೀಸಲು ದಿನ ಬಳಕೆ ಹೇಗೆ

ಇಂದು ಮಳೆಯಿಂದಾಗಿ ಪಂದ್ಯ ನಡೆಯದೇ ಹೋದರೆ, ಅಂದರೆ ಮೊದಲ ಇನಿಂಗ್ಸ್​ ಮುಗಿದು ದ್ವಿತೀಯ ಇನಿಂಗ್ಸ್​ನಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಮೀಸಲು ದಿನವನ್ನು ಬಳಕೆ ಮಾಡಲಾಗುತ್ತದೆ. ಪಂದ್ಯ ಯಾವ ಹಂತದಲ್ಲಿ ಸ್ಥಗಿತಗೊಂಡಿರುತ್ತದೆಯೋ ಅಲ್ಲಿಂದಲೇ ಸೋಮವಾರದಂದು ಪಂದ್ಯ ಮುಂದುವರಿಯಲಿದೆ. ಇದಲ್ಲದೆ ಭಾನುವಾರದ ಪಂದ್ಯ ಮೀಸಲು ದಿನಕ್ಕೆ ಹೋದರೆ ಆಗ ಅಭಿಮಾನಿಗಳು ಬೇರೆ ಟಿಕೆಟ್‌ ಪಡೆಯುವ ಅವಶ್ಯಕತೆ ಇಲ್ಲ. ಬದಲಾಗಿ ಹಳೆಯ ಟಿಕೆಟ್​ ಬಳಸಿ ಕ್ರೀಡಾಂಗಣಕ್ಕೆ ಆಗಮಿಸಬಹುದು ಎಂದು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ ತಿಳಿಸಿದೆ.

ಇದನ್ನೂ ಓದಿ IND vs PAK: ಭಾರತ-ಪಾಕ್​ ಪಂದ್ಯಕ್ಕೆ ಮೀಸಲು ದಿನ; ಹಿಡಿ ಶಾಪ ಹಾಕಿದ ವೆಂಕಟೇಶ್​ ಪ್ರಸಾದ್

ಪಿಚ್​ ರಿಪೋರ್ಟ್​

ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದ(R.Premadasa Stadium) ಪಿಚ್​ ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಸ್ಪಿನ್ನರ್​ಗಳೇ ಹೆಚ್ಚು ದಾಖಲೆಯನ್ನು ಹೊಂದಿದ್ದಾರೆ. ಹೀಗಾಗಿ ಪವರ್​ ಪ್ಲೇಯಲ್ಲಿ ಬ್ಯಾಟರ್​ಗಳು ಹೆಚ್ಚಿನ ಮೊತ್ತ ಕಲೆ ಹಾಕಬೇಕಿದೆ. ಸ್ಲೋ ಬಾಲ್​ ಎಸೆಯುವ ಬೌರ್​ಗಳಿಗೂ ಇಲ್ಲಿನ ಪಿಚ್​ ಹೆಚ್ಚು ನೆರವು ನೀಡಲಿದೆ. ಇಲ್ಲಿನ ಬೌಂಡರಿಗಳು ವಿಶೇಷವಾಗಿ ವಿಸ್ತಾರವಾಗಿಲ್ಲ, ಮತ್ತು ಔಟ್‌ಫೀಲ್ಡ್ ಸಾಕಷ್ಟು ವೇಗವಾಗಿದ್ದು ಬ್ಯಾಟಿಂಗ್ ಪರಿಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಹವಾಮಾನ ವೈಪರೀತ್ಯವಿರುವ ಕಾರಣ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ನಡೆಸಿದರೆ ಉತ್ತಮ. ಇಲ್ಲಿನ ಸರಾಸರಿ ಮೊದಲ ಇನಿಂಗ್ಸ್​ ಮೊತ್ತ 250.

ತಂಡಗಳು

ಭಾರತ: ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಮೊಹಮ್ಮದ್‌ ಶಮಿ, ಕೆ.ಎಲ್​ ರಾಹುಲ್​(ವಿಕೆಟ್​ ಕೀಪರ್​).

ಪಾಕಿಸ್ತಾನ: ಫಖಾರ್​ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಂ(ನಾಯಕ) , ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್.

Exit mobile version